HOME » NEWS » Tech » IPHONE 12 SERIES SET TO LAUNCH ON OCTOBER 13 MODELS PRICING FEATURES AND MORE WE EXPECT HG

ಬಿಡುಗಡೆಗೆ 2 ದಿನ ಬಾಕಿ; ಆ್ಯಪಲ್ ಪ್ರಿಯರಲ್ಲಿ ಕುತೂಹಲ ಹುಟ್ಟಿಸಿದ ಐಫೋನ್ 12 ಸಿರೀಸ್!

iPhone 12 series: ಇದೀಗ ಐಫೋನ್​​ 12 ಸಿರೀಸ್ ​ಅನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಅಂತು ಇದೇ ಅಕ್ಟೋಬರ್ 13ರಂದು ಮಾರುಕಟ್ಟೆಗೆ ಪರಿಚಯ ಮಾಡುತ್ತಿದೆ. ಅಕ್ಟೋಬರ್​ 23ರಿಂದ ಐಫೋನ್​ 12 ಸೇಲ್​ ಮಾಡುತ್ತಿದೆ.​

news18-kannada
Updated:October 11, 2020, 1:43 PM IST
ಬಿಡುಗಡೆಗೆ 2 ದಿನ ಬಾಕಿ; ಆ್ಯಪಲ್ ಪ್ರಿಯರಲ್ಲಿ ಕುತೂಹಲ ಹುಟ್ಟಿಸಿದ ಐಫೋನ್ 12 ಸಿರೀಸ್!
ಐಫೋನ್​
  • Share this:
ಜನಪ್ರಿಯ ಆ್ಯಪಲ್​ ಸಂಸ್ಥೆ ಐಫೋನ್​ 12 ಸಿರೀಸ್​ ಅನ್ನು  ಬಿಡುಗಡೆ ಮಾಡಲಯ ಸಿದ್ಧತೆ ಮಾಡಿಕೊಂಡಿದೆ. ಅಕ್ಟೋಬರ್​​ 13ರಂದು ನೂತನ ಐಫೋನ್​ 12 ಸಿರೀಸ್​ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇನ್ನು ಒಂದೇ ದಿನ ಬಾಕಿ ಇದ್ದು ಆ್ಯಪಲ್​ ಸಂಸ್ಥೆ ಪರಿಚಯಿಸುತ್ತಿರುವ ಹೊಸ ಸಿರೀಸ್​ ಬಗ್ಗೆ ಆ್ಯಪಲ್​ ಪ್ರಿಯರಲ್ಲಿ ಭಾರೀ ಕುತೂಹಲ ಹುಟ್ಟಿಕೊಂಡಿದೆ.

ಆ್ಯಪಲ್​ ಸಂಸ್ಥೆ ಉತ್ಪಾದಿಸುವ ಐಫೋನ್​ಗಳಿಗೆ ಸದಾ ಬೇಡಿಕೆ ಇದೆ. ನೂತನ ಐಫೊನ್ ಸಿರೀಸ್​ಗಳು ಮಾರುಕಟ್ಟೆಯಲ್ಲಿ ಜನಪ್ರಿಯತೆಗಳಿಸುತ್ತಾ ಬಂದಿದೆ. ಕಳೆದ ಬಾರಿ ಆ್ಯಪಲ್​ ಸಂಸ್ಥೆ ಕಡಿಮೆ ಬೆಲೆಯ ಐಫೋನ್​ ಎಸ್​ಇ ಅನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿತ್ತು. ಭಾರತದಲ್ಲೂ ಉತ್ಪಾದಿಸಿ ಬೇರೆ ದೇಶಕ್ಕೆ ರವಾನೆ ಮಾಡಿತ್ತು. ಇದೀಗ ಐಫೋನ್​​ 12 ಸಿರೀಸ್ ​ಅನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಅಂತು ಇದೇ ಅಕ್ಟೋಬರ್ 13ರಂದು10 ಗಂಟೆಗೆ ಮಾರುಕಟ್ಟೆಗೆ ಪರಿಚಯ ಮಾಡುತ್ತಿದೆ. ಅಕ್ಟೋಬರ್​ 23ರಿಂದ ಐಫೋನ್​ 12 ಸೇಲ್​ ಮಾಡುತ್ತಿದೆ.​

ಈ ಬಾರಿ ಆ್ಯಪಲ್​ 5.4 ಇಂಚಿನ ಐಫೋನ್​ 12 ಮಿನಿ, 6.1 ಇಂಚಿನ ಐಫೋನ್​ 12, 6.1 ಇಂಚಿನ ಐಫೋನ್​ 12 ಪ್ರೊ ಮತ್ತು 6.7 ಇಂಚಿನ ಐಫೋನ್​ 12 ಪ್ರೊ ಮ್ಯಾಕ್ಸ್​ ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ.

ಬೆಲೆ:  ಐಫೋನ್​ 12 ಮಿನಿ ಬೆಲೆ 54 ಸಾವಿರ ಎಂದು ಹೇಳಲಾಗುತ್ತಿದೆ. ಅದರಂತೆ ಐಫೋನ್​ 12 ಮ್ಯಾಕ್ಸ್​ ಬೆಲೆ 62 ಸಾವಿರ ಇರಲಿದೆಯಂತೆ. ಇನ್ನು ಪ್ರೊ ಮತ್ತು ಪ್ರೊ ಮ್ಯಾಕ್ಸ್​ ಬೆಲೆ 87 ಸಾವಿರ ಇರಲಿದೆ ಎಂದು ಹೇಳಲಾಗುತ್ತಿದೆ.
Youtube Video

ನೂತನ ಐಫೋನ್​​​ 12 ಸಿರೀಸ್​ ಕಪ್ಪು, ಬಿಳಿ, ನೀಲಿ, ಕೆಂಪು ಮತ್ತು ಹಳದಿ ಬಣ್ಣದಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ
First published: October 11, 2020, 1:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories