Diwali 2021 Offer: ಐಫೋನ್ 13 ಅನ್ನು 55,900 ರೂ.ಗೆ ನಿಮ್ಮದಾಗಿಸಿಕೊಳ್ಳವ ಸುವರ್ಣಾವಕಾಶ...

Iphone 13: ನೀವು ಐಫೋನ್ 13 ಖರೀದಿಸಲು ಯೋಜಿಸುತ್ತಿದ್ದರೆ ಆ್ಯಪಲ್‍ನ ಅಧಿಕೃತ ಮರುಮಾರಾಟಗಾರ ಇಂಡಿಯಾ ಐಸ್ಟೋರ್ ಆ್ಯಪಲ್ 13ನಲ್ಲಿ ರಿಯಾಯಿತಿಗಳನ್ನು ನೀಡುತ್ತಿದೆ. ನೀವು ಸ್ಮಾರ್ಟ್‍ಫೋನ್‌ ಅನ್ನು 55,900 ರೂಪಾಯಿಗಳ ಪರಿಣಾಮಕಾರಿ ಬೆಲೆಯಲ್ಲಿ ಖರೀದಿಸಬಹುದು.

iphone 13 series / ಐಫೋನ್ 13 ಸಿರೀಸ್​

iphone 13 series / ಐಫೋನ್ 13 ಸಿರೀಸ್​

  • Share this:

    ಐಫೋನ್ ತೆಗೆದುಕೊಳ್ಳುವ ಆಲೋಚನೆಯಲ್ಲಿರುವವರು Iphone13 ಕೊಳ್ಳಲು ಒಂದು ಸುವರ್ಣಾವಕಾಶ ಇಲ್ಲಿದೆ. ಏಕೆಂದರೆ ದೀಪಾವಳಿ (Diwali) ಪ್ರಯುಕ್ತ ಹೊಸದಾಗಿ ಬಿಡುಗಡೆ ಮಾಡಿದ ಐಫೋನ್ 13 ಭಾರಿ ರಿಯಾಯಿತಿಗಳೊಂದಿಗೆ ಲಭ್ಯವಿದೆ.ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಐಫೋನ್ 13 ಸರಣಿಯು ಈಗಾಗಲೇ ಖರೀದಿದಾರರ ಮನಗೆದ್ದಿದೆ. ಸ್ಮಾರ್ಟ್‍ಫೋನ್ ಬೆಲೆ ಹೆಚ್ಚಾಗಿದ್ದರೂ ಆ್ಯಪಲ್‍ನ ಅಧಿಕೃತ ಮರುಮಾರಾಟಗಾರರು ರಿಯಾಯಿತಿ ದರದಲ್ಲಿ ಸ್ಮಾರ್ಟ್‍ಫೋನ್ ಖರೀದಿಸಲು ಸಹಾಯ ಮಾಡುತ್ತಾರೆ. ಐಫೋನ್ 13 128GB ಅನ್ನು ಭಾರತದಲ್ಲಿ 79,900 ರೂ.ಗೆ ಬಿಡುಗಡೆ ಮಾಡಲಾಯಿತು. ಐಫೋನ್ 13 ಜೊತೆಗೆ, Apple Iphone13, Iphone13 mini, Iphone13 Pro ಮತ್ತು Iphone13 Pro Max ಅನ್ನು ಸಹ ಬಿಡುಗಡೆ ಮಾಡಿದೆ.


    ಹಾಗಾಗಿ ನೀವು ಐಫೋನ್ 13 ಖರೀದಿಸಲು ಯೋಜಿಸುತ್ತಿದ್ದರೆ ಆ್ಯಪಲ್‍ನ ಅಧಿಕೃತ ಮರುಮಾರಾಟಗಾರ ಇಂಡಿಯಾ ಐಸ್ಟೋರ್ ಆ್ಯಪಲ್ 13ನಲ್ಲಿ ರಿಯಾಯಿತಿಗಳನ್ನು ನೀಡುತ್ತಿದೆ. ನೀವು ಸ್ಮಾರ್ಟ್‍ಫೋನ್‌ ಅನ್ನು 55,900 ರೂಪಾಯಿಗಳ ಪರಿಣಾಮಕಾರಿ ಬೆಲೆಯಲ್ಲಿ ಖರೀದಿಸಬಹುದು. ಅಂಗಡಿಯು 6000 ರೂ.ಗಳ ರಿಯಾಯಿತಿ ನೀಡುತ್ತಿದೆ. HDFC ಬ್ಯಾಂಕ್ ಕಾರ್ಡ್‍ಗಳ ಮೇಲೆ ಇಎಂಐ ಕೂಡ ಅನ್ವಯಿಸುತ್ತದೆ. ಇದರಿಂದ ಬೆಲೆ 73,900 ರೂ.ಗೆ ಇಳಿಕೆಯಾಗಿದೆ.


    ನೀವು ಹಳೆಯ ಐಫೋನ್ ಹೊಂದಿದ್ದರೆ, ಮರುಮಾರಾಟಗಾರರು ನಿಮಗೆ ಸುಮಾರು 18,000 ರಿಯಾಯಿತಿ ನೀಡುತ್ತಾರೆ. ಹಳೆಯ ಐಫೋನ್ XR 64ಜಿಬಿ ಬೆಲೆ ರೂ 18,000 ವರೆಗೆ ಇರುತ್ತದೆ. ನಿಮ್ಮ ಹಳೆಯ ಫೋನ್ ಅನ್ನು ನೀವು ವಿನಿಮಯ ಮಾಡಿಕೊಂಡರೆ, ನೀವು 3000 ರೂಪಾಯಿಗಳ ಎಕ್ಚೇಂಜ್ ಬೋನಸ್ ಅನ್ನೂ ಪಡೆಯಬಹುದು. ಆದ್ದರಿಂದ ಬೆಲೆಯು 55,900 ರೂ.ಗೆ ಇಳಿಕೆಯಾಗುತ್ತದೆ. ನಿಮ್ಮ ಹಳೆಯ ಐಫೋನ್ 11 ಅಥವಾ ಹೆಚ್ಚಿನ ಮಾದರಿಗಳನ್ನು ನೀವು ವಿನಿಮಯ ಮಾಡಿಕೊಂಡರೆ, ನೀವು ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು.


    ಇದನ್ನು ಓದಿ: Amazon: ಮೊದಲ ಇಂಟರ್ನೆಟ್ ಉಪಗ್ರಹಗಳನ್ನು 2022ರ ಅಂತ್ಯದೊಳಗೆ ಪ್ರಾರಂಭಿಸಲಿದೆ ಅಮೆಜಾನ್

    Apple iPhone 13 Series Said to Launch on September 14
    ಐ-ಪೋನ್.

    ಐಫೋನ್ 13 ಸಾಕಷ್ಟು ವಿಶೇಷಣಗಳನ್ನು ಹೊಂದಿದ್ದು, ಪ್ರಬಲ ಸಾಧನವಾಗಿದೆ. ಸ್ಮಾರ್ಟ್‍ಫೋನ್ 6.1 OLED ಪ್ಯಾನೆಲ್ ಅನ್ನು 2532x1170 ಪಿಕ್ಸೆಲ್ ರೆಸಲ್ಯೂಶನ್ ಮತ್ತು 460 PPIನ ಪಿಕ್ಸೆಲ್ ಸಾಂದ್ರತೆ ಹೊಂದಿದೆ. ಐಫೋನ್ 13 ಎ15 ಬಯೋನಿಕ್ ಚಿಪ್‍ಸೆಟ್‍ನಿಂದ ಚಾಲಿತವಾಗಿದೆ. ಇದು 5NM ಉತ್ಪಾದನೆ ಆಧರಿಸಿದೆ ಮತ್ತು 6-ಕೋರ್ CPU ಹೊಂದಿದೆ. ಆ್ಯಪಲ್ ತನ್ನ ಹೊಸ ಚಿಪ್‍ಸೆಟ್ ಪ್ರಸ್ತುತ ಸ್ಪರ್ಧೆಗಿಂತ ಶೇಕಡಾ 50ರಷ್ಟು ವೇಗವಾಗಿದೆ ಎಂದು ಹೇಳಿಕೊಂಡಿದೆ. ಕ್ಯುಪರ್ಟಿನೊ-ದೈತ್ಯ ಐಫೋನ್ 13 ಬ್ಯಾಟರಿ ಅವಧಿಯನ್ನು ಸುಧಾರಿಸಿದೆ. ಸಾಧನವು ಐಫೋನ್ 12 ಗಿಂತ 1.5 ಗಂಟೆಗಳ ಹೆಚ್ಚುವರಿ ಬ್ಯಾಟರಿ ಅವಧಿಯೊಂದಿಗೆ ಸುಧಾರಿತವಾಗಿದೆ.


    ಇದನ್ನು ಓದಿ: Pee Power: ನಿಮ್ಮ ಮೂತ್ರದಿಂದ ಮೊಬೈಲ್ ಚಾರ್ಜ್ ಮಾಡಬಹುದಂತೆ! ವಿಜ್ಞಾನಿಗಳ ಸಂಶೋಧನೆ ಯಶಸ್ವಿ..

    ಕ್ಯಾಮೆರಾ ವಿಷಯದಲ್ಲಿ ಐಫೋನ್ 13 ಹೊಸ 12-ಮೆಗಾಪಿಕ್ಸೆಲ್ ವೈಡ್-ಆಂಗಲ್, ಎಫ್/1.6 ಅಪೆರ್ಚರ್ ಹೊಂದಿದೆ, ಇದು ಹಿಂದಿನದಕ್ಕಿಂತ 47 ಪ್ರತಿಶತ ದೊಡ್ಡದಾಗಿದೆ. ಈಗ, ಇದು ಹೆಚ್ಚು ಬೆಳಕನ್ನು ಸೆರೆಹಿಡಿಯಲು ಮತ್ತು ಉತ್ತಮ ಕಡಿಮೆ ಬೆಳಕಿನ ಫಲಿತಾಂಶಗಳನ್ನು ಪಡೆಯಲು ಅನುಮತಿಸುತ್ತದೆ. ಮತ್ತೊಂದು 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ವೇಗವಾದ ಎಫ್/2.4 ಲೆನ್ಸ್ ಮತ್ತು 120-ಡಿಗ್ರಿ ಫೀಲ್ಡ್ ಆಫ್ ವ್ಯೂ ಇದೆ.

    First published: