ಸ್ಮಾರ್ಟ್ಫೋನ್ಗಳು (Smartphones) ಇತ್ತೀಚೆಗೆ ಬಹಳಷ್ಟು ಬಳಕೆಯಲ್ಲಿರುವ ಸಾಧನವಾಗಿದೆ. ಈಗಿನ ಕಾಲಘಟ್ಟದಲ್ಲಿ ದಿನಕ್ಕೆ ಒಂದರಂತೆ ಸ್ಮಾರ್ಟ್ಫೋನ್ಗಳನ್ನು ಕಂಪನಿಗಳು ಬಿಡುಗಡೆ ಮಾಡುತ್ತಲೇ ಇದೆ. ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್ಫೋನ್ಗಳನ್ನು ಕಾಲಿಡುವ ಮೂಲಕ ಜನರನ್ನು ತನ್ನತ್ತ ಕಂಪನಿಗಳು ಆಕರ್ಷಿಸುತ್ತಿದೆ. ಭಾರತದ ಮಾರುಕಟ್ಟೆಯಲ್ಲಿ ಐಕ್ಯೂ ಕಂಪನಿಯು (IQoo Company) ತನ್ನ ಬ್ರಾಂಡ್ನ ಅಡಿಯಲ್ಲಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ಇತ್ತೀಚಗೆ ಐಕ್ಯೂ ಕಂಪನಿ ಐಕ್ಯೂ 9 ಎಸ್ಇ 5ಜಿ (IQoo 9 SE 5G) ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿ ಎಲ್ಲರ ಮನ್ನಣೆಗೆ ಪಾತ್ರವಾಗಿತ್ತು. ಆದರೆ ಇದೀಗ ಈ ಸ್ಮಾರ್ಟ್ಫೋನ್ ಅನ್ನು ಭರ್ಜರಿ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ.
ಐಕ್ಯೂ ಕಂಪನಿಯ ಐಕ್ಯೂ 9 ಎಸ್ಐ 5ಜಿ ಸ್ಮಾರ್ಟ್ಫೋನ್ ಈ ಹಿಂದೆ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಈ ಸ್ಮಾರ್ಟ್ಫೋನ್ ಅಮೆಜಾನ್ನಲ್ಲಿ ಭಾರೀ ಅಗ್ಗದಲ್ಲಿ ಮಾರಾಟವಾಗುತ್ತಿದೆ. ಇದರ ಫೀಚರ್ಸ್ ಹೇಗಿದೆ? ಬೆಲೆ ಎಷ್ಟು? ಎಂಬುದನ್ನು ಈ ಲೇಖನದ ಮೂಲಕ ಓದಿ.
ಹೇಗಿದೆ ಆಫರ್ಸ್?
ದೈತ್ಯ ಇ ಕಾಮರ್ಸ್ ಕಂಪನಿ ಎಂದು ಎನಿಸಿಕೊಂಡಿರುವ ಅಮೆಜಾನ್ ವೆಬ್ಸೈಟ್ನಲ್ಲಿ 'ಐಕ್ಯೂ 9 ಎಸ್ಇ 5ಜಿ' ಸ್ಮಾರ್ಟ್ಫೋನ್ ಭಾರೀ ಡಿಸ್ಕೌಂಟ್ ಪಡೆದಿದೆ. 39,990 ರೂಪಾಯಿ ಬೆಲೆಯ ಈ ಫೋನ್ ಮೇಲೆ ಅಮೆಜಾನ್ 25% ರಿಯಾಯಿತಿಯನ್ನು ನೀಡಿದೆ. ಅಂದರೆ ಈ ಆಫರ್ ಮೂಲಕ 29,990 ರೂಪಾಯಿಗಳಿಗೆ ಅಮೆಜಾನ್ನಲ್ಲಿ ಖರೀಸಿಸಬಹುದಾಗಿದೆ.
ಇದನ್ನೂ ಓದಿ: ಈ ರೀಚಾರ್ಜ್ ಪ್ಲ್ಯಾನ್ ನೋಡಿದ್ರೆ ಗ್ಯಾರಂಟಿ ಹಾಕೊಳ್ತೀರಾ! ಹೇಗಿದೆ ಆಫರ್ಸ್?
ಇದರೊಂದಿಗೆ ಸುಮಾರು 22,000 ರೂಪಾಯಿವರೆಗೂ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದೆ. ಆದರೆ ಈ ಎಕ್ಸ್ಚೇಂಜ್ ಆಫರ್ ನೀವು ನೀಡುವಂತಹ ಸ್ಮಾರ್ಟ್ಫೋನ್ನ ಮಾದರಿ ಮತ್ತು ಗುಣಮಟ್ಟದ ಆಧಾರದಲ್ಲಿ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಇದರೊಂದಿಗೆ ಆಯ್ದ ಬ್ಯಾಂಕ್ಗಳಿಂದ ಹೆಚ್ಚುವರಿ ರಿಯಾಯಿತಿಗಳು ಸಹ ದೊರೆಯುತ್ತವೆ. ಅಲ್ಲದೇ ನೋ ಕಾಸ್ಟ್ ಇಎಮ್ಐ ಸೌಲಭ್ಯದ ಆಯ್ಕೆ ಸಹ ಗ್ರಾಹಕರಿಗೆ ಸಿಗಲಿದೆ.
ಐಕ್ಯೂ 9 ಎಸ್ಐ 5ಜಿ ಸ್ಮಾರ್ಟ್ಫೋನ್ನ ಫೀಚರ್ಸ್
ಐಕ್ಯೂ 9 ಎಸ್ಐ 5ಜಿ ಸ್ಮಾರ್ಟ್ಫೋನ್ 6.62 ಇಂಚಿನ ಫುಲ್ ಹೆಚ್ಡಿ+ ಅಮೋಲ್ಡ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 300Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಹೊಂದಿದೆ. ಇನ್ನು ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 SoC ಪ್ರೊಸೆಸರ್ ಹೊಂದಿದೆ. ಹಾಗೆಯೇ 8ಜಿಬಿ ರ್ಯಾಮ್ + 128 ಜಿಬಿ ಮತ್ತು 12ಜಿಬಿ ರ್ಯಾಮ್ + 256 ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಬಿಡುಗಡೆಯಾಗಿದೆ.
ಕ್ಯಾಮೆರಾ ಫೀಚರ್ಸ್
ಇನ್ನು ಈ ಐಕ್ಯೂ ಸ್ಮಾರ್ಟ್ಫೋನ್ ಕೂಡ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೋನಿ IMX598 ಸೆನ್ಸಾರ್ ಅನ್ನು ಹೊಂದಿದೆ. ಇದು ಕೂಡ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಗುಣಮಟ್ಟದ ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ವೈಡ್ ಆ್ಯಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ.
ಬ್ಯಾಟರಿ ಫೀಚರ್ಸ್
ಈ ಸ್ಮಾರ್ಟ್ಫೋನ್ 4,500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಒಳಗೊಂಡಿದೆ. ಇದು 66W ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ, 4ಜಿ ಎಲ್ಟಿಇ, ವೈಫೈ, ಬ್ಲೂಟೂತ್, GPS/ A-GPS ಮತ್ತು ಯುಎಸ್ಬಿ ಟೈಪ್ ಸಿ ಪೋರ್ಟ್ ಅನ್ನು ಒಳಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ