iOS 15, iPadOS 15 ಅಪರೇಟಿಂಗ್ ಸಿಸ್ಟಮ್ ಅಪ್​ಡೇಟ್​ ಮಾಡಿದ್ರಾ? ಹಾಗಿದ್ರೆ ಈ ಫೀಚರ್ಸ್​ ಸಿಗಬೇಕಲ್ವಾ..

Apple iOS 15: ಹೊಸ ಅಪರೇಟಿಂಗ್ ಸಿಸ್ಟಮ್ ಹೊಸ ವೈಶಿಷ್ಟ್ಯಗಳಾದ ಫೋಕಸ್ ಮೋಡ್, ಲೈವ್ ಟೆಕ್ಸ್ಟ್, ಶೇರ್‌ಪ್ಲೇ, ಹಾಗೂ ಇನ್ನಷ್ಟು ವಿಶೇಷತೆಗಳನ್ನೊಳಗೊಂಡಿದ್ದು ಐಫೋನ್ 6s ಹಾಗೂ ನಂತರದ ಆವೃತ್ತಿಗಳ ಬಳಕೆದಾರರಿಗೂ ಲಭ್ಯವಾಗಲಿದೆ.

Apple iOS 15

Apple iOS 15

  • Share this:

Apple iOS 15: ಕೊನೆಗೂ ಆ್ಯಪಲ್ iOS 15 ಹಾಗೂ iPadOS 15 ಅಪರೇಟಿಂಗ್ ಸಿಸ್ಟಮ್ ಅನ್ನು ಐಫೋನ್ ಹಾಗೂ ಐಪ್ಯಾಡ್ ಬಳಕೆದಾರರಿಗೆ ಬಿಡುಗಡೆ ಮಾಡಲಾರಂಭಿಸಿದೆ. ಈ ಹೊಸ ಅಪರೇಟಿಂಗ್ ಸಿಸ್ಟಮ್ ಹೊಸ ವೈಶಿಷ್ಟ್ಯಗಳಾದ ಫೋಕಸ್ ಮೋಡ್, ಲೈವ್ ಟೆಕ್ಸ್ಟ್, ಶೇರ್‌ಪ್ಲೇ, ಹಾಗೂ ಇನ್ನಷ್ಟು ವಿಶೇಷತೆಗಳನ್ನೊಳಗೊಂಡಿದ್ದು ಐಫೋನ್ 6s (Iphone 6s) ಹಾಗೂ ನಂತರದ ಆವೃತ್ತಿಗಳ ಬಳಕೆದಾರರಿಗೂ ಲಭ್ಯವಾಗಲಿದೆ. ಇದಲ್ಲದೆ iPad OS 15 ಹೋಮ್ ಸ್ಕ್ರೀನ್ ವಿಜೆಟ್‌ಗಳನ್ನು ಐಪ್ಯಾಡ್‌ಗಳಿಗೆ ತರುತ್ತಿದ್ದು ಫೇಸ್‌ಟೈಮ್ ಹಾಗೂ ಇನ್ನಷ್ಟು ಫೀಚರ್‌ಗಳಿಗೆ ಅಪ್‌ಡೇಟ್‌ಗಳನ್ನು ನೀಡಲಿದೆ. ನ್ಯೂಸ್ 18ಗೆ ಲಭ್ಯವಾಗಿರುವ ಮಾಹಿತಿಯಂತೆ ಐಫೋನ್ 12 ಮಿನಿಗಾಗಿ iOS 15 ಅಪ್‌ಡೇಟ್ 3.11GB ಗಾತ್ರದಲ್ಲಿ ಬರಲಿದೆ ಎಂದಾಗಿದೆ.


ಯಾವೆಲ್ಲಾ ಐಫೋನ್ (Iphone) ಡಿವೈಸ್‌ಗಳಿಗೆ ಅಪರೇಟಿಂಗ್ ಸಿಸ್ಟಮ್ ಲಭ್ಯವಿದೆ?


iOS 15 ಹಾಗೂ iPadOS 15 ಸಾಫ್ಟ್‌ವೇರ್‌ಗಳನ್ನು ಆ್ಯಪಲ್ ಜೂನ್ 2021ರ ಕಂಪನಿಯ ವರ್ಲ್ಡ್ ವೈಡ್ ಡೆವಲಪರ್ ಕಾನ್ಫರೆನ್ಸ್‌ನಲ್ಲಿ (WWDC) ಪರಿಚಯಿಸಿದ್ದು ಕ್ಯಾಲಿಫೋರ್ನಿಯಾ ಸ್ಟ್ರೀಮಿಂಗ್ ಈವೆಂಟ್‌ನಲ್ಲಿ ಸಂಸ್ಥೆಯು ಐಫೋನ್ 13 ಸೀರೀಸ್ ಅನ್ನು ಲಾಂಚ್ ಮಾಡಿತ್ತು.


ಆ್ಯಪಲ್ iOS 15, iPhone 6sನಾಚೆಗಿನ ಎಲ್ಲಾ ಐಫೋನ್‌ಗೂ ಲಭ್ಯವಿದೆ. ಇನ್ನಷ್ಟು ವಿವರವಾಗಿ ಹೇಳಬೇಕೆಂದರೆ ಐಫೋನ್ SE (Gen 1), ಐಫೋನ್ SE (2020), ಐಫೋನ್ 6s, ಐಫೋನ್ 6s ಪ್ಲಸ್, ಐಫೋನ್ 7, ಐಫೋನ್ 7 ಪ್ಲಸ್, ಐಫೋನ್ 8, ಐಫೋನ್ 8 ಪ್ಲಸ್, ಐಫೋನ್ X, ಐಫೋನ್ Xs, ಐಫೋನ್ Xs ಮ್ಯಾಕ್ಸ್, ಐಫೋನ್ 11, ಐಫೋನ್ 11 Pro, ಐಫೋನ್ 11 Pro Max, ಐಫೋನ್ 12, ಐಫೋನ್ 12 Mini, ಐಫೋನ್ 12 Pro, ಐಫೋನ್ 12 Pro Max, ಐಫೋನ್ 13, ಐಫೋನ್ 13 Mini, ಐಫೋನ್ 13 Pro, ಹಾಗೂ ಐಫೋನ್ 13 Pro Max - ಮೂಲತಃ ಐಫೋನ್ 6s, iOS 15 ಅನ್ನು ಬೆಂಬಲಿಸುತ್ತದೆ.


ನಿಮ್ಮ ಐಫೋನ್ ಇತ್ತೀಚಿನ ಅಪ್‌ಡೇಟ್ ಕುರಿತು ಅಧಿಸೂಚನೆಯನ್ನು ನೀಡದೇ ಇದ್ದಲ್ಲಿ ಸೆಟ್ಟಿಂಗ್ಸ್‌ನಲ್ಲಿ ಅಪ್‌ಡೇಟ್ ಅನ್ನು ಪರಿಶೀಲಿಸಬಹುದಾಗಿದೆ. ನೀವು ಸೆಟ್ಟಿಂಗ್ಸ್ > ಜನರಲ್ > ಸಾಫ್ಟ್‌ವೇರ್ ಅಪ್‌ಡೇಟ್ ಈ ಮೂಲಕ ಪರಿಶೀಲಿಸಬಹುದಾಗಿದೆ.


ಫೋಕಸ್ ಮೋಡ್:


ಆ್ಯಪಲ್‌ನ ಪ್ರಸ್ತುತ ಡು ನಾಟ್ ಡಿಸ್ಟರ್ಬ್ ಫೀಚರ್‌ನಂತೆಯೇ ಫೋಕಸ್ ಮೋಡ್ ಕೂಡ ನಿರ್ದಿಷ್ಟ ಆ್ಯಪ್‌ಗಳನ್ನು ಸ್ಥಾಪಿಸಲು ಹಾಗೂ ನಿರ್ದಿಷ್ಟ ಸಮಯದಲ್ಲಿ ಸಂಪರ್ಕಗಳಿಗೆ ಪಿಂಗ್ ಮಾಡಲು ಅನುವು ಮಾಡಿಕೊಡುತ್ತದೆ. ಐಫೋನ್‌ನ ಹೋಮ್ ಸ್ಕ್ರೀನ್‌ನಲ್ಲಿ ಆ್ಯಪ್‌ಗಳನ್ನು ಹಾಗೂ ವಿಜೆಟ್‌ಗಳನ್ನು ಆರ್ಗನೈಸ್ ಮಾಡಲು ಸಹಕಾರಿಯಾಗಿದೆ.


ಫೇಸ್‌ಟೈಮ್ ಅಪ್‌ಡೇಟ್:


ಕೋವಿಡ್-19 ಸಾಂಕ್ರಾಮಿಕವು ಉದ್ಯೋಗ, ಶಿಕ್ಷಣ ಹಾಗೂ ಬಿಸ್‌ನೆಸ್ ಕಾರ್ಯಗಳಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದೆ. ಹೀಗಾಗಿ ಈ ನಿಟ್ಟಿನಲ್ಲಿಯೇ ಆ್ಯಪಲ್ ತನ್ನ ವಿಡಿಯೋ ಕಾಲಿಂಗ್ ಸಾಫ್ಟ್‌ವೇರ್ ಐಓಎಸ್ 15ನಲ್ಲಿ ಅಪ್‌ಡೇಟ್‌ಗಳನ್ನು ತಂದಿದೆ. ಜೂಮ್‌ನಿಂದ ಪ್ರೇರಣೆಗೊಂಡು ಫೇಸ್‌ಟೈಮ್ ಇದೀಗ ವಿಡಿಯೋ ಕಾಲ್ ಅನ್ನು ಗ್ರಿಡ್ ವ್ಯೂನಲ್ಲಿ ಪ್ರಸ್ತುಪಡಿಸಲಿದೆ. ಇನ್ನೊಂದು ಮಹತ್ತರ ಅಪ್‌ಡೇಟ್ ಏನೆಂದರೆ ಆ್ಯಪಲ್ ಡಿವೈಸ್ ಬಳಸದೇ ಇರುವ ಬಳಕೆದಾರರನ್ನು ಕೂಡ ಫೇಸ್‌ಟೈಮ್‌ಕಾಲ್‌ಗಳಿಗೆ ಸೇರಿಸುವುದಾಗಿದೆ. ಬಳಕೆದಾರರು ಫೇಸ್‌ಟೈಮ್ ಲಿಂಕ್‌ಗಳನ್ನು ರಚಿಸಬಹುದಾಗಿದ್ದು ಹಾಗೂ ಶೇರ್ ಮಾಡಬಹುದಾಗಿದ್ದು ವಿಡಿಯೋ ಚಾಟ್‌ಗಾಗಿ ಇತರರನ್ನು ಆಹ್ವಾನಿಸಬಹುದಾಗಿದೆ. ಈ ಕರೆಗಳು ಎಂಡ್‌-ಟು-ಎಂಡ್ ಎನ್‌ಕ್ರಿಪ್ಟ್ ಆಗಿರುತ್ತವೆ ಎಂದು ಸ್ವತಃ ಸಂಸ್ಥೆಯೇ ಹೇಳಿದೆ.


ಲೈವ್‌ಟೆಕ್ಸ್ಟ್:


ಫೋಟೋಗಳಲ್ಲಿ ಹೊಚ್ಚಹೊಸ ಲೈವ್ ಟೆಕ್ಸ್ಟ್ ಫೀಚರ್ ಅಪ್‌ಡೇಟ್ ಅನ್ನು iOS15 ತಂದಿದ್ದು ಇದರಿಂದ ಬಳಕೆದಾರರು ಚಿತ್ರದಲ್ಲಿರುವ ಸಂಖ್ಯೆಗಳನ್ನು ಹಾಗೂ ಪಠ್ಯಗಳನ್ನು ನಕಲಿಸಬಹುದಾಗಿದೆ. ಲೈವ್ ಟೆಕ್ಸ್ಟ್ ಫೋಟೋಗಳು, ಸ್ಕ್ರೀನ್‌ಶಾಟ್‌ಗಳು, ಸಫಾರಿ ಹಾಗೂ ಕ್ಯಾಮೆರಾ ಆ್ಯಪ್‌ನಲ್ಲಿ ಕಾರ್ಯನಿರ್ವಹಿಸಲಿದೆ.


ಶೇರ್‌ಪ್ಲೇ:


ಸಾಂಕ್ರಾಮಿಕದಿಂದಾಗಿ ನಾವು ನಮ್ಮ ಸ್ನೇಹಿತರು ಹಾಗೂ ಬಂಧುಮಿತ್ರರಿಂದ ದೂರವೇ ಉಳಿದಿದ್ದೇವೆ. ಹಾಗಾಗಿ ಆ್ಯಪಲ್ ಶೇರ್‌ಪ್ಲೇ ಪರಿಚಯಿಸಿದ್ದು ಈ ಸಾಫ್ಟ್‌ವೇರ್ ಮೂಲಕ ಚಲಚಿತ್ರಗಳನ್ನು, ಹಾಡುಗಳನ್ನು ಹಾಗೂ ಸ್ಕ್ರೀನ್ ಅನ್ನು ಫೇಸ್‌ಟೈಮಿಂಗ್‌ ಬಳಕೆದಾರರ ಮೂಲಕ ಶೇರ್ ಮಾಡಬಹುದಾಗಿದೆ.


ಆ್ಯಪಲ್ ಮ್ಯಾಪ್ಸ್:


ಆ್ಯಪಲ್ ಮ್ಯಾಪ್ಸ್ ಕೂಡ ಹೊಸ ಫೀಚರ್‌ಗಳನ್ನು ಪಡೆದುಕೊಳ್ಳಲಿದೆ. ರಸ್ತೆ ಬಣ್ಣಗಳು, ಚಾಲನಾ ನಿರ್ದೇಶನ, 3ಡಿ ಲ್ಯಾಂಡ್‌ಮಾರ್ಕ್‌ಗಳು ಹೀಗೆ ಸುಧಾರಿತ ನೈಟ್‌ ಮೋಡ್‌ನೊಂದಿಗೆ ಅಪ್‌ಡೇಟ್‌ಗಳನ್ನು ಪಡೆದುಕೊಳ್ಳಲಿದೆ. ಆ್ಯಪಲ್ ಆರ್ಗ್ಯುಮೆಂಟೆಡ್ ರಿಯಾಲಿಟಿ ಫೀಚರ್ ಅನ್ನು ಮ್ಯಾಪ್‌ನಲ್ಲಿ ಅಳವಡಿಸಲಿದ್ದು ಈ ಫೀಚರ್ ಮೂಲಕ ಐಫೋನ್ ಕ್ಯಾಮೆರಾ ಬಳಸಿಕೊಂಡು ಸಮೀಪದ ಪ್ರದೇಶಗಳಲ್ಲಿರುವ ಕಟ್ಟಡಗಳನ್ನು ಸ್ಕ್ಯಾನ್ ಮಾಡಬಹುದಾಗಿದೆ.


Read Also⇒ Lucid Air Dream: ಟೆಸ್ಲಾವನ್ನ ಹಿಂದಿಕ್ಕಿದ ಲೂಸಿಡ್ ಏರ್ ಡ್ರೀಮ್ ಕಾರು! ಒಂದು ಬಾರಿ ಚಾರ್ಜ್​ ಮಾಡಿದರೆ 836 ಕಿ.ಮೀ ಕ್ರಮಿಸುತ್ತೆ!

ಅಧಿಸೂಚನೆ ಪಟ್ಟಿ (ನೋಟಿಫಿಕೇಶನ್ ಬಾರ್):


iOS 15 ಹೊಸ ನಿರ್ವಹಿಸಲಾದ ಫೀಚರ್‌ಗಳೊಂದಿಗೆ ಬರಲಿದ್ದು ನಿರ್ದಿಷ್ಟ ಸಮಯಂದು ಮುಖ್ಯವಲ್ಲದ ಸೂಚನೆಗಳನ್ನು ಪರಿಶೀಲಿಸಲು ಬಳಕೆದಾರರಿಗೆ ನೋಟಿಫಿಕೇಶನ್ ಸಮ್ಮರಿ ಅನುವು ಮಾಡಿಕೊಡಲಿದೆ. ಡಿವೈಸ್ ಮೆಶಿನ್ ಲರ್ನಿಂಗ್ ಮೂಲಕ ಫಂಕ್ಶನ್ ಮಾರ್ಗದರ್ಶನ ಪಡೆಯಲಿದ್ದು ಇದು ಫೋನ್ ಬಳಕೆ ನಮೂನೆಯನ್ನು ಗುರುತಿಸುತ್ತದೆ ಮತ್ತು ಯಾವ ಅಧಿಸೂಚನೆಗಳು ಸಮ್ಮರಿಯಲ್ಲಿ ಬರಲಿವೆ ಹಾಗೂ ಅವುಗಳನ್ನು ಯಾವಾಗ ತಲುಪಿಸಬೇಕು ಎಂಬುದನ್ನು ಆಯ್ಕೆಮಾಡುತ್ತದೆ. ಈ ವರ್ಗದಲ್ಲಿ ಮಿಸ್ ಕಾಲ್‌ಗಳು ಹಾಗೂ ಮೆಸೇಜ್‌ಗಳು ಬರುವುದಿಲ್ಲ ಎಂಬುದನ್ನು ಗಮನಿಸಬೇಕಾಗಿದೆ.

ಐಮೆಸೇಜ್:


iOS 15 ಸುಧಾರಿತ ಐಮೆಸೇಜ್‌ನೊಂದಿಗೆ ಬಂದಿದ್ದು ಸಂಪರ್ಕಗಳಿಂದ ನಿಮ್ಮೊಂದಿಗೆ ಹಂಚಿಕೊಳ್ಳಲಾದ ಸುದ್ದಿ ಲೇಖನಗಳು, ಚಿತ್ರಗಳು, ಪ್ಲೇಲಿಸ್ಟ್‌ಗಳನ್ನು “ನಿಮ್ಮೊಂದಿಗೆ ಶೇರ್ ಮಾಡಲಾಗಿದೆ” ಫೋಲ್ಡರ್‌ನಲ್ಲಿ ಸಂಗ್ರಹಗೊಳ್ಳಲಿದೆ.


First published: