Apple Iphone: ಹೊಸದಾಗಿ ಬಿಡುಗಡೆಯಾದ Iphone 13 ಖರೀದಿ ಮಾಡುವುದಕ್ಕೂ ಮುಂಚೆ, ಈ ಆಫರ್ ಬಗ್ಗೆ ಸ್ವಲ್ಪ ಓದಿ

Offer: ಆ್ಯಪಲ್ ಕಂಪೆನಿಯು ಇತ್ತೀಚೆಗೆ ತಮ್ಮ ಹೊಸ ಐಫೋನ್ 13 ಸರಣಿಯನ್ನು ಬಿಡುಗಡೆ ಮಾಡಿತು. ಐಫೋನ್ 13, ಐಫೋನ್ 13 ಮಿನಿ, ಐಫೋನ್ 13 ಪ್ರೋ ಮತ್ತು ಐಫೋನ್ 13 ಪ್ರೋ ಮ್ಯಾಕ್ಸ್ ಸೆಪ್ಟೆಂಬರ್ 24 ರಿಂದಲೇ ಭಾರತದಲ್ಲಿ 69,900 ರೂ  ಆರಂಭಿಕ ಬೆಲೆಯಲ್ಲಿ ಲಭ್ಯವಿದೆ ಎಂದು ಕಂಪೆನಿ ತಿಳಿಸಿದೆ.

iphone 13 series

iphone 13 series

  • Share this:
ಇತ್ತೀಚೆಗೆ ಬಿಡುಗಡೆಯಾದ Iphone 13 ಕೊಂಡುಕೊಳ್ಳಬೇಕು ಎನ್ನುವ ಆಸೆ ಬಹುತೇಕ ಐಫೋನ್ ಪ್ರಿಯರಿಗೆ ಇರುವುದು ಸಹಜವಾದ ವಿಷಯ. ನೀವು ಇದನ್ನು ಖರೀದಿಸಲು ಮನಸ್ಸು ಮಾಡಿ ನಂತರ ಅದರ ಬೆಲೆಯನ್ನು ನೋಡಿ ನಿಮ್ಮ ನಿರ್ಧಾರ ಬದಲಾಯಿಸಿಕೊಂಡಿದ್ದರೆ, ಸ್ವಲ್ಪ ತಾಳ್ಮೆಯಿಂದ ಈ ಆಫರ್ ಅನ್ನು ಒಮ್ಮೆ ಓದಿಕೊಳ್ಳಿ.  ಯಾರಿಗೆ ಗೊತ್ತು ನಿಮಗೆ ನಿಮ್ಮ ನೆಚ್ಚಿನ ಐಫೋನ್ ಅದರ ನೈಜ ಬೆಲೆಗಿಂತಲೂ ಕಡಿಮೆ ಬೆಲೆಗೆ ಸಿಗಬಹುದು.  ಆ್ಯಪಲ್ ಕಂಪೆನಿಯು ಇತ್ತೀಚೆಗೆ ತಮ್ಮ ಹೊಸ ಐಫೋನ್ 13 ಸರಣಿಯನ್ನು ಬಿಡುಗಡೆ ಮಾಡಿತು. Iphone 13, Iphone 13 Mini, Iphone 13 Pro ಮತ್ತು Iphone 13 Pro Max  ಸೆಪ್ಟೆಂಬರ್ 24 ರಿಂದಲೇ ಭಾರತದಲ್ಲಿ 69,900 ರೂ  ಆರಂಭಿಕ ಬೆಲೆಯಲ್ಲಿ ಲಭ್ಯವಿದೆ ಎಂದು ಕಂಪೆನಿ ತಿಳಿಸಿದೆ.
ಅಬ್ಬಾ.. ಇದರ ಆರಂಭಿಕ ಬೆಲೆಯೇ ತುಂಬಾ ದುಬಾರಿ ಎಂದು ನಿಮಗೆ ಅನ್ನಿಸಿದರೆ, Apple ಕಂಪೆನಿಯು ನೀಡುತ್ತಿರುವ ಟ್ರೇಡ್-ಇನ್ ಆಫರ್ ಆಯ್ಕೆ ಮಾಡಿಕೊಳ್ಳುವ ಮೂಲಕ ನೈಜ ಬೆಲೆಗಿಂತ ಕಡಿಮೆ ಬೆಲೆಗೆ ಐಫೋನ್  ಖರೀದಿಸಬಹುದಾಗಿದೆ.

ಟ್ರೇಡ್-ಇನ್ ಆಫರ್ ಎಂದರೆ ತ್ವರಿತವಾಗಿ ನಿಮ್ಮಲ್ಲಿರುವ ಅರ್ಹ ಸ್ಮಾರ್ಟ್‌ಫೋನ್ ಅಥವಾ ಐಫೋನ್ ವಿನಿಮಯ ಮಾಡಿಕೊಳ್ಳುವ ಮೂಲಕ ನೀವು ಹೊಸ ಐಫೋನ್ ಬೆಲೆ ಮೇಲೆ ಸುಮಾರು 46,000 ರೂಪಾಯಿಯವರೆಗೂ ಡಿಸ್ಕೌಂಟ್  ಪಡೆಯಬಹುದು. ಆಸಕ್ತಿಯಿರುವ ಗ್ರಾಹಕರು ಬ್ರ್ಯಾಂಡ್, ಮಾಡೆಲ್ ಮತ್ತು ಅವರ ಸ್ಮಾರ್ಟ್‌ಫೋನ್ ಸ್ಥಿತಿಯ ಸಂಬಂಧಿತ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.

ಆ್ಯಪಲ್ ನಂತರ ಹೊಸ ಐಫೋನ್ ಬೆಲೆಯಲ್ಲಿ ನಿಮ್ಮ ಟ್ರೇಡ್-ಇನ್ ಬೆಲೆಯನ್ನು ಕಡಿತಗೊಳಿಸಿ ಪರಿಷ್ಕ್ರತ  ಬೆಲೆಯನ್ನು ನಿಮಗೆ ತಿಳಿಸುತ್ತದೆ. ಆರ್ಡರ್ ಮಾಡಿದ ನಂತರ, ಆ್ಯಪಲ್ ನಿಮ್ಮ ಮನೆ ಬಾಗಿಲಿಗೆ ಐಫೋನ್ ಯಾವಾಗ ತಲುಪಿಸಬೇಕು ಎನ್ನುವುದರ ಬಗ್ಗೆ ಮತ್ತು ಟ್ರೇಡ್-ಇನ್ ವಿನಿಮಯದ ದಿನಾಂಕ ಮತ್ತು ಸಮಯವನ್ನು ದೃಢೀಕರಿಸುತ್ತದೆ.

ಟ್ರೇಡ್-ಇನ್ ಮಾಡುವ ಮುಂಚೆ ಗ್ರಾಹಕರು ತಮ್ಮ ಬಳಿ ಇರುವಂತಹ ಸ್ಮಾರ್ಟ್‌ಫೋನ್ ಅನ್ನು ಹೇಗೆ ಸಿದ್ಧವಾಗಿಟ್ಟುಕೊಳ್ಳಬೇಕು ಎನ್ನುವುದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ನಿಮ್ಮ ಬಳಿ ಐಫೋನ್ ಇದ್ದರೆ

ನಿಮ್ಮ ಐಫೋನ್‌ನಿಂದ ನಿಮ್ಮ ಎಲ್ಲಾ ಡೇಟಾವನ್ನು ಖಾಲಿ ಮಾಡಿ ಬೇರೆ ಕಡೆ ಇರಿಸಿಕೊಳ್ಳಿ. ನೀವು ಇರುವ ಸ್ಥಳದಲ್ಲಿ ನಿಮ್ಮ ಐಪೋನ್‌ನ ಲ್ಲರುವ ಇಂಟರ್ನೆಟ್ ಚೆನ್ನಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ ಮತ್ತು ನಿಮ್ಮ ಆ್ಯಪಲ್ ಐಡಿ ಮತ್ತು ಪಾಸ್‌ವರ್ಡ್ ಸಿದ್ಧವಾಗಿಟ್ಟುಕೊಳ್ಳಿ.

ನೀವು ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ

ಒಂದು ವೇಳೆ ನೀವು ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ, ನಿಮ್ಮ ಡೇಟಾವನ್ನು ಖಾಲಿ ಮಾಡಿ ಬೇರೆ ಕಡೆಯಲ್ಲಿ ಇರಿಸಿಕೊಳ್ಳಿ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಇಂಟರ್ನೆಟ್ ಉತ್ತಮವಾಗಿದೆಯೇ ಎಂದು ಒಮ್ಮೆ ಪರೀಕ್ಷೆ ಮಾಡಿಕೊಳ್ಳಿ. ಕೊನೆಯದಾಗಿ ನಿಮ್ಮ ಸ್ಮಾರ್ಟ್‌ಫೋನ್‌ಗೆ ‘ವೆರಿಫೈ ಆ್ಯಪ್’ ಡೌನ್‌ಲೋಡ್ ಮಾಡಿಕೊಳ್ಳಿ.

ಐಫೋನ್ ತಲುಪಿಸುವ ಮತ್ತು ಟ್ರೇಡ್-ಇನ್ ದಿನದಂದು, ಕೊರಿಯರ್ ಅವರು ನಿಮ್ಮ ಬಳಿ ಇರುವ ಐಫೋನ್ ಅಥವಾ ಸ್ಮಾರ್ಟ್‌ಫೋನ್‌ನ ಟಚ್ ಸ್ಕ್ರೀನ್, ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾ ಕಾರ್ಯಾತ್ಮಕತೆ, ಬ್ಯಾಟರಿ, ಐಫೋನ್‌  ಕಾರ್ಯನಿರ್ವಹಣೆ ವೇಗ ಮತ್ತು ಇನ್ನಿತರೆ ಅಂಶಗಳನ್ನು ಪರಿಶೀಲಿಸುತ್ತಾರೆ.

ಇದನ್ನು ಓದಿ: Smartphone: ಕೋಪ ಬಂದಾಗ ಫೋನ್​​ ಎಸೆಯಬೇಡಿ.. ಯಾಕಂದ್ರೆ ಹೋದ ಪ್ರಾಣ ಮತ್ತೆ ಬಾರದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ!

ನಿಮ್ಮ ಟ್ರೇಡ್-ಇನ್ ಸ್ಮಾರ್ಟ್‌ಫೋನ್ ಅಥವಾ ಐಫೋನ್ ಚೆಕ್‌ ಔಟ್ ಆಗಿದೆ ಎಂದು ಆ್ಯಪಲ್ ಪರಿಶೀಲಿಸಿದ ನಂತರ, ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ಗ್ರಾಹಕರು ಈಗಾಗಲೇ ಪಡೆದ ಟ್ರೇಡ್-ಇನ್ ಮೊತ್ತವನ್ನು ಹೊಸ ಐಫೋನ್ ಬೆಲೆಯಲ್ಲಿ ಕಡಿತ ಮಾಡಿದಾಗ ಬರುವಂತಹ ಪರಿಷ್ಕೃತ ಬೆಲೆಯನ್ನು ಪಾವತಿಸಿದ ತಕ್ಷಣ, ಅವರ ಹೊಸ ಐಫೋನ್ ಅನ್ನು ನೀಡಲಾಗುತ್ತದೆ.
Published by:Harshith AS
First published: