iPhone Hack: ಐಫೋನ್ ನಲ್ಲಿರುವ ಈ ‘ಬ್ಲರ್’ ಟೂಲ್ ಬಗ್ಗೆ ನಿಮಗೆಷ್ಟು ಗೊತ್ತು?

ಐಫೋನ್ ನಲ್ಲಿರುವ ಬ್ಲರ್ ಸಾಧನವು ಬಳಕೆದಾರರ ಗೌಪ್ಯತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಐಫೋನ್ ಬಳಕೆದಾರರು ಈ ವೈಶಿಷ್ಟ್ಯವನ್ನು ತಮ್ಮ ಫೋನಿನಲ್ಲಿ ಸುಲಭವಾಗಿ ಬಳಸಬಹುದು. ಹಾಗಾದರೆ ಏನದು ‘ಬ್ಲರ್’ ಹ್ಯಾಕ್ ಎಂದು ತಿಳಿದುಕೊಳ್ಳಲು ಮುಂದೆ ಓದಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಆಂಡ್ರಾಯ್ಡ್ ಫೋನ್ ಗಳಿಗೆ (Android Phone) ಹೋಲಿಸಿದರೆ ಐಫೋನ್ ನಲ್ಲಿ (iPhone) ಹೆಚ್ಚು ಮೊದಲೇ ಇನ್ ಬಿಲ್ಟ್ ಆಗಿರುವ ಅನೇಕ ವೈಶಿಷ್ಟ್ಯತೆಗಳಿವೆ. ಈ ಎಲ್ಲಾ ಫೀಚರ್ ಗಳು ಐಪೋನ್ ಬಳಕೆದಾರರಿಗೆ ಸುಲಭ, ಗೌಪ್ಯತೆ ಮತ್ತು ಭದ್ರತೆಯ ಅನುಭವವನ್ನು ನೀಡುತ್ತದೆ. ವಿಶೇಷವಾಗಿ ಕೆಲವು ಐಪೋನ್ ಹ್ಯಾಕ್ ಗಳು ಬಳಕೆದಾರರ ಪಾಲಿನ ಆಪ್ತರಕ್ಷಕ ಎಂದೇ ಹೇಳಬಹುದು. ಐಫೋನ್ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ ಆದರೆ ನಾವಿಲ್ಲಿ ಹೇಳ ಹೊರಟಿರುವ ಒಂದು ಸ್ಮಾರ್ಟ್ ವೈಶಿಷ್ಟ್ಯವು ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಬಳಕೆದಾರರಿಗೆ ಅನುಮತಿಸುತ್ತದೆ. ಐಫೋನ್ ನಲ್ಲಿರುವ ಬ್ಲರ್ ಸಾಧನವು (iPhone Blur Tool) ಬಳಕೆದಾರರ ಗೌಪ್ಯತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಐಫೋನ್ ಬಳಕೆದಾರರು ಈ ವೈಶಿಷ್ಟ್ಯವನ್ನು ತಮ್ಮ ಫೋನಿನಲ್ಲಿ ಸುಲಭವಾಗಿ ಬಳಸಬಹುದು. ಹಾಗಾದರೆ ಏನದು ‘ಬ್ಲರ್’ ಹ್ಯಾಕ್ ಎಂದು ತಿಳಿದುಕೊಳ್ಳಲು ಮುಂದೆ ಓದಿ.

ಏನಿದು ಐಫೋನ್ ನಲ್ಲಿರುವ ‘ಬ್ಲರ್’ ವೈಶಿಷ್ಟ್ಯತೆ?
ಐಫೋನ್ ನಲ್ಲಿರುವ ‘ಬ್ಲರ್’ ಸಾಧನವು ಬಳಕೆದಾರರು ಹಂಚಿಕೊಳ್ಳುವ ಫೋಟೋಗಳನ್ನು ಬ್ಲರ್ ಮಾಡಲು ಸಹಾಯ ಮಾಡುತ್ತದೆ. ವಾಟ್ಸಪ್ ನಲ್ಲಿ ಕಳುಹಿಸುವ ಮೊದಲು ನೀವು ಫೋಟೋದ ಯಾವುದೇ ಭಾಗವನ್ನು ಮಸುಕುಗೊಳಿಸಬಹುದು. ಈ ಆಪಲ್ ಐಪೋನ್ ಹ್ಯಾಕ್ ವಾಟ್ಸಪ್ ನಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ.

ವಾಟ್ಸಪ್ ಬ್ಲರ್ ಟೂಲ್ ಐಫೋನ್ ಅನ್ನು ಅನುಮತಿಸುತ್ತದೆ. ಬಳಕೆದಾರರು ತಮ್ಮ ಸಂಪರ್ಕದ ಇನ್ನೊಬ್ಬ ಬಳಕೆದಾರರಿಗೆ ತಾವು ಕಳಿಸುವ ಕೆಲವು ಸೂಕ್ಷ್ಮ ಮಾಹಿತಿಯನ್ನು ಮರೆಮಾಡಲು ಅಥವಾ ಸರಳವಾಗಿ ಮಸುಕುಗೊಳಿಸಲು ಬಳಕೆದಾರರು ಈ ಟೂಲ್ ಅನ್ನು ಉಪಯೋಗಿಸಬಹುದು. ಕೆಲವು ವೈಯಕ್ತಿಕ ವಿಷಯವಾಗಿರಬಹುದು, ಯಾವುದೇ ದಾಖಲಾತಿ ಫೋಟೋವನ್ನು ಹಂಚಿಕೊಳ್ಳುವಾಗ, ಮಾಹಿತಿ ಅಥವಾ ಮರೆಮಾಡುವಾಗ, ಆಧಾರ್ ಕಾರ್ಡ್ ಫೋಟೋ ಇರಬಹುದು ಅಥವಾ ಅದರ ಸಂಖ್ಯೆ ಅಥವಾ ವಿಳಾಸ. ಉದ್ದೇಶ ಏನೇ ಇರಲಿ, ಈ ಐಫೋನ್ ಹ್ಯಾಕ್ ನಿಮ್ಮ ಫೋಟೋಗಳ, ಮಾಹಿತಿಗಳ ಭದ್ರತೆ ಕಾಪಾಡುತ್ತದೆ.

ಇದನ್ನೂ ಓದಿ:  Instagram: ಇನ್ಮುಂದೆ ವಿಡಿಯೋ ಪೋಸ್ಟನ್ನು ರೀಲ್ಸ್ ಆಗಿ ಮಾಡಬಹುದಂತೆ! ಹೀಗೊಂದು ಪ್ರಯತ್ನಕ್ಕಿಳಿದಿದೆ ಇನ್ಸ್ಟಾಗ್ರಾಮ್

ಈ ಮೂಲಕ ವಾಟ್ಸಪ್ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ಬ್ಲರ್ ಮಾಡಲು ಬಯಸಿದರೆ ಈ ಟೂಲ್ ಅನ್ನು ಬಳಸಿ ದಾಖಲೆ, ಫೋಟೋಗಳ ಕೆಲವು ಭಾಗವವನ್ನು ಮಸುಕು ಮಾಡಬಹುದು. ಈ ವೈಶಿಷ್ಟ್ಯತೆಯನ್ನು ಪಡೆಯಲು ಐಫೋನ್ ಬಳಕೆದಾರರು ಬೇರೆ ಯಾವುದೇ ಹೊಸ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮಲ್ಲಿರುವ ವಾಟ್ಸಪ್ ನಲ್ಲಿಯೇ ಈ ಸಾಧನವನ್ನು ಪಡೆಯಬಹುದು.

ಐಫೋನ್ನಲ್ಲಿ ವಾಟ್ಸಪ್ ಬ್ಲರ್ ಟೂಲ್ ಬಳಸುವಾಗ ಫೋಟೋಗಳನ್ನು ಮಸುಕು ಮಾಡುವುದು ಹೇಗೆ?

ಹಂತ 1
ಬ್ಲರ್ ಟೂಲ್ ಅನ್ನು ಪ್ರವೇಶಿಸಲು, ನಿಮ್ಮ ಐಫೋನ್ನಲ್ಲಿ ಮೊದಲಿಗೆ ವಾಟ್ಸಪ್ ತೆರೆಯಿರಿ

ಹಂತ 2
ನಂತರ ವಾಟ್ಸಾಪ್ ಚಾಟ್ ತೆರೆಯಿರಿ ನೀವು ಹೇಗೆ ಒಬ್ಬರಿಗೆ ಫೋಟೋವನ್ನು ಅಥವಾ ದಾಖಲೆಗಳನ್ನು ಕಳುಹಿಸುವಾಗ ಕ್ಯಾಮೆರಾ ಐಕಾನ್ ಅಥವಾ ಗ್ಯಾಲರಿ ಮೇಲೆ ಟ್ಯಾಪ್ ಮಾಡುವ ಮೂಲಕ ಚಿತ್ರವನ್ನು ಕಳುಹಿಸುತ್ತೀರೋ ಹಾಗೆ ಇಲ್ಲಿಯೂ ಅದೇ ಹಂತಗಳನ್ನು ಅನುಸರಿಸಿ.

ಇದನ್ನೂ ಓದಿ: WhatsApp: ನಿಮ್ಮ ಆನ್​ಲೈನ್​ ಸ್ಟೇಟಸ್​​ ಅನ್ನು ಮರೆಮಾಡಲು ವಾಟ್ಸ್​ಆ್ಯಪ್​ ಪರಿಚಯಿಸುತ್ತಿದೆ ಹೊಸ ವೈಶಿಷ್ಟ್ಯ!

ಹಂತ 3
ಫೋಟೋವನ್ನು ಸೇರಿಸಿದ ನಂತರ ನೀವು ಮೇಲಿನ ಬಲ ಮೂಲೆಯಲ್ಲಿರುವ ಪೆನ್ಸಿಲ್ ಐಕಾನ್ ಮೇಲೆ ಟ್ಯಾಪ್ ಮಾಡಬೇಕು.

ಹಂತ 4
ಈಗ, ನೀವು ಮೊಸಾಯಿಕ್ ಮಾದರಿಯನ್ನು ಪಡೆಯಲು ಸ್ಲೈಡರ್ ಅನ್ನು ಕೆಳಗೆ ಎಳೆಯಿರಿ. ನೀವು ಮೊಸಾಯಿಕ್ ಮಾದರಿಯನ್ನು ಪಡೆದರೆ ಮೇಲಿನ ಬಲ ಮೂಲೆಯಲ್ಲಿ ಪೆನ್ನಿನ ಗುರುತು ಕಾಣುತ್ತದೆ.

ಹಂತ 5
ಈ ಟೂಲ್ ಉಪಯೋಗಿಸಿಕೊಂಡು ಇಲ್ಲಿ ನಿಮಗೆ ಬೇಕಾದ ಭಾಗವನ್ನು ಬ್ಲರ್ ಮಾಡಬಹುದು.

ಹಂತ 6
ಇದು ಕಪ್ಪು-ಬಿಳುಪು ವೈಶಿಷ್ಟ್ಯವನ್ನು ಸಹ ನೀಡುತ್ತದೆ.

ಹಂತ 7
ನೀವು ಕಳುಹಿಸ ಬೇಕಿರುವ ಫೋಟೋವನ್ನು ಬ್ಲರ್ ಮಾಡಿದ ನಂತರ ನೀವು ಸೆಂಡ್ ಬಟನ್ ಅನ್ನು ಟ್ಯಾಪ್ ಮಾಡಬಹುದು.

ಆಂಡ್ರಾಯ್ಡ್ ಬಳಕೆದಾರರು ವಾಟ್ಸಾಪ್ ನಲ್ಲಿ ಪೆನ್ನಿನ ಮತ್ತು ಬಣ್ಣದ ಗುರುತುಗಳಿರುವ ಐಕಾನ್ ಮೇಲೆ ಟ್ಯಾಪ್ ಮಾಡಿ ಅಥವಾ ಎಮೋಜಿಗಳನ್ನು ಹಾಕುವ ಮೂಲಕ ಕೆಲವು ವಿಷಯಗಳನ್ನು ಮರೆಮಾಚುತ್ತೇವೆ. ಆದರೆ ಐಫೋನ್ ಬಳಕೆದಾರರು ಈ ಬ್ಲರ್ ಟೂಲ್ ಉಪಯೋಗಿಸುವ ಮೂಲಕ ಇನ್ನಷ್ಟು ಗೌಪ್ಯತೆ ಪಡೆದುಕೊಳ್ಳಬಹುದು.
Published by:Ashwini Prabhu
First published: