ಐಫೋನ್​ SE 2ಗಿಲ್ಲ ಬಿಡುಗಡೆ ಭಾಗ್ಯ, 'mini iPhone X' ಮಾರುಕಟ್ಟೆಗೆ?


Updated:June 19, 2018, 7:02 PM IST
ಐಫೋನ್​ SE 2ಗಿಲ್ಲ ಬಿಡುಗಡೆ ಭಾಗ್ಯ, 'mini iPhone X' ಮಾರುಕಟ್ಟೆಗೆ?

Updated: June 19, 2018, 7:02 PM IST
ನ್ಯೂಯಾರ್ಕ್​: ಅಮೆರಿಕದ ಖ್ಯಾತ ಮೊಬೈಲ್​ ನಿರ್ಮಾಣ ಸಂಸ್ಥೆ ಆ್ಯಪಲ್​ ಐಫೋನ್​ ಇದೇ ವರ್ಷ ಐಫೋನ್​ SE 2ವನ್ನು ಬಿಡುಗಡೆಗೊಳಿಸುವ ವಿಚಾರವನ್ನು ಮುಂದೂಡಿದೆ.

ಮೊಬೈಲ್​ ಫೋನ್​ ಕೇಸ್​ ನಿರ್ಮಾಣ ಮತ್ತು ಸ್ಮಾರ್ಟ್​ಫೊನ್​ ಮಾಹಿತಿ ಸೋರಿಕೆಗೆ ಖ್ಯಾತಿಯಾಗಿರುವ ಒಲಿಕ್ಸೆರ್​ ವರದಿ ಪ್ರಕಾರ ಆ್ಯಪಲ್​ ಈ ವರ್ಷ ಐಫೋನ್ SE 2ವನ್ನು ಬಿಡುಗಡೆ ಗೊಳಿಸುವ ಯಾವುದೇ ಚಿಂತನೆ ನಡೆಸಿಲ್ಲ. ಬದಲಾಗಿ SE ಮಾದರಿಯ 'mini iPhone X'ನ್ನು ಬಿಡುಗಡೆ ಮಾಡುವ ಕುರಿತು ಚಿಂತನೆ ನಡೆಸಿರುವುದಾಗಿ ವರದಿ ಮಾಡಿದೆ.

ಕಳೆದ ತಿಂಗಳೇ ಆ್ಯಪಲ್​ ಸಂಸ್ಥೆ 'mini iPhone X' ಪ್ರಾಜೆಕ್ಟ್​ಗಾಗಿ ಐಫೋನ್ SE 2 ಯೋಜನೆಯನ್ನು ಕೈಬಿಟ್ಟಿದ್ದು, ಈಗಿರುವ ಮಾಹಿತಿಗಳ ಪ್ರಕಾರ 'mini iPhone X'ಮೊಬೈಲ್​ನ್ನು ಬಜೆಟ್​ ಪ್ರಿಯ ಸ್ಮಾರ್ಟ್​ಫೋನ್​ ಬಳಕೇದಾರರಿಗೆ ಉಪಯುಕ್ತವಾಗುವಂತೆ ತಯಾರಿಸಲು ಸಂಸ್ಥೆ ತೀರ್ಮಾನಿಸಿದೆ.

ಪ್ರಸಕ್ತ ಮಾಹಿತಿ ಪ್ರಕಾರ mini iPhone X: 5.8 ನಾಟ್ಚ್​ ಡಿಸ್​ಪ್ಲೇ, ಈಗಿರುವ iPhone X 6.1 ಇಂಚ್​ ಡಿಸ್​ಪ್ಲೇ, ಹಾಗೂ 6.5 ಇಂಚ್​ ಡಿಸ್​​ಪ್ಲೇ ಮತ್ತು ಮೂರು ಕ್ಯಾಮೆರಾ ಹೊಂದಿರುವ iPhone X ಪ್ಲಸ್​ನ್ನು ಈ ವರ್ಷ ಆ್ಯಪಲ್​ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.

ಕಳೆದ ಎರಡು ವರ್ಷಗಳಲ್ಲಿ ಒಲಿಕ್ಸರ್​ ಲೀಕ್​ ಮಾಡಿರುವ ಗ್ಯಾಲಕ್ಸಿ ಎಸ್ 9, ಗ್ಯಾಲಕ್ಸಿ ನೋಟ್ 8 , ಗ್ಯಾಲಕ್ಸಿ ನೋಟ್ 7 ಮತ್ತು ಐಫೋನ್ 7 ನ ಎಲ್ಲಾ ಮಾಹಿತಿಗಳು ನಿಖರವಾಗಿದ್ದವು. ಹೀಗಾಗಿ ಮಿನಿ ಐಫೋನ್​ ವಿಚಾರದಲ್ಲೂ ಈ ಮಾಹಿತಿ ನಿಜವಾಗಬಹುದು ಎನ್ನಲಾಗುತ್ತಿದೆ.
First published:June 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...