HOME » NEWS » Tech » IPHONE 12 IPHONE 12 MINI IN PURPLE COLOUR NOW AVAILABLE IN INDIA HG

ಇಂದಿನಿಂದ ಪರ್ಪಲ್​ ಬಣ್ಣದ Iphone​ 12 ಖರೀದಿಗೆ ಲಭ್ಯ!

Iphone​ 12: ಪರ್ಪಲ್ ಬಣ್ಣದ​ ಐಫೋನ್​ 12 ಮತ್ತು 12 ಮಿನಿಯನ್ನು ಆನ್​ಲೈನ್​ನಲ್ಲೂ ಸೇಲ್​ ಮಾಡುತ್ತಿದೆ. ಅಂದಹಾಗೆಯೇ ಐಫೊನ್​ 12 12 ಸರಣಿ ಎ14 ಬಯಾನಿಕ್​ ಚಿಪ್​ ಹೊಂದಿದ್ದು, ಕ್ಯೂಎಲ್​ಇಡಿ ಡಿಸ್​ಪ್ಲೇಯಲ್ಲಿ ಸಿಗಲಿದೆ.

news18-kannada
Updated:April 30, 2021, 6:31 PM IST
ಇಂದಿನಿಂದ ಪರ್ಪಲ್​ ಬಣ್ಣದ Iphone​ 12 ಖರೀದಿಗೆ ಲಭ್ಯ!
iPhone 12
  • Share this:
ಪರ್ಪಲ್​ ಬಣ್ಣದ ಐಫೋನ್​ 12 ಮಾದರಿ ಇಂದಿನಿಂದ ಖರೀದಿಗೆ ಲಭ್ಯವಾಗಿದೆ. ಕಳೆದ ವಾರ ಆ್ಯಪಲ್​ ಸಂಸ್ಥೆ 2021ನೇ ಇಸವಿಯ ಮೊದಲ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅದರಲ್ಲಿ ಹೊಸ ಐಪ್ಯಾಡ್​ ಪ್ರೊ, ಐಮ್ಯಾಕ್​ ಸೇರಿ ಹಲವು ಉತ್ಪನ್ನಗಳನ್ನು ಬಿಡುಗಡೆ ಮಾಡಿತ್ತು. ಇದರ ಜೊತೆಗೆ ಐಫೋನ್ 12 ಮಾದರಿಯನ್ನು ಪರ್ಪಲ್​ ಬಣ್ಣದಲ್ಲಿ ಪರಿಚಯಿಸಿತ್ತು. ಇದೀಗ ಖರೀದಿಗೆ ಅವಕಾಶ ನೀಡಿದೆ.

ಪರ್ಪಲ್ ಬಣ್ಣದ​ ಐಫೋನ್​ 12 ಮತ್ತು 12 ಮಿನಿಯನ್ನು ಆನ್​ಲೈನ್​ನಲ್ಲೂ ಸೇಲ್​ ಮಾಡುತ್ತಿದೆ. ಅಂದಹಾಗೆಯೇ ಐಫೊನ್​ 12 12 ಸರಣಿ ಎ14 ಬಯಾನಿಕ್​ ಚಿಪ್​ ಹೊಂದಿದ್ದು, ಕ್ಯೂಎಲ್​ಇಡಿ ಡಿಸ್​ಪ್ಲೇಯಲ್ಲಿ ಸಿಗಲಿದೆ. ಇನ್ನು ಐಫೋನ್​ 12, 6.1 ಇಂಚಿನ ಡಿಸ್​ಪ್ಲೇ ಹೊಂದಿದ್ದು, 12 ಮಿನಿ 5.4 ಡಿಸ್​ಪ್ಲೇ ಅಳವಡಿಸಿಕೊಂಡಿದೆ.

ಹಿಂಭಾಗದಲ್ಲಿ 12 ಮೆಗಾಫಿಕ್ಸೆಲ್​ ಮೈಡ್​, 12 ಮೆಗಾಫಿಕ್ಸೆಲ್​​ ಅಲ್ಟ್ರಾ ವೈಡ್​ ಕ್ಯಾಮೆರಾ ಲೆನ್ಸ್​ ಹೊಂದಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 12 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಿದೆ. ಇನ್ನು ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 79,900 ರೂ ಹಾಗೂ 69,900 ರೂ.ಗೆ ಖರೀದಿಗೆ ಸಿಗಲಿದೆ.

ಗ್ರಾಹಕರಿಗಾಗಿ ಐಫೋನ್​ 12 ಮಾದರಿ ಪರ್ಪಲ್​ ಬಣ್ಣದ ಜೊತೆಗೆ ಕಪ್ಪು, ಬಿಳಿ, ಪ್ರಾಡಕ್ಟ್​ ರೆಡ್​, ಹಸಿರು, ನೀಲಿ ಸಹಿತ 6 ಆಕರ್ಷಕ ಬಣ್ಣದಲ್ಲಿ ಮಾರಾಟ ಮಾಡುತ್ತಿದೆ. 64,ಜಿಬಿ, 128ಜಿಬಿ, 256ಜಿಬಿ ಎಂಬ ಮೂರು ಆಯ್ಕೆಯಲ್ಲಿ ಸಿಗುತ್ತಿದೆ.

ಆ್ಯಪಲ್​ ಟಿವಿ 4ಕೆ:

ನೂತನ ಟಿವಿ ಬಯೋನಿಕ್​ ಪ್ರೊಸೆಸರ್​ ಒಳಗೊಂಡಿದೆ. ಜೊತೆಗೆ ಸಿರಿ ರಿಮೋಟ್​ ಸಪೋರ್ಟ್ ನೀಡುತ್ತದೆ. ಆ್ಯಪಲ್​ 4ಕೆ ಟಿವಿ ಹಿಂದಿನ ಮಾದರಿಗಿಂತ ಹೆಚ್ಚಿನ ಅಪ್ಡೇಟ್​ ಹೊಂದಿದೆ.

ಅಷ್ಟು ಮಾತ್ರವಲ್ಲದೆ, ಟಚ್​-ಎನೇಬಲ್ಡ್​ ಕ್ಲಿಕ್​ ಪ್ಯಾಡ್​, ಹೊರ-ರಿಂಗ್​, ಜೊತೆಗೆ ವಿಡಿಯೋವನ್ನು ಟೈಮ್​ಲೈನ್​ನಲ್ಲಿ ಸರ್ಚ್​ ಮಾಡಲು ಔಟರ್​ ರಿಂಗ್​ ಸರ್ಕ್ಯೂಲರ್​ ಅನ್ನು ರೀಡ್​ ಮಾಡಬಹುದಾಗಿದೆ. ಗ್ರಾಹಕರಿಗಾಗಿ 32ಜಿಬಿ (13,500), 64ಜಿಬಿ (15,000) ಸ್ಟೊರೇಜ್​ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.
Published by: Harshith AS
First published: April 30, 2021, 6:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories