• Home
 • »
 • News
 • »
 • tech
 • »
 • WhatsApp Ban: ನಿಮ್ಮ ವಾಟ್ಸಪ್ ಬ್ಯಾನ್‌ ಆಗಿದ್ಯಾ? ಹೀಗೆ ಮಾಡಿ ಅದನ್ನು ಸರಿ ಮಾಡ್ಕೊಳ್ಳಿ

WhatsApp Ban: ನಿಮ್ಮ ವಾಟ್ಸಪ್ ಬ್ಯಾನ್‌ ಆಗಿದ್ಯಾ? ಹೀಗೆ ಮಾಡಿ ಅದನ್ನು ಸರಿ ಮಾಡ್ಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ವಾಟ್ಸಪ್‌ ಖಾತೆಗಳು ಬಳಕೆದಾರರು ಅನಗತ್ಯ ಚಟುವಟಿಕೆಗಳನ್ನು ಮಾಡಿದರೆ ತಮ್ಮ ಅಕೌಂಟ್‌ ಅನ್ನು ಬ್ಯಾನ್‌ ಮಾಡುತ್ತದೆ. ಒಂದು ವೇಳೆ ಯಾವುದೇ ತಪ್ಪು ಮಾಹಿತಿ ನೀಡದೆ ನಿಮ್ಮ ಖಾತೆಯನ್ನು ನಿರ್ಬಂಧಿಸಿದ್ದರೆ ಅದನ್ನು ಸರಿಪಡಿಸಲು ಈ ಕೆಳಗೆ ಒಂದಷ್ಟು ಮಾಹಿತಿಗಳನ್ನು ಹಂತ ಹಂತವಾಗಿ ನೀಡಿದೆ.

ಮುಂದೆ ಓದಿ ...
 • Share this:

  ವಾಟ್ಸಪ್‌ (WhatsApp) ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ನಮ್ಮ ಗೆಳೆಯರೊಂದಿಗೆ ಸಂಪರ್ಕದಲ್ಲಿರಲು, ನಮ್ಮ ವೃತ್ತಿಪರ ಗೆಳೆಯರೊಂದಿಗೆ ಸಂಪರ್ಕದಲ್ಲಿರಲು ಮತ್ತು ಹಣಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಇರುವಂತಹ ಉತ್ತಮ ವೇದಿಕೆಯಾಗಿದೆ. ಇದೊಂದು ಅಗತ್ಯ ಸಂದೇಶಗಳನ್ನು ಕಳುಹಿಸಲಿರುವಂತಹ ಉತ್ತಮ ವೇದಿಕೆ ಎಂದು ಹೇಳಬಹುದು. ಈ ಮೆಸೇಜಿಂಗ್‌ ಅಪ್ಲಿಕೇಶನ್‌ಗಳು (Messaging Application) ತಮ್ಮ ಖಾತೆಯಲ್ಲಿ (Account) ಮಾಹಿತಿ ಶೇರ್‌ ಮಾಡುವ ಬಗ್ಗೆ ಖಾತೆಯ ಡಾಟಾ ಸೆಕ್ಯುರಿಟಿ (Data Security) ಬಗ್ಗೆ ಮಾಹಿತಿಯನ್ನು ಆಗಾಗ ಶೇರ್‌ ಮಾಡುತ್ತಿತ್ತು. ಅದಲ್ಲದೆ ಈ ಖಾತೆಯ ಮಾಸಿಕ ಸೆಕ್ಯುರಿಟಿ ವರದಿಗಳಲ್ಲಿ (Report) ಬಳಕೆದಾರರ ದೂರುಗಳ ಬಗ್ಗೆ ಹಾಗೂ ತಪ್ಪು ಮಾಹಿತಿಯನ್ನು ತಡೆಗಟ್ಟುತ್ತಿತ್ತು. ಈ ಉದ್ದೇಶದಿಂದ ನಿರ್ದಿಷ್ಟ ತಿಂಗಳಲ್ಲಿ ಎಷ್ಟು ಭಾರತೀಯ ಖಾತೆಗಳನ್ನು (Indian WhatsApp Account) ನಿಷೇಧಿಸಿದೆ ಎಂದು WhatsApp ಉಲ್ಲೇಖಿಸಲಾಗಿದೆ.


  ಈ ವಾಟ್ಸಪ್‌ ಖಾತೆಗಳು ಬಳಕೆದಾರರು ಅನಗತ್ಯ ಚಟುವಟಿಕೆಗಳನ್ನು ಮಾಡಿದರೆ ತಮ್ಮ ಅಕೌಂಟ್‌ ಅನ್ನು ಬ್ಯಾನ್‌ ಮಾಡುತ್ತದೆ. ಒಂದು ವೇಳೆ ಯಾವುದೇ ತಪ್ಪು ಮಾಹಿತಿ ನೀಡದೆ ನಿಮ್ಮ ಖಾತೆಯನ್ನು ನಿರ್ಬಂಧಿಸಿದ್ದರೆ ಅದನ್ನು ಸರಿಪಡಿಸಲು ಈ ಕೆಳಗೆ ಒಂದಷ್ಟು ಮಾಹಿತಿಗಳನ್ನು ಹಂತ ಹಂತವಾಗಿ ನೀಡಿದೆ.


  Step 1: ನಿಮ್ಮ WhatsAppಗೆ E-mail ಆ್ಯಡ್ ಮಾಡ್ಬೇಕು. ನಂತರ ಇದರಿಂದ Activate ಮಾಡಲು ಲೇಟ್‌ ಆಗುತ್ತದೆ ಎಂದು ತಿಳಿದಾಗ ಅಪ್ಲಿಕೇಶನ್‌ನಲ್ಲಿ Review Request ಅನ್ನು ಆಯ್ಕೆ ಮಾಡ್ಬೇಕು.


  Is your whatsapp banned If so try these tips
  ಸಾಂದರ್ಭಿಕ ಚಿತ್ರ


  Step 2:  ಇಲ್ಲಿ ನೀವು Review Request ನೀಡಿದ ನಂತರ ಇದು ನಿಮ್ಮ ಸಮಸ್ಯೆಯನ್ನು ಪರಿಶೀಲಿಸಿ ಮತ್ತೆ ನಿಮಗೆ ಮುಂದಿನ ಹಂತದ ಮಾಹಿತಿಯನ್ನು ಒದಗಿಸುತ್ತದೆ.


  ಇದನ್ನೂ ಓದಿ: ವಾಟ್ಸಪ್ ಬಳಕೆದಾರರೇ ಎಚ್ಚರ? ಮಿತಿ ತಪ್ಪಿದ್ರೆ ಬ್ಯಾನ್ ಆಗುತ್ತೆ ಅಕೌಂಟ್!


  Step 3: ನಂತರ ಈ ಹಂತದಲ್ಲಿ ನಿಮ್ಮ ಸಮಸ್ಯೆಗೆ ಸಂಬಂಧಿಸಿದಂತೆ ಗಮನಿಸಿ 6 ಅಂಕಿಯ ರಿಜಿಸ್ಟ್ರೇಶನ್ ಕೋಡ್‌ ಅನ್ನು SMS ಮೂಲಕ ಕಳುಹಿಸಲಾಗುತ್ತದೆ.‌ ಇದನ್ನು ಇಲ್ಲಿ ನೀಡಿದ ಪ್ರಕಾರ Fill ಮಾಡ್ಬೇಕು. ಇದರ ಜೊತೆಗೆ ಇನ್ನಷ್ಟು ಮಾಹಿತಿಯನ್ನು ಕೂಡ ಇಲ್ಲಿ ಸೇರಿಸಬಹುದಾಗಿದೆ.


  ನಿಮ್ಮ ಖಾತೆ ಬ್ಯಾನ್‌ ಆಗದಂತೆ ಮಾಡಲು ವಾಟ್ಸಪ್‌ ಇಲ್ಲಿ ಕೆಲವೊಂದು ಟಿಪ್ಸ್‌ಗಳನ್ನು ನೀಡಿದೆ.


  1. ವಾಟ್ಸಪ್‌ ತಮ್ಮ ಖಾತೆಗೆ ಅದರದೇ ಆದಂತಹ ಒಂದು ಲೇಬಲ್‌ ಅನ್ನು ರಚಿಸಿರುತ್ತದೆ. ಇದರಲ್ಲಿ WhatsApp ಮೆಸೇಜ್‌ ಅನ್ನು ಎಷ್ಟು ಬಾರಿ ಫಾರ್ವರ್ಡ್‌ ಮಾಡಬಹುದೆಂದು ನಿರ್ಧಾರಮಾಡಲಾಗುತ್ತದೆ. ಆದ್ದರಿಂದ ಸಂದೇಶಗಳನ್ನು ಫಾರ್ವರ್ಡ್‌ ಮಾಡುವಾಗ ಪರಿಶೀಲಿಸಬೇಕು.


  2. ಅಟೋಮೆಟಿಕ್‌ ಆಗಿ ಬಂದ ಸಂದೇಶಗಳನ್ನು ಮತ್ತೆ ಅದನ್ನು ಬೇರೆಯವರಿಗೆ ಶೇರ್‌ ಮಾಡಬಾರದು. ಈ ರೀತಿ ಮಾಡುವುದರಿಂದ ಇನ್ನೊಬ್ಬರಿಗೆ ಸಮಸ್ಯೆಗಳನ್ನು ಮಾಡುತ್ತದೆ. ಇದರಿಂದ ಅವರು ನಿಮ್ಮ ಖಾತೆಯನ್ನು ರಿಪೋರ್ಟ್ ಮಾಡುವ ಸಾಧ್ಯತೆಗಳಿವೆ.


  Is your whatsapp banned If so try these tips
  ಸಾಂದರ್ಭಿಕ ಚಿತ್ರ


  3. ತಮ್ಮ Contactನಲ್ಲಿರುವವರನ್ನು ಮಾತ್ರ ಬ್ರಾಡ್‌ಕಾಸ್ಟ್‌ಗೆ ಆ್ಯಡ್ ಮಾಡಿ ಅವರಿಗೆ ಸಂದೇಶಗಳನ್ನು ಕಳುಹಿಸಬೇಕು. ಕೆಲವೊಮ್ಮೆ ಈ ರೀತಿ ಸಂದೇಶಗಳನ್ನು ಕಳುಹಿಸಿದಾಗ ಬಳಕೆದಾರರು ನಿಮ್ಮ ಖಾತೆಯನ್ನು ರಿಪೋರ್ಟ್‌ ಮಾಡುವ ಸಾಧ್ಯತೆಗಳಿರುತ್ತದೆ. ಆಗ ನಿಮ್ಮ ಅಕೌಂಟ್‌ ಬ್ಯಾನ್ ಆಗುತ್ತದೆ.‌


  4. ನಿಮ್ಮ ಸಂದೇಶಗಳನ್ನು ನಿಮ್ಮ ಪರಿಚಯದವರಿಗೆ ಮಾತ್ರ ಕಳುಹಿಸಬೇಕು. ಪರಿಚಯ ಇಲ್ಲದವರಿಗೆ ಕಳುಹಿಸಿದರೆ ಅವರು ನಿಮ್ಮ ಖಾತೆಯನ್ನು ನಿಷೇಧಿಸುವಂತೆ ಮಾಡುತ್ತಾರೆ.


  ಇದನ್ನೂ ಓದಿ: ನಿಮ್ಮ ಆಂಡ್ರಾಯ್ಡ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ ? ಈ ತಂತ್ರಗಳನ್ನೊಮ್ಮೆ ಬಳಸಿ


  5. ನಿಮ್ಮ ವಾಟ್ಸಪ್‌ ಅಕೌಂಟ್‌ ಬ್ಯಾನ್‌ ಆಗಬಾರದೇ ಹಾಗಿದ್ದರೆ ಮುಖ್ಯವಾಗಿ ನೀವು ವಾಟ್ಸಪ್‌ನ ನಿಯಮಗಳನ್ನು ಪಾಲಿಸಿ. ಇಲ್ಲವಾದಲ್ಲಿ ನೀವು ನಿಯಮ ಮೀರಿ ವರ್ತಿಸಿದಾಗ ನಿಮ್ಮ ಅಕೌಂಟ್‌ ನಿಷೇಧ ಅಗುತ್ತದೆ.


  ಈ ಎಲ್ಲಾ ಟಿಪ್ಸ್‌ ಅನ್ನು ಮೊದಲು ಪ್ರಯತ್ನಿಸಿ ನೋಡಿ. ನಿಮ್ಮಲ್ಲಿರುವಂತಹ ವಾಟ್ಸಪ್‌ ಎಂದಿಗೂ ಬ್ಲಾಕ್‌ ಅಗುವುದಿಲ್ಲ. ಇದು ನಿಮ್ಮ ವಾಟ್ಸಪ್‌ ಖಾತೆ  ಉಳಿಸುಕೊಳ್ಳಲಿರುವ ಒಂದು ಉತ್ತಮ ಐಡಿಯಾ ಅಂತ ಹೇಳಬಹುದು.

  Published by:Harshith AS
  First published: