ಆ್ಯಂಡ್ರಾಯ್ಡ್ ಡಿವೈಸ್‌ಗಳಲ್ಲಿರುವ ಫೀಚರ್‌ಗಳು Iphone 13 ಸೀರೀಸ್‌ನಲ್ಲಿಲ್ಲ... ಬೇರೆನಿದೆ? ಇಲ್ಲಿದೆ ಮಾಹಿತಿ

Iphone 13 ಸೀರೀಸ್‌ನಲ್ಲಿ ಇಲ್ಲದೇ ಇರುವ ಕೆಲವೊಂದು ಫೀಚರ್‌ಗಳು ಆ್ಯಂಡ್ರಾಯ್ಡ್ ಡಿವೈಸ್‌ಗಳಲ್ಲಿದ್ದು ಐಫೋನ್ ತನ್ನ 13 ಸೀರೀಸ್‌ಗಳಲ್ಲಿ ಈ ಫೀಚರ್‌ಗಳನ್ನು ಕೈಬಿಟ್ಟಿದೆ. ಹಾಗಿದ್ದರೆ ಆ ಫೀಚರ್‌ಗಳೇನು ಎಂಬುದನ್ನು ತಿಳಿದುಕೊಳ್ಳೋಣ.

iPhone 13

iPhone 13

  • Share this:
ಆ್ಯಪಲ್ ತನ್ನ ಐಫೋನ್ 13 ಸೀರೀಸ್‌ಗಳಾದ ಐಫೋನ್ 13, ಐಫೋನ್ 13 ಮಿನಿ, ಐಫೋನ್ 13 ಪ್ರೋ, ಮತ್ತು ಐಫೋನ್ 13 ಪ್ರೋ ಮ್ಯಾಕ್ಸ್ ಒಳಗೊಂಡಂತೆ, ಐಫೋನ್ 13 ಸೀರೀಸ್‌ ಡಿವೈಸ್‌ಗಳನ್ನು ಲಾಂಚ್ ಮಾಡಿದ್ದು ಇನ್ನೇನು ಕೆಲವೇ ದಿನಗಳಲ್ಲಿ ವಿಶ್ವದಾದ್ಯಂತವಿರುವ ಐಫೋನ್ ಪ್ರಿಯರ ಕೈಸೇರಲಿದೆ. ಡಿವೈಸ್‌ಗಳು A15 ಬಯೋನಿಕ್ ಚಿಪ್ ಹಾಗೂ ಮರುವಿನ್ಯಾಸಗೊಳಿಸಲಾದ ಅಂತೆಯೇ ಸುಧಾರಿತ ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಬಂದಿದೆ. ಡಿವೈಸ್ ಒದಗಿಸಲಿರುವ ಇನ್ನಷ್ಟು ಫೀಚರ್‌ಗಳ ಕುರಿತು ಇದು ಕೈ ಸೇರಿದ ನಂತರ ತಿಳಿದುಕೊಳ್ಳಬಹುದಾಗಿದ್ದರೂ ಆ್ಯಪಲ್ ಸಂಸ್ಥೆ ಡಿವೈಸ್‌ಗಳ ಲಾಂಚ್ ಈವೆಂಟ್‌ನಲ್ಲಿ ಕೆಲವೊಂದು ಪ್ರಮುಖ ವೈಶಿಷ್ಟ್ಯಗಳನ್ನು ನಮೂದಿಸಿಲ್ಲ. ಆದರೆ ಐಫೋನ್ 13 ಸೀರೀಸ್‌ನಲ್ಲಿ ಇಲ್ಲದೇ ಇರುವ ಕೆಲವೊಂದು ಫೀಚರ್‌ಗಳು ಆ್ಯಂಡ್ರಾಯ್ಡ್ ಡಿವೈಸ್‌ಗಳಲ್ಲಿದ್ದು ಐಫೋನ್ ತನ್ನ 13 ಸೀರೀಸ್‌ಗಳಲ್ಲಿ ಈ ಫೀಚರ್‌ಗಳನ್ನು ಕೈಬಿಟ್ಟಿದೆ. ಹಾಗಿದ್ದರೆ ಆ ಫೀಚರ್‌ಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಆಲ್‌ವೇಸ್ - ಆನ್ ಡಿಸ್‌ಪ್ಲೇ ವಿಶೇಷತೆ:

ಐಫೋನ್ 13 ಡಿವೈಸ್ ಡಿಸ್‌ಪ್ಲೇಯು ಅತಿದೊಡ್ಡ ಡಿಸ್‌ಪ್ಲೇ ಆಗಿದೆ ಎಂಬ ವದಂತಿ ಇದ್ದು ಈ ಫೀಚರ್ ಆ್ಯಂಡ್ರಾಯ್ಡ್ ಡಿವೈಸ್‌ಗಳಾದ ಸ್ಯಾಮ್‌ಸಂಗ್, ಗೂಗಲ್, ಶ್ಯೋಮಿ ಹಾಗೂ ಇತರ ಡಿವೈಸ್‌ಗಳಲ್ಲಿದೆ. ಆಲ್‌ವೇಸ್ – ಆನ್ ಡಿಸ್‌ಪ್ಲೇ ವಿಶೇಷತೆ ಏನೆಂದರೆ ಸ್ಕ್ರೀನ್ ನಿಶ್ಚಲವಾಗಿದ್ದಾಗ ಇದು ಸಮಯ, ದಿನಾಂಕ ಹಾಗೂ ಇತರ ನೋಟಿಫಿಕೇಶನ್‌ಗಳನ್ನು ತೋರಿಸುತ್ತದೆ.

ಆಲ್‌ಸ್ಕ್ರೀನ್ ನಾಚ್-ಲೆಸ್ ಡಿಸ್‌ಪ್ಲೇ (ಸೆಲ್ಫಿ ಕ್ಯಾಮರಾ ಇರುವಂತೆ ಮಾಡುವ ಪುಟ್ಟ ಕಟ್-ಔಟ್):

ನಾಚ್ ಸಣ್ಣದಾಗಿರಬಹುದು ಅಥವಾ ದೊಡ್ಡದಾಗಿರಬಹುದು. ಆದರೆ ಐಫೋನ್ 13ನಲ್ಲಿ ಇದು ಕಾಣಿಸುತ್ತದೆ. ಸ್ಯಾಮ್‌ಸಂಗ್ ಆಲ್-ಸ್ಕ್ರೀನ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದು ಕೀಹೋಲ್ ವಿನ್ಯಾಸ ಪಡೆದಿದೆ. ಇನ್ನು ಗೂಗಲ್ ಕೂಡ ತನ್ನ ಪಿಕ್ಸೆಲ್‌5ನಲ್ಲಿ ಇದೇ ವಿನ್ಯಾಸ ಹೊಂದಿದ್ದು ಒನ್‌ಪ್ಲಸ್ ಡಿವೈಸ್‌ಗಳು ಇದೇ ಮಾದರಿಯ ಆಲ್‌-ಸ್ಕ್ರೀನ್‌ ಡಿಸ್‌ಪ್ಲೇ ಪಡೆದುಕೊಂಡಿದೆ. ಆ್ಯಪಲ್ ಡಿವೈಸ್‌ಗಳಲ್ಲಿ ನಾಚ್ ಇರುವುದರಿಂದ ಫೇಸ್‌ಐಡಿ ಹಾಗೂ ಇತರ ಸೆನ್ಸರ್‌ಗಳಿಗೆ ಉತ್ತಮವಾಗಿದೆ.

ರಿವರ್ಸ್ ವಯರ್‌ಲೆಸ್ ಚಾರ್ಜಿಂಗ್:

ಈ ಫೀಚರ್ ಅನ್ನು ಆ್ಯಂಡ್ರಾಯ್ಡ್ ಡಿವೈಸ್‌ಗಳಲ್ಲೂ ನೋಡಬಹುದಾಗಿದೆ. ಸ್ಮಾರ್ಟ್‌ಫೋನ್‌ ಹಿಂಭಾಗವನ್ನು ವಯರ್‌ಲೆಸ್ ಚಾರ್ಜಿಂಗ್ ಬೆಂಬಲಿಸುವ ಡಿವೈಸ್‌ಗಳನ್ನು ಚಾರ್ಜ್ ಮಾಡಲು ಬಳಸಬಹುದಾಗಿದೆ. ಇದು ಫೋನ್ ಅಥವಾ ವಯರ್‌ಲೆಸ್ ಇಯರ್‌ಬಡ್ಸ್ ಕೂಡ ಆಗಿರಬಹುದು. ಸ್ಯಾಮ್‌ಸಂಗ್ ಹಾಗೂ ಗೂಗಲ್ ಈ ಫೀಚರ್‌ಗಳನ್ನು ಹೊಂದಿದೆ. ಐಫೋನ್ 13 ಸೀರೀಸ್‌ಗಳಲ್ಲಿ ಈ ಫೀಚರ್ ಅನ್ನು ಆ್ಯಪಲ್ ಕೈಬಿಟ್ಟಿದೆ..

Read Also⇒ WhatsApp: ಫೋಟೋವನ್ನ ಸ್ಟಿಕ್ಕರನ್ನಾಗಿ ಪರಿವರ್ತಿಸುವ ವೈಶಿಷ್ಟ್ಯ ಪರಿಚಯಿಸಲಿರುವ ವಾಟ್ಸ್ಆ್ಯಪ್!

ಯುಎಸ್‌ಬಿ (USB) ಟೈಪ್ ಸಿ ಕೊರತೆ:

ಆ್ಯಪಲ್ ಐಫೋನ್ 13 ಸೀರೀಸ್ ಲೈಟ್ನಿಂಗ್ ಪೋರ್ಟ್‌ನೊಂದಿಗೆ ಬಂದಿದ್ದು ಯುಎಸ್‌ಬಿ ಟೈಪ್-ಸಿ ಹೊಂದಿಲ್ಲ. ಟೈಪ್-ಸಿ ಕೇಬಲ್ ಮೂಲಕ ಇತರ ಡಿವೈಸ್‌ಗಳಾದ ಮ್ಯಾಕ್‌ಬುಕ್ ಅಥವಾ ಐಪ್ಯಾಡ್ ಪ್ರೋ ಅಥವಾ ಏರ್ ಅನ್ನು ಚಾರ್ಜ್ ಮಾಡಬಹುದಾಗಿದೆ. ಇತರ ಆ್ಯಂಡ್ರಾಯ್ಡ್ ಡಿವೈಸ್‌ಗಳು ಟೈಪ್-ಸಿ ಪೋರ್ಟ್‌ನೊಂದಿಗೆ ಬಂದಿದ್ದು, ಆ್ಯಪಲ್ ತನ್ನ ಡಿವೈಸ್‌ಗಳಲ್ಲಿ ಲೈಟ್ನಿಂಗ್ ಪೋರ್ಟಲ್ ಅನ್ನೇ ಮುಂದುವರಿಸಿದೆ.
First published: