ಇತ್ತೀಚೆಗೆ ಮಾಧ್ಯಮಗಳಲ್ಲಿ ಆ್ಯಪಲ್ ಐಫೋನ್ 15 ಅಲ್ಟ್ರಾ (Apple IPhone 15 Ultra) ಫೀಚರ್ಸ್ ಕುರಿತು ಭಾರೀ ಚರ್ಚೆಯಾಗುತ್ತಿತ್ತು . 2023 ರ ದ್ವಿತೀಯಾರ್ಧದಲ್ಲಿ ಈ ಫೋನ್ ಅನ್ನು ಪರಿಚಯಿಸಬಹುದು ಎಂದು ವರದಿಗಳು ಹೇಳಲಾಗುತ್ತಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಐಫೋನ್ 14 ಪ್ರೋ ಮ್ಯಾಕ್ಸ್ (IPhone 14 Pro Max) ಗಿಂತ ಈ ಫೋನ್ ದುಬಾರಿಯಾಗಲಿದೆ ಎಂಬ ಸುದ್ದಿಯಿತ್ತು, ಇದೀಗ ವರದಿ ಹೊರಬಿದ್ದಿದ್ದು, ಐಫೋನ್ 15 ಪ್ರೋ ಮ್ಯಾಕ್ಸ್ ಬೆಲೆ ಆ್ಯಪಲ್ ಐಫೋನ್ 14 ಪ್ರೊ ಮ್ಯಾಕ್ಸ್ ಗಿಂತ $200 ರಷ್ಟು ಹೆಚ್ಚಾಗಿರಲಿದೆ ಎಂದು ತಿಳಿದುಬಂದಿದೆ. ಇನ್ನು ಲೀಕ್ಸ್ಆ್ಯಪಲ್ಪ್ರೋ (LeaksApplePro) ಮೂಲಕ Forbes ಬಹಿರಂಗಪಡಿಸಿದ ವರದಿಯಲ್ಲಿ, ಐಫೋನ್ 15 ಅಲ್ಟ್ರಾದ ಆರಂಭಿಕ ಬೆಲೆ 1,299 USD ಅಂದರೆ ಭಾರತದಲ್ಲಿ ಸುಮಾರು 1,08,000 ರೂಪಾಯಿನೊಂದಿಗೆ ಬರಬಹುದು ಎಂದು ಹೇಳಲಾಗಿದೆ.
ಹೊಸವರ್ಷದ ದ್ವಿತೀಯಾರ್ಧದಲ್ಲಿ ಐಫೋನ್ 15 ಅಲ್ಟ್ರಾ ಸ್ಮಾರ್ಟ್ಫೋನ್ ಬಿಡುಗಡೆಯಾಗಲಿದೆ. ಇದರ ಫೀಚರ್ಸ್, ಬೆಲೆ ಬಗ್ಗೆ ಮಾಹಿತಿ ಗೊತ್ತಾಗ್ಬೇಕಾದ್ರೆ ಈ ಕೆಳಗೆ ಸಂಪೂರ್ಣ ಓದಿ.
ಐಫೋನ್ 14 ಪ್ರೋ ಮ್ಯಾಕ್ಸ್ಗಿಂತಲೂ ಇದರ ಬೆಲೆ ಹೆಚ್ಚು
ಇದನ್ನು ಈ ವರ್ಷದ ಅತ್ಯಂತ ದುಬಾರಿ ಐಫೋನ್ಗೆ ಹೋಲಿಸಿದರೆ, ಐಫೋನ್ 14 ಪ್ರೋ ಮ್ಯಾಕ್ಸ್ನ ಮೂಲ ಬೆಲೆ $ 1,099 ಅಂದರೆ ಭಾರತದಲ್ಲಿ ಸುಮಾರು 90, 700 ರೂಪಾಯಿಯಷ್ಟಿದೆ ಎಂದು ಹೇಳಬಹುದು. ಆದರೆ ಮುಂಬರುವ ಐಫೋನ್ 15 ಅಲ್ಟ್ರಾದ ಫಿಚರ್ಸ್ನ ವರದಿಯ ಪ್ರಕಾರ ಐಫೋನ್ 14 ಪ್ರೋ ಮ್ಯಾಕ್ಸ್ ಗಿಂತ ಐಫೋನ್ 15 ಅಲ್ಟ್ರಾ ಸ್ಮಾರ್ಟ್ಫೊನ್ US $ 200 ಕ್ಕಿಂತ ಹೆಚ್ಚು ಬೆಲೆಯನ್ನು ಹೊಂದಿರಬಹುದು ಮತ್ತು ಇದು ಐಫೋನ್ ಇತಿಹಾಸದಲ್ಲಿ ಅತಿದೊಡ್ಡ ಬೆಲೆಯಾಗಿ ಮಾರುಕಟ್ಟೆಗೆ ಬರಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ಈ ವರ್ಷ 15,000 ರೂ. ಒಳಗೆ ರಿಲೀಸ್ ಆದ ಟಾಪ್ 5 ಸ್ಮಾರ್ಟ್ಫೋನ್ಗಳಿವು
ವರದಿಯ ಪ್ರಕಾರ ಇದರ ಬೆಲೆ:
ವರದಿಯ ಪ್ರಕಾರ, ಸ್ಮಾರ್ಟ್ಫೋನ್ 256 ಜಿಬಿಯಷ್ಟು ಸ್ಟೋರೇಜ್ನೊಂದಿಗೆ ಬರಬಹುದು. ಫೋನ್ನ ಟಾಪ್-ಎಂಡ್ ರೂಪಾಂತರವು 1TB ವರೆಗೆ ಇಂಟರ್ನಲ್ ಸ್ಟೋರೇಜ್ ಹೊಂದಿರಬಹುದು. ಮತ್ತು ಇದರ ಬೆಲೆ US$ 1,799 ಅಂದರೆ ಸುಮಾರು ರೂ. 1,48,000 ಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
ಟೈಟಾನಿಯಂ ಗಾರ್ಡ್ ಅನ್ನು ಹೊಂದಿರಲಿದೆ
ಆ್ಯಪಲ್ ಐಫೋನ್ 15 ಅಲ್ಟ್ರಾ ಮೊಬೈಲ್ ಪ್ರಸ್ತುತ A16 ಗೆ ಹೋಲಿಸಿದರೆ ಬಹಳ ಗುಣಮಟ್ಟದ ಪ್ರೊಸೆಸರ್ ಅನ್ನು ಹೊಂದಿರುವಂತಹ ನಿರೀಕ್ಷೆಯಿದೆ. ಇದು ಹಿಂದಿನ ವರ್ಷನ್ಗಿಂತ ಹೆಚ್ಚಿನ ರ್ಯಾಮ್ ಅನ್ನು ಹೊಂದಿರಬಹುದು ಮತ್ತು ಇದನ್ನು ಪ್ರೀಮಿಯಂ ಟೈಟಾನಿಯಂ ನೊಂದಿಗೆ ಇದರ ಬಾಡಿಯನ್ನು ರಚಿಸಬಹುದು ಎಂದು ಹೇಳಲಾಗುತ್ತಿದೆ.
ಟೈಟಾನಿಯಂ ನಿಂದ ಬಳಕೆದಾರರಿಗೆ ಪ್ರಯೋಜನಗಳು
ಟೈಟಾನಿಯಂ ಮುಂಬರುವ ಆ್ಯಪಲ್ ಐಫೋನ್ 15 ಅಲ್ಟ್ರಾ ಗೆ ಪ್ರೀಮಿಯಂ ಅನುಭವವನ್ನು ನೀಡುವುದಲ್ಲದೆ, ಸ್ಮಾರ್ಟ್ಫೋನ್ ಅನ್ನು ಸ್ಟೀಲ್ಗಿಂತ ಹಗುರ, ಬಲವಾದ ಮತ್ತು ಹೆಚ್ಚು ಸ್ಕ್ರ್ಯಾಚ್ ಆಗದಂತೆ ನೋಡಿಕೊಳ್ಳುತ್ತದೆ. ಟೈಟಾನಿಯಂ ಕೇಸ್ ಪ್ರಸ್ತುತ ಐಫೋನ್ ಸ್ಮಾರ್ಟ್ಫೋನ್ಗಳಲ್ಲಿ ಬಳಸಲಾದ ವಸ್ತುಗಳಿಗಿಂತ 35 ಪಟ್ಟು ಹೆಚ್ಚು ದುಬಾರಿಯಾಗಿರಲಿದೆ.
ಕ್ಯಾಮೆರಾ ಫೀಚರ್ಸ್ ಬಗ್ಗೆ ವರದಿಗಳು
ಇದಲ್ಲದೆ, ಮುಂಬರುವ ಹೊಸ ಐಫೋನ್ನಲ್ಲಿ ಡ್ಯುಯಲ್ ಫ್ರಂಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿದೆ ಮತ್ತು ಈ ಫೀಚರ್ಸ್ ಒಂದು ವೇಳೆ ಮೊಬೈಲ್ನಲ್ಲಿ ಆ್ಯಡ್ ಮಾಡಿದ್ದರೆ ಡ್ಯುಯಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿರುವ ಇದೇ ಮೊದಲ ಐಫೋನ್ ಆಗುತ್ತದೆ.. ಸದ್ಯಕ್ಕೆ ಕಂಪನಿಯಿಂದ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ಆ್ಯಪಲ್ ಕಂಪನಿ ವರ್ಷದಿಂದ ವರ್ಷ ಮಾರುಕಟ್ಟೆಯಲ್ಲಿ ಹೊಸರೀತಿಯ ಸ್ಮಾರ್ಟ್ಫೋನ್ ಅನ್ನು ಪರಿಚಯಿಸುತ್ತಲೇ ಇರುತ್ತದೆ. ಕಳೆದ ವರ್ಷ ಐಫೋನ್ 13 ಅನ್ನು ಪರಿಚಯಿಸಿತ್ತು. ಈ ಬಾರಿ ಐಫೋನ್ 14 ಅನ್ನು ಬಿಡುಗಡೆ ಮಾಡಿದೆ. ಈ ಎರಡೂ ಮೊಬೈಲ್ಗಳು ಬಹು ಬೇಡಿಕೆಯಲ್ಲಿವೆ. ಇದೀಗ ಮುಂದಿನ ವರ್ಷ ಐಫೋನ್ 15 ಸೀರಿಸ್ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಇದೀಗ ಈ 15 ಸೀರಿಸ್ನ ಕೆಲವೊಂದು ಫೀಚರ್ಸ್ಗಳು ಹೊರಬಿದ್ದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ