iPhone Price Drops: ಐಫೋನ್ ಗಳ ಬೆಲೆಯಲ್ಲಿ ಭಾರಿ ಕಡಿತ...! ಮತ್ಯಾಕೆ ತಡ ಇಂದೇ ಹೊಸ ಫೋನ್‌ ಬುಕ್‌ ಮಾಡಿ..

ಆ್ಯಪಲ್ ಐಫೋನ್ 11, ಐಫೋನ್ 12 ಮತ್ತು ಐಫೋನ್ 12 ಮಿನಿ ಸೇರಿದಂತೆ ಹಲವಾರು ಐಫೋನ್ ಗಳ ಬೆಲೆಯಲ್ಲಿ ಭಾರಿ ಕಡಿತ ಘೋಷಿಸಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕೆಲವು ವರ್ಷಗಳಿಂದ ಜನರಲ್ಲಿ ಐಫೋನ್ (iPhone) ಖರೀದಿಸುವ ಕ್ರೇಜ್ ತುಂಬಾನೇ ಜಾಸ್ತಿಯಾಗಿದೆ ಎಂದು ಹೇಳಬಹುದು, ಇವರಿಗಾಗಿಯೇ ಇಲ್ಲಿದೆ ಒಂದು ಸಿಹಿ (Pretty Good.) ಸುದ್ದಿ.ನೀವು ಐಫೋನ್ ಪ್ರಿಯರಾಗಿದ್ದು ಮತ್ತು ಹೊಸದಾಗಿ ಐಫೋನ್ 11 ಅಥವಾ ಐಫೋನ್ 12 ಖರೀದಿಸಲು ಯೋಚಿಸುತ್ತಿದ್ದರೆ, ಮೊದಲಿಗೆ ಈ ಸುದ್ದಿಯನ್ನು ಒಮ್ಮೆ ಸಂಪೂರ್ಣವಾಗಿ ಓದಿ, ಏಕೆಂದರೆ ನೀವು ಈ ಐಫೋನ್‌ಗಳನ್ನು ಎಲ್ಲಿ ಖರೀದಿಸಿದರೆ(Buying) ನಿಮಗೆ ಎಷ್ಟು ಹಣ ಉಳಿಯುತ್ತದೆ ಎಂಬ ಮಾಹಿತಿ (Information) ನಿಮಗೆ ಇದರಲ್ಲಿ ದೊರೆಯುತ್ತದೆ.

ಬಣ್ಣ ಮತ್ತು ಸ್ಟೋರೇಜ್ ಆಯ್ಕೆ ಅವಲಂಬಿಸಿ ಬೆಲೆ
ಹೌದು.. ಆ್ಯಪಲ್ ಐಫೋನ್ 11, ಐಫೋನ್ 12 ಮತ್ತು ಐಫೋನ್ 12 ಮಿನಿ ಸೇರಿದಂತೆ ಹಲವಾರು ಐಫೋನ್ ಗಳ ಬೆಲೆಯಲ್ಲಿ ಭಾರಿ ಕಡಿತ ಘೋಷಿಸಿದೆ. ಹೊಸ ಬೆಲೆ ಕಡಿತದೊಂದಿಗೆ, ಆ್ಯಪಲ್‌ನ ಐಫೋನ್ 12 ಸರಣಿಯಲ್ಲಿ ನೀವು ಈಗ ಭಾರತದಲ್ಲಿ 49,999 ರೂಪಾಯಿ ಬೆಲೆಯಲ್ಲಿ ಐಫೋನ್ 12 ಮಿನಿಯನ್ನು ಖರೀದಿಸಬಹುದು. ಐಫೋನ್ ಬಳಕೆದಾರರು ಆಯ್ಕೆ ಮಾಡುವ ಬಣ್ಣ ಮತ್ತು ಸ್ಟೋರೇಜ್ ಆಯ್ಕೆ ಅವಲಂಬಿಸಿ ಇವುಗಳ ಬೆಲೆಗಳು ಬದಲಾಗಬಹುದು.

ಹೊಸ ಬೆಲೆಗಳನ್ನು ಇ-ಕಾಮರ್ಸ್ ವೆಬ್‌ಸೈಟ್ ಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ನಲ್ಲಿ ನೀವು ನೋಡಬಹುದಾಗಿದೆ. ಇದು ತಾತ್ಕಾಲಿಕ ಬೆಲೆ ಕಡಿತವಾಗಿದೆ ಮತ್ತು ಇದು ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ ಎಂದು ವರದಿಗಳು ಸೂಚಿಸುತ್ತವೆ. ಆದ್ದರಿಂದ ಉತ್ತಮ ಬೆಲೆಗೆ ಹೊಸ ಐಫೋನ್ ಖರೀದಿಸಲು ಇದು ಒಂದು ಉತ್ತಮ ಅವಕಾಶ ಎಂದು ಹೇಳಲಾಗುತ್ತಿದೆ. ಹಾಗಾದರೆ ಬನ್ನಿ ಈ ಐಫೋನ್ ಮಾದರಿಗಳ ಬದಲಾದ ಬೆಲೆಯನ್ನು ತಿಳಿದುಕೊಳ್ಳೋಣ.

ಇದನ್ನೂ ಓದಿ: iPhone screen: ಐಫೋನ್ ಡಿಸ್​ಪ್ಲೇಯಿಂದ ಆ್ಯಪಲ್ ವಾಚ್ ಚಾರ್ಜ್ ಮಾಡಬಹುದು!

ಐಫೋನ್12
ಫ್ಲಿಪ್‌ಕಾರ್ಟ್‌ನಲ್ಲಿ 64ಜಿಬಿ ಸ್ಟೋರೇಜ್ ಇರುವ ಐಫೋನ್ 12 ಅನ್ನು ನೀವು 59,999 ರೂಪಾಯಿ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಆದರೆ, ನೀಲಿ ಬಣ್ಣದ 64ಜಿಬಿ ಸ್ಟೋರೇಜ್ ಮಾದರಿಗೆ 60,499 ರೂಪಾಯಿ ನೀಡಬೇಕಾಗುತ್ತದೆ ಮತ್ತು ಇದು ಸ್ವಲ್ಪ ದುಬಾರಿಯಾಗಿದೆ. ಇನ್ನು,ಅಮೆಜಾನ್‌ನಲ್ಲಿ, ಐಫೋನ್ 12 ಅನ್ನು 64ಜಿಬಿ ಸ್ಟೋರೇಜ್ ಇರುವ ಮಾದರಿಯನ್ನು 63,900 ರೂಪಾಯಿಗೆ ಮತ್ತು 128ಜಿಬಿ ಸ್ಟೋರೇಜ್ ಇರುವ ಮಾದರಿಯನ್ನು 70,900 ರೂಪಾಯಿಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್‌ನಲ್ಲಿ, 128ಜಿಬಿ ಸ್ಟೋರೇಜ್ ಇರುವ ಮಾದರಿಯನ್ನು 64,999 ರೂಪಾಯಿಗೆ ಖರೀದಿಸಬಹುದು.

ಐಫೋನ್12 ಮಿನಿ
ಮತ್ತೊಂದೆಡೆ, ಕಪ್ಪು, ಬಿಳಿ ಮತ್ತು ನೀಲಿ ಬಣ್ಣದ ಆಯ್ಕೆಗಳಿಗಾಗಿ ಅಮೆಜಾನ್‌ನಲ್ಲಿ ಐಫೋನ್ 12 ಮಿನಿ ಅನ್ನು ನೀವು 49,999 ರೂಪಾಯಿಗೆ ಖರೀದಿಸಬಹುದು. ಐಫೋನ್ 12 ಮಿನಿಯಲ್ಲಿ ನೇರಳೆ ಬಣ್ಣದ ಮಾದರಿಯನ್ನು ನೀವು 53,900 ರೂಪಾಯಿಗೆ ಖರೀದಿಸಬಹುದು. ಆದರೆ ಹಸಿರು ಬಣ್ಣ ಮತ್ತು 64ಜಿಬಿ ಸ್ಟೋರೇಜ್ ಇರುವ ಮಾದರಿಗೆ 59,900 ರೂಪಾಯಿ ನೀಡಬೇಕಾಗುತ್ತದೆ. ಐಫೋನ್ 12 ಮಿನಿಯ 128ಜಿಬಿ ಸ್ಟೋರೇಜ್ ಮಾದರಿ ಪ್ರಾಜೆಕ್ಟ್ ರೆಡ್ ಮಾದರಿಗೆ 54,999 ರೂಪಾಯಿ ಮತ್ತು ಅಮೆಜಾನ್‌ನಲ್ಲಿ ಹಸಿರು ಬಣ್ಣದ ಮಾದರಿಗೆ 64,900 ರೂಪಾಯಿ ನೀಡಬೇಕಾಗುತ್ತದೆ.

ಇದನ್ನೂ ಓದಿ: ಹಳೆಯ iPhone ಖರೀದಿಸಲು ಬಯಸುತ್ತಿದ್ದೀರಾ..? ಹಾಗಾದ್ರೆ ತಪ್ಪದೇ ಹೀಗೆ ಮಾಡಿ..

ಐಫೋನ್11
ಐಫೋನ್ 11ನ 64ಜಿಬಿ ಸ್ಟೋರೇಜ್ ಮಾದರಿಯನ್ನು ನೀವು 49,900 ರೂಪಾಯಿಗೆ ಮತ್ತು 128 ಜಿಬಿ ಸ್ಟೋರೇಜ್ ಮಾದರಿಯನ್ನು ಫ್ಲಿಪ್‌ಕಾರ್ಟ್‌ನಲ್ಲಿ 54,999 ರೂಪಾಯಿಗೆ ಖರೀದಿಸಬಹುದು. ಈ ರಿಯಾಯಿತಿಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ, ಐಫೋನ್ 13 ಮಿನಿ, ಐಫೋನ್ 13 ಪ್ರೋ, ಐಫೋನ್ 13 ಪ್ರೋ ಮ್ಯಾಕ್ಸ್ ಮತ್ತು ವೆನಿಲ್ಲಾ ಐಫೋನ್ 13 ಸೇರಿದಂತೆ ಐಫೋನ್ 13 ಮಾದರಿಗಳ ಬೆಲೆಯಲ್ಲಿ ಯಾವುದೇ ಕಡಿತ ಮಾಡಿಲ್ಲ ಎಂದು ಹೇಳಲಾಗುತ್ತಿದೆ.
Published by:vanithasanjevani vanithasanjevani
First published: