• Home
  • »
  • News
  • »
  • tech
  • »
  • iPad OS 16: ಈಗಿರುವ ಲ್ಯಾಪ್ಟಾಪ್ ಗಳಿಗೆ ಕಾಂಪಿಟೀಟರ್ ಆಗಿ ಬಂದಿದ್ಯಂತೆ ಈ ಐಪ್ಯಾಡ್ ಒಎಸ್ 16

iPad OS 16: ಈಗಿರುವ ಲ್ಯಾಪ್ಟಾಪ್ ಗಳಿಗೆ ಕಾಂಪಿಟೀಟರ್ ಆಗಿ ಬಂದಿದ್ಯಂತೆ ಈ ಐಪ್ಯಾಡ್ ಒಎಸ್ 16

ಐಪ್ಯಾಡ್ ಒಎಸ್ 16

ಐಪ್ಯಾಡ್ ಒಎಸ್ 16

ಆಪಲ್ ಸಂಸ್ಥೆಯು ಐಪ್ಯಾಡ್ ಮೂಲಕ ಲ್ಯಾಪ್ಟಾಪುಗಳಿಗೆ ಪರ್ಯಾಯ ಹೊರತರಲು ಸಾಕಷ್ಟು ಕೆಲಸ ಮಾಡಿತು ಎಂದು ಹೇಳಬಹುದು. ಅದಕ್ಕೆಂದೇ ಸಂಸ್ಥೆಯು ಐಪ್ಯಾಡ್ ಒಎಸ್ ಅನ್ನು ಹಲವು ವೈಶಿಷ್ಠ್ಯಗಳೊಂದಿಗೆ ವಿನ್ಯಾಸಗೊಳಿಸಿ ಪರಿಚಯಿಸಿದೆ. ಆದಾಗ್ಯೂ, ಈ ಐಪ್ಯಾಡ್ ಒಎಸ್ ಗಳಲ್ಲಿ ಐಒಎಸ್ ಕೇಂದ್ರೀತ ತಂತ್ರಾಂಶವೇ ಇರುವುದನ್ನು ನಾವು ಗಮನಿಸಬಹುದು.

ಮುಂದೆ ಓದಿ ...
  • Share this:

ಹಿಂದೊಮ್ಮೆ ಲ್ಯಾಪ್ಟಾಪುಗಳಿಗೆ (Laptop) ಯಾವುದೂ ಸಮನಾಗಿಲ್ಲ ಎಂಬಂತಹ ನಿಖರ ಪರಿಸ್ಥಿತಿ ಇತ್ತು. ಆದರೆ, ಐಪ್ಯಾಡುಗಳು (iPad) ಮಾರುಕಟ್ಟೆಗೆ (Market) ಲಗ್ಗೆ ಇಟ್ಟ ನಂತರ ಆ ಪರಿಸ್ಥಿತಿ ಇಲ್ಲವಾಯಿತು. ಅಷ್ಟಕ್ಕೂ ಆಪಲ್ ಸಂಸ್ಥೆಯು (Apple Company) ಐಪ್ಯಾಡ್ ಮೂಲಕ ಲ್ಯಾಪ್ಟಾಪುಗಳಿಗೆ ಪರ್ಯಾಯ (Alternative) ಹೊರತರಲು ಸಾಕಷ್ಟು ಕೆಲಸ (Work) ಮಾಡಿತು ಎಂದು ಹೇಳಬಹುದು. ಅದಕ್ಕೆಂದೇ ಸಂಸ್ಥೆಯು ಐಪ್ಯಾಡ್ ಒಎಸ್ ಅನ್ನು ಹಲವು ವೈಶಿಷ್ಠ್ಯಗಳೊಂದಿಗೆ (Features) ವಿನ್ಯಾಸಗೊಳಿಸಿ (Design) ಪರಿಚಯಿಸಿದೆ (Introduced). ಆದಾಗ್ಯೂ, ಈ ಐಪ್ಯಾಡ್ ಒಎಸ್ ಗಳಲ್ಲಿ ಐಒಎಸ್ ಕೇಂದ್ರೀತ ತಂತ್ರಾಂಶವೇ ಇರುವುದನ್ನು ನಾವು ಗಮನಿಸಬಹುದು.


ಮಲ್ಟಿಟಾಸ್ಕಿಂಗ್ ಐಪ್ಯಾಡ್ ಒಎಸ್ 16
ಈಗ ಬಂದಿರುವ ಸುದ್ದಿಯ ಪ್ರಕಾರ, ಆಪಲ್ ಸಂಸ್ಥೆಯು ತನ್ನ ಐಪ್ಯಾಡ್ ಒಎಸ್ 16 ಆವೃತ್ತಿಗೆ ಹಲವು ವಿಶಿಷ್ಟ ಫೀಚರ್ಸ್ ಗಳನ್ನು ಸೇರಿಸಲಿದ್ದು ಅವು ಎಲ್ಲ ಬಗೆಯ ಮಲ್ಟಿಟಾಸ್ಕಿಂಗ್ ಮಾಡಲು ಸಕ್ಷಮವಾಗಿರುತ್ತವೆ ಎನ್ನಲಾಗಿದೆ.


ಹೊಸ ವೈಶಿಷ್ಠ್ಯಗಳು
ಬ್ಲೂಮ್ ಬರ್ಗ್ ಮಾಧ್ಯಮದ ಮಾರ್ಕ್ ಗುರ್ಮನ್ ಅವರ ಪ್ರಕಾರ, ಈಗಾಗಲೇ ಜೂನ್ 6 ರಂದು ನಡೆಯಲಿರುವ WWDC2022 ರ ಕಾರ್ಯಕ್ರಮದ ಪ್ರಮುಖಾಂಶವಾಗಿ ಆಪಲ್ ನೀಡಿರುವ ಹೇಳಿಕೆಯಲ್ಲಿ ಅದು ಹೊಸ ವೈಶಿಷ್ಠ್ಯಗಳನ್ನು ಪರಿಚಯಿಸಲಿದೆ ಎಂದು ತಿಳಿದುಬಂದಿದೆ. ಗುರ್ಮನ್ ಅವರು ಈ ಸಂದರ್ಭದಲ್ಲಿ ಐಪ್ಯಾಡ್ ಒಎಸ್ 16 ಆವೃತ್ತಿಯು ಲ್ಯಾಪ್ಟಾಪ್ ವೇದಿಕೆಗೆ ಹೊಸ ಆಯಾಮ ಕಲ್ಪಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Apple Phone: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆ್ಯಪಲ್ ಕಂಪನಿಗೆ ಎರಡನೇ ಸ್ಥಾನ; ಹಾಗಾದ್ರೆ ಮೊದಲನೇ ಸ್ಥಾನದಲ್ಲಿರುವುದು ಯಾವುದು?


ಹೊಸ ಬಗೆಯ ಪರದೆ
ಈ ಕುರಿತು ಪ್ರಕಟವಾದ ವರದಿಯ ಪ್ರಕಾರ, ಹೊಸ ಐಪ್ಯಾಡ್ ಆವೃತ್ತಿಯು ಹೊಸ ಬಗೆಯ ಪರದೆಯನ್ನು ಹೊಂದಲಿದ್ದು ಅದು ಹಲವು ಮಲ್ಟಿ ಟಾಸ್ಕಿಂಗ್ ಗಳನ್ನು ನಿರ್ವಹಿಸಲು ಸಹಾಯ ಮಾಡಲಿದೆ. ಬಳಕೆದಾರರು ತಮ್ಮ ಆಪ್ ವಿಂಡೋವ್ಸ್ ಗಳನ್ನು ಮರು ಆಕಾರ ಹೊಂದಿಸಲು ಅನುವು ಮಾಡಿಕೊಡುವುದಲ್ಲದೆ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಆಪ್ ಗಳನ್ನು ಇದರಲ್ಲಿ ತೆರೆಯಬಹುದಾಗಿದೆ ಎಂದು ತಿಳಿಸಲಾಗಿದೆ. ಈ ಎಲ್ಲ ಬದಲಾವಣೆಗಳು ಐಪ್ಯಾಡ್ ಅನ್ನು ಒಂದು ಸಮರ್ಥ ಲ್ಯಾಪ್ಟಾಪ್ ಪರ್ಯಾಯವನ್ನಾಗಿ ಬದಲಾಯಿಸಲಿದೆಯೆ?


ಐಪ್ಯಾಡ್ ಏರ್ ಅನ್ನು M1 ಚಿಪ್ಸೆಟ್ ನಿಂದ ಅಪ್ಗ್ರೇಡ್
ಇದಕ್ಕೆ ತ್ವರಿತವಾಗಿ ಉತ್ತರ ನೀಡುವುದು ಅಷ್ಟೊಂದು ಸುಲಭವಾಗಿಲ್ಲ. ಆದರೂ ಆಪಲ್ ಸಂಸ್ಥೆಯು ಈ ದಿಕ್ಕಿನಲ್ಲಿ ನಿಧಾನವಾಗಿ ಆದರೆ ಗಟ್ಟಿಯಾಗಿ ಹೆಜ್ಜೆ ಇಡುತ್ತಿದೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ. ಈ ವರ್ಷ ಆಪಲ್ ತನ್ನ ಐಪ್ಯಾಡ್ ಏರ್ ಅನ್ನು M1 ಚಿಪ್ಸೆಟ್ ನಿಂದ ಅಪ್ಗ್ರೇಡ್ ಮಾಡಿದೆ ಹಾಗೂ ಇದರಿಂದಾಗಿ ಐಪ್ಯಾಡ್ ಏರ್ ಐಪ್ಯಾಡುಗಳು ಸದ್ಯ ಪ್ರಬಲವಾಗಿರುವ ಐಪ್ಯಾಡ್ ಪ್ರೋಗಳಿಗೆ ಹೆಚ್ಚಿನ ಸಾಮ್ಯತೆ ಹೊಂದಿದಂತಾಗಿದೆ. ಇದು ಆಪಲ್ ತನ್ನ ಮುಂದಿನ ಅವತರಣಿಕೆಗಳಲ್ಲಿ ಇನ್ನಷ್ಟು ಗಟ್ಟಿತನ ತರಬಹುದಾದ ಸಂದರ್ಭಗಳನ್ನು ಸೂಚಿಸುತ್ತಿದೆ.


ಇದನ್ನೂ ಓದಿ: Free Entertainment: ಉಚಿತವಾಗಿ ಸಿನಿಮಾ, ವೆಬ್​ ಸೀರಿಸ್​ ನೋಡಬೇಕಾ? ಹಾಗಿದ್ರೆ ಈ 5 ಆ್ಯಪ್​ಗಳನ್ನು ಇನ್​ಸ್ಟಾಲ್​ ಮಾಡಿಕೊಳ್ಳಿ


ಇನ್ನು, ಗುರ್ಮನ್ ಅವರು ಈ ಹಿಂದೆ ಮಾಡಿರುವ ವರದಿಗಳನ್ನು ಅವಲೋಕಿಸಿದರೆ ಬಹುಪಾಲು ಅವರು ತಮ್ಮ ಕರಾರುವಕ್ಕಾದ ವರದಿಗೆ ಹೆಸರುವಾಸಿಯಾಗಿದ್ದಾರೆ. ಹಾಗಾಗಿ ಆಪಲ್ ಸಂಸ್ಥೆಯು ತಾನು ಮುಂದೆ ಹೊರತರಲಿರುವ ಐಪ್ಯಾಡ್ ಒಎಸ್ ಬಗ್ಗೆಯೂ ಗುರ್ಮನ್ ಅವರು ಮಾಡಿರುವ ವರದಿ ಹೆಚ್ಚು ಸತ್ಯವಾಗಿರಬಹುದಾದ ಸಾಧ್ಯೆತೆ ಹೆಚ್ಚೆಂದೇ ಭಾವಿಸಲಾಗುತ್ತಿದೆ. ಆದಾಗ್ಯೂ, ಆಪಲ್ ಅವರ ಕೆಲವು ತಿಂಗಳುಗಳಷ್ಟು ಹಳೆಯದಾಗಿರುವ M1 ಚಿಪ್ಸೆಟ್ ಆಧಾರಿತ ಐಪ್ಯಾಡ್ ಏರ್ ಹಾಗೂ ಇತರೆ ಏರ್ ಮಾದರಿಗಳನ್ನು ಹೋಲಿಸಿದರೆ ಮುಂದೆ ಸಂಸ್ಥೆಯು ಏನೆಲ್ಲ ವೈಶಿಷ್ಠ್ಯಗಳನ್ನು ಸೇರಿಸಲಿದೆ ಎಂಬುದು ಕುತೂಹಲದ ವಿಷಯವಾಗಿ ತಿಳಿದಿದೆ.


WWDC2022 ಕೀನೋಟ್ ಕಾರ್ಯಕ್ರಮ
ಅಲ್ಲದೆ, WWDC2022 ಕೀನೋಟ್ ಕಾರ್ಯಕ್ರಮವು ಇನ್ನೇನು ಕೆಲ ದಿನಗಳಲ್ಲಿ ನಡೆಯಲಿದ್ದು ಅದಕ್ಕಾಗಿ ಸಾಕಷ್ಟು ಸಮಯ ಕಾಯಬೇಕಾದ ಅಗತ್ಯವಿಲ್ಲ. ಅಷ್ಟಕ್ಕೂ ಈ ಕಾರ್ಯಕ್ರಮದಲ್ಲಿ ಆಪಲ್ ತನ್ನ ಯಾವೆಲ್ಲ ಹೊಸ ವೈಶಿಷ್ಟ್ಯಗಳನ್ನು ಸೇರಿಸಲಿದೆ ಎಂಬುದು ಇನ್ನಷ್ಟು ಅಧಿಕೃತವಾಗಿ ಸ್ಪಷ್ಟವಾಗಬಹುದು. ಒಟ್ಟಿನಲ್ಲಿ ಹೇಳಬೇಕೆಂದರೆ ಆಪಲ್ ನಿಧಾನವಾಗಿ ಹೊಸ ವೇದಿಕೆಯ ಸೃಷ್ಟಿಯತ್ತ ತನ್ನ ಹೆಜ್ಜೆ ಇಡುತ್ತಿದೆ ಎಂಬುದಷ್ಟೆ ಈಗ ಭಾಸವಾಗುತ್ತಿದ್ದು ಈ ಬಗ್ಗೆ ಮುಂದಿನ ಸಮಯಗಳಲ್ಲಿ ಹೆಚ್ಚಿನ ಸ್ಪಷ್ಟನೆ ಸಿಗಬಹುದು.
ವಿರ್ಸನ್ ವರ್ಷನ್

Published by:Ashwini Prabhu
First published: