iQOO 9T: ಭಾರತೀಯರಿಗಾಗಿ ಬಿಡುಗಡೆಗೊಂಡ ಹೊಸ ಸ್ಮಾರ್ಟ್​ಫೋನ್​! ಬಜೆಟ್​ ಬೆಲೆಗೆ ಖರೀದಿಗೆ ಲಭ್ಯ

ಭಾರತದಲ್ಲಿ iQOO 9T ಸ್ಮಾರ್ಟ್​ಫೋನ್​ RAM​ ಮತ್ತು ಸ್ಟೊರೇಜ್​ ಆಯ್ಕೆಯಲ್ಲಿ ಲಭ್ಯವಿದೆ. ಅದರಂತೆಯೇ ಇದರ ಬೆಲೆಯನ್ನು ಪ್ರಕಟಿಸಿದೆ. 8GB/128GB ಮಾದರಿಗೆ 49,999 ರೂ. ನಿಗದಿಪಡಿಸಲಾಗಿದೆ. ಹೆಚ್ಚುವರಿಯಾಗಿ, 12GB/256GB ಕಾನ್ಫಿಗರೇಶನ್‌ನಲ್ಲಿ ಲಭ್ಯವಿದ್ದು, ಒದರ ಬೆಲೆ 54,999 ರೂ ಆಗಿದೆ. iQOO 9T ಆಲ್ಫಾ ಬ್ಲಾಕ್ ಮತ್ತು ಲೆಜೆಂಡ್ (BMW ಮೋಟಾರ್‌ಸ್ಪೋರ್ಟ್) ಬಣ್ಣಗಳಲ್ಲಿ ಲಭ್ಯವಿದೆ.

iQOO 9T

iQOO 9T

  • Share this:
    ಸ್ಮಾರ್ಟ್​ಫೋನ್​ ಮಾರುಕಟ್ಟೆ (Smart phone Market) ಬೃಹದಾಕಾರವಾಗಿ ಬೆಳೆಯುತ್ತಿದೆ. ಹೊಸ ಹೊಸ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಆಗಮನಿಸುತ್ತಿದೆ. ಒಂದಲ್ಲಾ ಒಂದು ವಿಶೇಷತೆಯಿಂದ ಕೂಡಿದ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಬರುತ್ತಿವೆ. ಅದರಂತೆಯೇ ಇದೀಗ iQOO 9T ಭಾರತದಲ್ಲಿ ಅಧಿಕೃತವಾಗಿ ಅನಾವರಣಗೊಂಡಿದೆ (Launched). ನೂತನ ಸ್ಮಾರ್ಟ್​ಫೋನ್​ ಹಲವು ವಿಶೇಷತೆಯಿಂದ ಕೂಡಿದ್ದು, ಗ್ರಾಹಕರಿಗಾಗಿ ಆಯ್ಕೆಯ ಬಣ್ಣದಲ್ಲಿ (Colour) ಲಭ್ಯವಿದೆ. ಅಂದಹಾಗೆಯೇ iQOO ಬ್ರ್ಯಾಂಡ್‌ನಿಂದ ಇತ್ತೀಚಿನ ಪ್ರಮುಖ ಸ್ಮಾರ್ಟ್‌ಫೋನ್ ಆಗಿ iQOO 9T ಆಗಮಿಸಿದೆ. ಭಾರತದಲ್ಲಿ iQOO ಬ್ರ್ಯಾಂಡ್​ ಅಡಿಯಲ್ಲಿ Snapdragon 8+ Gen 1 ಚಿಪ್‌ಸೆಟ್ ಅನ್ನು ಒಳಗೊಂಡಿರುವ ಮೊದಲನೆಯ ಫೋನ್​ ಆಗಿದೆ.

    ಭಾರತದಲ್ಲಿ ಇದರ ಬೆಲೆ ಎಷ್ಟಿದೆ ಗೊತ್ತಾ?

    ಭಾರತದಲ್ಲಿ iQOO 9T ಸ್ಮಾರ್ಟ್​ಫೋನ್​RAM​ ಮತ್ತು ಸ್ಟೊರೇಜ್​ ಆಯ್ಕೆಯಲ್ಲಿ ಲಭ್ಯವಿದೆ. ಅದರಂತೆಯೇ ಇದರ ಬೆಲೆಯನ್ನು ಪ್ರಕಟಿಸಿದೆ. 8GB/128GB ಮಾದರಿಗೆ 49,999 ರೂ. ನಿಗದಿಪಡಿಸಲಾಗಿದೆ. ಹೆಚ್ಚುವರಿಯಾಗಿ, 12GB/256GB ಕಾನ್ಫಿಗರೇಶನ್‌ನಲ್ಲಿ ಲಭ್ಯವಿದ್ದು, ಒದರ ಬೆಲೆ 54,999 ರೂ ಆಗಿದೆ. iQOO 9T ಆಲ್ಫಾ ಬ್ಲಾಕ್ ಮತ್ತು ಲೆಜೆಂಡ್ (BMW ಮೋಟಾರ್‌ಸ್ಪೋರ್ಟ್) ಬಣ್ಣಗಳಲ್ಲಿ ಲಭ್ಯವಿದೆ.

    ಭಾರತಿಗಾಗಿ ಈ ಕೊಡುಗೆಗಳು ಲಭ್ಯ!

    iQOO ಸ್ಮಾರ್ಟ್​ಫೋನ್​ ಅನಾವರಣದ ಜೊತೆಗೆ ಭಾರತೀಯರಿಗಾಗಿ ಕೆಲವು ಕೊಡುಗೆಯನ್ನು ನೀಡುತ್ತಿದೆ. ಅಂದರೆ ಗ್ರಾಹಕರು ಕಡಿಮೆ ಬೆಲೆಗೆ ಖರೀದಿಸುವ ಅವಕಾಶವನ್ನು ತೆರೆದಿಟ್ಟಿದೆ. ಸ್ಮಾರ್ಟ್​ಫೋನ್​ ಪ್ರಿಯರು iQOO  9ಟಿ ಫೋನನ್ನು ಖರೀದಿಸಲು ಮುಂದಾದರೆ ICICI ಬ್ಯಾಂಕ್ ಕಾರ್ಡ್‌ಗಳೊಂದಿಗಿನ ವಹಿವಾಟಿನ ಮೇಲೆ iQOO 9T ಮೇಲೆ ರೂ 4,000 ರಿಯಾಯಿತಿ ನೀಡುತ್ತದೆ. ಹೆಚ್ಚುವರಿಯಾಗಿ, iQOO ಬಳಕೆದಾರರು iQOO 9T ಖರೀದಿಯ ಮೇಲೆ ರೂ 7,000 ವಿನಿಮಯ ಬೋನಸ್ ಸಿಗಲಿದೆ. ಆದರೆ iQOO ಅಲ್ಲದ ಸಾಧನ ಹೊಂದಿರುವವರು ರೂ 5,000 ವಿನಿಮಯ ಬೋನಸ್ ಅನ್ನು ಸ್ವೀಕರಿಸುತ್ತಾರೆ. ಕಂಪನಿಯು 12 ತಿಂಗಳವರೆಗೆ EMI ಪಾವತಿದೇ ಇರುಬಹುದಾದ ಆಯ್ಕೆಯನ್ನು ಸಹ ನೀಡುತ್ತಿದೆ.

    iQOO 9T ವಿಶೇಷಣಗಳು

    ಸ್ಮಾರ್ಟ್​ಫೋನ್​ ಖರೀದೂ ಮುನ್ನ ಪ್ರಮುಖವಾಗಿ ಅದರ ವೈಶಿಷ್ಟ್ಯವನ್ನು ಗಮನಿಸುವುದು ಮುಖ್ಯ. ಅದರಂತೆಯೇ ನೂತನ  iQOO 9T ಸ್ಮಾರ್ಟ್​ಫೋನ್​ ಸ್ನಾಪ್‌ಡ್ರಾಗನ್ 8+ Gen 1 ಚಿಪ್‌ಸೆಟ್‌ನಿಂದ 12GB LPDDR5 RAM ಮತ್ತು 256GB ವರೆಗಿನ UFS 3.1 ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. 4GB ವರೆಗಿನ ಸಂಗ್ರಹಣೆಯನ್ನು ವರ್ಚುವಲ್ RAM ಆಗಿಯೂ ಬಳಸಬಹುದು.

    iQOO 9Tನಲ್ಲಿ ಸುಧಾರಿತ ಹ್ಯಾಪ್ಟಿಕ್ಸ್ ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳಿಗಾಗಿ ಡ್ಯುಯಲ್ ಎಕ್ಸ್-ಆಕ್ಸಿಸ್ ಲೀನಿಯರ್ ಮೋಟಾರ್‌ಗಳಿವೆ. iQOO 9T ಮೀಸಲಾದ Vivo V1+ ಚಿಪ್ ಮತ್ತು 3930mm² ಆವಿ ಚೇಂಬರ್ ಲಿಕ್ವಿಡ್ ಕೂಲಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ.

    ಡಿಸ್​​ಪ್ಲೇ, ಕ್ಯಾಮೆರಾ ಹೇಗಿದೆ?

    iQOO 9T HDR10+ ಬೆಂಬಲದೊಂದಿಗೆ 6.78-ಇಂಚಿನ FHD+ E5 AMOLED ಡಿಸ್ಪ್ಲೇಯನ್ನು ಹೊಂದಿದೆ. ಫಲಕವು 120Hz ರಿಫ್ರೆಶ್ ದರ ಮತ್ತು 360Hz ಟಚ್ ಮಾದರಿ ದರವನ್ನು ಹೊಂದಿದೆ, ತತ್‌ಕ್ಷಣ ಮೋಡ್‌ನಲ್ಲಿ 1200Hz ವರೆಗೆ ಹೋಗುತ್ತದೆ. ಫೋನ್ OIS ಜೊತೆಗೆ 50 MP Samsung GN5 ಪ್ರಾಥಮಿಕ ಸಂವೇದಕ, 13 MP ಅಲ್ಟ್ರಾವೈಡ್ ಘಟಕ ಮತ್ತು 2x ಆಪ್ಟಿಕಲ್ ಜೂಮ್‌ನೊಂದಿಗೆ 12 MP ಟೆಲಿಫೋಟೋ ಸೆನ್ಸಾರ್​ ಹೊಂದಿದೆ.

     16 MP ಸೆಲ್ಫಿ ಕ್ಯಾಮೆರಾ

    ಸೆಲ್ಫಿ ಕ್ಯಾಮೆರಾಕ್ಕಾಗಿಯೇ ಸ್ಮಾರ್ಟ್​ಫೋನ್​ ಖರೀದಿಸುವವರು ಹಲವರಿದ್ದಾರೆ. ಸೆಲ್ಫಿ ಅನ್ನೋದು ಸದ್ಯದ ಟ್ರೆಂಡ್​ ಆಗಿಬಿಟ್ಟಿದೆ. ಇದೇ ಕಾರಣಕ್ಕೆ ಹಲವು ಸ್ಮಾರ್ಟ್​ಫೋನ್​ ಕಂಪನಿಗಳು ಮುಂಭಾಗದಲ್ಲಿ ಆಕರ್ಷಕ ಸೆಲ್ಫಿ ಕ್ಯಾಮೆರಾ ನೀಡುತ್ತಾರೆ. ಅದರಂತೆಯೇ ಈ ಫೋನಿನಲ್ಲಿ 16 MP ಸೆಲ್ಫಿ ಶೂಟರ್ ಇದೆ. iQOO 9T 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,700 mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು Funtouch OS 12 ಜೊತೆಗೆ Android 12 ಅನ್ನು ರನ್ ಮಾಡುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಒಂಬತ್ತು 5G ಬ್ಯಾಂಡ್‌ಗಳು, 4G LTE, Wi-Fi, ಬ್ಲೂಟೂತ್, GPS ಮತ್ತು ಹೆಚ್ಚಿನವು ಸೇರಿವೆ.
    Published by:Harshith AS
    First published: