• Home
 • »
 • News
 • »
 • tech
 • »
 • Computer Issue: ನಿಮ್ಮ ಕಂಪ್ಯೂಟರ್ ನಿಧಾನವಾಗಿದೆಯೇ? ಈ ಟ್ರಿಕ್ಸ್‌ ಫಾಲೋ ಮಾಡಿ

Computer Issue: ನಿಮ್ಮ ಕಂಪ್ಯೂಟರ್ ನಿಧಾನವಾಗಿದೆಯೇ? ಈ ಟ್ರಿಕ್ಸ್‌ ಫಾಲೋ ಮಾಡಿ

ಕಂಪ್ಯೂಟರ್‌

ಕಂಪ್ಯೂಟರ್‌

ನಿಮ್ಮ ಕಂಪ್ಯೂಟರ್‌ ನಿಧಾನವಾಗಿ ವರ್ಕ್‌ ಆಗ್ತಿದ್ಯಾ? ಅದಕ್ಕಾಗಿ ಕೆಲವೊಂದು ಟಿಪ್ಸ್‌ಗಳಿವೆ. ಈ ಟಿಪ್ಸ್‌ ಅನ್ನು ಸರಿಯಾಗಿಒ ಪಾಲಿಸಿದರೆ ನಿಮ್ಮ ಕಂಪ್ಯೂಟರ್‌ ವೇಗವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

 • Share this:

  ನಾವು ಅನೇಕ ಬಾರಿ ನಮ್ಮ ಕಂಪ್ಯೂಟರ್ (Computer) ನಲ್ಲಿ ಕೆಲಸ ಮಾಡುವಾಗ ಅನೇಕ ಟ್ಯಾಬ್‌ಗಳನ್ನು ತೆರೆದಿಟ್ಟುಕೊಂಡಿರುತ್ತೇವೆ. ಹೇಗೆ ನಾವು ಈ ಟ್ಯಾಬ್ ಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುತ್ತಾ ಹೋಗುತ್ತೇವೆಯೋ, ಹಾಗೆಯೇ ನಾವು ಕೆಲಸ ಮಾಡುತ್ತಿರುವ ಕಂಪ್ಯೂಟರ್‌ನ ವೇಗ ಕಡಿಮೆಯಾಗುತ್ತಿರುವ ವಿಚಾರ ನಮ್ಮ ಗಮನಕ್ಕೆ ಬರುತ್ತದೆ. ಕ್ರೋಮ್ (Chrome) ಬಳಕೆದಾರರು ಬಳಸದ ಟ್ಯಾಬ್ ಗಳನ್ನು ಸ್ನೂಜ್ (Snooze) ಮಾಡಲು ಗೂಗಲ್ (Google) ಹೊಸ ಟೆಕ್ನಾಲಜಿ ಮೇಲೆ ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ. ಇತರ ಅಪ್ಲಿಕೇಶನ್ ಗಳನ್ನು (Application) ಬಳಸಲು ನಿಮ್ಮ ಕಂಪ್ಯೂಟರಿನಲ್ಲಿ ಮೆಮೋರಿಯನ್ನು (Memory) ಮುಕ್ತಗೊಳಿಸಲು ಇದು ಸಹಾಯ ಮಾಡುತ್ತದೆ. 


  ವರದಿಯೊಂದರ ಪ್ರಕಾರ, ರೆಡ್ಡಿಟ್ ಬಳಕೆದಾರರು ಕ್ರೋಮ್ ನ ಇತ್ತೀಚಿನ ಕ್ಯಾನರಿ ಬಿಲ್ಡ್ ಸೆಟ್ಟಿಂಗ್ಸ್ ಮೆನುವಿನಲ್ಲಿ ಹೊಸದಾಗಿ ‘ಪರ್ಫಾಮೆನ್ಸ್ ಪೇಜ್’ ಅನ್ನು ಸೇರಿಸಿದ್ದಾರೆ. ಮೆಮೊರಿ ಸೇವರ್ ಮತ್ತು ಎನರ್ಜಿ ಸೇವರ್ ಮೋಡ್ ಎಂಬ ಎರಡು ಹೊಸ ವೈಶಿಷ್ಟ್ಯಗಳನ್ನು ಈ ಹೊಸ ತಂತ್ರಜ್ಞಾನ ಒಳಗೊಂಡಿದೆ.


  ಏನಿದು ಮೆಮೊರಿ ಸೇವರ್ ಮೋಡ್?


  ಮೆಮೊರಿ ಸೇವರ್ ಮೋಡ್ ಬಳಕೆದಾರರು ಸ್ವಲ್ಪ ಸಮಯದಿಂದ ಸ್ಪರ್ಶಿಸದ ಟ್ಯಾಬ್ ಗಳನ್ನು ಹೈಬರ್ನೇಟ್ ಮಾಡುತ್ತದೆ. ಕ್ರೋಮ್ ನಲ್ಲಿ ಅನೇಕ ಟ್ಯಾಬ್ ಗಳನ್ನು ತೆರೆಯುವುದು ಸಾಕಷ್ಟು ಮೆಮೊರಿಯನ್ನು ಬಳಸಿಕೊಳ್ಳುತ್ತದೆ. ‌


  ಇದನ್ನೂ ಓದಿ: ಲಿಂಕ್ಡ್​ ಇನ್ ಬಯೋ ಬದಲಿಸಿದ ಪರಾಗ್‌ ಅಗ್ರವಾಲ್! ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!


  ಇದರಿಂದ ಕಂಪ್ಯೂಟರ್ ಅನ್ನು ನಿಧಾನಗೊಳಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಹೊಸ ಗೂಗಲ್ ಕ್ರೋಮ್ ವೈಶಿಷ್ಟ್ಯದೊಂದಿಗೆ, ಬಳಕೆದಾರರು ಬಳಕೆಯಲ್ಲಿರದ ಟ್ಯಾಬ್ ಗಳನ್ನು ಸ್ನೂಜ್ ಮಾಡುವ ಅವಕಾಶವನ್ನು ನೀಡಿದೆ.


  is-your-computer-slow-follow-these-tricks
  ಕಂಪ್ಯೂಟರ್‌


  ಇದು ಹೇಗೆ ಕೆಲಸ ಮಾಡುತ್ತದೆ?


  ಬಳಕೆದಾರರು ಸ್ನೂಜ್ ಮಾಡಿದಂತಹ ಟ್ಯಾಬ್ ಗಳನ್ನು ಮರು ಪರಿಶೀಲಿಸಿದಾಗ, ಇತರ ಕಾರ್ಯಗಳಿಗಾಗಿ ಎಷ್ಟು ರ್‍ಯಾಮ್ (RAM) ಅನ್ನು ಮುಕ್ತಗೊಳಿಸಲಾಗಿದೆ ಎಂಬುದನ್ನು ಬಹಿರಂಗಪಡಿಸುವ ಪಾಪ್-ಅಪ್ ಅನ್ನುನೋಡಬಹುದು. ಮೆಮೊರಿ ಸೇವರ್ ಮೋಡ್ ಗಾಗಿ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಳ್ಳುತ್ತಾ, ಬಳಕೆದಾರನು ಒಮ್ಮೆ ಕ್ಯಾನ್ಸಲ್‌ ಮಾಡಿದ ಟ್ಯಾಬ್ ಗಳನ್ನು ಮತ್ತೆ ಅವರಿಗೆ ಬೇಕಾದಾಗ ಅವುಗಳನ್ನು ಸಕ್ರಿಯಗೊಳಿಸಿಕೊಳ್ಳಬಹುದು ಎಂದು ವರದಿ ವಿವರಿಸುತ್ತದೆ.


  "ನೀವು ಮೆಮೊರಿ ಸೇವರ್ ಅನ್ನು ಆನ್ ಅಥವಾ ಆಫ್ ಮಾಡಬಹುದು ಮತ್ತು ಯೂಟ್ಯೂಬ್ ನಂತಹ ವೆಬ್ಸೈಟ್ ಗಳಿರುವ ಟ್ಯಾಬ್ ಗಳನ್ನು ಎಂದಿಗೂ ಸ್ನೂಜ್ ಮಾಡಬಾರದು, ನೀವು ಅದನ್ನು ಆಂಬಿಯೆಂಟ್ ಮ್ಯೂಸಿಕ್ ಅಥವಾ ಲೈವ್ ಗೇಮ್ ಸ್ಕೋರ್ ಟ್ರ್ಯಾಕರ್ ಗಾಗಿ ಬಳಸಿದರೆ ಅದನ್ನು ಮಾಡಬಹುದು" ಎಂದು ವರದಿ ಹೇಳಿದೆ.


  ಏನಿದು ಬ್ಯಾಟರಿ ಸೇವರ್ ಮೋಡ್?


  ಮತ್ತೊಂದೆಡೆ, ಬ್ಯಾಟರಿ ಸೇವರ್ ಮೋಡ್ ಬಳಕೆದಾರರಿಗೆ ಹೆಚ್ಚಿನ ರಿಫ್ರೆಶ್ ರೇಟ್ ವೈಶಿಷ್ಟ್ಯಗಳು ಮತ್ತು ದೃಶ್ಯ ಪರಿಣಾಮಗಳನ್ನು ಆಫ್ ಮಾಡಲು ಅನುಮತಿಸುತ್ತದೆ, ಇದು ಅವರ ಸಾಧನದ ಬ್ಯಾಟರಿ ಜೀವಿತಾವಧಿಯನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ. ಈ ವೈಶಿಷ್ಟ್ಯದೊಂದಿಗೆ, ಬಳಕೆದಾರರು ಹಿನ್ನೆಲೆಯಲ್ಲಿ ನಡೆಯುತ್ತಿರುವ ಅಥವಾ ರನ್ ಆಗುತ್ತಿರುವ ಚಟುವಟಿಕೆಗಳನ್ನು ಮಿತಿಗೊಳಿಸಲು ಸಾಧ್ಯವಾಗುತ್ತದೆ.


  is-your-computer-slow-follow-these-tricks
  ಕಂಪ್ಯೂಟರ್‌


  ಮೇಲೆ ತಿಳಿಸಿದಂತೆ, ಬದಲಾವಣೆಗಳು ಪ್ರಸ್ತುತ ಕ್ರೋಮ್ ಕ್ಯಾನರಿಯಲ್ಲಿ ಲಭ್ಯವಿದೆ. ವೈಶಿಷ್ಟ್ಯಗಳು ಶೀಘ್ರದಲ್ಲಿಯೇ ಸ್ಥಿರ ಚಾನೆಲ್ ಗೆ ಪ್ರವೇಶಿಸುವ ನಿರೀಕ್ಷೆಯಿದೆ ಮತ್ತು ಭವಿಷ್ಯದಲ್ಲಿ ಶೀಘ್ರದಲ್ಲಿಯೇ ಪ್ಲಾಟ್ಫಾರ್ಮ್ ಗಳಲ್ಲಿ ಲಭ್ಯವಾಗಬಹುದು.


  ಗೂಗಲ್ ಕ್ರೋಮ್ ವರ್ಷನ್ 110 ಫೆಬ್ರವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ:


  2023 ರ ಆರಂಭದಲ್ಲಿ ವಿಂಡೋಸ್ 7 ಮತ್ತು ವಿಂಡೋಸ್ 8.1 ಗಾಗಿ ಕ್ರೋಮ್ ಸಪೋರ್ಟ್ ಅನ್ನು ಕೊನೆಗೊಳಿಸುವುದಾಗಿ ಈಗಾಗಲೇ ಗೂಗಲ್ ಘೋಷಿಸಿದೆ. ಗೂಗಲ್ ಕ್ರೋಮ್ ವರ್ಷನ್ 110 ಫೆಬ್ರವರಿ 7, 2023 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.


  ಇದನ್ನೂ ಓದಿ: ಟ್ವಿಟರ್ ಸ್ವಾಧೀನಪಡಿಸಲು ಶಕ್ತಿ ತುಂಬಿದಾತನನ್ನೇ ಹೊರಗಟ್ಟಿದ್ದೇಕೆ ಮಸ್ಕ್? ಪರಾಗ್​ ವಜಾಗೊಳ್ಳಲು ಇದೇ ಕಾರಣ!


  ಈ ನಿರ್ಧಾರವು ವಿಂಡೋಸ್ 7 ESU (ಇಎಸ್‌ಯು) ಮತ್ತು ವಿಂಡೋಸ್ 8.1 ಗೆ ಜನವರಿ 10, 2023 ರಂದು ವಿಸ್ತರಿಸಲಾದ ಬೆಂಬಲವನ್ನು ಕೊನೆಗೊಳಿಸುವ ಮೈಕ್ರೋಸಾಫ್ಟ್ ನ ಹಿಂದಿನ ನಿರ್ಧಾರಕ್ಕೆ ಹೊಂದಿಕೆಯಾಗುತ್ತದೆ ಎಂದು ಹೇಳಲಾಗುತ್ತಿದೆ.

  Published by:Harshith AS
  First published: