ಈಗ ಸಾಮಾನ್ಯವಾಗಿ ನಾವು ಎಲ್ಲೆಡೆ ಲ್ಯಾಪ್ಟಾಪ್ (Laptop) ಹಾಗೂ ಮೊಬೈಲ್ ಪ್ರೊಸಸರ್ (Mobile Processor) ಆಗಾಗ ಹೆಚ್ಚು ಸುಧಾರಣೆಗೊಂಡು ಮಾರುಕಟ್ಟೆಗೆ (Market) ಲಗ್ಗೆ ಇಡುತ್ತಿರುವುದನ್ನು ನೋಡುತ್ತಲೇ ಇರುತ್ತೇವೆ. ಹಾಗಂತ ಡೆಸ್ಕ್ಟಾಪ್ಗಳಿಗೆ (Desktop) ಬೇಡಿಕೆ ಕಡಿಮೆಯಾಗಿದೆ ಅಂತ ಖಂಡಿತ ಭಾವಿಸಬೇಡಿ. ಡೆಸ್ಕ್ಟಾಪ್ಗಳಿಗೆ ಸಂಬಂಧಿಸಿದಂತೆಯೂ ಆಧುನಿಕ ವೈಶಿಷ್ಟ್ಯಗಳ ಮಾದರಿಗಳು ಬಿಡುಗಡೆ ಆಗುತ್ತಿರುತ್ತವೆ.ಇದೀಗ ಇಂಟೆಲ್ (Intel) ಸಂಸ್ಥೆಯು ತನ್ನ ಡೆಸ್ಕ್ಟಾಪ್ಗಳಿಗೆ ಸರಣಿಗಾಗಿ ಅತ್ಯುತ್ತಮ ಪ್ರೊಸಸರ್ ಅನ್ನು ಹೊರ ತಂದಿದೆ. ಈ ಬಗ್ಗೆ ಇಂಟೆಲ್ ಅವರ ಡೆಸ್ಕ್ಟಾಪ್ಗಳಿಗೆ ಪ್ರೊಸೆಸರ್ ಬಗ್ಗೆ ಮಾರುಕಟ್ಟೆಯಲ್ಲಿ ಈ ಹಿಂದೆ ಸುದ್ದಿ ಹರಿದಾಡುತ್ತಿತ್ತಾದರೂ ಸಂಸ್ಥೆ ಏನನ್ನು ಹೇಳಿರಲಿಲ್ಲ. ಆದರೆ, ಈಗ ಇಂಟೆಲ್ ತನ್ನ ಹೊಸ ಡೆಸ್ಕ್ಟಾಪ್ಗಳಿಗೆ ಹೊರತಂದಿದ್ದು ಆ ಬಗ್ಗೆ ಅದರ ವಿವರಗಳನ್ನು ಸಾರ್ವಜನಿಕಗೊಳಿಸಿದೆ.
Core i9-12900KS ಹೆಸರಿನ ಈ ಪ್ರೊಸೆಸರ್ ಇಂಟೆಲ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಆಧುನಿಕ ಪ್ರೊಸೆಸರ್ ಆಗಿದ್ದು ವಿಶೇಷವಾಗಿ ಗೇಮಿಂಗ್ ವಿಭಾಗಕ್ಕೆ ಸಂಬಂಧಿಸಿದಂತೆ ಉತ್ಕೃಷ್ಟ ಮಟ್ಟದಲ್ಲಿ ಕೆಲಸ ಮಾಡಲಿದ್ದು ಅದ್ಭುತ ಕ್ರೀಡಾನುಭವ ನೀಡಲಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಇಂಟೆಲ್ ಸಂಸ್ಥೆಯು ತನ್ನ ಈ ಪ್ರೊಸಸರ್ಗೆ ಸಂಬಂಧಿಸಿದಂತೆ ಅದರ ತಾಂತ್ರಿಕ ಸಾಮರ್ಥ್ಯ ಹಾಗೂ ಅದರ ಬೆಲೆಯ ವಿವರವನ್ನೂ ಸಹ ನೀಡಿದೆ. ಇದೊಂದು 12ನೇ ಜನರೇಷನ್ನಿನ Core i9-12900KS ಪ್ರೊಸಸರ್ ಆಗಿರುವುದಾಗಿ ಸಂಸ್ಥೆಯ ಪ್ರಕಟಣೆಯಿಂದ ತಿಳಿದುಬಂದಿದೆ.
ಅತಿ ವೇಗದ ಡೆಸ್ಕ್ಟಾಪ್ಗಳಿಗೆ ಪ್ರೊಸೆಸರ್
ಈಗಾಗಲೇ ಈ ಬಗ್ಗೆ ಡೆಸ್ಕ್ಟಾಪ್ಗಳಿಗೆ ಅಭಿಮಾನಿಗಳಿಗೆ ಸಾಕಷ್ಟು ಕಾತುರವಿತ್ತು. ಅದೀಗ ತೃಪ್ತಿಗೊಂಡಿದ್ದು ಶೀಘ್ರದಲ್ಲೇ ಈ ಅತ್ಯಾಧುನಿಕ ಪ್ರೊಸಸರ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ವಿಶೇಷವೆಂದರೆ ಸಂಸ್ಥೆಯು ಹೇಳಿರುವಂತೆ ಇದು ಜಗತ್ತಿನ ಅತಿ ವೇಗದ ಡೆಸ್ಕ್ಟಾಪ್ಗಳಿಗೆ ಪ್ರೊಸೆಸರ್ ಆಗಿದೆ. ಮುಂದಿನ ಏಪ್ರಿಲ್ 5 ರಿಂದ ಈ ಪ್ರೊಸೆಸರ್ ಗ್ರಾಹಕರಿಗಾಗಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿರುವುದಾಗಿ ಇಂಟೆಲ್ ಹೇಳಿದೆ.
ಇದನ್ನೂ ಓದಿ: Oppo’s Foldable ಸ್ಮಾರ್ಟ್ಫೋನ್ಗೆ ಮನಸೋತ ಸ್ಯಾಮ್ಸಂಗ್! ಏನೆಂದು ಹೊಗಳಿದೆ ಗೊತ್ತಾ?
ಬೆಲೆ ಎಷ್ಟು?
ಇಂಟೆಲ್ "ಗ್ರಾಹಕರಿಗೆ ಶಿಫಾರಸ್ಸು ಮಾಡಲಾದ ಬೆಲೆ" ಅಡಿಯಲ್ಲಿ ಇದರ ಪ್ರಾರಂಭಿಕ ಬೆಲೆಯನ್ನು 739 ಯುಎಸ್ ಡಾಲರ್ ಎಂದು ನಿಗದಿಪಡಿಸಿದ್ದು ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 56,000 ರೂಪಾಯಿಗಳಾಗಬಹುದು. ಆದಾಗ್ಯೂ, ಇದು ಏಪ್ರಿಲ್ನಲ್ಲಿ ಬಿಡುಗಡೆಯಾದನಂತರ ಮಾರುಕಟ್ಟೆಯ ಏರಿಳಿತ ಗಮನದಲ್ಲಿರಿಸಿಕೊಂಡರೆ ಭಾರತೀಯರಿಗೆ ಏನಿಲ್ಲವೆಂದರೂ ಈ ಅತಿ ವೇಗದ ಚಿಪ್ಸೆಟ್ ಪ್ರೊಸಸರ್ ಸುಮಾರು 50,000 ದಿಂದ 60,000 ರೂ. ವರೆಗೆ ಯಾವುದೇ ಬೆಲೆಗೆ ಸಿಗಬಹುದಾಗಿದೆ.
ಇನ್ನು, ಇದರ ವಿಶೇಷತೆಗೆ ಬರುವುದಾದರೆ, ಸಂಸ್ಥೆ ಹೇಳಿರುವಂತೆ Core i9-12900KS ಜಗತ್ತಿನ ಅತಿ ವೇಗದ ಪ್ರೊಸೆಸರ್ ಆಗಿದ್ದು 5.5 GHz ಮ್ಯಾಕ್ಸ್ ಟರ್ಬೋ ಫ್ರೀಕ್ವೆನ್ಸಿ ಸಾಮರ್ಥ್ಯ ಹೊಂದಿದೆ. ಇದರ ಪ್ರತಿಸ್ಪರ್ಧಿ ಎನ್ನಲಾಗುವ ಎಎಂಡಿ ಅವರ Ryzen 9 5900X ಪ್ರೊಸೆಸರ್ ಸಹ ಅತಿ ವೇಗವಾಗಿದೆಯಾದರೂ ಇದರ ಸಾಮರ್ಥ್ಯ 4.8 GHz ಮಾತ್ರ. ಹಾಗಾಗಿ ಇಂಟೆಲ್ ಪ್ರೊಸಸರ್ ತನ್ನ ಅತಿ ವೇಗದಿಂದ ಅತಿ ವಿಶಿಷ್ಟವಾದ ಅನುಭೂತಿ ನೀಡುವಲ್ಲಿ ಸಕ್ಷಮವಾಗಿದೆ ಎಂದಷ್ಟೇ ನಿರೀಕ್ಷಿಸಬಹುದಾಗಿದೆ.
ಇದನ್ನೂ ಓದಿ: BSNL ಹಾಗೂ BBNL ವಿಲೀನ ಗ್ರಾಮೀಣ ಭಾರತಕ್ಕೆ ವರವಾಗಬಹುದೇ?
ಇಂಟೆಲ್ ಅಭಿವೃದ್ಧಿಪಡಿಸಿರುವ ತನ್ನ ಈ ಅತಿ ವೇಗದ ಕಾರ್ಯಕ್ಷಮತೆಯನ್ನು ಅದರ ಸ್ವತ್ತುಗಳಾದ ಥರ್ಮಲ್ ವೆಲಾಸಿಟಿ ಬೂಸ್ಟ್ ಹಾಗೂ ಆಕ್ಟಿವ್ ಬೂಸ್ಟ್ ಟೆಕ್ನಾಲಾಜಿಗಳು ಬೆಂಬಲಿಸುತ್ತವೆ ಎಂದು ಇಂಟೆಲ್ ಹೇಳಿಕೊಂಡಿದೆ. ಇನ್ನು, ಈ ಪ್ರೊಸಸರ್ ದಕ್ಷತೆಗೆ ಸಂಬಂಧಿಸಿದಂತೆ ಇಂಟೆಲ್ ಇದು ಪ್ರಸ್ತುತ ಚಾಲ್ತಿಯಲ್ಲಿರುವ ಅತಿ ಕಠಿಣ ಹಾಗೂ ಸಂಕೀರ್ಣವಾದ ಗೇಮ್ಗಳನ್ನು ನಿರಾಯಾಸವಾಗಿ ಆಡುವ ಮೂಲಕ ವಿಭಿನ್ನ ಅನುಭವವನ್ನು ಗ್ರಾಹಕರಿಗೆ ಒದಗಿಸುವಲ್ಲಿ ಸಕ್ಷಮವಾಗಿದೆ ಎಂದು ಹೇಳಿದೆ.
ಇಂಟೆಲ್ ಹೇಳಿರುವಂತೆ ಈ ಪ್ರೊಸೆಸರ್ 16 ಕೋರ್ ಗಳನ್ನು ಹೊಂದಿದ್ದು ಅದರಲ್ಲಿ ಎಂಟು ಕೋರ್ಗಳು ಅದು ತೋರುವ ಪ್ರದರ್ಶನಕ್ಕೆ ಮೀಸಲಾಗಿದ್ದರೆ ಇನ್ನುಳಿದ ಎಂಟು ಕೋರ್ಗಳು ಅದರ ನಿಖರವಾದ ಕಾರ್ಯಕ್ಷಮತೆಯನ್ನು ನಿರ್ವಹಿಸುವುದಕ್ಕೆ ಮೀಸಲಾಗಿರುವುದಾಗಿ ಹೇಳಿದೆ. 150W ಬೇಸ್ ಪವರ್ ಹಾಗೂ 30ಎಂಬಿ ಇಂಟೆಲ್ ಸ್ಮಾರ್ಟ್ ಕ್ಯಾಚೆಯನ್ನು ಇದು ಹೊಂದಿರುವುದಾಗಿ ತಿಳಿದು ಬಂದಿದೆ. ಒಟ್ಟಿನಲ್ಲಿ ಹೈ ಎಂಡ್ ಗೇಮಗಳನ್ನು ಇಷ್ಟಪಡುವ ಗ್ರಾಹಕರಿಗೆ ಈ ಪ್ರೊಸಸರ್ ಒಂದು ಅದ್ಭುತ ವರದಾನವಾಗಲಿದೆ ಎಂದು ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ