ಮಹಿಳೆಯರನ್ನು ಅತ್ಯಾಚಾರಗಳಿಂದ ರಕ್ಷಿಸಲು ಬಂದಿದೆ ಹೊಸ ಡಿವೈಸ್

ಈ ಇಂಟ್ರೆಪಿಡ್​ ಡಿವೈಸ್​ನ್ನು ಮಹಿಳೆಯರು ತಮ್ಮ ಒಳಉಡುಪುಗಳಲ್ಲಿ ಜಸ್ಟ್​ ಅಟ್ಯಾಚ್​ ಮಾಡಿ ಅವರಿಗೆ ಸೇಫ್ಟೀ ಅಲ್ಲದ ಸ್ಥಳಗಳಿಗೆ ಹೋಗುವಾಗ ಧರಿಸಬೇಕು.

zahir | news18
Updated:March 16, 2019, 2:52 PM IST
ಮಹಿಳೆಯರನ್ನು ಅತ್ಯಾಚಾರಗಳಿಂದ ರಕ್ಷಿಸಲು ಬಂದಿದೆ ಹೊಸ ಡಿವೈಸ್
@Jimmyday
  • News18
  • Last Updated: March 16, 2019, 2:52 PM IST
  • Share this:
ಇತ್ತೀಚಿನ ದಿನಗಳಲ್ಲಿ ಮಹಿಳೆ ಹಾಗು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ ಪ್ರಕರಣಗಳು ನಡೀತಾನೇ ಇರುತ್ತೆ. ಇದಕ್ಕೆ ಎಳೆ ಹಸುಗೂಸು ಹೊರತಾಗಿಲ್ಲ. ಆದ್ರೀಗ ಮಹಿಳೆಯರು ಈ ಪ್ರಕರಣದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇಲ್ಲೊಬ್ಬ ಮಹಿಳೆಯೊಬ್ಬರು ಒಂದು ಇಂಟ್ರೆಸ್ಟಿಂಗ್​ ಡಿವೈಸ್​ ಕಂಡುಹಿಡಿದಿದ್ದಾರೆ. ಹಾಗಿದ್ರೆ ಯಾವುದು ಡಿವೈಸ್​? ಹೇಗೆ ಯೂಸ್​ ಮಾಡೋದು? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು.

ಸೃಷ್ಟಿಯ ಕಥೆ ಶುರುವಾಗೋದೇ ಹೆಣ್ಣಿನಿಂದ. ಹೆಣ್ಣು ಬಲವೂ ಹೌದು, ಬುದ್ದಿಯೂ ಹೌದು. ಆದರೆ ಕೆಲ ಗಂಡಸರು ತಮ್ಮ ಹುಟ್ಟಿಗೆ ಕಾರಣ ಹೆಣ್ಣು ಎಂಬುದನ್ನು ಮೈ ಮರೆತು ಕ್ರೂರವಾಗಿ ಬದುಕುತ್ತಿದ್ದಾನೆ. ಹೆಣ್ಣನ್ನ ತನ್ನ ಆಟದ ವಸ್ತುವಾಗಿ, ತನಗೆ ಬೇಕು ಅಂದಾಗ  ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ.

ಇಂತಹ ಅಸುರಕ್ಷಿತ ಸಮಾಜದಲ್ಲಿ ಮಹಿಳೆಯರು ತಮ್ಮನ್ನ ತಾವು ಈ ಅತ್ಯಾಚಾರ, ಶೋಷಣೆಗಳಿಂದ ರಕ್ಷಿಸಿಕೊಳ್ಳುವುದು ಕಷ್ಟಸಾಧ್ಯ ಎನ್ನಲಾಗಿತ್ತು. ಆದರೆ ಇದಕ್ಕೆ ಪರಿಹಾರವಾಗಿ ಕಂಡು ಹಿಡಿಯುವಲ್ಲಿ ಎಂಐಟಿಯ ಭಾರತೀಯ ವಿಜ್ಞಾನಿ ಮನೀಶಾ ಮೋಹನ್ ಯಶಸ್ವಿಯಾಗಿದ್ದಾರೆ.​ ಹೆಣ್ಣು ಮಕ್ಕಳ ಗೋಳನ್ನು ಅರಿತಿರುವ ಅವರು  ಇಂಟ್ರೆಪಿಡ್ ಎಂಬ​ ಡಿವೈಸ್​ ಕಂಡು ಹಿಡಿದಿದ್ದಾರೆ. ಅಂದಹಾಗೆ ಈ ಡಿವೈಸ್​ ಹೇಗೆ ವರ್ಕ್​ ಆಗುತ್ತೆ? ಇದನ್ನ ಬಳಸೋದಾದ್ರೂ ಹೇಗೆ ಅಂತೀರಾ?

ಈ ಇಂಟ್ರೆಪಿಡ್​ ಡಿವೈಸ್​ನ್ನು ಮಹಿಳೆಯರು ತಮ್ಮ ಒಳಉಡುಪುಗಳಲ್ಲಿ ಜಸ್ಟ್​ ಅಟ್ಯಾಚ್​ ಮಾಡಿ ಅವರಿಗೆ ಸೇಫ್ಟೀ ಅಲ್ಲದ ಸ್ಥಳಗಳಿಗೆ ಹೋಗುವಾಗ ಧರಿಸಬೇಕು. ಹಾಗೇನೆ ಆ ಡಿವೈಸ್​ನ್ನು ನಿಮ್ಮ ಹತ್ತಿರದ ಆತ್ಮೀಯ ಅಥವಾ ತೀರಾ ಹೆಲ್ಸ್​ ಮಾಡುವ ಸ್ನೇಹಿತರು, ಹೆತ್ತವರ ಮೊಬೈಲ್​ಗೆ ಆಪ್ಲಿಕೇಶನ್​ನೊಂದಿಗೆ ಕನೆಕ್ಟ್​ ಮಾಡಿಕೊಳ್ಳಬಹುದು. ಹೀಗೆ ಮಾಡೋದರಿಂದ ಯಾರಾದ್ರೂ ಫೋರ್ಸ್​ಫುಲ್​ ಆಗಿ ನಿಮ್ಮ ಬಟ್ಟೆಗಳನ್ನ ಎಳೆದಾಡಿದಾಗ ಈ ಆಪ್ಲಿಕೇಶನ್​ ಸಂಯೋಜಿತವಾಗಿರುವ ಬ್ಲೂಟೂತ್​ ಸಾಧನ ನೀವು ಕನೆಕ್ಟ್​ ಮಾಡಿದಂಥಹ ಅಷ್ಟು ಮೊಬೈಲ್​ ನಂಬರ್​ಗಳಿಗೆ ಐ ಆಮ ಅಟ್​ ರಿಸ್ಕ್, ​ ಪ್ಲೀಸ್​ ಸೇವ್​ ಮೀ ಅಂತ ಎಚ್ಚರಿಕೆಯ ಮೆಸೇಜ್​ಗಳನ್ನು ಮತ್ತು ನೀವಿರುವ ಸ್ಥಳದ ಮಾಹಿತಿಯನ್ನು ​ ಅಟೋಮ್ಯಾಟಿಕ್​ ತೋರಿಸುತ್ತದೆ.

ಇದನ್ನೂ ಓದಿ: ಹುಡುಗರನ್ನು ಕಂಡಾಗ ಹುಡುಗಿಯರು ಮೊದಲು ನೋಡುವುದು ಈ ಅಂಗವನ್ನಂತೆ..!

ಇತ್ತೀಚಿನ ದಿನಗಳಲ್ಲಿ ಮಹಿಳೆ ಎಷ್ಟು ಜಾಗರೂಕವಾಗಿದ್ರೂ, ಸಾಲದು. ಹೀಗಾಗಿ ಈ ಅತ್ಯಾಚಾರ ಪ್ರಕರಣಗಳನ್ನು ತಡೆಯಲು, ತಪ್ಪಿತಸ್ಥ ಅಪರಾಧಿಗಳನ್ನು ಹಿಡಿದು ಮತ್ತೆಂದು ಈ ರೀತಿಯ ಅಪರಾಧಗಳನ್ನು ಎಸಗದಂತೆ ಬುದ್ಧಿ ಕಲಿಸಲು ಈ ಡಿವೈಸ್​ ಅತ್ಯಂತ ಉಪಯುಕ್ತಕಾರಿಯಾಗಿದೆ ಅಂತಾರೇ ಇದರ ಅನ್ವೇಷಕರಾದ ಮನೀಶಾ ಮೋಹನ್​.
ಒಟ್ಟಾರೆ, ತಾನು ಒಬ್ಬಳು ಮಹಿಳೆಯಾಗಿ, ಹಲವಾರು ಮಹಿಳೆಯರ ಮಾನ, ಪ್ರಾಣದ ಬಗ್ಗೆ ಕಾಳಜಿ ವಹಿಸಿ ಮನೀಶಾ ಮೋಹನ್​ ಈ ರೀತಿಯಾದ ಒಂದು ಡಿವೈಸ್​ ಕಂಡು ಹಿಡಿದಿದ್ದಾರೆ. ಜೊತೆಗೆ ಸಮಾಜದಲ್ಲಿ ತಪ್ಪಿತಸ್ಥರನ್ನು ಹಿಡಿದು ಬುದ್ಧಿ ಕಲಿಸಲು ಒಂದೊಳ್ಳೆ ಕ್ಲೂ ಹುಡುಕಿಕೊಟ್ಟಿದ್ದಾರೆ. ಇವರ ತಾಳ್ಮೆ ಮತ್ತು ಜಾಣ್ಮೆಗೆ ನಮ್ಮೆಲ್ಲರ ಒಂದು ಹ್ಯಾಟ್ಸ್​ಆಫ್.

-ವಿದ್ಯಾ, ನ್ಯೂಸ್ 18 ಕನ್ನಡ

 
First published:March 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ