Iphone 14: ಆ್ಯಪಲ್​ ಪ್ರಿಯರಿಗೆ ಸಿಹಿ ಸುದ್ದಿ! ಮುಂದಿನ ತಿಂಗಳು ಐಫೋನ್​ 14 ಮಾರುಕಟ್ಟೆಗೆ ಬರುವುದು ಪಕ್ಕಾ?

Apple iPhone 14 ಸರಣಿಯ ಬಿಡುಗಡೆಗೆ ಬಗ್ಗೆ ಹಲವು ದಿನಗಳಿಂದ ಸುದ್ದಿ ಹರಿದಾಡುತ್ತಿದೆ. ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ. ಆದರೆ ಅದಕ್ಕೂ ಮೊದಲು ಐಫೋನ್‌ 14 ವೈಶಿಷ್ಟ್ಯಗಳು ಮತ್ತು ಬೆಲೆಗಳು ಸೋರಿಕೆಯಾಗಿವೆ. ಆದರೆ ಸೋರಿಕೆಯಾಗಿರುವುದು ಆ್ಯಪಲ್​​ ಕಡೆಯಿಂದ ಅಲ್ಲ, ಟಿಪ್​ಸ್ಟರ್​​ ಕಡೆಯಿಂದ.

Apple iPhone 14 / ಐಫೋನ್ 14

Apple iPhone 14 / ಐಫೋನ್ 14

  • Share this:
    ಐಫೋನ್​ 13 ಮಾರುಕಟ್ಟೆಯಲ್ಲಿ ತನ್ನದೇ ಆದ ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ಇದೀಗ ಆ್ಯಪಲ್​ ಕಂಪನಿ ಅದರ ಮುಂದುವರಿದ ಭಾಗವಾಗಿ ಐಫೋನ್ 14 (Iphone 14) ತಯಾರಿಯಲ್ಲಿ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ನೂತನ ಐಫೋನ್​ 14 ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದ್ದು, ಬಿಡುಗಡೆಯೊಂದೇ ಬಾಕಿ ಇದೆ. ಬಹುತೇಕರು ಹೊಸ ಐಫೋನ್​ 14ಗಾಗಿ ಕಾಯುತ್ತಿದ್ದಾರೆ. ಐಫೋನ್​ 13ಕ್ಕಿಂತ (Iphone 13) ಹಲವು ವಿಶೇಷತೆಯನ್ನು ಐಫೋನ್​ 14 ಹೊಂದಿರಲಿದೆ. ಅದರಲ್ಲೂ ವಿಶೇಷ ಫೀಚರ್​ ಕೂಡ ಇದರಲ್ಲಿ ಅಳವಡಿಸಿಕೊಳ್ಳಲಿದೆ. ಇದೀಗ ಐಫೋನ್​ 14ಗಾಗಿ ಕಾಯುತ್ತಿರುವವರಿಗಾಗಿ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ಐಫೋನ್​ 14 ಬಿಡುಗಡೆ ದಿನಾಂಕ ಮತ್ತು ಮಾರುಕಟ್ಟೆಗೆ ಬರುವ ದಿನಾಂಕ (Date) ಬಹಿರಂಗಗೊಂಡಿದೆ. ಇದೇ ವರ್ಷ ನೂತನ ಐಫೋನ್​ ಮಾರುಕಟ್ಟೆಗೆ (Market) ಬರುತ್ತಿರುವುದು ಆ್ಯಪಲ್​ (Apple) ಪ್ರಿಯರಿಗೆ ಸಂತಸ ತಂದಿದೆ.  

    Apple iPhone 14 ಸರಣಿಯ ಬಿಡುಗಡೆಗೆ ಬಗ್ಗೆ ಹಲವು ದಿನಗಳಿಂದ ಸುದ್ದಿ ಹರಿದಾಡುತ್ತಿದೆ. ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ. ಆದರೆ ಅದಕ್ಕೂ ಮೊದಲು ಐಫೋನ್‌ 14 ವೈಶಿಷ್ಟ್ಯಗಳು ಮತ್ತು ಬೆಲೆಗಳು ಸೋರಿಕೆಯಾಗಿವೆ. ಆದರೆ ಸೋರಿಕೆಯಾಗಿರುವುದು ಆ್ಯಪಲ್​​ ಕಡೆಯಿಂದ ಅಲ್ಲ, ಟಿಪ್​ಸ್ಟರ್​​ ಕಡೆಯಿಂದ.

    ಸೋರಿಕೆಯಾದ ಮಾಹಿತಿ ಪ್ರಕಾರ, ಐಫೋನ್ 14 ಸರಣಿಯಲ್ಲಿ ನಾಲ್ಕು ಮಾದರಿಗಳು ಬರಲಿದೆ ಎಂದು ಹೇಳಿದೆ. ಅದರಲ್ಲಿ iPhone 14, iPhone 14 Max, iPhone 14 Pro, iPhone 14 Pro Max ಇರಲಿದೆ. ಈ ನಾಲ್ಕರಲ್ಲಿ, iPhone 14 Pro Max ಬದಲಾದ ವಿನ್ಯಾಸದೊಂದಿಗೆ ಅತ್ಯುತ್ತಮ, ಅತ್ಯಂತ ದುಬಾರಿ ಎಂದು ನಿರೀಕ್ಷಿಸಲಾಗಿದೆ.

    ಅಷ್ಟೇ ಅಲ್ಲದೆ, ಐಫೋನ್ 14 ಪ್ರೊ ಮ್ಯಾಕ್ಸ್‌ನ ಅತ್ಯಂತ ರೋಮಾಂಚಕಾರಿ ವಿನ್ಯಾಸವನ್ನು ಹೊಂದಿರಲಿದ್ದು, ನೋಡಲು ಆಕರ್ಷಕವಾಗಿರಲಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: Flying car: ರಸ್ತೆ ಮೇಲೆ ಓಡುತ್ತೆ, ಆಕಾಶದಲ್ಲೂ ಹಾರುತ್ತೆ! ಸಖತ್ತಾಗಿದೆ ಗುರು ಈ ಸ್ವಿಚ್‌ಬ್ಲೇಡ್ ಫ್ಲೈಯಿಂಗ್ ಕಾರು

    Apple iPhone 14 Pro ಮ್ಯಾಕ್ಸ್ ಬಿಡುಗಡೆ ದಿನಾಂಕ

    ಬಹುತೇಕರು ಐಫೋನ್​ 14ಗಾಗಿ ಕಾದು ಕುಳಿತ್ತಿದ್ದಾರೆ. ಅದರಂತೆಯೇ, ಮೆಗಾ ಲಾಂಚ್ ಈವೆಂಟ್‌ ಸೆಪ್ಟೆಂಬರ್ 16 ರಂದು ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಮುಂದಿನ ಪೀಳಿಗೆಯ ಐಫೋನ್‌ಗಳಾದ iPhone 14, iPhone 14 Max, iPhone 14 Pro ಮತ್ತು iPhone 14 Pro Max ಅನ್ನು ಅನಾವರಣಗೊಳಿಸಲು ಆ್ಯಪಲ್ ತಯಾರಿ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

    Apple iPhone 14 Pro Max ನಿರೀಕ್ಷಿತ ಬೆಲೆ

    ಆ್ಯಪಲ್​ ಕಂಪನಿ ಐಫೋನ್​ 14 ಬಿಡುಗಡೆಯ ದಿನಾಂಕ, ಅದರ ಬೆಲೆ ಬಗ್ಗೆ ಮಾಹಿತಿ ಹೊರಹಾಕಿಲ್ಲ. ಆದರೆ MacRumors ವರದಿಯಂತೆ, iPhone 14 Pro Max ನ ಬೆಲೆಯು ಸರಿಸುಮಾರು ರೂ. 95 ಸಾವಿರದಿಂದ  ಪ್ರಾರಂಭವಾಗಲಿದೆ ಎಂದು ಹೇಳಿದೆ. ಅಂದರೆ iPhone 13 Pro Max ಗಿಂತ ಹೆಚ್ಚು ಇರಲಿದೆ.

    ಇದನ್ನೂ ಓದಿ: iPhone Trick: ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳೊಂದಿಗೆ ಏಕಕಾಲದಲ್ಲಿ ವಿಡಿಯೋ ರೆಕಾರ್ಡ್ ಮಾಡಲು ಹೀಗೆ ಮಾಡಿ

    Apple iPhone 14 Pro Max ನಿರೀಕ್ಷಿತ ವಿಶೇಷಣಗಳು

    ಮಿಂಗ್-ಚಿ ಕುವೊ ಮತ್ತು ಅಂಕಣಕಾರ ಮಾರ್ಕ್ ಗುರ್ಮನ್ ನೂತನ ಆ್ಯಪಲ್ ಐಫೋನ್ 14 ಪ್ರೊ ಮ್ಯಾಕ್ಸ್ ದೊಡ್ಡ ಮಾತ್ರೆಯಂತಹ ಆಕಾರದ ಕಟೌಟ್ ಅನ್ನು ತರಲು ನಾಚ್ ಡಿಸ್ಪ್ಲೇಯನ್ನು ತರಲಿದೆ ಎಂದು ಸುಳಿವು ನೀಡಿದ್ದಾರೆ. ಹ್ಯಾಂಡ್‌ಸೆಟ್ 6.7-ಇಂಚಿನ 1284 x 2778 OLED ಪರದೆಯನ್ನು 120Hz ರಿಫ್ರೆಶ್ ದರ ಮತ್ತು ಪ್ರತಿ ಇಂಚಿಗೆ 458 ಪಿಕ್ಸೆಲ್‌ಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

    Apple iPhone 14 Pro Max ಕ್ಯಾಮೆರಾ

    Apple iPhone 14 Pro Max ಹಲವು ವಿಧಗಳಲ್ಲಿ ಪ್ರಮುಖ ಅಪ್‌ಗ್ರೇಡ್ ಅನ್ನು ತರುವಂತೆ ತೋರುತ್ತಿದೆ ಮತ್ತು ಅವುಗಳಲ್ಲಿ ಒಂದು ಕ್ಯಾಮೆರಾ, ಅಂದರೆ 48MP+12MP+12MP ಇರಲಿದೆ. ಮಾತ್ರವಲ್ಲದೆ, ಇದು A16 ಬಯೋನಿಕ್ ಚಿಪ್‌ಸೆಟ್ ಅನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ.
    Published by:Harshith AS
    First published: