ಈಗಿನ ಕಾಲದಲ್ಲಿ ಯಾವುದೇ ಕೆಲಸವನ್ನು ಕ್ಷಣಮಾತ್ರದಲ್ಲಿ ಮುಗಿಸಲು ಸ್ಮಾರ್ಟ್ ಫೋನ್ (Smartphone) ಬಹಳಷ್ಟು ಸಹಕಾರಿಯಾಗುತ್ತದೆ. ದಿನನಿತ್ಯದ ನಮ್ಮ ಸಂದೇಶಗಳನ್ನು, ಡಾಕ್ಯುಮೆಂಟ್ಗಳನ್ನು (Documents), ಆಡಿಯೋ ಫೈಲ್ಗಳನ್ನು (Audio Files) ಇನ್ನೊಬ್ಬರಿಗೆ ಶೇರ್ ಮಾಡಬೇಕಾದರೆ ಈ ಮೊಬೈಲ್ ಮೂಲಕ ತುಂಬಾನೇ ಸುಲಭವಾಗುತ್ತದೆ. ಆದರೆ ಈ ಎಲ್ಲಾ ಫೈಲ್ಗಳನ್ನು ಶೇರ್ ಮಾಡಬೇಕಾದರೆ ಅದಕ್ಕೆ ಮುಖ್ಯವಾಗಿ ಅಪ್ಲಿಕೇಶನ್ಗಳು ಅಗತ್ಯವಾಗಿರುತ್ತದೆ. ಆದರೆ ಹಿಂದೆಲ್ಲಾ ಬ್ಲೂಟೂತ್ ಮೂಲಕ ಡಾಕ್ಯುಮೆಂಟ್ಸ್ಗಳನ್ನು ಶೇರ್ ಮಾಡುತ್ತಿದ್ದರು. ಆದರೆ ಈಗ ಟೆಕ್ನಾಲಜಿ ಬದಲಾಗಿದೆ. ಎಲ್ಲವೂ ಸ್ಮಾರ್ಟ್ಫೋನ್ ಯುಗ ಆಗಿಬಿಟ್ಟಿದೆ. ಆದರೆ ಈ ಫೈಲ್ಗಳನ್ನು ಶೇರ್ ಮಾಡುವುದರಿಂದ ಕೆಲವೊಂದು ಬಾರಿ ನಮ್ಮ ಮೊಬೈಲ್ಗಳು ಸ್ಟೋರೇಜ್ ಫುಲ್ (Storage Full) ಆಗಿ ಹ್ಯಾಂಗ್ ಆಗಲು ಶುರುವಾಗುತ್ತದೆ. ಅದನ್ನು ಕ್ಲಿಯರ್ ಮಾಡುವುದಕ್ಕೆ ಕೆಲವೊಂದು ಅಪ್ಲಿಕೇಶನ್ಗಳಿವೆ.
ಸ್ಮಾರ್ಟ್ ಫೋನ್ನ ಸ್ಟೋರೇಜ್ ಫುಲ್ ಆದಾಗ ಬಳಕೆದಾರರಿಗೆ ಯಾವುದೇ ರೀತಿಯಲ್ಲಿ ಯೂಸ್ ಮಾಡಲು ಸಾಧ್ಯವಾಗುವುದಿಲ್ಲ. ಮೊಬೈಲ್ ತುಂಬಾನೇ ಸ್ಲೋ ಆಗಿ ಕಾರ್ಯನಿರ್ವಹಿಸುತ್ತಿರುತ್ತದೆ. ಹಾಗಿರುವಾಗ ನಮ್ಮ ಮೊಬೈಲ್ ಅನ್ನು ರೀಸೆಟ್ ಅಥವಾ ಡೇಟಾ ಕ್ಲಿಯರ್ ಮಾಡಬೇಕಾಗುತ್ತದೆ. ಆದರೆ ಇನ್ಮುಂದೆ ರೀಸೆಟ್ ಮಾಡದೆಯೇ ಆ್ಯಪ್ ಮೂಲಕ ಸ್ಟೋರೇಜ್ ಕ್ಲಿಯರ್ ಮಾಡಬಹುದು. ಹಾಗಿದ್ರೆ ಹೇಗೆ ಎಂಬುದನ್ನು ಈ ಲೇಖನದ ಮೂಲಕ ಓದಿ.
ಸ್ಟೋರೇಜ್ ಫುಲ್ ಸಮಸ್ಯೆ
ಹೆಚ್ಚಾಗಿ ಸ್ಮಾರ್ಟ್ ಫೋನ್ನಲ್ಲಿ ಅಪ್ಲಿಕೇಶನ್ಗಳ ಬಳಕೆಯಿಂದಲೇ ಸ್ಮಾರ್ಟ್ಫೋನ್ನ ಸ್ಟೋರೇಜ್ ಫುಲ್ ಆಗುತ್ತದೆ. ಅದು ಹೇಗೆಂದರೆ ಅಪ್ಲಿಕೇಶನ್ನ ಬ್ಯಾಗ್ ರೌಂಡ್ನಲ್ಲಿ ಕ್ಯಾಶೆ ಡೇಟಾಗಳು ನಮ್ಮ ಸ್ಟೋರೇಜ್ನಲ್ಲಿ ಆ್ಯಡ್ ಆಗುತ್ತಿರುತ್ತದೆ. ಇದು ಮುಖ್ಯವಾಗಿ ಮೊಬೈಲ್ನ ಸ್ಟೋರೇಜ್ ಫುಲ್ ಆಗಲು ಕಾರಣ.
ವಿಡಿಯೋ, ಫೋಟೋಗಳು
ವಾಟ್ಸಾಪ್, ಟೆಲಿಗ್ರಾಂ ನಂತಹ ಅಪ್ಲಿಕೇಶನ್ಗಳಲ್ಲಿ ನಾವು ಶೇರ್ ಮಾಡಿದಂತಹ ಅಥವಾ ಡೌನ್ಲೋಡ್ ಮಾಡಿದಂತಹ ಫೋಟೋ ಅಥವಾ ವಿಡಿಯೋಗಳು ಸ್ಟೋರೇಜ್ ಫುಲ್ ಆಗಲು ಕಾರಣವಾಗಿದೆ. ಆದ್ದರಿಂದ ಮೊಬೈಲ್ನಲ್ಲಿ ಫೈಲ್ಸ್ ಎಂಬ ಅಪ್ಲಿಕೇಶನ್ ಅನ್ನು ಓಪನ್ ಮಾಡಿದಾಗ ಅಲ್ಲಿ ವಾಟ್ಸಾಪ್ ಎಂಬ ಫೈಲ್ ಕಾಣುತ್ತದೆ. ಅಲ್ಲಿ ನೀವು ಶೇರ್ ಮಾಡಿದಂತಹ ಫೋಟೋ, ವಿಡಿಯೋ ಯಾವುದನ್ನೂ ಡಿಲೀಟ್ ಮಾಡಬಹುದು. ಇದರಿಂದ ನಿಮ್ಮ ಮೊಬೈಲ್ ಹ್ಯಾಂಗ್ ಆಗುವುದರಿಂದ ತಪ್ಪಿಸಬಹುದಾಗಿದೆ.
ಸ್ಮಾರ್ಟ್ ಫೋನ್ಗಳ ಸ್ಟೋರೇಜ್ ಫುಲ್ ಆದಾಗ ಮುಖ್ಯವಾಗಿ ಕಾಡುವ ಸಮಸ್ಯೆಯೆಂದರೆ ಹ್ಯಾಂಗ್ ಆಗೋದು. ಇದರಿಂದ ಬಳಕೆದಾರರಿಗೆ ಯಾವುದೇ ರೀತಿಯಲ್ಲೂ ಮೊಬೈಲ್ನಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ವಿಡಿಯೋಗಳನ್ನು ಪ್ಲೇ ಮಾಡುವಾಗಲು ಸ್ಟಕ್ ಆಗಲು ಶುರುವಾಗುತ್ತದೆ. ಆ ಸಂದರ್ಭದಲ್ಲಿ ನಾವು ಸ್ಟೊರೇಜ್ ಅನ್ನು ಕ್ಲಿಯರ್ ಮಾಡಬೇಕಾಗುತ್ತದೆ.
ಸ್ಟೋರೇಜ್ ಕ್ಲಿಯರ್ ಮಾಡಲಿರುವ ಅಪ್ಲಿಕೇಶನ್
ಕೆಲವೊಂದು ಬಾರಿ ಸ್ಮಾರ್ಟ್ ಫೋನ್ಗಳಲ್ಲಿ ಕ್ಯಾಶೆ ಡೇಟಾ ಸಂಗ್ರಹವಾಗಿದ್ದಾಗ, ಫೋಟೋ ಮತ್ತು ವಿಡಿಯೋಗಳು ಅತಿಯಾಗಿದ್ದಾಗ ಸ್ಟೋರೇಜ್ ಸಮಸ್ಯೆ ಎದುರಾಗುತ್ತದೆ. ಈ ಸಂದರ್ಭದಲ್ಲಿ ಬಳಕೆದಾದರು ಸಾಮಾನ್ಯವಾಗಿ ತಮ್ಮಲ್ಲಿರುವ ಅಗತ್ಯ ಫೈಲ್ಗಳನ್ನು ಡಿಲೀಟ್ ಮಾಡುತ್ತಾರೆ. ಆದರೆ ಇನ್ಮುಂದೆ ಇದನ್ನು ಸುಲಭವಾಗಿ ನಿವಾರಿಸಬಹುದಾಗಿದೆ.
ನಿಮ್ಮ ಸ್ಮಾರ್ಟ್ ಫೋನ್ನಲ್ಲಿ ಒಂದು ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುವ ಮೂಲಕ ನಿಮ್ಮ ಮೊಬೈಲ್ನ ಸ್ಟೋರೇಜ್ ಸಮಸ್ಯೆಯನ್ನು ಕ್ಲಿಯರ್ ಮಾಡಬಹುದು. ಗೂಗಲ್ ಪ್ಲೇ ಸ್ಟೋರ್ನಿಂದ ‘ಸ್ಟೋರೇಜ್ ಎನಲೈಸರ್ ಆ್ಯಂದ ಡಿಸ್ಕ್ ಯೂಸೇಜ್ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕು.
ಇದನ್ನೂ ಓದಿ: ಕೇವಲ 599 ರೂಪಾಯಿಗೆ ಖರೀದಿಸಿ ಮೊಟೊರೊಲಾ ಮತ್ತು ರೆಡ್ಮಿ ಸ್ಮಾರ್ಟ್ಫೋನ್ಸ್!
ಇದನ್ನು ಓಪನ್ ಮಾಡಿದಾಗ ನೀವು ಡಿಲೀಟ್ ಮಾಡಲು ಬಯಸುವಂತಹ ಸ್ಟೊರೇಜ್ನ ಆಯ್ಕೆಗಳನ್ನು ಈ ಅಪ್ಲಿಕೇಶನ್ನಲ್ಲಿ ಕೇಳಲಾಗುತ್ತದೆ. ಈ ಮೂಲಕ ರೀಸೆಟ್ ಮಾಡದೆಯೇ ನಿಮ್ಮ ಸ್ಮಾರ್ಟ್ ಫೋನ್ನ ಸ್ಟೋರೇಜ್ ಅನ್ನು ಖಾಲಿ ಇರುವಂತೆ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ