ಹೊಸ ಹೊಸ ಮೊಬೈಲ್ ಕಂಪೆನಿಗಳನ್ನು (Mobile Company) ಇತ್ತೀಚೆಗೆ ಬಹಳಷ್ಟು ನಾವು ನೋಡಬಹುದಾಗಿದೆ. ಈ ಕಂಪೆನಿಗಳು ಮಾರುಕಟ್ಟೆಗೆ ಹೊಸ ಮಾದರಿಯಲ್ಲಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರ ಗಮನ ಸೆಳೆಯುವಂತಹ ಪ್ರಯತ್ನವನ್ನು ಮಾಡುತ್ತಲೇ ಇದೆ. ಇದೀಗ ಕೆಲವರ್ಷಗಳಿಂದ ಸ್ಮಾರ್ಟ್ಫೋನ್ (Smartphones) ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದಿರುವ ಐಕ್ಯೂ ಕಂಪೆನಿ ಇತ್ತೀಚೆಗೆ ತನ್ನ ಬ್ರಾಂಡ್ನ ಅಡಿಯಲ್ಲಿ ಬಿಡುಗಡೆಯಾಗಲಿರುವ ಐಕ್ಯೂ ನಿಯೋ 7 ಸೀರಿಸ್ ಅನ್ನು ಅನಾವರಣ ಮಾಡಿತ್ತು. ಇದೀಗ ಈ ಐಕ್ಯೂ ನಿಯೋ 7 ಸೀರಿಸ್ನ (IQoo Neo 7 Series) ಭಾಗವಾಗಿ ಮಾರುಕಟ್ಟೆಗೆ ಐಕ್ಯೂ ನಿಯೋ 7, ಐಕ್ಯೂ ನಿಯೋ 7 ಎಸ್ಇ, ಐಕ್ಯೂ ನಿಯೋ 7 ರೇಸಿಂಗ್ ಎಡಿಷನ್ಗಳು ಆಗಿವೆ. ಇದೀಗ ಐಕ್ಯೂ ಕಂಪೆನಿ ತನ್ನ ಗ್ರಾಹಕರಿಗೆ ಶುಭ ಸುದ್ದಿಯನ್ನು ನೀಡಿದೆ. ಭಾರತದ ಮಾರುಕಟ್ಟೆಗೆ ಐಕ್ಯೂ ನಿಯೋ 7 ಎಸ್ಇ (Iqoo Neo 7 SE) ಸ್ಮಾರ್ಟ್ಫೋನ್ ಎಂಟ್ರಿ ನೀಡಲಿದೆ ಎಂಬ ಮಾಹಿತಿಯನ್ನು ಕಂಪೆನಿ ನೀಡಿದೆ.
ಐಕ್ಯೂ ಕಂಪೆನಿ ಮಾರುಕಟ್ಟೆಗೆ ಈಗೀಗ ಹೊಸ ರೀತಿಯ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನ ಪಡ್ತಾಇದೆ. ಇದೀಗ ಈ ಸಾಲಿಗೆ ಐಕ್ಯೂ ನಿಯೋ 7 ಸೀರಿಸ್ನ ಸ್ಮಾರ್ಟ್ಫೋನ್ಗಳು ಸೇರಿವೆ. ಇನ್ನೇನು ಕೆಲವೇ ದಿನಗಳಲ್ಲಿ ಐಕ್ಯೂ ನಿಯೋ 7 ಎಸ್ಇ ಸ್ಮಾರ್ಟ್ಫೋನ್ ಭಾರತದ ಮಾರುಕಟ್ಟೆಗೆ ಲಗ್ಗೆಯಿಡುತ್ತದೆ ಎಂದು ಕಂಪೆನಿ ತಿಳಿಸಿದೆ.
ಐಕ್ಯೂ ನಿಯೋ 7 ಎಸ್ಇ ಸ್ಮಾರ್ಟ್ಫೋನ್ ಫೀಚರ್ಸ್ ಹೇಗಿರಲಿದೆ?
ಐಕ್ಯೂ ನಿಯೋ 7 ಎಸ್ಇ ಸ್ಮಾರ್ಟ್ಫೋನ್ 6.78 ಇಂಚಿನ ಫುಲ್ ಹೆಚ್ಡಿ+ ಅಮೋಲ್ಡ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್ಫೋನ್ನ ಡಿಸ್ಪ್ಲೇ 90.61 % ಸ್ಕ್ರೀನ್ ಟು ಬಾಡಿ ನಡುವಿನ ಅನುಪಾತ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಇದಲ್ಲದೆ ಈ ಡಿಸ್ಪ್ಲೇ 20:9 ರಚನೆಯ ಅನುಪಾತದಲ್ಲಿರಬಹುದು ಎಂದು ನಿರೀಕ್ಷಿಸಲಾಗಿದೆ.
ಪ್ರೊಸೆಸರ್ ಸಾಮರ್ಥ್ಯ
ಐಕ್ಯೂ ನಿಯೋ 7 ಎಸ್ಇ ಸ್ಮಾರ್ಟ್ಫೋನ್ ಆಕ್ಟಾ ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 8200 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿರುತ್ತದೆ. ಇನ್ನು ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ ವಿ13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 16ಜಿಬಿ ರ್ಯಾಮ್ ಮತ್ತು 512ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರಲಿದೆ. ಇನ್ನು ಮೆಮೊರಿ ಕಾರ್ಡ್ ಸ್ಲಾಟ್ ಬಗ್ಗೆ ಯಾವುದೇ ಮಾಹಿತಿಯನ್ನು ಕಂಪೆನಿ ಇದುವರೆಗೆ ಬಹಿರಂಗ ಪಡಿಸಿಲ್ಲ.
ಕ್ಯಾಮೆರಾ ಫೀಚರ್ಸ್
ಐಕ್ಯೂ ನಿಯೋ 7 ಎಸ್ಇ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿರಬಹುದು. ಇದಲ್ಲದೆ ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್ಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಿರಬಹುದು ಎಂದು ನಿರೀಕ್ಷಿಸಲಾಗಿದೆ.
ಬ್ಯಾಟರಿ ಫೀಚರ್ಸ್
ಐಕ್ಯೂ ನಿಯೋ 7 ಎಸ್ಇ ಸ್ಮಾರ್ಟ್ಫೋನ್ 4880mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿರುತ್ತದೆ. ಇದು ಅಡಾಪ್ಟರ್ ಮೂಲಕ 120W ವೇಗದ ವೈರ್ಡ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುವ ನಿರೀಕ್ಷೆಯಿದೆ.
ಇದನ್ನೂ ಓದಿ: ಸಾವು ಬದುಕಿನ ಹೋರಾಟದಲ್ಲಿದ್ದ ವ್ಯಕ್ತಿಯ ಜೀವ ಉಳಿಸಿದ ಆ್ಯಪಲ್ ಸ್ಮಾರ್ಟ್ವಾಚ್! ಹೀಗಿದೆ ಫೀಚರ್ಸ್
ಇತರೆ ಫೀಚರ್ಸ್
ಇನ್ನು ಈ ಸ್ಮಾರ್ಟ್ಫೋನ್ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್ಬಿ ಟೈಪ್ ಸಿ ಪೋರ್ಟ್ ಅನ್ನು ಹೊಂದಿರುವ ಸಾಧ್ಯತೆಯಿದೆ. ಇದರೊಂದಿಗೆ ಆಕ್ಸಿಲೆರೋಮೀಟರ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್, ಗೈರೋಸ್ಕೋಪ್, ಲೈಟ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ