ತಂತ್ರಜ್ಞಾನ ಯುಗದಲ್ಲಿ (Technology) ಕೃತಕಬುದ್ಧಿಮತ್ತೆ (AI) ಇಂದು ಹೂಡಿಕೆಯ ತಾಣ ಎಂದೆನಿಸಿದ್ದು ಮೈಕ್ರೋಸಾಫ್ಟ್, ಗೂಗಲ್ ನಂತರ, ಇದೀಗ ಮೆಟಾ ಕೂಡ ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence)) ಮೇಲೆ ಕೇಂದ್ರೀಕರಿಸಿದೆ. ಈ ಹೊಸ ಮಾದರಿಯಿಮದ ಉನ್ನತ ಮಟ್ಟದ ಉತ್ಪನ್ನ ಗುಂಪನ್ನು ರಚಿಸುವತ್ತ ದೃಷ್ಟಿ ಹರಿಸಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸುತ್ತ ಆನಂದಕರ ಅನುಭವಗಳನ್ನು ನಿರ್ಮಿಸುವ ಕಡೆಗೆ ಸಂಸ್ಥೆ ಇದೀಗ ಗಮನ ಹರಿಸಿದ್ದು, ಉತ್ಪಾದಕ AI ನಲ್ಲಿ ಕಾರ್ಯನಿರ್ವಹಿಸುವ ಬಹಳಷ್ಟು ತಂಡಗಳನ್ನು ಇದಕ್ಕಾಗಿ ರಚಿಸಿದ್ದೇವೆ ಎಂದು ಜುಕರ್‌ಬರ್ಗ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಬಹು-ಮಾದರಿ ಅನುಭವಗಳೊಂದಿಗೆ ಸುಧಾರಣೆ
ದೀರ್ಘಾವಧಿಯಲ್ಲಿ, ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುವ AI ವ್ಯಕ್ತಿತ್ವಗಳನ್ನು ಅಭಿವೃದ್ಧಿಪಡಿಸಲು ನಾವು ಗಮನಹರಿಸುತ್ತೇವೆ ಎಂದು ಜುಕರ್‌ಬರ್ಗ್ ತಿಳಿಸಿದ್ದು, "ನಾವು ಚಿತ್ರಗಳೊಂದಿಗೆ ಪಠ್ಯದೊಂದಿಗೆ (ವಾಟ್ಸ್ ಆ್ಯಪ್ ಮತ್ತು ಮೆಸೆಂಜರ್‌ನಲ್ಲಿ ಚಾಟ್ ಅನುಭವಗಳನ್ನು ಅನ್ವೇಷಿಸುತ್ತಿದ್ದೇವೆ), (ಸೃಜನಶೀಲ ಇನ್‌ಸ್ಟಾಗ್ರಾಮ್ ಫಿಲ್ಟರ್‌ಗಳು ಮತ್ತು ಜಾಹೀರಾತು ಸ್ವರೂಪಗಳು), ಮತ್ತು ವಿಡಿಯೋ ಮತ್ತು ಬಹು-ಮಾದರಿ ಅನುಭವಗಳೊಂದಿಗೆ ಸುಧಾರಿಸುತ್ತಿದ್ದೇವೆ ಎಂದು ಜುಕರ್‌ಬರ್ಗ್ ತಿಳಿಸಿದ್ದಾರೆ.
ಹೊಸ ಉತ್ಪನ್ನ ತಂಡವು ಮೆಟಾದ ಮುಖ್ಯ ಉತ್ಪನ್ನ ಅಧಿಕಾರಿ ಕ್ರಿಸ್ ಕಾಕ್ಸ್‌ಗೆ ವರದಿ ಮಾಡುತ್ತದೆ ಎಂದು ಕಂಪೆನಿಯ ವಕ್ತಾರರು ಖಚಿತಪಡಿಸಿದ್ದಾರೆ. ಇದು ಮೆಟಾ ಉತ್ಪನ್ನಗಳಲ್ಲಿ AI ಸಂಶೋಧನಾ ತಂಡದ ಸಂಶೋಧನೆಗಳನ್ನು ಹೆಚ್ಚು ವೇಗವಾಗಿ ಕಾರ್ಯಗತಗೊಳಿಸಲು ಮೆಟಾವನ್ನು ಸಕ್ರಿಯಗೊಳಿಸುತ್ತದೆ ಎಂದು ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಸಣ್ಣ ವ್ಯಾಪಾರಿಗಳಿಗೆ ಸೋಶಿಯಲ್ ಮೀಡಿಯಾಗಳಿಂದ ಏನು ಲಾಭ? ಇವುಗಳಿಂದ ಉತ್ಪನ್ನ ಪ್ರಚಾರ ಮಾಡುವುದು ಹೇಗೆ?
ಕೃತಕ ಬುದ್ಧಿಮತ್ತೆಗೆ ಟೆಕ್ ಸಂಸ್ಥೆಗಳ ಕೊಡುಗೆ
ಎಐ ತಂತ್ರಜ್ಞಾನದ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುವ ಟೆಕ್ ಯುದ್ಧವು ಕಳೆದ ವರ್ಷದ ಕೊನೆಯಲ್ಲಿ ಮೈಕ್ರೋಸಾಫ್ಟ್-ಬೆಂಬಲಿತ ಓಪನ್‌ಎಐ ನ ಚಾಟ್‌ಜಿಪಿಟಿ (ChatGPT) ಯೊಂದಿಗೆ ಪ್ರಾರಂಭವಾಯಿತು, ಇದು ಆಲ್ಫಾಬೆಟ್‌ನಿಂದ ಆರಂಭಿಸಿ ಚೀನಾದ ಟೆಕ್ ಸಂಸ್ಥೆಗಳು ತಮ್ಮದೇ ಆದ ಕೊಡುಗೆಗಳನ್ನು ಘೋಷಿಸಲು ಪ್ರೇರೇಪಿಸಿತು.
ಕಳೆದ ವಾರ, ಫೇಸ್‌ಬುಕ್ ಪೇರೆಂಟ್ ಕಂಪೆನಿ ಮೆಟಾ ಹೊಸ ದೊಡ್ಡ ಭಾಷಾ ಮಾದರಿ LLaMA ಅನ್ನು ಬಿಡುಗಡೆ ಮಾಡುತ್ತಿದೆ ಎಂದು ತಿಳಿಸಿದ್ದು, ಹೊಸ ಎಐ ಸಿಸ್ಟಮ್‌ನ ಕೋರ್ ಸಾಫ್ಟ್‌ವೇರ್ ಇದಾಗಿದೆ. ಇದು ಸರ್ಕಾರ, ನಾಗರಿಕ ಸಮಾಜ ಮತ್ತು ಶಿಕ್ಷಣದೊಂದಿಗೆ ಸಂಯೋಜಿತವಾಗಿರುವ ಸಂಶೋಧಕರು ಮತ್ತು ಘಟಕಗಳಿಗೆ ವಾಣಿಜ್ಯೇತರ ಪರವಾನಗಿ ಅಡಿಯಲ್ಲಿ ಲಭ್ಯವಿರುತ್ತದೆ ಎಂದಿದೆ.
ಸಂಕೀರ್ಣ ವಿಷಯಗಳನ್ನು ಪರಿಹರಿಸುವುದು
ಸೋಮವಾರದಂದು ಮೆಟಾ ಷೇರುಗಳು 0.5 ಪ್ರತಿಶತದಷ್ಟು ಕುಸಿದವು. LLaMA ಪರಿಕರವು, ದೊಡ್ಡ ಭಾಷಾ ಮಾದರಿಗಳ ಕ್ಷೇತ್ರದಲ್ಲಿ ಮೆಟಾದ ಇತ್ತೀಚಿನ ಆರಂಭ ಎಂದಾಗಿದ್ದು ಪಠ್ಯವನ್ನು ರಚಿಸುವುದು, ಸಂಭಾಷಣೆಗಳನ್ನು ನಡೆಸುವುದು, ಲಿಖಿತ ವಿಷಯವನ್ನು ಸಾರಾಂಶ ಮಾಡುವುದು ಮತ್ತು ಗಣಿತದ ಪ್ರಮೇಯಗಳನ್ನು ಪರಿಹರಿಸುವುದು ಮೊದಲಾದ ಸಂಕೀರ್ಣ ಕಾರ್ಯಗಳಲ್ಲಿ ಬಹಳಷ್ಟು ಭರವಸೆಯನ್ನುಂಟು ಮಾಡಿದೆ ಎಂದು ಮೆಟಾ ಮುಖ್ಯಸ್ಥರು ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ.
ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ LLaMA ಬಳಕೆ
ವಕ್ತಾರರ ಪ್ರಕಾರ ಸಾಮಾಜಿಕ ನೆಟ್‌ವರ್ಕ್‌ಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಅನ್ನು ಒಳಗೊಂಡಿರುವ ಮೆಟಾ ಉತ್ಪನ್ನಗಳಲ್ಲಿ LLaMA ಪ್ರಸ್ತುತ ಬಳಕೆಯಲ್ಲಿಲ್ಲ, ಅದಾಗ್ಯೂ ಕಂಪನಿಯು AI ಸಂಶೋಧಕರಿಗೆ ತಂತ್ರಜ್ಞಾನವನ್ನು ಲಭ್ಯವಾಗುವಂತೆ ಮಾಡಲು ಯೋಜಿಸಿದೆ. ಮೆಟಾ ಸಂಶೋಧನೆ ಈ ಮುಕ್ತ ಮಾದರಿಗೆ ಬದ್ಧವಾಗಿದೆ ಎಂದು ಜುಕರ್‌ಬರ್ಗ್ ತಿಳಿಸಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ AI ತಂತ್ರಜ್ಞಾನವು ಜನಪ್ರಿಯವಾಗಿದ್ದು ಮತ್ತು ವಿವಾದಾತ್ಮಕವಾಗಿದೆ, ಏಕೆಂದರೆ ಹೆಚ್ಚಿನ ಕಂಪನಿಗಳು ಅವುಗಳನ್ನು ನಿರ್ಮಿಸಲು ಮತ್ತು ಮಾದರಿಗಳ ಆಧಾರದ ಮೇಲೆ ಉತ್ಪನ್ನಗಳ ಪರೀಕ್ಷೆಗಳನ್ನು ಪರಿಚಯಿಸಲು ಪ್ರಾರಂಭಿಸಿದ್ದು, ಟೆಕ್ ದೈತ್ಯರ ನಡುವಿನ ಸ್ಪರ್ಧೆಯ ಹೊಸ ಕ್ಷೇತ್ರವನ್ನು ಗುರುತಿಸುವಂತಾಗಿದೆ.
ಆಲ್ಫಾಬೆಟ್‌ನ Google LaMDA ಎಂಬ ಮಾದರಿಯನ್ನು ಹೊಂದಿದೆ ಅಥವಾ ಸಂವಾದ ಅಪ್ಲಿಕೇಶನ್‌ಗಳಿಗಾಗಿ ಭಾಷಾ ಮಾದರಿಯನ್ನು ಹೊಂದಿದೆ. ಇಂಟರ್ನೆಟ್ ಹುಡುಕಾಟ ಮತ್ತು ಜಾಹೀರಾತು ಮುಖ್ಯಸ್ಥರು ಬಾರ್ಡ್ ಎಂಬ ಚಾಟ್-ಆಧಾರಿತ, AI-ಚಾಲಿತ ಹುಡುಕಾಟ ಉತ್ಪನ್ನವನ್ನು ಪರೀಕ್ಷಿಸುತ್ತಿದ್ದಾರೆ, ಇದು ಇನ್ನೂ ಕೆಲವು ದೋಷಗಳನ್ನು ಹೊಂದಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ