• Home
  • »
  • News
  • »
  • tech
  • »
  • Flipkart Offer: ಫ್ಲಿಪ್‌ಕಾರ್ಟ್ ನೀಡಿದೆ ಭರ್ಜರಿ ಡಿಸ್ಕೌಂಟ್, ಕೇವಲ 23 ಸಾವಿರಕ್ಕೆ ಐಪೋನ್ 11​ ಖರೀದಿಸಬಹುದು

Flipkart Offer: ಫ್ಲಿಪ್‌ಕಾರ್ಟ್ ನೀಡಿದೆ ಭರ್ಜರಿ ಡಿಸ್ಕೌಂಟ್, ಕೇವಲ 23 ಸಾವಿರಕ್ಕೆ ಐಪೋನ್ 11​ ಖರೀದಿಸಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Iphone 11 Offer From Flipkart: 128 ಜಿಬಿ ಆವೃತ್ತಿಯ ಐಫೋನ್ 11 ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರು ಖರೀದಿಸಬಹುದಾಗಿದ್ದು ವಿನಾಯಿತಿಯ ಆಫರ್ ಅನ್ನು ಪಡೆಯಬಹುದಾಗಿದೆ.

  • Share this:

ಹಬ್ಬದ ಋತು (Festival Season) ಮುಕ್ತಾಯಗೊಂಡಿದ್ದರೂ ಕೆಲವೊಂದು ಇಕಾಮರ್ಸ್ (E Commerce) ವೆಬ್‌ಸೈಟ್‌ಗಳು ಹಬ್ಬದ ಮಾರಾಟವನ್ನು ಮುಂದುವರಿಸಿವೆ. ಡಿಸ್ಕೌಂಟ್ (Discount) ಹಾಗೂ ಇತರ ಆಕರ್ಷಕ ಆಫರ್‌ಗಳು (Offers)  ಹಲವಾರು ಸ್ಮಾರ್ಟ್‌ಫೋನ್‌ಗಳ ಮೇಲೆ ನಡೆಯುತ್ತಿದ್ದು ಐಫೋನ್ 11 ಸ್ಮಾರ್ಟ್‌ಫೋನ್ ಇದರಲ್ಲಿ ಒಳಗೊಂಡಿದೆ. ನೀವು ಐಫೋನ್ (IPhone) ಖರೀದಿಸಬೇಕೆಂದು ಬಹಳ ದಿನಗಳಿಂದ ಆಶಿಸಿಕೊಂಡಿದ್ದರೆ ಈ ಆಫರ್‌ಗಳನ್ನು ಬಳಸಿ ನಿಮ್ಮ ಮನದಾಸೆಯನ್ನು ಈಡೇರಿಸಿಕೊಳ್ಳಬಹುದಾಗಿದೆ. 64 ಜಿಬಿಯ ಕಪ್ಪು ಬಣ್ಣದ ಮೂಲ ಆವೃತ್ತಿಯ ಐಫೋನ್ 11, 4% ವಿನಾಯಿತಿಯೊಂದಿಗೆ ಹಾಗೂ ಎಕ್ಸ್‌ಚೇಂಜ್ ಆಯ್ಕೆ ಮತ್ತು ಬ್ಯಾಂಕ್ ಆಫರ್‌ಗಳೊಂದಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.


128 ಜಿಬಿ ಆವೃತ್ತಿಯ ಐಫೋನ್ 11 ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರು ಖರೀದಿಸಬಹುದಾಗಿದ್ದು ವಿನಾಯಿತಿಯ ಆಫರ್ ಅನ್ನು ಪಡೆಯಬಹುದಾಗಿದೆ. ವಿನಾಯಿತಿ ಹಾಗೂ ಎಕ್ಸ್‌ಚೇಂಜ್ ಆಫರ್ ಸಹಾಯದಿಂದ 64 ಜಿಬಿ ಐಫೋನ್ 11 ಅನ್ನು ರೂ 43900 ಮೂಲ ಬೆಲೆಯಿಂದ ರೂ 25,000 ಕ್ಕೆ ಖರೀದಿಸಬಹುದಾಗಿದೆ. ಐಫೋನ್ 11 ಬೆಲೆ ಕಡಿತ ವಿವರಗಳು, ಎಕ್ಸ್‌ಚೇಂಜ್ ಆಫರ್ ಹೇಗೆ ಅನ್ವಯವಾಗಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.


ಆ್ಯಪಲ್ ಐಫೋನ್ 11 ಫ್ಲಿಪ್‌ಕಾರ್ಟ್‌ನಲ್ಲಿ ಬೆಲೆ ಕಡಿತ: ಡಿಸ್ಕೌಂಟ್


4% ತ್ವರಿತ ಡಿಸ್ಕೌಂಟ್‌ನೊಂದಿಗೆ ಐಫೋನ್ 11 (64 ಜಿಬಿ ಆವೃತ್ತಿ) ರೂ 41,990 ಕ್ಕೆ ಲಭ್ಯವಿದೆ. ಫೋನ್‌ನ ರಿಟೇಲ್ ಬೆಲೆ ರೂ 43,900 ಅಂದರೆ ನೀವು ರೂ 1910 ಅನ್ನು ಐಫೋನ್ ಖರೀದಿಯಲ್ಲಿ ಉಳಿಸಬಹುದು. ಡಿಸ್ಕೌಂಟ್ ಹಾಗೂ ವಿನಿಮಯ ಆಫರ್ ಅನ್ನು ಖರೀದಿದಾರರು ಬಳಸಿಕೊಂಡಲ್ಲಿ, ಐಫೋನ್ 11 ನ 64 ಜಿಬಿಯ ಕಪ್ಪು ಬಣ್ಣದ ಆವೃತ್ತಿಯನ್ನು ಅಂದಾಜು ರೂ 25000 ಕ್ಕೆ ಖರೀದಿಸಬಹುದಾಗಿದೆ.


ಐಫೋನ್ 11 ಆವೃತ್ತಿಗಳ ಡಿವೈಸ್ ಬಣ್ಣ ಹಾಗೂ ಗಾತ್ರವನ್ನು ಅವಲಂಬಿಸಿ ಬೆಲೆ ವ್ಯತ್ಯಾಸ


ಐಫೋನ್ 11 ಆವೃತ್ತಿಗಳ ಬೆಲೆ ಡಿವೈಸ್ ಬಣ್ಣ ಹಾಗೂ ಗಾತ್ರವನ್ನು ಅವಲಂಬಿಸಿ ವ್ಯತ್ಯಾಸಗಳನ್ನು ಹೊಂದಿರುತ್ತದೆ. ಡಿವೈಸ್‌ನ 128 ಜಿಬಿ ಅವೃತ್ತಿಯು ಫ್ಲಿಪ್‌ಕಾರ್ಟ್‌ನಲ್ಲಿ 3% ಡಿಸ್ಕೌಂಟ್‌ನಂತೆ ರೂ 46,990 (ರಿಟೇಲ್ ಬೆಲೆ – ರೂ 48,900) ಕ್ಕೆ ದೊರೆಯುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ ಸುಭದ್ರ ಪ್ಯಾಕೇಜ್ ಶುಲ್ಕದಂತೆ ರೂ 29 ಅನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.


ಐಫೋನ್ 11 (64ಜಿಬಿ) ಕಪ್ಪು ಬಣ್ಣದ ಆವೃತ್ತಿಯ ಬೆಲೆಯನ್ನು ಫ್ಲಿಪ್‌ಕಾರ್ಟ್‌ನಲ್ಲಿರುವ ವಿನಿಮಯ ಆಫರ್ ಅನ್ನು ಬಳಸಿಕೊಂಡು ರೂ 18500 ರವರೆಗೆ ಬೆಲೆ ಕಡಿಮೆ ಮಾಡಬಹುದಾಗಿದೆ. ನೀವು ವಿನಿಮಯ ಮಾಡಲು ಆಯ್ಕೆಮಾಡಿರುವ ಡಿವೈಸ್ ಹಾಗೂ ಅದರ ನಿರ್ವಹಣೆಯ ಸ್ಥಿತಿಗತಿಗಳನ್ನು ಆಧರಿಸಿ ಎಕ್ಸ್‌ಚೇಂಜ್ ನೀತಿ ಕೆಲಸ ಮಾಡುತ್ತದೆ.


ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಅನಗತ್ಯ ಸಂದೇಶ ಕಳುಹಿಸಿದರೆ ದಂಡ! ಇದಕ್ಕಂತನೇ ಸರ್ಕಾರದಿಂದ ಸಮಿತಿ ರಚನೆ


ವಿನಿಮಯಕ್ಕೂ ಮೊದಲು ನಿಮ್ಮ ಡಿವೈಸ್ ಹಾಗೂ ನೀವಿರುವ ಸ್ಥಳ ಈ ಕೊಡುಗೆಗೆ ಅರ್ಹವಿದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಇದಕ್ಕಾಗಿ ನೀವು ಸ್ಥಳದ ಪಿನ್‌ಕೋಡ್ ಅನ್ನು ದಾಖಲಿಸಿದರೆ ಸಾಕು. ಅದೇ ರೀತಿ ನಿಮ್ಮ ಡಿವೈಸ್ ಯಾವುದೇ ಲೋಪದೋಷಗಳನ್ನು ಹೊಂದಿಲ್ಲ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.


ಫ್ಲಿಪ್‌ಕಾರ್ಟ್ ಐಫೋನ್ 11 ಗೆ ಹಲವಾರು ಬ್ಯಾಂಕ್ ಆಫರ್‌ಗಳನ್ನು ನೀಡಿದೆ: ಅವುಗಳ ವಿವರ ಹೀಗಿದೆ


  • ರೂ 5,000 ಹಾಗೂ ಅದಕ್ಕೂ ಮೇಲ್ಪಟ್ಟ ಬೆಲೆಯ ಆರ್ಡರ್‌ಗಳಿಗಾಗಿ ರೂ 1,500 ರವರೆಗೆ ವಿನಾಯಿತಿ, ಸಿಟಿ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ 10% ವಿನಾಯಿತಿ

  • ರೂ 5,000 ಹಾಗೂ ಅದಕ್ಕೂ ಮೇಲ್ಪಟ್ಟ ಬೆಲೆಯ ಆರ್ಡರ್‌ಗಳಿಗಾಗಿ ರೂ 2000 ವರೆಗೆ ವಿನಾಯಿತಿ, ಸಿಟಿ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ 10% ವಿನಾಯಿತಿ


ಇದನ್ನೂ ಓದಿ: ಇಂದು ರಾಷ್ಟ್ರೀಯ ಇಂಟರ್‌ನೆಟ್ ದಿನ, ಇನ್ನಾದರೂ ಅಂತರ್ಜಾಲ ಸೇವೆಗೆ ಸಿಗುತ್ತಾ ವೇಗ?

  • ರೂ 5,000 ಹಾಗೂ ಅದಕ್ಕೂ ಮೇಲ್ಪಟ್ಟ ಬೆಲೆಯ ಆರ್ಡರ್‌ಗಳಿಗಾಗಿ ರೂ 1500 ವರೆಗಿನ ವಿನಾಯಿತಿ, ಸಿಟಿ ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲೆ 10% ವಿನಾಯಿತಿ

  • ಫ್ಲಿಪ್‌ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ 5% ಕ್ಯಾಶ್‌ಬ್ಯಾಕ್.

Published by:Sandhya M
First published: