ಮೊದಲಿನಂತಿರುವುದಿಲ್ಲ ಇನ್ಸ್ಟಾ ಗ್ರಾಂ ನ್ಯೂಸ್​ ಪೀಡ್​!: ಬಂದಿದೆ ಈ ನೂತನ ಫೀಚರ್


Updated:December 30, 2017, 7:35 PM IST
ಮೊದಲಿನಂತಿರುವುದಿಲ್ಲ ಇನ್ಸ್ಟಾ ಗ್ರಾಂ ನ್ಯೂಸ್​ ಪೀಡ್​!: ಬಂದಿದೆ ಈ ನೂತನ ಫೀಚರ್

Updated: December 30, 2017, 7:35 PM IST
ನೀವೂ ಕೂಡಾ ಇನ್ಸ್ಅ ಗ್ರಾಂ ಬಳಕೆದಾರರಾ? ಹಾಗಿದ್ದರೆ ನ್ಯೂಸ್​ ಫೀಡ್ ನೋಡುವಾಗ ನಿಮಗೆ ಈ ಮೊದಲಿಗಿಂತಲೂ ಉತ್ತಮ ಅನುಭವವಾಗಲಿದೆ. ​ ಇನ್ಸ್ಟಾ ಗ್ರಾಂ ನ್ಯೂಸ್​ ಫೀಡ್​ನಲ್ಲಿ ರೆಕಮಂಡೆಡ್​ ಕಂಟೆಟ್ ಕೂಡಾ ಇನ್ಮುಂದೆ ಕಂಡು ಬರಲಿದೆ. ಈ ನೂತನ ಫೀಚರ್​ ಜೋಡಣೆಯಿಂದ ಬಳಕೆದಾರರಿಗೆ ತಮ್ಮ ನ್ಯೂಸ್​ ಪೀಡ್​ನಲ್ಲಿ ತಾವು ಫಾಲೋ ಮಾಡುವ ಅಕೌಂಟ್​ಗಳೊಂದಿಗೆ ತಮ್ಮ ಸ್ನೇಹಿತರು ಲೈಕ್ ಮಾಡಿರುವ ಪೋಸ್ಟ್​ಗಳು ಕೂಡಾ ಕಂಡು ಬರಲಿವೆ.

ಇನ್ಸಾಗ್ರಾಂ, ರೆಕಮಂಡೆಡ್​ ಫೀಚರ್​ಗೆ ಸಂಬಂಧಿಸಿದಂತೆ ಬಹಳಷ್ಟು ಸಮಯದಿಂದ ಟೆಸ್ಟಿಂಗ್ ನಡೆಸುತ್ತಿತ್ತು. ಈ ಫೀಚರ್ ಸಂಪೂರ್ಣವಾಗಿ ಹೊಸತಲ್ಲ, ಈ ಮೊದಲು ಈ ಆ್ಯಪ್​ನಲ್ಲಿ ಎಕ್ಸ್​ಪ್ಲೋರ್(Explore) ವಿಭಾಗ ಪರಿಚಯಿಸಲಾಗಿತ್ತು, ಈ ಸೆಕ್ಷನ್ ಹೋಗಿ ಬಳಕೆದಾರರು ತಮ್ಮ ಸ್ನೇಹಿತರ ಚಟುವಟಿಕೆಗಳನ್ನು ಗಮನಿಸಬಹುದಾಗಿತ್ತು. ಅಲ್ಲದೇ ಅವರು ಯಾವ ಪೋಸ್ಟ್​ಗೆ ಲೈಕ್ ಹಾಗೂ ಕಮೆಂಟ್​ ಕೊಟ್ಟಿದ್ದಾರೆ ಎಂಬುವುದನ್ನು ತಿಳಿದುಕೊಳ್ಳಬಹುದಾಗಿತ್ತು. ಆದರೀಗ ರೆಕಮಂಡೆಡ್ ಫೀಡ್​ನಲ್ಲಿ ಬಳಕೆದಾರರಿಗೆ ಅವರಿಗಿಷ್ಟವಾಗುವ ಪೋಸ್ಟ್​ಗಳು ಕಾಣ ಸಿಗಲಿವೆ.

ನ್ಯೂಸ್​ಫೀಡ್​ನಲ್ಲಿ ರೆಕಮಂಡೆಡ್​ ಕಂಟೆಂಟ್ ಪರಿಚಯಿಸಿರುವುದು ಇನ್ಸ್ಟಾಗ್ರಾಂನಲ್ಲಿ ಈವರೆಗೆ ಬಂದಿರುವ ಒಂದು ಬಹುದೊಡ್ಡ ಬದಲಾವಣೆಯಾಗಿದೆ. ಇದರಿಂದಾಗಿ ಬಳಕೆದಾರಿಗೆ ಅವರು ಫಾಲೋ ಮಾಡಿರುವ ಕಂಟೆಂಟ್​ ಜೊತೆಗೆ ಇನ್ನೂ ಬಹಳಷ್ಟು ಕಂಡು ಬರಲಿದೆ ಹಾಗೂ ನ್ಯೂಸ್​ಪೀಡ್​ ಕೊಂಚ ತನ್ನ ಮೂಲ ಕಂಪೆನಿ ಫೇಸ್​ಬುಕ್​ನಂತೆಯೇ ಕಂಡು ಬರಲಿದೆ.

 
First published:December 30, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ