ಆ್ಯಪಲ್ ಪ್ರಿಯರಿಗೆ ಸಿಹಿ ಸುದ್ದಿ..! ಸೆ.10 ರಂದು ಐಫೋನ್​ ಹೊಸ ಸೀರಿಸ್​ ಫೋನ್​ಗಳು ಮಾರುಕಟ್ಟೆಗೆ

ಸದ್ಯದಲ್ಲೇ ಮಾರುಕಟ್ಟೆಗೆ ಕಾಲಿರಿಸುತ್ತಿರುವ ಐಫೋನ್​ 11 ಪ್ರೊ 5.8 ಇಂಚಿನ ಒಎಲ್​ಇಡಿ ಸ್ಕ್ರೀನ್​ ಹೊಂದಿದೆ,

news18-kannada
Updated:September 9, 2019, 12:37 PM IST
ಆ್ಯಪಲ್ ಪ್ರಿಯರಿಗೆ ಸಿಹಿ ಸುದ್ದಿ..! ಸೆ.10 ರಂದು ಐಫೋನ್​ ಹೊಸ ಸೀರಿಸ್​ ಫೋನ್​ಗಳು ಮಾರುಕಟ್ಟೆಗೆ
ಐಫೋನ್​
  • Share this:
ಆ್ಯಪಲ್​ ಪ್ರಿಯರಿಗೆ ಸಂತಸದ ಸುದ್ದಿ..!. ಆ್ಯಪಲ್​ ಕಂಪೆನಿ ತಯಾರಿಸಿದ ಐಫೋನ್​ ಸರಣಿ ಸ್ಮಾರ್ಟ್​ಫೋನ್​ಗಳು ಸೆ.10 ರಂದು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಐಫೋನ್​ 11, ಐಫೋನ್​ 11 ಪ್ರೊ, ಐಫೋನ್​ 11 ಪ್ರೊ ಮ್ಯಾಕ್ಸ್​  ಸರಣಿ ​ಫೋನ್​ಗಳು ಗ್ರಾಹಕರ ಕೈ ಸೇರಲಿದೆ​. ಅಂತೆಯೇ, ನೂತನವಾಗಿ ತಯಾರಿಸಿರುವ ಮ್ಯಾಕ್​ಬುಕ್​ ಮತ್ತು ಐಪಾಡ್​ಗಳನ್ನು ಮುಂದಿನ ದಿನಗಳಲ್ಲಿ ಪರಿಚಯಿಸುವುದಾಗಿ ಕಂಪೆನಿ ತಿಳಿಸಿದೆ.

ಸದ್ಯದಲ್ಲೇ ಮಾರುಕಟ್ಟೆಗೆ ಕಾಲಿರಿಸುತ್ತಿರುವ ಐಫೋನ್​ 11 ಪ್ರೊ 5.8 ಇಂಚಿನ ಒಎಲ್​ಇಡಿ ಸ್ಕ್ರೀನ್​ ಹೊಂದಿದೆ, ಐಫೋನ್​ ಪ್ರೊ ಮ್ಯಾಕ್​ 6.8 ಇಂಚಿನ ಒಎಲ್​ಇಡಿ ಸ್ಕ್ರೀನ್​ ಅಳವಡಿಸಲಾಗಿದೆ. ಇವೆರಡು​ಫೋನ್​ ಗಳಿಗೆ ಆ್ಯಪಲ್​ ಪೆನ್ಸಿಲ್​ ಸಪೋರ್ಟ್​ ನೀಡುವಂತೆ ತಯಾರಿಸಲಾಗಿದೆ. ಜೊತೆಗೆ ಮುಂಭಾಗದಲ್ಲಿ 12 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಲಾಗಿದೆ. ಫೋನ್​ ಹಿಂಭಾಗದಲ್ಲಿ 12 ಮೆಗಾಫಿಕ್ಸೆಲ್​​​ ಟ್ರಿಪಲ್​​ ಕ್ಯಾಮೆರಾವನ್ನು ನೀಡಲಾಗಿದೆ. ಐಫೋನ್​ 11 ಪ್ರೊ ​ಫೋನ್​ನಲ್ಲಿ 3,190mAh ​ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದರ ಬೆಲೆ 71,860 ರೂಪಾಯಿ ಎಂದು ಅಂದಾಜಿಸಲಾಗಿದೆ. ಅಂತೆಯೇ ಐಫೋನ್​ 11 ಪ್ರೊ ಮ್ಯಾಕ್ಸ್​ ಫೋನ್​ 3,500mAh​ ಬ್ಯಾಟರಿಯನ್ನು ನೀಡಲಾಗಿದ್ದು, ಈ ಫೋನ್​ ಬೆಲೆಯನ್ನು 79,050 ರೂ. ಗೆ ಗ್ರಾಹಕರಿಗೆ ಸಿಗಲಿದೆ.

ಐಫೋನ್​
ಐಫೋನ್​


ಇದನ್ನೂ ಓದಿ: ಎವೊಲೆಟ್​​ ಎಲೆಕ್ಟ್ರಿಕ್​ ಸ್ಕೂಟರ್, ಬೈಕ್​​​​ ಬಿಡುಗಡೆ; 40 ಸಾವಿರದಿಂದ ಮಾರಾಟ ಪ್ರಾರಂಭ!


ಐಫೋನ್​ 11 ಫೋನ್​ 6.1 ಇಂಚಿನ ಎಲ್​ಸಿಡಿ ಸ್ಕ್ರೀನ್​​ ಹೊಂದಿದ್ದು, 4​GB RAM ಅಳವಡಿಸಿಕೊಂಡಿದೆ. ಐಫೋನ್​ 11 ಹಿಂಭಾಗದಲ್ಲಿ ಡ್ಯುವೆಲ್​ ಕ್ಯಾಮೆರಾ ಸೆಟಪ್​ ನೀಡಲಾಗಿದೆ. ಧೀರ್ಘಕಾಲದ ಬಳಕೆಗಾಗಿ 3,110mAh​ ಬ್ಯಾಟರಿಯನ್ನು ನೀಡಲಾಗಿದೆ.

ಸೆ.10 ರಂದು ಬಿಡುಗಡೆಯಾಗುತ್ತಿರುವ ಐಫೋನ್​ ಸರಣಿ ​ಫೋನ್​ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಹವಾ ಸೃಷ್ಠಿಸಲು ಸಿದ್ಧವಾಗಿದೆ. ಗ್ರಾಹಕರಿಗಾಗಿ ಈ ​ಫೋನ್​ಗಳನ್ನು ಸೆ. 20ರಂದು ಮಾರುಕಟ್ಟೆಯ ಮುಖಾಂತರ ಸಿಗಲಿದೆ.
First published:September 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ