ಐಫೋನ್ ಬಳಕೆದಾರರಿಗೆ ಸಿಹಿಸುದ್ದಿ; ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಹೊಸ ವರ್ಷನ್​

ನೂತನ ಸ್ಮಾರ್ಟ್​ಫೋನ್​ಗೆ ಐಫೋನ್​ 11 ಎಂದು ಹೆಸರಿಡುವ ನಿರೀಕ್ಷೆಯಲ್ಲಿದ್ದು, ಅದರಲ್ಲಿ ಐಫೋನ್​ 11R​ ಮತ್ತು ಐಫೋನ್​ ಮ್ಯಾಕ್ಸ್​ ಎಂಬ ಹೆಸರನ್ನು ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ.

Harshith AS | news18
Updated:July 19, 2019, 4:42 PM IST
ಐಫೋನ್ ಬಳಕೆದಾರರಿಗೆ ಸಿಹಿಸುದ್ದಿ; ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಹೊಸ ವರ್ಷನ್​
ಐಫೋನ್​ 11
  • News18
  • Last Updated: July 19, 2019, 4:42 PM IST
  • Share this:
ಜನಪ್ರಿಯ ಸ್ಮಾರ್ಟ್​ಫೋನ್​ ಸಂಸ್ಥೆಯಾದ ಐಫೋನ್​ ನೂತನ ಸ್ಮಾರ್ಟ್​ಫೋನ್​ವೊಂದನ್ನು​ ತಯಾರಿಸುತ್ತಿದ್ದು, ಮುಂದಿನ ಅಕ್ಟೋಬರ್​ ತಿಂಗಳಿನಲ್ಲಿ ಈ ನೂತನ ಸ್ಮಾರ್ಟ್​ಫೋನ್​​ ಅನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ನೂತನ ಸ್ಮಾರ್ಟ್​ಫೋನ್​ಗೆ ಐಫೋನ್​ 11 ಎಂದು ಹೆಸರಿಡುವ ನಿರೀಕ್ಷೆಯಲ್ಲಿದ್ದು, ಅದರಲ್ಲಿ ಐಫೋನ್​ 11R​ ಮತ್ತು ಐಫೋನ್​ ಮ್ಯಾಕ್ಸ್​ ಎಂಬ ಹೆಸರನ್ನು ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ.

ಗ್ರಾಹಕರಿಗಾಗಿ ತಯಾರಿಸುತ್ತಿರುವ ಈ ನೂತನ ಸ್ಮಾರ್ಟ್​ಫೋನಿನ ಕೆಲ ಮಾಹಿತಿಗಳು ಸೋರಿಕೆಯಾಗಿದ್ದು,​ ಹಿಂಭಾಗದಲ್ಲಿ 3 ಕ್ಯಾಮೆರಾವನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಚೌಕಾಕಾರದ ವಿನ್ಯಾಸದಲ್ಲಿ ತಯಾರಿಸಲಾಗುತ್ತಿರುವ ಈ ಸ್ಮಾರ್ಟ್​ಫೋನ್​ ವಿಡಿಯೋ ಮತ್ತು ಫೋಟೋ ಈಗಾಗಲೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನಕಲಿ ಮಾದರಿಗಳು ಕಂಡುಬಂದಿದೆ.

ಇದನ್ನೂ ಓದಿ: ಇಂದು ಮಾರುಕಟ್ಟೆಗೆ ‘ಒಪ್ಪೋ ಕೆ3‘ಸ್ಮಾರ್ಟ್​ಫೋನ್​: ಇದರಲ್ಲಿದೆ ಹೊಸ ಫೀಚರ್​

ಇನ್ನೂ ಚೀನಾದಲ್ಲೂ ಐಫೋನ್​ 11 ಡಮ್ಮಿ ಮಾದರಿಗಳು ಉತ್ಪಾದನೆಯಾಗುತ್ತಿದೆ. ಮಾರುಕಟ್ಟೆಗೆ ಹೊಸ ಸ್ಮಾರ್ಟ್​ಫೋನ್​​ಗಳು ಕಾಲಿಸುತ್ತಿದ್ದಂತೆ, ಅದರ ವಿನ್ಯಾಸ ಮತ್ತು ಫೀಚರ್​ಗಳನ್ನು ನಕಲು ಮಾಡಿ ಮರು ಉತ್ಪಾದನೆ ಮಾಡುತ್ತದೆ. ಇದೀಗ ಐಫೋನ್​ 11 ಸ್ಮಾರ್ಟ್​ಫೋನಿನ ನಕಲಿ ಮಾದರಿಗಳನ್ನು ಚೀನಾದಲ್ಲಿ ಉತ್ಪಾದಿಸಲಾಗುತ್ತಿದ್ದು, ಮುಂದಿನ  ದಿನಗಳಲ್ಲಿ ಭಾರತದ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.

First published:July 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ