iphone 14 ಬಿಡುಗಡೆಯಾದ ಕೂಡಲೇ iphone 11 ಬಂದ್​?

ಐಫೋನ್ 11 ಸೀರಿಸ್‌ 2020 ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಆಗಿತ್ತು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಆ್ಯಪಲ್‌ (Apple) ಕಂಪನಿಯವರು ತಯಾರಿಸುವ ಹೊಸ ಹೊಸ ಐಫೋನ್ (iphone) ಸೀರಿಸ್‌ಗಳಿಗಾಗಿ ಐಫೋನ್ ಪ್ರಿಯರು ವರ್ಷಗಟ್ಟಲೆ ಕಾಯುತ್ತಲೇ ಇರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಕಳೆದ ಸಿರೀಸ್ ಐಫೋನ್‌ನಲ್ಲಿರುವ ಫೀಚರ್‌ಗಳಿಗಿಂತಲೂ ಯಾವೆಲ್ಲಾ ಹೊಸ ಹೊಸ ಫೀಚರ್‌ಗಳನ್ನು ಹೊಸ ಐಫೋನ್‌ನಲ್ಲಿ ಸೇರಿಸಿರುತ್ತಾರೆ ಅಂತ ಬಿಡುಗಡೆಗೂ ಮುಂಚಿತವಾಗಿ ತಿಳಿದುಕೊಳ್ಳಲು ಸಾಮಾಜಿಕ ಮಾಧ್ಯಮಗಳಲ್ಲಿ(Social Media) ಇರುವಂತಹ ಪೋಸ್ಟ್‌ಗಳನ್ನು ಜಾಲಾಡುವುದೇ ಈ ಐಫೋನ್ ಪ್ರಿಯರಿಗೆ ಒಂದು ರೀತಿಯ ಮಜಾ ನೀಡುತ್ತದೆ ಎಂದು ಹೇಳಬಹುದು.

ಅದರಲ್ಲೂ ಆ್ಯಪಲ್‌ ಐಫೋನ್ ಎಂದರೆ ಪ್ರತ್ಯೇಕವಾಗಿ ಹೇಳಬೇಕಿಲ್ಲ ನೋಡಿ. ಈಗಾಗಲೇ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಐಫೋನ್ 13 ಸೀರಿಸ್‌ ನಂತರ ಆ್ಯಪಲ್‌ ಐಫೋನ್ 14 ಸಿರೀಸ್ ಅನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಈ ಹೊಸ ಐಫೋನ್ ಸೀರೀಸ್ ಬಂದ ನಂತರ ಒಂದು ಹಳೆಯ ಸಿರೀಸ್ ಐಫೋನ್ ಅನ್ನು ಆ್ಯಪಲ್‌ ಕಂಪನಿ ಸಂಪೂರ್ಣವಾಗಿ ನಿಲ್ಲಿಸಲಿದೆ ಎಂಬ ವರದಿಗಳು ಸಹ ಕೇಳಿಬರುತ್ತಿವೆ.

ಈ ವರ್ಷಾಂತ್ಯಕ್ಕೆ ಐಫೋನ್​ 14 ಮಾರುಕಟ್ಟೆ

ಯಾವುದಪ್ಪಾ ಆ ಐಫೋನ್ ಮಾರುಕಟ್ಟೆಯಿಂದ ದೂರವಾಗುತ್ತಿರುವುದು ಎಂದು ನಿಮ್ಮ ತಲೆಯಲ್ಲಿ ಪ್ರಶ್ನೆಯೊಂದು ಕಾಡುತ್ತಿರಬಹುದು ಅಲ್ಲವೇ..? ಇಲ್ಲಿ ಹೇಳ್ತೀವಿ ನೋಡಿ.. ಐಫೋನ್ 14 ಸೀರಿಸ್ ಐಫೋನ್ ಬಿಡುಗಡೆಯೊಂದಿಗೆ, ಆ್ಯಪಲ್‌ ಐಫೋನ್ 11 ಅನ್ನು ನಿಲ್ಲಿಸುವ ಸಾಧ್ಯತೆಯಿದೆ ಅಂತೆ. ಇದು 2019 ರಲ್ಲಿ ಬಿಡುಗಡೆಯಾದಾಗಿನಿಂದ ಆ್ಯಪಲ್‌ಗೆ ಸಾಕಷ್ಟು ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಒಂದು ವೆಬ್‌ಸೈಟ್‌ನಲ್ಲಿ ಪ್ರಕಟವಾದ ಒಂದು ವರದಿಯ ಪ್ರಕಾರ, ಆ್ಯಪಲ್‌ ಈ ವರ್ಷದ ಕೊನೆಯಲ್ಲಿ ಐಫೋನ್ ಸೀರಿಸ್ ಅನ್ನು ಬಿಡುಗಡೆ ಮಾಡುವ ಮೂಲಕ ಐಫೋನ್ 11 ಅನ್ನು ನಿಲ್ಲಿಸಲಿದೆ ಎಂದು ತಿಳಿದುಬಂದಿದೆ.

ಐಫೋನ್​ 11ರ ಮೇಲೆ ಬೇರೆ ಫೋನ್​ಗಳ ಪ್ರಭಾವ

ಆ್ಯಪಲ್‌ ಕಂಪನಿಯ ಐಫೋನ್ 11 ಇನ್ನೂ ತನ್ನ ಇತ್ತೀಚಿನ ಹೊಸ ಮಾದರಿಯ ಐಫೋನ್ ಎಸ್ಇ 3 ಅಥವಾ ಐಫೋನ್ ಎಸ್ಇ 2022 ಗಾಗಿ ಮಾರಾಟವನ್ನು ಕಡಿಮೆ ಮಾಡುತ್ತಿದೆ ಎಂದು ಈ ರೀತಿಯ ನಿರ್ಧಾರವನ್ನು ಕಂಪನಿಯು ತೆಗೆದುಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಜನರು ದೊಡ್ಡ ಸ್ಕ್ರೀನ್ ಇರುವ ಐಫೋನ್‌ಗಳ ಮೇಲೆ ಹೆಚ್ಚಿನ ಒಲವು ತೋರಿಸುತ್ತಿರುವುದರಿಂದಲೂ ಸಹ ಐಫೋನ್ 11 ಇನ್ನೂ ಮಾರುಕಟ್ಟೆಯಲ್ಲಿ ಬೇರೆ ಐಫೋನ್‌ಗಳ ಮಾರಾಟದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: Samsung Galaxy M53 5G: 108MP ಕ್ಯಾಮೆರಾದೊಂದಿಗೆ ಮೋಡಿ ಮಾಡಲು ಬರುತ್ತಿದೆ ಸ್ಯಾಮ್​ಸಂಗ್​ನ ಹೊಸ ಸ್ಮಾರ್ಟ್​ಫೋನ್​!

2020ರಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್​ ಫೋನ್​ ಐಫೋನ್​ 11

ಐಫೋನ್ 11 ಸೀರಿಸ್‌ 2020 ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಆಗಿತ್ತು. ಈಗ, ಐಫೋನ್ 11 ಐಫೋನ್ ಎಸ್ಇ 2022 ಕ್ಕಿಂತ ಎರಡು ವರ್ಷಗಳಿಗಿಂತ ಹಳೆಯದಾಗಿದ್ದರೂ, ಅದರ ಡ್ಯುಯಲ್ ಕ್ಯಾಮೆರಾಗಳು ಮತ್ತು ದೊಡ್ಡ ಸ್ಕ್ರೀನ್‌ನಿಂದಾಗಿ ಇದು ಹೆಚ್ಚು ಮಾರಾಟವಾಗುತ್ತಿದೆ ಎಂದು ವರದಿಯಾಗಿದೆ.

ಐಫೋನ್ 12, ಐಫೋನ್ 14 ಸೀರಿಸ್‌ನ ಬಿಡುಗಡೆಯ ನಂತರ ಬೆಲೆಯಲ್ಲಿ ಮತ್ತಷ್ಟು ಕುಸಿತವನ್ನು ಕಾಣಬಹುದು ಎಂದು ವರದಿ ಹೇಳಿದೆ. ಐಫೋನ್ 13 ಬಿಡುಗಡೆಯ ನಂತರ ಆ್ಯಪಲ್‌ ಐಫೋನ್ 12 ಪ್ರೋ ಮಾದರಿಗಳನ್ನು ನಿಲ್ಲಿಸಿತ್ತು. ಆದರೆ ಸ್ಮಾರ್ಟ್‌ಫೋನ್‌ಗಳು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮತ್ತು ಇತರ ಚಿಲ್ಲರೆ ಮಾರಾಟಗಾರರಲ್ಲಿ ಖರೀದಿಗೆ ಇನ್ನೂ ಲಭ್ಯವಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: Iphone​ ಬಳಕೆದಾರರೇ, ನಿಮಗೆ ಸಿಗಲಿದೆ ಗೂಗಲ್ ಲಾಂಚ್ ಮಾಡಲಿರುವ 'ಸ್ವಿಚ್ ಟು ಆ್ಯಂಡ್ರಾಯ್ಡ್' ವೈಶಿಷ್ಟ್ಯ!

ಐಫೋನ್ 11 ಬಿಡುಗಡೆ ಆದದ್ದು ಯಾವಾಗ ಗೊತ್ತೇ?

ಐಫೋನ್ 11 ಪ್ರೋ ಮತ್ತು ಐಫೋನ್ 11 ಪ್ರೋ ಮ್ಯಾಕ್ಸ್ ಜೊತೆಗೆ 2019 ರಲ್ಲಿ ಐಫೋನ್ 11 ಅನ್ನು ಬಿಡುಗಡೆ ಮಾಡಲಾಯಿತು. ಐಫೋನ್ 11 6.1-ಇಂಚಿನ ಲಿಕ್ವಿಡ್ ರೆಟಿನಾ ಎಲ್‌ಸಿಡಿಯೊಂದಿಗೆ ನಾಚ್‌ನೊಂದಿಗೆ ಬರುತ್ತದೆ. ಇದು ಆ್ಯಪಲ್‌ ಎ13 ಬಯೋನಿಕ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದು ಎರಡು 12 ಮೆಗಾ ಪಿಕ್ಸೆಲ್ ಶೂಟರ್‌ಗಳನ್ನು ಸಹ ಒಳಗೊಂಡಿದೆ.

ಐಫೋನ್ 11 ಪ್ರಸ್ತುತ ಆ್ಯಪಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ 49,900 ರೂಪಾಯಿಗೆ ಮಾರಾಟಕ್ಕಿದೆ. ಐಫೋನ್ 11 ಖರೀದಿಸುವವರು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಎಕ್ಸ್‌ಚೇಂಜ್‌ ಮತ್ತು ಬ್ಯಾಂಕ್ ಕೊಡುಗೆಗಳ ಮೂಲಕ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು.
Published by:Seema R
First published: