ಸೋಶಿಯಲ್ ಮೀಡಿಯಾದಲ್ಲಿ (Social Media) ಅತೀಹೆಚ್ಚು ಚರ್ಚೆಯಲ್ಲಿರುವಂತಹ ಅಪ್ಲಿಕೇಶನ್ (Application) ಎಂದರೆ ಅದು ಟ್ವಿಟರ್ (Twitter) ಅಂತಾನೂ ಹೇಳ್ಬಹುದು. ಯಾವಾಗ ಎಲಾನ್ ಮಸ್ಕ್ (Elon Musk) ಅವರು ಟ್ವಿಟರ್ ಒಡೆತನವನ್ನು ಪಡೆದುಕೊಂಡರೋ ಅಂದಿನಿಂದ ಈ ಚರ್ಚೆಗಳು ಶುರುವಾಗಿದೆ. ಟ್ವಿಟರ್ನಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬೇಕೆಂದು ಎಲಾನ್ ಮಸ್ಕ್ ಅವರ ಉದ್ದೇಶ ಇತ್ತು. ಅದೇ ರೀತಿ ಈ ವರ್ಷ ಹಲವಾರು ಬದಲಾವಣೆಗಳನ್ನು ಕೂಡ ತಂದರು. ಆದರೆ ಈ ಎಲ್ಲಾ ಬದಲಾವಣೆಗಳು ಬಳಕೆದಾರರಲ್ಲಿ ತೀವ್ರ ಆಕ್ರೋಶ ಉಂಟಾಗಲು ಕಾರಣವಾಗಿದೆ. ಇತ್ತೀಚೆಗೆ ಎಲಾನ್ ಮಸ್ಕ್ ಅವರು ಟ್ವಿಟರ್ನಿಂದ ಕೆಳಗಿಳಿಯಲಿದ್ದಾರೆ ಎಂಬ ಸುದ್ದಿ ಬಹಳಷ್ಟು ಸದ್ದು ಮಾಡಿತ್ತು. ಅದಕ್ಕಾಗಿ ಟ್ವಿಟರ್ನಲ್ಲಿ ಸ್ವತಃ ಎಲಾನ್ ಮಸ್ಕ್ ಅವರೇ ಪೋಲ್ ರಚಿಸುವ ಮೂಲಕ ಜನರಿಂದ ಅಭಿಪ್ರಾಯ ಪಡೆದುಕೊಂಡಿದ್ದಾರೆ.
ಹೌದು, ಇತ್ತೀಚೆಗೆ ಬಹಳಷ್ಟು ಸುದ್ದಿಯಲ್ಲಿ ವಿಷಯ ಎಂದರೆ ಅದು ಟ್ವಿಟರ್ ಮತ್ತು ಎಲಾನ್ ಮಸ್ಕ್. ಕೆಲದಿನಗಳಿಂದ ಟ್ವಿಟರ್ ಒಡೆತನದಿಂದ ಎಲಾನ್ ಮಸ್ಕ್ ಅವರು ಕೆಳಗಿಳಿಯಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದೀಗ ಇದರ ಬಗ್ಗೆ ಜನರ ಅಭಿಪ್ರಾಯವನ್ನು ಕೇಳಲೆಂದು ಸ್ವತಃ ಮಸ್ಕ್ ಅವರರೇ ಫೋಲ್ ರಚಿಸಿದ್ದರು. ಇದರಲ್ಲಿ ಜನರು ಏನು ಹೇಳಿದ್ದಾರೆ ಎಂಬುದನ್ನು ನೀವೇ ನೋಡಿ.
ಎಲಾನ್ ಮಸ್ಕ್ ಅವರ ಟ್ವಿಟರ್ ಪೋಲ್ ರಚನೆ
ಎಲಾನ್ ಮಸ್ಕ್ ಅವರು ಟ್ವಿಟರ್ನಲ್ಲಿ ನಾನು ಟ್ವಿಟರ್ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯಬೇಕೆ? ಎಂದು ಸ್ವತಃ ಪೋಲ್ ರಚಿಸಿ ಜನರ ಪ್ರತಿಕ್ರಿಯೆ ಬಗ್ಗೆ ಸಮೀಕ್ಷೆ ನಡೆಸಿದರು. ಈ ಪೋಲ್ ರಚಿಸಿರುವಂತಹ ಮುಖ್ಯ ಕಾರಣವೆಂದರೆ ಟ್ವಿಟರ್ ಹುದ್ದೆಯಿಂದ ಕೆಳಗಿಳಿಯಬೇಕು ಎಂಬ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಟಿವಿ ಪ್ರಿಯರಿಗೆ ಶಾಕಿಂಗ್ ಸುದ್ದಿ! ಹೊಸವರ್ಷದಿಂದ ಟಿವಿ ಚಾನೆಲ್ಗಳ ಬೆಲೆ ಏರಿಕೆ!
ಇದಕ್ಕೆ ತಕ್ಕಂತೆ ಮಸ್ಕ್ ಅವರು ಹಾಕಿದ ಪೋಲ್ನಲ್ಲಿ ಶೇಕಡಾ 57 ರಷ್ಟು ಜನರು 'ಹೌದು' ನೀವು ಟ್ವಿಟ್ಟರ್ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯಬೇಕು ಎಂದಿದ್ದಾರೆ. ಎಲಾನ್ ಮಸ್ಕ್ ಅವರು ರಚಿಸಿದ್ದ ಪೋಲ್ಗೆ ಇದುವರೆಗೆ 1.76 ಕೋಟಿ ಜನ ಪ್ರತಿಕ್ರಿಯಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇವರ ಪೈಕಿ ಅರ್ಧಕ್ಕಿಂತ ಹೆಚ್ಚು 57 ರಷ್ಟು ಜನರು ಎಲಾನ್ ಮಸ್ಕ್ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕೆಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
Should I step down as head of Twitter? I will abide by the results of this poll.
— Elon Musk (@elonmusk) December 18, 2022
ಈ ವರ್ಷದಲ್ಲಿ ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು ಖರೀದಿಸುವ ಮೂಲಕ ಟ್ವಿಟರ್ ಒಡೆತನವನ್ನು ಕೈಗೆತ್ತಿಕೊಂಡರು. ಆದರೆ ಟ್ವಿಟರ್ನ ಸಿಇಒ ಆಗಿದ್ದಂತಹ ಭಾರತೀಯ ಮೂಲದ ಪರಾಗ್ ಅಗರವಾಲ್ ಅವರನ್ನು ಟ್ವಿಟರ್ ಹುದ್ದೆಯಿಂದ ವಜಾ ಮಾಡಿದರು. ಆದರೆ ಇನ್ನುಮುಂದಿನ ದಿನಗಳಲ್ಲಿ ಮತ್ತೆ ಟ್ವಿಟರ್ನ ಅಧಿಕಾರವನ್ನು ಪಡೆದುಕೊಳ್ಳುವುದು ಅಸಾಧ್ಯ, ಈ ಕಾರಣಕ್ಕಾಗಿ ಭಾರತದ ಟೆಕ್ನಾಲಜಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಮಾಜಿ ಟ್ವಿಟರ್ನ ಉದ್ಯೋಗಿಯಾಗಿದ್ದಂತಹ ಶ್ರೀರಾಮ್ ಕೃಷ್ಣನ್ ಅವರು ಟ್ವಿಟರ್ನ ಅಧಿಕಾರ ವಹಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಟ್ವಿಟರ್ನ ಬದಲಾವಣೆಯೇ ಮಸ್ಕ್ ಕೆಳಗಿಲಿಯಲು ಕಾರಣ
ಎಲಾನ್ ಮಸ್ಕ್ ಅವರ ಮುಖ್ಯ ಉದ್ದೇಶವೇ ಟ್ವಿಟರ್ ಅನ್ನು ಅಪ್ಡೇಟ್ ಮಾಡುವುದು. ಆದರೆ ಎಲಾನ್ ಮಸ್ಕ್ ಅವರು ಟೆಸ್ಲಾ ಕಂಪನಿಯ ಸಿಇಒ ಅಗಿದ್ದರು. ಆದರೆ ಟ್ವಿಟರ್ನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ ಎಂಬ ಕಾರಣಕ್ಕೆ ಟೆಸ್ಲಾ ಕಂಪನಿಯ ನಿರ್ದೇಶಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಲ್ಲದೇ ಟ್ವಿಟರ್ನಲ್ಲಿ ಹಲವಾರು ಉದ್ಯೋಗಿಗಳ ವಜಾವನ್ನು ಕೂಡ ಮಾಡಿದ್ದಾರೆ. ಜೊತೆ ಇತ್ತೀಚೆಗ ಬಂದಂತಹ ಬ್ಲೂಟಿಕ್ ಚಂದಾದಾರಿಕೆ ಸೇವೆಗೆ ಬಳಕೆದಾರರಿಂದ ಬಹಳಷ್ಟು ಆಕ್ರೋಶ ವ್ಯಕ್ತವಾಗಿದೆ. ಈ ಕಾರಣಕ್ಕಾಗಿಯೇ ಜನರು ಎಲಾನ್ ಮಸ್ಕ್ ಬಗ್ಗೆ ಈ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ