HOME » NEWS » Tech » IPHONE 12 USERS ARE FACING YET ANOTHER ISSUE HERES WHAT HAS HAPPENED THIS TIME HG

ದುಬಾರಿ ಬೆಲೆಯ ಐಫೋನ್​ 12ನಲ್ಲಿ ಕಾಣಿಸಿಕೊಂಡ ಸಮಸ್ಯೆ; ಏನದು?

ಪ್ರತ್ಯೇಕವಾಗಿ ಐಫೋನ್​ನಲ್ಲಿ ಬ್ಯಾಟರಿ ಸಮಸ್ಯೆ ಕಾಣಿಸಿಕೊಂಡಿಲ್ಲ. ಸುಮಾರು 1 ಸಾವಿರ ಐಫೋನ್​ 12 ಬಳಕೆದಾರರು ಈ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

news18-kannada
Updated:December 4, 2020, 4:48 PM IST
ದುಬಾರಿ ಬೆಲೆಯ ಐಫೋನ್​ 12ನಲ್ಲಿ ಕಾಣಿಸಿಕೊಂಡ ಸಮಸ್ಯೆ; ಏನದು?
iPhone 12
  • Share this:
ಜನಪ್ರಿಯ ಐಫೋನ್ ನೂತನ​ 12 ಸಿರೀಸ್​ ಅನ್ನು ಇದೇ ಅಕ್ಟೋಬರ್​ ತಿಂಗಳಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಐಫೋನ್​ 12 ಮಿನಿ, ಐಫೋನ್​ 12, ಐಫೋನ್​ 12 ಪ್ರೊ, ಐಫೋನ್​ 12 ಪ್ರೊ ಮ್ಯಾಕ್ಸ್​ ಅನ್ನು ಗ್ರಾಹಕರಿಗಾಗಿ ಪರಿಚಯಿಸಿತ್ತು. ಅನೇಕರು 12 ಸಿರೀಸ್​ ಐಫೋನ್​​ನನ್ನು ಖರೀದಿಸಿದ್ದು, ಅದರಲ್ಲಿ ಕೆಲವರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ರೆಡ್​ಇಟ್​ ಈ ಬಗ್ಗೆ ವರದಿ ಮಾಡಿದ್ದು, ಐಫೋನ್​ 12 ಬಳಕೆದಾರರು ಬ್ಯಾಟರಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದದು ತಿಳಿಸಿದೆ.

9ಟು5 ಮ್ಯಾಕ್​ ವರದಿಯಂತೆ ಹೊಸ ಐಫೋನ್​ 12ನಲ್ಲಿ ಬ್ಯಾಟರಿ ವೇಗವಾಗಿ ಖಾಲಿಯಾಗುತ್ತಿದೆ ಎಂದಿದೆ.

ಮಾಸ್ಟರ್​​26ಎ ವರದಿ ಮಾಡಿದ್ದು, ಸ್ಟ್ಯಾಂಡ್​ಬೈ ಮೋಡ್​ನಲ್ಲಿ ಬ್ಯಾಟರಿ ವೇಗವಾಗಿ ಖಾಲಿಯಾಗುತ್ತಿದೆ ಎಂದಿದೆ.

ಪ್ರತ್ಯೇಕವಾಗಿ ಐಫೋನ್​ನಲ್ಲಿ ಬ್ಯಾಟರಿ ಸಮಸ್ಯೆ ಕಾಣಿಸಿಕೊಂಡಿಲ್ಲ. ಸುಮಾರು 1 ಸಾವಿರ ಐಫೋನ್​ 12 ಬಳಕೆದಾರರು ಈ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಾಹಿತಿಗಳ ಪ್ರಕಾರ ಬ್ಯಾಗ್ರೌಂಡ್​ ಆ್ಯಪ್​ ಮತ್ತು 5ಜಿಯನ್ನು ಆಪ್​​ ಮಾಡಿದರೆ ಶೇ20-40ರಷ್ಟು ಬ್ಯಾಟರಿ ನಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಬ್ಯಾಟರಿ ಸಂಮಸ್ಯೆಯ ಬಗ್ಗೆ ಆ್ಯಪಲ್​ ಪ್ರತಿಕ್ರಿಯಿಸಿಲ್ಲ. ಮುಂದಿನ ಐಒಎಸ್​14 ಅಪ್ಡೇಡ್​ ಮೇಲೆ ಈ ದೋಷ ಸರಿಪಡಿಸಲಿದೆಯಾ ಎಂದು ಕಾದುನೋಡಬೇಕಿದೆ.
Published by: Harshith AS
First published: December 4, 2020, 4:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories