• Home
  • »
  • News
  • »
  • tech
  • »
  • ‌IPhone Offer: ಕೇವಲ 32 ಸಾವಿರ ರೂಪಾಯಿಗೆ ಐಫೋನ್‌ 13 ಮಿನಿ! ಫ್ಲಿಪ್‌ಕಾರ್ಟ್‌ನ ವಿಶೇಷ ಆಫರ್

‌IPhone Offer: ಕೇವಲ 32 ಸಾವಿರ ರೂಪಾಯಿಗೆ ಐಫೋನ್‌ 13 ಮಿನಿ! ಫ್ಲಿಪ್‌ಕಾರ್ಟ್‌ನ ವಿಶೇಷ ಆಫರ್

ಐಫೋನ್‌ 13 ಮಿನಿ

ಐಫೋನ್‌ 13 ಮಿನಿ

Flipkart Offer: ಈ ವಿಶೇಷ ಸೇಲ್ ನವೆಂಬರ್ 8 ರಿಂದ ನವೆಂಬರ್ 14 ರವರೆಗೆ ಮುಂದುವರಿಯುತ್ತದೆ. ಈ ಸೇಲ್‌ನಲ್ಲಿ ವಿವಿಧ ವಿಭಾಗಗಳಿಗೆ ಸೇರಿದ ಸ್ಮಾರ್ಟ್‌ಫೋನ್‌ಗಳು ಭಾರೀ ರಿಯಾಯಿತಿಯೊಂದಿಗೆ ಲಭ್ಯವಿವೆ. ಫ್ಲಿಪ್‌ಕಾರ್ಟ್‌ ದಿನದಿಂದ ದಿನಕ್ಕೆ ಹೊಸ ಗ್ಯಾಜೆಟ್ಸ್‌ಗಳನ್ನು ನೀಡುತ್ತದೆ.

  • Share this:

    ಅಂತರರಾಷ್ಟ್ರೀಯ (International Brand) ಉನ್ನತ ಬ್ರಾಂಡ್ ಆಗಿರುವಂತಹ ಆಪಲ್ (Apple) ತನ್ನ ಉತ್ಪನ್ನದಲ್ಲಿ ಹೊಸ ಹೊಸ ಅಪ್‌ಡೇಟ್‌ ಅನ್ನು ಮಾಡುತ್ತಿರುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಈ ಕಂಪನಿಯ (Company) ಗ್ಯಾಜೆಟ್‌ಗಳನ್ನು (Gadget) ಬಳಸಬೇಕೆಂಬ ಬಯಸುವ ಅನೇಕ ಜನರಿದ್ದಾರೆ. ಅಂಥವರಿಗೆ ಖ್ಯಾತ ಇ-ಕಾಮರ್ಸ್ (E - Commerce) ಕಂಪನಿ ಫ್ಲಿಪ್ ಕಾರ್ಟ್ (Flipkart) ಶುಭ ಸುದ್ದಿ ನೀಡಿದೆ. ಆಪಲ್‌ನ ಇತ್ತೀಚಿನ ಸ್ಮಾರ್ಟ್‌ಫೋನ್ ಸೀರಿಸ್‌ನಲ್ಲಿ ಇದು ಅಗ್ಗದ ಮಾದರಿ ಎಂದು ಹೇಳಲಾಗುತ್ತಿದೆ. ಐಫೋನ್‌ 13 ಮಿನಿ (iPhone 13 Mini) ಭಾರಿ ರಿಯಾಯಿತಿ ಆಫರ್‌ಗಳನ್ನು ಪ್ರಕಟಿಸಿದೆ. ಇದೀಗ ಗ್ರಾಹಕರ ಗಮನಸೆಳೆದಿದ್ದು, ಹಲವು ಗ್ರಾಹಕರು ಇದನ್ನು ಖರೀದಿ ಮಾಡಲು ರೆಡಿಯಾಗುತ್ತಿದ್ದಾರೆ.


    ಐಫೋನ್‌ 13 ಮಿನಿ ಮೊಬೈಲ್‌ ಹಲವಾರು ಫೀಚರ್ಸ್‌ ಅನ್ನು ಹೊಂದಿದೆ. ಜೊತೆಗೆ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಇದು ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ ಬಗ್ಗೆ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.


    ಈ ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ಲಭ್ಯತೆ:


    ಐಫೋನ್‌ 13 ಮಿನಿ 128GB ಮಾದರಿಯನ್ನು 66,990 ರೂಪಾಯಿ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್‌ ಪ್ರಸ್ತುತ  64,990 ರೂಪಾಯಿಗೆ ಲಭ್ಯವಿದೆ.


    ಇದನ್ನೂ ಓದಿ: ದೇಶದಲ್ಲೇ ಮೊದಲ ಬಾರಿಗೆ ಅತೀ ಕಡಿಮೆ ಬೆಲೆಯ 5ಜಿ ಮೊಬೈಲ್‌ ಬಿಡುಗಡೆ!


    ಆದರೆ ಈ ಸ್ಮಾರ್ಟ್‌ಫೋನ್‌ನ ಮೇಲೆ ಇ-ಕಾಮರ್ಸ್ ಕಂಪನಿಯಾಗಿರುವ ಫ್ಲಿಪ್‌ಕಾರ್ಟ್ ಭಾರೀ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ಘೋಷಿಸಲಾಗಿದೆ. ಐಫೋನ್‌ 13 ಮಿನಿ 128GB ಮಾದರಿ 9,910 ರೂಪಾಯಿ  ರಿಯಾಯಿತಿ ಘೋಷಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ನ ಬೆಲೆ  54,990 ರೂಪಾಯಿಯಷ್ಟು ಕಡಿಮೆಯಾಗಿದೆ.


    iPhone 13 minutes for only 32 thousand rupees Flipkart s Special Offer
    ಐಫೋನ್‌ 13 ಮಿನಿ


    ಫ್ಲಿಪ್‌ಕಾರ್ಟ್ ಐಫೋನ್ 13 ಮಿನಿ ಮಾದರಿಯಲ್ಲಿ ಎಕ್ಸ್‌ಚೇಂಜ್‌ ಆಫರ್‌ ಕೂಡ ಹೊಂದಿದೆ. ಈ ಎಕ್ಸ್‌ಚೇಂಜ್‌ ಆಫರ್‌ ನ ಮೌಲ್ಯವು ಸುಮಾರು 20,500 ರೂಪಾಯಿವರೆಗೆ ಇದೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ತೊಂದರೆಗಳಿಲ್ಲದಿದ್ದರೆ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ.


    ನೀವು ಪೂರ್ಣ ವಿನಿಮಯ ಬೆಲೆಯೊಂದಿಗೆ ಐಫೋನ್‌ 13 ಮಿನಿ ಮಾದರಿಯನ್ನು ಪಡೆಯಬಹುದು. ಅಂದರೆ ಐಫೋನ್‌ 13 ಮಿನಿ 128GB ಮಾದರಿಯ ಬೆಲೆ ರೂ.34,490ಕ್ಕೆ ಇಳಿಯಲಿದೆ. HDFC ಮೂಲಕ ಐಫೋನ್‌ 13 ಮಿನಿ ಫೋನ್ ಡೆಬಿಟ್‌ ಕಾರ್ಡ್‌ ಅಥವಾ ಕ್ರೆಡಿಟ್‌ ಕಾರ್ಡ್ ಮೂಲಕ ಖರೀದಿಸಿದರೆ ನೀವು ಹೆಚ್ಚುವರಿ 3000 ರೂಪಾಯಿ ರಿಯಾಯಿತಿಯನ್ನು ಸಹ ಪಡೆಯಬಹುದು. ಅಂದರೆ ಕೇವಲ 32 ಸಾವಿರ ರೂಪಾಯಿಗೆ ನಿಮ್ಮದಾಗಿಸಿಕೊಳ್ಳಬಹುದು.


    ಇದರ ಫೀಚರ್ಸ್:‌


    • ಸ್ಮಾರ್ಟ್‌ಫೋನ್ 5.4-ಇಂಚಿನ OLED ಪರದೆಯೊಂದಿಗೆ 1080 x 2340 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ.

    • ಸ್ಮಾರ್ಟ್‌ಫೋನ್ ಆಪಲ್‌ನ ಸ್ವಂತ A15 ಬಯೋನಿಕ್ ಪ್ರೊಸೆಸರ್ನಿಂದ ಚಾಲಿತವಾಗಿದೆ.

    • ಹೆಚ್ಚುವರಿ ಸುರಕ್ಷತೆಗಾಗಿ ಇದು ಸೆರಾಮಿಕ್ ಕವರ್‌ನೊಂದಿಗೆ ಬರುತ್ತದೆ. 

    • ಐಫೋನ್ 13 ಮಿನಿ ಡ್ಯುಯಲ್-ಸಿಮ್ ಸ್ಮಾರ್ಟ್‌ಫೋನ್ 12MP ಪ್ರಾಥಮಿಕ ವೈಡ್-ಆಂಗಲ್ ಕ್ಯಾಮೆರಾವನ್ನು ಹೊಂದಿದೆ. 


    iPhone 13 minutes for only 32 thousand rupees Flipkart s Special Offer
    ಐಫೋನ್‌ 13 ಮಿನಿ


    • ಫೋನ್ ಹಿಂಭಾಗದಲ್ಲಿ 12MP ಅಲ್ಟ್ರಾ-ವೈಡ್ ಸೆಕೆಂಡರಿ ಸೆನ್ಸಾರ್ ಅನ್ನು ಹೊಂದಿದೆ. ಮುಂಭಾಗದಲ್ಲಿ, 12 ಮೆಗಾಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಸೆಲ್ಫಿ ಕ್ಯಾಮೆರಾ ಸೆಟಪ್ ಇದೆ. 

    • ಐಫೋನ್‌ 13 ಮಿನಿ ಸ್ಮಾರ್ಟ್‌ಫೋನ್ 128GB, 256GB ಅಥವಾ 512GB ಸ್ಟೋರೇಜ್ ಸಾಮರ್ಥ್ಯದಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಆಪಲ್ iOS 16 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 

    • ಹ್ಯಾಂಡ್‌ಸೆಟ್ IP68 ಪ್ರೊಟೆಕ್ಷನ್ ರೇಟಿಂಗ್‌ನೊಂದಿಗೆ ಧೂಳು ಮತ್ತು ನೀರಿನ ನಿರೋಧಕ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ.


    ಫ್ಲಿಪ್‌ಕಾರ್ಟ್‌ ದಿನದಿಂದ ದಿನಕ್ಕೆ ಗ್ರಾಹಕರಿಗೆ ಹೊಸ ಹೊಸ ಆಫರ್‌ಗಳೊಂದಿಗೆ ಮಾರುಕಟ್ಟೆಗೆ ಗ್ಯಾಜೆಟ್ಸ್‌ಗಳನ್ನು ನೀಡುತ್ತದೆ. ಈ ವಿಶೇಷ ಸೇಲ್ ನವೆಂಬರ್ 8 ರಿಂದ ನವೆಂಬರ್ 14 ರವರೆಗೆ ಮುಂದುವರಿಯುತ್ತದೆ. ಈ ಸೇಲ್‌ನಲ್ಲಿ ವಿವಿಧ ವಿಭಾಗಗಳಿಗೆ ಸೇರಿದ ಸ್ಮಾರ್ಟ್‌ಫೋನ್‌ಗಳು ಭಾರೀ ರಿಯಾಯಿತಿಯೊಂದಿಗೆ ಲಭ್ಯವಿವೆ. ಇದೀಗ ಹಲವಾರು ಗ್ರಾಹಕರು ಈಗಾಗಲೇ ಖರೀದಿ ಮಾಡಿದ್ದು ಇದರ ಮೇಲಿನ ಬೇಡಿಕೆ ಇನ್ನೂ ಹೆಚ್ಚಾಗುತ್ತಿದೆ.

    First published: