• Home
  • »
  • News
  • »
  • tech
  • »
  • Android: ನಿಮ್ಮ ಆಂಡ್ರಾಯ್ಡ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ ? ಈ ತಂತ್ರಗಳನ್ನೊಮ್ಮೆ ಬಳಸಿ

Android: ನಿಮ್ಮ ಆಂಡ್ರಾಯ್ಡ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ ? ಈ ತಂತ್ರಗಳನ್ನೊಮ್ಮೆ ಬಳಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ಸ್ಮಾರ್ಟ್ ಫೋನ್‌ ವೇಗವಾಗಿ ಕಾರ್ಯನಿರ್ವಹಿಸಬೇಕಾದರೆ ಈ ಕೆಳಗೆ ನೀಡಿರುವ ತಂತ್ರಗಳನ್ನೊಮ್ಮೆ ಪ್ರಯತ್ನಿಸಿ ನೋಡಿ. ನಿಮಗೆ ಬೇಕಾದ ರೀತಿಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಕೆಲಸಮಾಡಬೇಕಾದ್ರೆ ಕೆಲವೊಂದು ತಂತ್ರಗಳು ಉತ್ತಮವಾಗಿರಬೇಕು ಹಾಗಿದ್ರೆ ಮಾತ್ರ ಯಾವುದೇ ತೊಂದರೆಗಳು ಆಗುವುದಿಲ್ಲ.

ಮುಂದೆ ಓದಿ ...
  • Share this:

    ನಿಮ್ಮ ಸ್ಮಾರ್ಟ್‌ಫೋನ್‌ (Smartphone) ವೇಗವಾಗಿ ಕೆಲಸ ಮಾಡಬೇಕಾದರೆ ಈ ಕೆಳಗೆ ಒಂದಿಷ್ಟು ಸಲಹೆ ಮತ್ತು ತಂತ್ರಗಳನ್ನು ತಿಳಿಸಿದ್ದೇವೆ. ಇದು ನಿಮ್ಮ Android ವೇಗವಾಗಿ (Speed) ಕಾರ್ಯನಿರ್ವಹಿಸಲು ಸಹಕಾರಿಯಾಗಬಹುದು. Android OS ನ ಒಂದು ಮುಖ್ಯ ಸಮಸ್ಯೆಯೆಂದರೆ ಇದು ಒಂದೆರಡು ತಿಂಗಳುಗಳ ಬಳಿಕ OS ನಿಧಾನವಾಗುತ್ತದೆ. ಇದರಿಂದ ಬಳಕೆದಾರರು ಈ ಸ್ಮಾರ್ಟ್‌ಫೋನ್‌ಗಳನ್ನು ವೇಗಗೊಳಿಸುವುದು ಹೇಗೆ ಎಂದು ಪ್ರಶ್ನೆ ಮಾಡುತ್ತಾರೆ. ಈ ರೀತಿಯ ಸ್ಮಾರ್ಟ್‌ಫೋನ್‌ಗಳ ವೇಗ ಕಡಿಮೆಯಾಗಲು ಹಾರ್ಡ್‌ವೇರ್‌ಗಳ (Hardware) ಪ್ರಮಾಣ ಕಡಿಮೆ ಇರುವುದರಿಂದ ಎಂದು ಹೇಳಬಹುದು. ಅದಕ್ಕಾಗಿ ಇಲ್ಲಿ Android ಫೋನ್‌ಗಳನ್ನು ವೇಗವಾಗಿ ಮಾಡುವುದು ಹೇಗೆ ಎಂದು ಇಲ್ಲಿ ಚರ್ಚಿಸಲಾಗಿದೆ.


    ತಂತ್ರಗಳು:


    ರೀಸ್ಟಾರ್ಟ್‌ ಮಾಡಿ A Simple Restart Can Bring Pace To Your Android Device


    ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು Restart ಮಾಡಿದಾಗ ನಿಮ್ಮ ಮೊಬೈಲ್‌ ವೇಗವಾಗುತ್ತದೆ. ಹೇಗೆಂದರೆ ರೀಸ್ಟಾರ್ಟ್‌ ಮಾಡಿದಾಗ ನೀವು ಬಳಕೆ ಮಾಡಿದ ಫೈಲ್‌ಗಳು ಕ್ಲಿಯರ್‌ ಅಗುತ್ತದೆ ಮತ್ತು Storage ಕೂಡ ಕ್ಲಿಯರ್‌ ಆಗುತ್ತದೆ. ಇದರಿಂದ ನಿಮ್ಮ Android ಉತ್ತಮವಾಗಿ ಕಾರ್ಯನಿರ್ವಹಿದುತ್ತದೆ.


    ಸ್ಮಾರ್ಟ್‌ಫೋನ್‌ ಅಪ್ಡೇಟ್‌ ಮಾಡಿ Keep your phone update


    Androidನ ಪ್ರತಿಯೊಂದು ಹೊಸ Versionಗಳು ಸ್ಮಾರ್ಟ್‌ಫೋನ್‌ನಲ್ಲಿರುವ ಸಮಸ್ಯೆಗಳನ್ನು ಕ್ಲಿಯರ್‌ ಮಾಡುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ವೇಗವಾಗಿ ಕೆಲಸಮಾಡುತ್ತದೆ. ಅದಕ್ಕೆ ಮೊದಲು ಸ್ಮಾರ್ಟ್‌ಫೋನ್‌ ಅಪ್ಡೇಟ್‌ ಮಾಡ್ಬೇಕು. ಇದನ್ನು ನೀವು Settingನಲ್ಲಿ ಹೋಗಿ Device Update ಅಂತ ಕೊಟ್ರೆ ಸುಲಭದಲ್ಲಿ ಅಪ್ಡೇಟ್‌ ಮಾಡಬಹುದು.


    Is your Android not working properly Try these techniques
    ಸಾಂದರ್ಭಿಕ ಚಿತ್ರ


    ಇದನ್ನೂ ಓದಿ: ಫೋನ್ ಕರೆಗಳನ್ನು ಟ್ಯಾಪ್ ಮಾಡದೆಯೇ ಆಲಿಸುವ ಮಾರ್ಗವನ್ನು ಕಂಡುಹಿಡಿದಿದ ವಿಜ್ಞಾನಿಗಳು


    ಬೇಡದ ಅಪ್ಲಿಕೇಶನ್‌ ಡಿಲೀಟ್‌ ಮಾಡಿ Uninstall and Disable Apps That You Don’t Need


    ನೀವು ಬಹಳ ಸಮಯಗಳಿಂದ ಬಳಕೆ ಮಾಡದ Appಗಳನ್ನು ಹಾಗೇ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇಟ್ಟುಕೊಂಡಿದ್ದರೆ ಅದನ್ನು ತಕ್ಷಣ Uninstall ಮಾಡಿ. ಕೆಲವೊಂದು Appಗಳು ನಿಮ್ಮ ಸ್ಮಾರ್ಟ್‌ಫೋನ್‌ನ Storage ಅನ್ನು ಫುಲ್‌ ಮಾಡುತ್ತದೆ. ಹೀಗಾದರೆ ನಿಮ್ಮ ಸ್ಮಾರ್ಟ್‌ಫೋನ್‌ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಒಂದು ವೇಳೆ ಡಿಲೀಟ್‌ ಮಾಡಿದರೆ ನಿಮ್ಮ Android OS ವೇಗವಾಗಿ ಕೆಲಸ ಮಾಡುತ್ತದೆ.


    ಹೋಂಸ್ಕ್ರೀನ್‌ ಕ್ಲಿಯರ್‌ ಮಾಡಿ Clean Up Your Home Screen


    ನಿಮ್ಮ ಸ್ಮಾರ್ಟ್‌ಫೋನ್‌ನ ಹೋಂಸ್ಕ್ರೀನ್‌ ಅನ್ನು ಕ್ಲಿಯರ್‌ ಮಾಡಿ ಹಾಗೂ Androidನಲ್ಲಿ ನೀಡಿದ wallpaper ಅನ್ನು ಹಾಕಿ. ನಿಮ್ಮ ಹೋಂಸ್ಕ್ರೀನ್‌ ತುಂಬಾ ಕ್ಲಿಯರ್‌ ಇದ್ರೆ ನಿಮ್ಮ ಸ್ಮಾರ್ಟ್‌ಫೋನ್‌ ವೇಗವಾಗಿ ಕಾರ್ಯನಿರ್ವಹಿಸುತ್ತದೆ.


    Is your Android not working properly Try these techniques
    ಸಾಂದರ್ಭಿಕ ಚಿತ್ರ


    Cache ಕ್ಲಿಯರ್‌ ಮಾಡಿ Clear Cached App Data


    Androidನಲ್ಲಿ ಬಳಸಲಾದ ಅಪ್ಲಿಕೇಶನ್‌ಗಳ ಡಾಟಾವನ್ನು ಮೊದಲು ಕ್ಲಿಯರ್‌ ಮಾಡ್ಬೇಕು. ಏಕೆಂದರೆ ಇದು ಸ್ಮಾರ್ಟ್‌ಫೋನ್‌ನಲ್ಲಿರುವ Storage ಫುಲ್‌ ಆಗುವಂತೆ ಮಾಡುತ್ತದೆ. ಇದರಿಂದ ಮೊಬೈಲ್‌ನ ಕಾರ್ಯಗಳು ನಿಧಾನವಾಗುತ್ತದೆ. ಆದ್ದರಿಂದ Cache data ಕ್ಲಿಯರ್‌ ಮಾಡಿದ್ರೆ ನಿಮ್ಮ Android ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.


    ಇದನ್ನೂ ಓದಿ: 5ಜಿ ನೆಟವರ್ಕ್ ಪಡೆಯಲು ಯಾವೆಲ್ಲಾ ಫೋನ್ ಗಳಿಗೆ ಸಾಫ್ಟ್‌ವೇರ್ ಅಪ್ಡೇಟ್ ಅಗತ್ಯವಿದೆ? ಇಲ್ಲಿದೆ ಲಿಸ್ಟ್


    ಇಂಟರ್ನಲ್‌ ಮೆಮೊರಿ ಫ್ರೀ ಇಡಿ Free your internal memory


    ಆದಷ್ಟು ನಿಮ್ಮ ಇಂಟರ್ನಲ್‌ ಮೆಮೊರಿ ಫ್ರೀ ಇಡಬೇಕು. Storage ಫುಲ್‌ ಆದ್ರೆ ನಿಮ್ಮ ಸ್ಮಾರ್ಟ್‌ಫೋನ್‌ ಹ್ಯಾಂಗ್‌ ಆಗುವ ಸಾಧ್ಯತೆಗಳಿರುತ್ತದೆ.  ಅದಕ್ಕಾಗಿ ಮೊದಲಿಗೆ ಇಂಟರ್ನಲ್‌ ಮೆಮೊರಿ ಆದಷ್ಟು ಫ್ರೀ ಇಡ್ಬೇಕು. ಹಾಗಿರುವಾಗ ನಿಮ್ಮ ಸ್ಮಾರ್ಟ್‌ಫೋನ್‌ ಉತ್ತಮವಾಗಿ ಕೆಲಸಮಾಡುತ್ತದೆ.


    ಇದಿಷ್ಟು ನಿಮ್ಮ Android OS ವೇಗವಾಗಿ ಕಾರ್ಯನಿರ್ವಹಿಸಲು ಇರುವಂತಹ ತಂತ್ರಗಳು. ನಿಮ್ಮಲ್ಲಿರುವಂತಹ ಸ್ಮಾರ್ಟ್ ಫೋನ್‌ ನೀವು ಅಂದುಕೊಂಡಂತೆ ಕೆಲಸ ಮಾಡಬೇಕಿದ್ದರೆ ಮೇಲಿನ ತಂತ್ರಗಳನ್ನೊಮ್ಮೆ ಪ್ರಯತ್ನಿಸಿ ನೋಡಿ.

    Published by:Harshith AS
    First published: