ಐಫೋನ್ (IPhone) ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಆ್ಯಪಲ್ ಕಂಪನಿಯಿಂದ (Apple Company) ಬಿಡುಗಡೆಯಾಗುವ ಸ್ಮಾರ್ಟ್ಫೋನ್ಗಳು (Smartphones) ಪ್ರಪಂಚದಾದ್ಯಂತ ವಿಶೇಷ ಗ್ರಾಹಕರನ್ನು ಇದು ಹೊಂದಿದೆ. ಆ್ಯಪಲ್ ಕಂಪನಿ ಗ್ರಾಹಕರಿಗಾಗಿ ಕಡಿಮೆ ಬೆಲೆಯಿಂದ ಹಿಡಿದು ಲಕ್ಷಾಂತರ ಮೌಲ್ಯದ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿ ಮೊಬೈಲ್ ಮಾರುಕಟ್ಟೆಯಲ್ಲಿ (Mobile) ತನ್ನದೇ ಆದಂತಹ ಒಂದು ಅಸ್ಥಿತ್ವವನ್ನು ಕಾಪಾಡಿಕೊಂಡಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಐಫೋನ್ಗಳು ಬಿಸಿ ಕೇಕ್ನಂತೆ ಮಾರಾಟವಾಗುತ್ತವೆ. ಆದರೆ ಹೆಚ್ಚಿನ ಬೆಲೆಯಿಂದಾಗಿ, ಅನೇಕ ಜನರು ಅದನ್ನು ಖರೀದಿಸಲು ಹಿಂಜರಿಯುತ್ತಾರೆ. ಇದೀಗ ಪ್ರಸಿದ್ಧ ಇ-ಕಾಮರ್ಸ್ ಅಪ್ಲಿಕೇಶನ್ ಆಗಿರುವ ಫ್ಲಿಪ್ಕಾರ್ಟ್ (Flipcart) ಅಂತಹವರಿಗಾಗಿ ಬಂಪರ್ ಆಫರ್ ಅನ್ನು ಘೋಷಿಸಿದೆ. ಆ್ಯಪಲ್ನ ಅತ್ಯಂತ ಜನಪ್ರಿಯ ಫೋನ್ ಐಫೋನ್ 11 ನ ಮೇಲೆ ಭಾರೀ ರಿಯಾಯಿತಿಗಳನ್ನು ನೀಡುತ್ತಿದೆ.
ಹೌದು ಐಫೋನ್ಗಳ ಬೆಲೆ ಹೆಚ್ಚಾಗಿರುವುದರಿಂದ ಈ ಸ್ಮಾರ್ಟ್ಫೋನ್ಗಳನ್ನು ಕೆಲವರು ಖರೀದಿಸಲು ಹಿಂಜರಿಯುತ್ತಾರೆ. ಆದರೆ ಇನ್ಮುಂದೆ ಇದಕ್ಕೆ ಟೆನ್ಷನ್ ಬೇಡ. ಫ್ಲಿಪ್ಕಾರ್ಟ್ ಐಫೊನ್ 11 ಸ್ಮಾರ್ಟ್ಫೋನ್ ಅನ್ನು ಭರ್ಜರಿ ಆಫರ್ನೊಂದಿಗೆ ಮಾರಾಟ ಮಾಡುತ್ತಿದೆ. ಇದರ ಬೆಲೆ ಮತ್ತು ಫೀಚರ್ಸ್ ಬಗ್ಗೆ ಮಾಹಿತಿ ಇಲ್ಲಿದೆ.
ಐಫೋನ್ನ ಕ್ರೇಜ್ ಇನ್ನೂ ಹೋಗಿಲ್ಲ
2020 ರಲ್ಲಿ ವಿಶ್ವಾದ್ಯಂತ ಅತಿ ಹೆಚ್ಚು ಮಾರಾಟವಾದ ಈ ಸ್ಮಾರ್ಟ್ಫೋನ್ ಇನ್ನೂ ದೊಡ್ಡ ಕ್ರೇಜ್ ಅನ್ನು ಹೊಂದಿದೆ. ಇನ್ನು ಐಫೋನ್ 11 ಉತ್ತಮ ಕ್ಯಾಮೆರಾ ಮತ್ತು ಉತ್ತಮ ಫೀಚರ್ಸ್ ಹೊಂದಿದ ಸ್ಮಾರ್ಟ್ಫೋನ್ ಆಗಿದೆ. ಅದಕ್ಕಾಗಿಯೇ ಇದು ಆಪಲ್ ಕಂಪನಿಯ ಅತ್ಯಂತ ಜನಪ್ರಿಯ ಮತ್ತು ಬಹಳ ಬೇಡಿಕೆಯ ಐಫೋನ್ ಮಾದರಿಯಾಗಿದೆ.
ಇದನ್ನೂ ಓದಿ: ಈ ಮೊಬೈಲ್ ಬೆಲೆ ಕೇಳಿದ್ರೆ ತಲೆ ತಿರುಗಿ ಬೀಳ್ತೀರಾ! ಅಂಥದ್ದೇನಿದೆ ಈ ಫೋನ್ನಲ್ಲಿ ನೋಡಿ
ಆದರೆ ಇತ್ತೀಚೆಗೆ ಆ್ಯಪಲ್ ಐಫೋನ್ 14 ಸೀರಿಸ್ ಅನ್ನು ಬಿಡುಗಡೆ ಮಾಡಿದ ನಂತರ, ಕಂಪನಿಯು ಇವುಗಳ ಉತ್ಪಾದನೆಯನ್ನು ನಿಲ್ಲಿಸಿದೆ. ಆದರೂ ಆ್ಯಪಲ್ ಐಫೋನ್ 11 ಹಲವಾರು ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಖರೀದಿಗೆ ಲಭ್ಯವಿದೆ. ಆ್ಯಪಲ್ ನಿಂದ ಹೊಸ ಸೀರಿಸ್ ಬಂದರೂ ಕೂಡ ಐಫೋನ್ 11 ಸ್ಮಾರ್ಟ್ಫೋನ್ನ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ.
2020 ರ ಅತ್ಯುತ್ತಮವಾಗಿ ಮಾರಾಟವಾದ ಸ್ಮಾರ್ಟ್ಫೋನ್
ಆ್ಯಪಲ್ ಐಫೋನ್ 11 ಸೀರಿಸ್ ಅನ್ನು ಭಾರತದಲ್ಲಿ 2019 ರಲ್ಲಿ ರೂ.64,900 ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಯಿತು. ಐಫೋನ್ 11 ಸೀರಿಸ್ನಲ್ಲಿ ಆ್ಯಪಲ್ ಐಫೋನ್ 11, ಐಫೋನ್ 11 ಪ್ರೋ ಮತ್ತು ಐಫೋನ್ 11 ಪ್ರೋ ಮ್ಯಾಕ್ಸ್ ಎಂಬ ಮೂರು ಮಾದರಿಗಳಿವೆ. ಆದರೆ ಫ್ಲಿಪ್ಕಾರ್ಟ್ನಲ್ಲಿನ ಇತ್ತೀಚಿನ ಕೊಡುಗೆಯ ಅಡಿಯಲ್ಲಿ ಇದನ್ನು ಕೇವಲ ರೂ.21,450 ನಲ್ಲಿ ಖರೀದಿಸಬಹುದು.
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 11 ಬೆಲೆ 40,999 ರೂ. ಆಕ್ಸಿಸ್ ಬ್ಯಾಂಕ್ ಕಾರ್ಡ್ನಲ್ಲಿ ನೀಡುವ ರಿಯಾಯಿತಿಯ ಮೂಲಕ ನೀವು 5 ಪ್ರತಿಶತದಷ್ಟು ಕ್ಯಾಶ್ಬ್ಯಾಕ್ ಪಡೆಯಬಹುದು. ಅಂದರೆ ಸುಮಾರು ರೂ.2,049 ರಿಯಾಯಿತಿ ಪಡೆಯಬಹುದು. ಇದಲ್ಲದೇ, ಎಕ್ಸ್ಚೇಂಜ್ ಆಫರ್ನ ಅಡಿಯಲ್ಲಿ ರೂ.17,500 ರ ಮತ್ತೊಂದು ರಿಯಾಯಿತಿಯನ್ನು ಸಹ ಪಡೆಯಬಹುದು.
ಐಫೋನ್ 11 ಸ್ಪೆಷಲ್ ಫೀಚರ್ಸ್:
ಇತ್ತೀಚೆಗೆ ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಡೆಯಿತು. ಇದರಲ್ಲಿ ಆ್ಯಪಲ್ನ ಐಫೋನ್ 11 ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಆ ಸಂದರ್ಭದಲ್ಲಿ ಈ ಫೋನ್ಗಳಿಗೆ ಭಾರೀ ಬೇಡಿಕೆ ಇತ್ತು. ಐಫೋನ್ 11 ರ ಫೀಚರ್ಸ್ಗಳನ್ನು ನೋಡುವುದಾದರೆ, ಇದು 6.1-ಇಂಚಿನ ಲಿಕ್ವಿಡ್ ರೆಟಿನಾ HD ಡಿಸ್ಪ್ಲೇಯನ್ನು ಹೊಂದಿದೆ. ಇದು A13 ಬಯೋನಿಕ್ ಚಿಪ್ಸೆಟ್ನಿಂದ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್ಫೋನ್ನ ಹಿಂಭಾಗದಲ್ಲಿ ಡ್ಯುಯಲ್ 12MP ಸೆನ್ಸಾರ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 12MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ