ಟೆಕ್ನಾಲಜಿಗಳು (Technology) ಇಂದಿನ ದಿನದಲ್ಲಿ ಬಹಳಷ್ಟು ಪ್ರಗತಿಯಲ್ಲಿದೆ. ಸಂಶೋಧಕರಂತೂ ಇದರ ಬೆಳವಣಿಗೆಗಾಗಿ, ಜನರಿಗೆ ಆನುಕೂಲವಾಗುವ ದೃಷ್ಟಿಯಿಂದ ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ. ಇದೀಗ ವಿದ್ಯುತ್ ಸಂಗ್ರಹಣೆಗಾಗಿ ಹೊಸ ಟೆಕ್ನಾಲಜಿಯನ್ನು ಕಂಡುಕೊಳ್ಳು ಸಿದ್ಧತೆ ನಡೆಸುತ್ತಿದ್ದಾರೆ. ಗ್ರಾವಿಟಿ ಬ್ಯಾಟರಿ (Gravity Battery) ಅಥವಾ ಗುರುತ್ವಾಕರ್ಷಣೆಯ ಬ್ಯಾಟರಿ ಎಂಬುದು ಗುರುತ್ವಾಕರ್ಷಣೆಯ ಶಕ್ತಿಯನ್ನು ಸಂಗ್ರಹಿಸುವ ಒಂದು ರೀತಿಯ ವಿದ್ಯುತ್ ಶೇಖರಣಾ ಸಾಧನವಾಗಿದೆ (Electrical Storage Device). ಈ ಬ್ಯಾಟರಿಗಳು ಹೆಚ್ಚುವರಿ ನವೀಕರಿಸಬಹುದಾದ ಶಕ್ತಿಯನ್ನು ಸಂಗ್ರಹಿಸುವ ಸಂಪನ್ಮೂಲವಾಗಿದೆ. ಆದರೆ ಇಂತಹ ಬ್ಯಾಟರಿಗಳನ್ನು ಅಳವಡಿಸಲು ಸ್ಥಳಗಳನ್ನು ಕಂಡುಕೊಳ್ಳುವುದೇ ಒಂದು ಪ್ರಧಾನ ಸವಾಲಾಗಿದೆ.
ಗಣಿಗಳಲ್ಲಿ ಗುರುತ್ವಾಕರ್ಷಣ ಬ್ಯಾಟರಿ ಅಳವಡಿಕೆ
ಆದರೆ ಈ ಸಮಸ್ಯೆಗೆ ಪರಿಹಾರ ನೀಡುವಂತೆ ಸಂಶೋಧಕರು ಟ್ರಿಕ್ ಒಂದನ್ನು ಮಾಡಿದ್ದು, ಜಗತ್ತಿನಾದ್ಯಂತ ಬಳಸದೇ ಇರುವಂತಹ ಗಣಿಗಳು ಇಂತಹ ಬ್ಯಾಟರಿಗಳ ಬಳಕೆಗೆ ಬಳಸಬಹುದಾದ ಸ್ಥಳವಾಗಲಿದೆ ಎಂದು ತಿಳಿಸಿದ್ದಾರೆ.
ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಅಪ್ಲೈಡ್ ಸಿಸ್ಟಮ್ಸ್ ಅನಾಲಿಸಿಸ್ (IIASA) ನ ಅಧ್ಯಯನವು ಗುರುತ್ವಾಕರ್ಷಣೆಯ ಬ್ಯಾಟರಿಗಳನ್ನು ನಿರ್ವಹಿಸಲು ಸ್ಥಗಿತಗೊಂಡ ಗಣಿಗಳನ್ನು ಮರುಬಳಕೆ ಮಾಡಬಹುದು ಎಂಬ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಇದಕ್ಕಾಗಿ ಹಳೆಯ ಗಣಿಗಳನ್ನು ಪರಿವರ್ತಿಸಬೇಕಾಗುತ್ತದೆ ಮತ್ತು ಅಲ್ಲಿ ಗುರುತ್ವಾಕರ್ಷಕ ಬ್ಯಾಟರಿಗಳನ್ನು ಅಳವಡಿಸುವುದು ಸಂಪೂರ್ಣ ಭೂಮಂಡಲಕ್ಕೆ ಸಾಕಾಗುವಷ್ಟು ದೈನಂದಿನ ವಿದ್ಯುತ್ ಅನ್ನು ಪೂರೈಸಲಿದೆ ಎಂದು ತಿಳಿಸಿದೆ.
ಗುರುತ್ವಾಕರ್ಷಣೆಯ ಬ್ಯಾಟರಿಗಳು ಗಾಳಿ ಮತ್ತು ಸೌರಶಕ್ತಿಯಂತಹ ಪರಿವರ್ತಿಸಬಹುದಾದ ಶಕ್ತಿಯ ಮೂಲಗಳಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತವೆ. ಅದುವೇ ಹೆಚ್ಚುವರಿ ಶಕ್ತಿಯನ್ನು ಸಂಗ್ರಹಿಸುವ ಕೆಲಸವನ್ನು ಮಾಡುತ್ತವೆ. ಗಾಳಿ ಮತ್ತು ಸೌರವು ಸಾಮಾನ್ಯವಾಗಿ ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುತ್ತದೆ, ಆದ್ದರಿಂದ ವಿದ್ಯುತ್ ಕಂಪನಿಗಳು ಸಾಮಾನ್ಯವಾಗಿ ಬ್ಯಾಟರಿಗಳಲ್ಲಿ ಉಳಿದಿರುವುದನ್ನು ಸಂಗ್ರಹಿಸಬೇಕಾಗುತ್ತದೆ.
IIASA ನಡೆಸಿರುವ ಪ್ರಯೋಗಗಳು
IIASA ಪ್ರಯೋಗದಂತಹ ವಿಧಾನಗಳು ಭಾರವಾದ ವಸ್ತುಗಳನ್ನು ಎತ್ತಲು ಹೆಚ್ಚುವರಿ ಶಕ್ತಿಯನ್ನು ಬಳಸುತ್ತವೆ. ಮತ್ತೆ ಶಕ್ತಿಯ ಅಗತ್ಯವಿದ್ದಾಗ, ತೂಕವನ್ನು ಇಳಿಸಲಾಗುತ್ತದೆ, ಅದು ಟರ್ಬೈನ್ ಅನ್ನು ತಿರುಗಿಸುತ್ತದೆ ಮತ್ತು ಗುರುತ್ವಾಕರ್ಷಣೆಯಿಂದ ಚಲನ ಶಕ್ತಿಯನ್ನು ಪರಿವರ್ತಿಸುತ್ತದೆ. ಗುರುತ್ವಾಕರ್ಷಣೆಯ ಬ್ಯಾಟರಿಗಳು ನೀರು ಅಥವಾ ಘನ ವಸ್ತುಗಳಂತಹ ಹೆಚ್ಚಿನ ತೂಕದೊಂದಿಗೆ ಹೊಂದುತ್ತವೆ. ಬಳಸದೇ ಇರುವ ಗಣಿಗಳಲ್ಲಿ IIASA ಅಧ್ಯಯನ ತಂಡವು ಹಲವಾರು ಪ್ರಯೋಗಗಳನ್ನು ನಡೆಸಿದೆ.
ಕಡಿಮೆ ವೆಚ್ಚದಲ್ಲಿ ಶಕ್ತಿಯ ಉತ್ಪಾದನೆ
ಪ್ರಕ್ರಿಯೆಯಲ್ಲಿ ಕಂಡುಬಂದ ಇನ್ನೊಂದು ಪ್ರಯೋಜನವೆಂದರೆ ಬ್ಯಾಟರಿಗಳು ಕಾಲಾನಂತರದಲ್ಲಿ ಸ್ವಯಂ-ಬಿಡುಗಡೆಯಾಗುತ್ತವೆ ನಂತರ ಕ್ರಮೇಣ ಸಂಗ್ರಹಿತ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಆದರೆ ಗುರುತ್ವಾಕರ್ಷಣಾ ವಿಧಾನವು ಮರಳಿನಲ್ಲಿ ಶಕ್ತಿಯನ್ನು ಸಂಗ್ರಹಿಸುತ್ತದೆ ಹಾಗೂ ಸ್ವಯಂ ಬಿಡುಗಡೆಗೊಳ್ಳುವುದಿಲ್ಲ. ಹೀಗಾಗಿಯೇ IIASA ತ್ಯಜಿಸಿರುವ ಗಣಿಗಳನ್ನು ಬಳಸುವ ಪ್ರಸ್ತಾವನೆ ಮಾಡಿದೆ. ಈಗಾಗಲೇ ಭೂಮಿಯ ಮೇಲೆ ಲಕ್ಷಾಂತರ ಮನೆಗಳಿದ್ದು ಈ ಉದ್ದೇಶವನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಶಕ್ತಿಯ ಉತ್ಪಾದನೆಯನ್ನು ಮಾಡಬಹುದಾಗಿದೆ.
ಉದ್ಯೋಗ ಸೃಷ್ಟಿ ಸಾಧ್ಯ
ವಿಜ್ಞಾನಿಗಳು UGES ಜಾಗತಿಕ ಶಕ್ತಿಯ ಶೇಖರಣಾ ಸಾಮರ್ಥ್ಯವನ್ನು 7 ರಿಂದ 70 TWh (ಟೆರಾವಾಟ್ ಗಂಟೆಗಳ) ಹೊಂದಿರಬಹುದು ಎಂದು ಅಂದಾಜಿಸಿದ್ದಾರೆ, ಚೀನಾ, ಭಾರತ, ರಷ್ಯಾ ಮತ್ತು ಈಗಾಗಲೇ ಕೈಬಿಟ್ಟ ಗಣಿಗಳಂತಹ ದೇಶಗಳಲ್ಲಿ ಹೆಚ್ಚಿನ ಬಳಕೆಯಲ್ಲಿಲ್ಲದ ಗಣಿಗಳಿದ್ದು ಅವುಗಳನ್ನು ಗ್ರಾವಿಟಿ ಎನರ್ಜಿಗಾಗಿ ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಇಂಟರ್‌ನ್ಯಾಶನಲ್ ಎನರ್ಜಿ ಅಸೋಸಿಯೇಷನ್‌ನ ಪ್ರಕಾರ, 2020 ರ ಜಾಗತಿಕ ಶಕ್ತಿಯ ಬಳಕೆ ಒಟ್ಟು 24,901.4 ಟೆರಾವಾಟ್ ಆಗಿದ್ದು, ದಿನಕ್ಕೆ ಸುಮಾರು 68 ಟೆರಾವಾಟ್ ಖರ್ಚಾಗಿದೆ ಎಂಬುದನ್ನು ಸೂಚಿಸುತ್ತದೆ.
ಬಳಕೆಯಲ್ಲಿಲ್ಲದ ಗಣಿಗಳನ್ನು ಗುರುತ್ವಾಕರ್ಷಣ ಬ್ಯಾಟರಿಗಳ ಸ್ಥಾಪನೆಗಳಿಗೆ ಬಳಸುವುದು ಹಲವಾರು ಜನರ ಬದುಕಿಗೆ ದಾರಿದೀಪವಾಗಬಹುದು ಹಾಗೂ ಗಣಿಗಾರಿಕೆ ಮಾಡುತ್ತಿದ್ದ ಕಾರ್ಮಿಕರಿಗೆ ಉದ್ಯೋಗ ದೊರಕಿಸಿಕೊಡಲು ನೆರವಾಗಬಹುದು ಎಂದು ಸಂಶೋಧಕರ ತಂಡ ಅಭಿಪ್ರಾಯ ಪಟ್ಟಿದೆ.
ಗಣಿ ಮುಚ್ಚಿದಾಗ ಅಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ ಅಂತೆಯೇ ಗಣಿಗಳು ಈಗಾಗಲೇ ಮೂಲಭೂತ ಮೂಲಸೌಕರ್ಯವನ್ನು ಹೊಂದಿವೆ ಮತ್ತು ವಿದ್ಯುತ್ ಗ್ರಿಡ್‌ಗೆ ಸಂಪರ್ಕ ಹೊಂದಿವೆ, ಇದು ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು UGES ಸ್ಥಾವರಗಳ ಅನುಷ್ಠಾನವನ್ನು ಸುಗಮಗೊಳಿಸುತ್ತದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ