ಇತ್ತೀಚಿನ ಸ್ಮಾರ್ಟ್ಫೋನ್ಗಳು (Smartphones) ಹೆಚ್ಚಾಗಿ ಅದರ ಸ್ಟೋರೇಜ್ನ (Storage) ಫೀಚರ್ಸ್ನಿಂದಲೇ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಈಗಿನ ಜನರು ಯಾವುದೇ ಮೊಬೈಲ್ (Mobile) ಅನ್ನು ಖರೀದಿ ಮಾಡಬೇಕಾದರೆ ಅದರ ಸ್ಟೋರೇಜ್ನ ಫೀಚರ್ ಅನ್ನು ಕೂಡ ಮುಖ್ಯವಾಗಿ ನೋಡುತ್ತಾರೆ. ಯಾಕೆಂದರೆ ಈ ಸ್ಟೋರೇಜ್ ಹೆಚ್ಚಿದ್ದರೆ ಸ್ಮಾರ್ಟ್ಫೋನ್ಗಳು ಬಹಳ ವೇಗವಾಗಿ ನಿರ್ವಹಿಸಲು ಸಹಕಾರಿಯಾಗುತ್ತದೆ. ಆದರೆ ನಮ್ಮಲ್ಲಿ ಹಲವಾರು ಸ್ಮಾರ್ಟ್ಫೋನ್ನಲ್ಲಿ cached ಡೇಟಾ, ಅನಗತ್ಯ ಫೈಲ್ಸ್, ಫೋಲ್ಡರ್ಗಳನ್ನು ತುಂಬಿಸಿಕೊಂಡು ಮೊಬೈಲ್ ವೇಗವಾಗಿ ಕೆಲಸ ಮಾಡದಂತೆ ಮಾತ್ರವಲ್ಲದೆ ಫೋನ್ ಸ್ಟೋರೇಜ್ (Phone Storage) ಅನ್ನು ಕೂಡ ಫುಲ್ ಆಗುವಂತೆ ಮಾಡುತ್ತದೆ. ಈ ಸಮಯದಲ್ಲಿ ಮೊದಲು ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವಂತಹ ಅನಗತ್ಯ ಫೈಲ್ಗಳನ್ನು ಡಿಲೀಟ್ ಮಾಡಿ.
ನಿಮ್ಮ ಸ್ಮಾರ್ಟ್ಫೋನ್ನ ಸ್ಟೋರೇಜ್ ಫುಲ್ ಆದಂತೆ ನಿಮ್ಮ ಮೊಬೈಲ್ಗಳು ಕೂಡ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ, ಹ್ಯಾಂಗ್ ಆಗುವಂತಹ ಚಾನ್ಸಸ್ ಜಾಸ್ತಿ ಇರುತ್ತದೆ. ಆದರೆ ನಿಮ್ಮ ಮೊಬೈಲ್ ಹ್ಯಾಂಗ್ ಆಗದಂತೆ ನೋಡಿಕೊಳ್ಳಬೇಕಾದರೆ ಈ ಟ್ರಿಕ್ಸ್ ನೀವು ಸರಿಯಾಗಿ ಪಾಲಿಸಿ.
ಕ್ಲೌಡ್ ಸ್ಟೋರೇಜ್ನಲ್ಲಿ ಆ್ಯಡ್ ಮಾಡಿ
ಪ್ರತಿಯೊಬ್ಬರು ಮುಖ್ಯವಾಗಿ ಆನ್ಲೈನ್ನಲ್ಲಿ ಫೋಟೋ ಅಥವಾ ವಿಡಿಯೋ ಡೌನ್ಲೋಡ್ ಮಾಡುವುದನ್ನು ನಿಲ್ಲಿಸಿ. ಏಕೆಂದರೆ ಈ ಆನ್ಲೈನ್ನಲ್ಲಿ ಡೌನ್ಲೋಡ್ ಮಾಡುವಂತಹ ಫೈಲ್ಗಳು ಹೆಚ್ಚು ಸ್ಟೋರೇಜ್ ಹೊಂದಿರುತ್ತವೆ. ಆದ್ದರಿಂದ ನಿಮ್ಮ ಸ್ಮಾರ್ಟ್ಫೋನ್ಗಳ ಸ್ಟೋರೇಜ್ ಬೇಗನೆ ಫುಲ್ ಆಗುತ್ತದೆ.
ಇದನ್ನೂ ಓದಿ: ಗೂಗಲ್ಗೆ ಟಕ್ಕರ್ ಕೊಡಲು ಮುಂದಾದ ಹೊಸ ಚಾಟ್GPT ಎಂಬ ಅ್ಯಪ್! ಏನಿದರ ವಿಶೇಷತೆ?
ಅದಕ್ಕಾಗಿ ನೀವು ಡೌನ್ಲೋಡ್ ಮಾಡಿದ ಫೋಟೋ ಅಥವಾ ವಿಡಿಯೋಗಳನ್ನು ಕ್ಲೌಡ್ ಸ್ಟೋರೇಜ್ನಲ್ಲಿ ಆ್ಯಡ್ ಮಾಡಿ. ಏಕೆಂದರೆ ಗೂಗಲ್ ಈ ರೀತಿಯ ಫೈಲ್ಗಳನ್ನು ಆ್ಯಡ್ ಮಾಡಲೆಂದೇ 15 ಜಿಬಿಯಷ್ಟು ಸ್ಟೋರೇಜ್ ಅನ್ನು ನೀಡಿರುತ್ತೆ. ಅದಕ್ಕಾಗಿ ಅಲ್ಲಿ ನೀವು ಆ್ಯಡ್ ಮಾಡ್ಬಹುದು.
ವಾಟ್ಸಪ್ ಸ್ಟೋರೇಜ್ ಮ್ಯಾನೇಜರ್ ಬಳಸಿ
ವಾಟ್ಸಪ್ ಅಪ್ಲಿಕೇಶನ್ ಅನ್ನು ಬಳಸದೇ ಇರುವ ಜನಗಳೇ ಇಲ್ಲ. ಅದರೆ ಈ ವಾಟ್ಸಪ್ ಬಳಸಬೇಕಾದರೆ ಅದರ ಸ್ಟೋರೇಜ್ ಕೂಡ ತನ್ನಿಂತಾನೇ ಫುಲ್ ಆಗುತ್ತದೆ. ಅದರಲ್ಲೂ ವಾಯ್ಸ್ ರೆಕಾರ್ಡ್, ಫೋಟೋ, ವಿಡಿಯೋ, ಡಾಕ್ಯುಮೆಂಟ್ಸ್ಗಳು ಇವುಗಳನ್ನು ಶೇರ್ ಮತ್ತು ಡೌನ್ಲೋಡ್ ಮಾಡುವುದರಿಂದ ನಿಮ್ಮ ಮೊಬೈಲ್ನ ಸ್ಟೋರೇಜ್ ಫುಲ್ ಆಗುವ ಸಾಧ್ಯತೆಗಳಿರುತ್ತದೆ.
ಆದರೆ ನಿಮ್ಮ ವಾಟ್ಸಪ್ನ ಸ್ಟೋರೇಜ್ ಫುಲ್ ಆಗದಾಗೆ ನೋಡಬೇಕಾದರೆ ವಾಟ್ಸಪ್ ಸ್ಟೋರೇಜ್ ಮ್ಯಾನೇಜರ್ ಅನ್ನು ಬಳಸಬೇಕು. ಇದನ್ನು ಬಳಸುವುದರಿಂದ ನಿಮ್ಮ ವಾಟ್ಸಪ್ಗೆ ಬರುವಂತಹ ಫೋಟೋ, ವಿಡಿಯೋಗಳನ್ನು ಇನ್ಸ್ಟಂಟ್ ಆಗಿ ಡಿಲೀಡ್ ಮಾಡಬಹುದು.
ಬಿಗ್ಸೈಜ್ ಫೈಲ್ಗಳನ್ನು ಡಿಲೀಟ್ ಮಾಡಿ:
ನಿಮ್ಮ ಸ್ಮಾರ್ಟ್ಫೋನ್ಗಳಲ್ಲಿ ಅನಗತ್ಯವಾಗಿ ಬಿಗ್ಸೈಜ್ ಫೈಲ್ಗಳು ತುಂಬಿಕೊಳ್ಳುತ್ತದೆ. ಈ ರೀತಿಯ ಫೈಲ್ಗಳನ್ನು ನಿಮಗೆ ಸರ್ಚ್ ಮಾಡಿ ಡಿಲೀಟ್ ಮಾಡುವಂತಹ ಅವಕಾಶಗಳಿವೆ. ಹಲವಾರು ಜನರು 16 ಜಿಬಿ, 32 ಜಿಬಿ, 128 ಜಿಬಿ ಸ್ಟೋರೇಜ್ ಹೊಂದಿದ ಸ್ಮಾರ್ಟ್ಫೋನ್ಗಳನ್ನು ಹೊಂದಿರುತ್ತಾರೆ.
ಆದರೆ ಇದೂ ಕೂಡ ಸ್ಟೋರೇಜ್ ಫುಲ್ ಆಗಿ ಹ್ಯಾಂಗ್ ಆಗಲು ಶುರುವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಮೊಬೈಲ್ನಲ್ಲಿರುವ ಅಪ್ಲಿಕೇಶನ್ಗಳು. ಇದನ್ನು ಓಪನ್ ಮಾಡುವುದರಿಂದ ನಿಮ್ಮ ಸ್ಮಾರ್ಟ್ಫೋನ್ನ ಸ್ಟೋರೇಜ್ ಫುಲ್ ಆಗುತ್ತದೆ. ಇದನ್ನು ನೀವು ಮೊಬೈಲ್ನ ಸೆಟ್ಟಿಂಗ್ಸ್ಗೆ ಹೋಗಿ ಅಪ್ಲಿಕೇಶನ್ ಆಯ್ಕೆಯಲ್ಲಿ ಸರಿಪಡಿಸಿಕೊಳ್ಳಬಹುದು.
ಅನಗತ್ಯ ಆ್ಯಪ್ಸ್ ಅನ್ನು ಡಿಲೀಟ್ ಮಾಡಿ:
ಬಹುಮುಖ್ಯವಾಗಿ ಹೇಳುವುದೆಂದರೆ ಹಲವಾರು ಮಂದಿ ತಮ್ಮ ಮೊಬೈಲ್ಗಳಲ್ಲಿ ಅನಗತ್ಯ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಟ್ಟುಕೊಳ್ಳುತ್ತಾರೆ. ಆದರೆ ಈ ಅಪ್ಲಿಕೇಶನ್ಗಳು ನಿಮ್ಮ ಮೊಬೈಲ್ನ ಸ್ಟೋರೇಜ್ ಇನ್ನಷ್ಟು ಹೆಚ್ಚಿಸುತ್ತದೆ. ಅದ್ರಲ್ಲೂ ಒಟಿಟಿಗೆ ಸಂಬಂಧಪಟ್ಟ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರೆ ಅದರ cache ಯನ್ನು ಆಗಾಗ ಕ್ಲಿಯರ್ ಮಾಡ್ತಾ ಇರಿ ಇದರಿಂದ ನಿಮ್ಮ ಸ್ಟೋರೇಜ್ ಫುಲ್ ಆಗುವುದನ್ನು ತಪ್ಪಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ