ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿ ಕಂಪನಿಗಳಲ್ಲಿ (Technology Comapany) ಬಹಳಷ್ಟು ಬದಲಾವಣೆಗಳಾಗಿದೆ. ಅದ್ರಲ್ಲೂ ಇಂಟರ್ನೆಟ್ (Internet) ಬಳಕೆ ಕೂಡ ಹೆಚ್ಚಾಗಿದೆ. ಟೆಕ್ನಾಲಜಿಯಲ್ಲಿ ದೊಡ್ಡ ಕಂಪನಿಯೆಂದರೆ ಅದು ಗೂಗಲ್. ಈ ಕಂಪನಿ ತಮ್ಮ ಬಳಕೆದಾರರಿಗಾಗಿ ಈ ಹಿಂದೆ ಅನೇಕ ಫೀಚರ್ಸ್ಗಳನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ಗೂಗಲ್ ಫೋಟೋಗಳು, ವಿಡಿಯೋಗಳು, ಅಪ್ಲಿಕೇಶನ್ಗಳು ಮತ್ತು ಇತರ ಪ್ರಮುಖ ಡೇಟಾವನ್ನು ಸಂಗ್ರಹಿಸಲು ಕ್ಲೌಡ್ ಸ್ಟೋರೇಜ್ನಂತಹ (Cloud Storage) ಹಲವು ಸೇವೆಗಳನ್ನು ಲಭ್ಯ ಮಾಡಿದೆ. ಈ ಮೂಲಕ ಬಳಕೆದಾರರು ತಮ್ಮ ಗೂಗಲ್ ಅಕೌಂಟ್ ಸೈನ್ ಇನ್ ಆಗುವ ಮೂಲಕ ತಮ್ಮಲ್ಲಿರುವ ಡಾಕ್ಯುಮೆಂಟ್ಗಳನ್ನು ಆ್ಯಡ್ ಮಾಡಬಹುದು. ಹಾಗೆಯೇ ಗೂಗಲ್ಗೆ ಫೋನ್ನಲ್ಲಿರುವ ಕಾಂಟ್ಯಾಕ್ಟ್ಗಳನ್ನು ಸಹ ಬ್ಯಾಕ್ಅಪ್ ಮಾಡಬಹುದು.
ಹೌದು, ಬಳಕೆದಾರರು ಕೇವಲ ಫೋನ್ ಮೂಲಕ ತಮ್ಮ ಕಾಂಟ್ಯಾಕ್ಟ್ಗಳನ್ನು ಸೇವ್ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಗೂಗಲ್ ಕ್ಲೌಡ್ ಸ್ಟೋರೇಜ್ ಮೂಲಕ ಸೇವ್ ಮಾಡಬಹುದು. ಇದರಲ್ಲಿ ಕಾಂಟ್ಯಾಕ್ಟ್ ಅನ್ನು ಬ್ಯಾಕಪ್ ಅನ್ನು ಮಾಡಲು ಯಾವುದೇ ಮಿತಿಗಳಿರುವುದಿಲ್ಲ. ಹಾಗಿದ್ರೆ ಯಾವ ರೀತಿ ಗೂಗಲ್ ಅಕೌಂಟ್ಗೆ ಕಾಂಟ್ಯಾಂಕ್ ಬ್ಯಾಕಪ್ ಮಾಡುವುದು ಎಂಬುದು ಇಲ್ಲಿದೆ ಮಾಹಿತಿ.
ಗೂಗಲ್ ಬ್ಯಾಕಪ್ ಎಂದರೇನು?
ಗೂಗಲ್ ಕಾಂಟ್ಯಾಕ್ಟ್ ಬ್ಯಾಕಪ್ ಎಂದರೆ ನಿಮ್ಮ ಮೊಬೈಲ್ನಲ್ಲಿ ಆ್ಯಡ್ ಮಾಡಲಾದ ಕಾಂಟ್ಯಾಕ್ಟ್ಗಳನ್ನು, ಬಳಕೆದಾರರ ಗೂಗಲ್ ಖಾತೆಗೆ ಅಥವಾ ನಿರ್ದಿಷ್ಟವಾಗಿ ಗೂಗಲ್ ಡ್ರೈವ್ನಲ್ಲಿ ಸೇವ್ ಮಾಡುವ ಮತ್ತು ಸೇರಿಸುವ ಒಂದು ವಿಧಾನವಾಗಿದೆ. ಬಳಕೆದಾರರ ಗೂಗಲ್ ಅಕೌಂಟ್ಗೆ ಅಪ್ಲೋಡ್ ಮಾಡಿ ಮತ್ತು ಸಂಗ್ರಹಿಸಿದ ನಂತರ, ಫೋನ್, ಪಿಸಿ, ಟ್ಯಾಬ್ಲೆಟ್ ಮತ್ತು ಮೂಲಭೂತವಾಗಿ ಇಂಟರ್ನೆಟ್ ಬ್ರೌಸಿಂಗ್ ಕಾರ್ಯವನ್ನು ಬೆಂಬಲಿಸುವ ಯಾವುದೇ ಸಾಧನದಲ್ಲಿ ನಿಮ್ಮ ಖಾತೆಗೆ ಸೈನ್ ಇನ್ ಮಾಡುವ ಮೂಲಕ ಈ ಕಾಂಟ್ಯಾಕ್ಟ್ಗಳನ್ನು ಹೇಗೆ ಬೇಕಾದರು ಓಪನ್ ಮಾಡ್ಬಹುದು.
ಇದನ್ನೂ ಓದಿ: ಮಾರುಕಟ್ಟೆಗೆ ಬರ್ತಿದೆ ವಿವೋ ಕಂಪನಿಯ ಹೊಸ ಸ್ಮಾರ್ಟ್ಫೋನ್! ಹೇಗಿದೆ ಗೊತ್ತಾ ಫೀಚರ್ಸ್?
ಗೂಗಲ್ ಕಾಂಟ್ಯಾಕ್ಟ್ ಬ್ಯಾಕಪ್ನಿಂದ ಏನು ಪ್ರಯೋಜನ?
ಗೂಗಲ್ ಬ್ಯಾಕಪ್ ಎಂಬುದು ಒಂದು ಇಂಟರ್ನೆಟ್ ಮೂಲಕ ಕಾರ್ಯನಿರ್ವಹಿಸುವಂತಹ ಅಪ್ಲಿಕೇಶನ್ ಆಗಿದೆ. ಇದು ಗ್ರಾಹಕರಿಗೆ ಕಾಂಟ್ಯಾಕ್ಟ್ಗಳನ್ನು ಸೇವ್ ಮಾಡಲು ಸಹಕಾರ ಮಾಡುತ್ತದೆ. ಇದಲ್ಲದೆ ಇದರಲ್ಲಿ ವಿಶೇಷವಾಗಿ ಕಾಂಟ್ಯಾಕ್ಟ್ಗಳನ್ನು ಆ್ಯಡ್ ಮಾಡಲು ಯಾವುದೇ ಮಿತಿಗಳಿರುವುದಿಲ್ಲ.
ಈ ಗೂಗಲ್ ಅಕೌಂಟ್ ಮೂಲಕ ನಿಮ್ಮ ಕಾಂಟ್ಯಾಕ್ಟ್ಗಳನ್ನು ಬ್ಯಾಕಪ್ ಮಾಡಿದ್ರೆ ನಿಮಗೆ ನಿಮ್ಮ ಮೊಬೈಲ್ ಕಳುವಾದಾಗ, ಕಳೆದುಹೋದಾಗ ಅಥವಾ ಮೊಬೈಲ್ ಹಾಳಾದಾಗ ನಿಮಗೆ ಕಾಂಟ್ಯಾಕ್ಟ್ಗಳನ್ನು ಮರುಪಡೆಯಲು ಇದು ಬಹಳಷ್ಟು ಸಹಕಾರಿಯಾಗುತ್ತದೆ. ನಿಮ್ಮ ಹಳೇ ಮೊಬೈಲ್ ಇಲ್ಲದೆ ಆದಾಗ ಬೇರೊಂದು ಮೊಬೈಲ್ನಲ್ಲಿ ನಿಮ್ಮ ಗೂಗಲ್ ಅಕೌಂಟ್ ಅನ್ನು ಲಾಗಿನ್ ಆಗುವ ಮೂಲಕ ನಿಮ್ಮ ಗೂಗಲ್ ಅಕೌಂಟ್ನಲ್ಲಿ ಸೇವ್ ಆದ ಕಾಂಟ್ಯಾಕ್ಟ್, ಡೇಟಾವನ್ನು ಸುಲಭದಲ್ಲಿ ಮರುಪಡೆಯಬಹುದಾಗಿದೆ.
ಗೂಗಲ್ ಅಕೌಂಟ್ಗೆ ಕಾಂಟ್ಯಾಕ್ಟ್ ಬ್ಯಾಕಪ್ ಮಾಡುವುದು ಹೇಗೆ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ