Instagram: ಪ್ರೊಫೆಷನಲ್‌ ಹಾಗೂ ವೈಯಕ್ತಿಕ ಖಾತೆಗಳಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೆಡ್ಯೂಲ್‌ ಮಾಡುವುದು ಹೇಗೆ?

Istagram Post Schedule: ಇನ್‌ಸ್ಟಾಗ್ರಾಮ್ ಆ್ಯಪ್ ನಿಗದಿಗೊಳಿಸುವ (ಸ್ಕೆಡ್ಯೂಲಿಂಗ್ ಫೀಚರ್‌ಗಳು) ಒದಗಿಸದೇ ಇರುವುದರಿಂದ ಫೇಸ್‌ಬುಕ್ ಕ್ರಿಯೇಟರ್ ಸ್ಟುಡಿಯೋ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಅದೇ ರೀತಿ ಕೆಲವೊಂದಿಷ್ಟು ಮೂರನೇ ವ್ಯಕ್ತಿ ಆ್ಯಪ್‌ಗಳಿದ್ದು (Third party Apps) ಇದೇ ರೀತಿಯ ಸಲಹೆಗಳನ್ನು ನಿಮಗೆ ಒದಗಿಸುತ್ತವೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಶೆಡ್ಯೂಲ್ (ಯೋಜಿಸುವುದು) ಹೇಗೆ ಎಂಬುದನ್ನು ತಿಳಿದುಕೊಳ್ಳೋಣ

instagram/ಇನ್‌ಸ್ಟಾಗ್ರಾಮ್

instagram/ಇನ್‌ಸ್ಟಾಗ್ರಾಮ್

  • Share this:
ಅತ್ಯಂತ ಹೆಚ್ಚು ಜನಪ್ರಿಯ ಸೋಶಿಯಲ್ ಮೀಡಿಯಾ (Social Media) ಆ್ಯಪ್‌ಗಳಲ್ಲಿ ಒಂದಾಗಿರುವ Instagram ಹೆಚ್ಚಿನ ವ್ಯವಹಾರಸ್ಥರಿಗೆ ಅಂತೆಯೇ ಇನ್‌ಫ್ಲುಯೆನ್ಸರ್‌ಗಳಿಗೆ ತಮ್ಮ ಉತ್ಪನ್ನಗಳು ಹಾಗೂ ಸೇವೆಗಳನ್ನು ಪ್ರಚಾರಗೊಳಿಸಲು ಉತ್ತಮ ಪ್ಲಾಟ್‌ಫಾರ್ಮ್ ಎಂದೆನಿಸಿದೆ. ನಿಮ್ಮ ಬ್ರ್ಯಾಂಡ್‌ಗಳು ಹಾಗೂ ಯಾವುದೇ ವ್ಯವಹಾರಗಳು ನೀವಂದುಕೊಂಡ ರೀತಿಯಲ್ಲಿ ಪ್ರಗತಿ ಸಾಧಿಸಬೇಕು ಎಂದಾದಲ್ಲಿ ಇನ್‌ಸ್ಟಾಗ್ರಾಮ್ ಬಳಕೆ, ಪೋಸ್ಟ್ ಶೇರಿಂಗ್ (Photo Sharing), ಉದ್ಯಮದ ಅಪ್‌ಡೇಟ್‌ಗಳು, ಫಾಲೋವರ್ಸ್ ಸಂಖ್ಯೆಯಲ್ಲಿ ಏರಿಕೆ ಮಾಡುವುದು ಇವೇ ಮೊದಲಾದ ಅಂಶಗಳತ್ತ ಕೂಡ ನೀವು ನಿರಂತರ ಗಮನಹರಿಸಬೇಕು ಹಾಗೂ ಪ್ರಯತ್ನಶೀಲರಾಗಿರಬೇಕು.

ಹೊಸ ಪೋಸ್ಟ್‌ಗಳನ್ನು ನೀವು ಶೇರ್ ಮಾಡುತ್ತೀರಿ ಎಂದಾದಲ್ಲಿ ನೀವು ನಿರ್ದಿಷ್ಟ ಸಮಯ ಅನುಸರಿಸಬೇಕಾಗುತ್ತದೆ. ಅದೇ ರೀತಿ ಸಮಯಕ್ಕೆ ಸರಿಯಾಗಿ ಪೋಸ್ಟ್ ಶೆಡ್ಯೂಲ್‌ ಮಾಡುವ ಚಾಕಚಕ್ಯತೆಯನ್ನು ನೀವು ಅಳವಡಿಸಿಕೊಂಡಿರಬೇಕು. ಇದರಿಂದ ನೀವು ಬೇರೆ ಕೆಲಸದಲ್ಲಿ ವ್ಯಸ್ಥರಾಗಿದ್ದರೂ ಇಲ್ಲದಿದ್ದರೆ ಸಾಮಾಜಿಕ ತಾಣದಲ್ಲಿ ಸಮಯ ವಿನಿಯೋಗಿಸದಷ್ಟು ಸಮಯಾವಕಾಶ ಕಡಿಮೆ ಇದೆ ಎಂದಾದಲ್ಲಿ ಈ ವಿಧಾನಗಳು ನಿಮಗೆ ಸಹಕಾರಿಯಾಗಿವೆ.

ನಮಗೆಲ್ಲಾ ತಿಳಿದಿರುವಂತೆ ಇನ್‌ಸ್ಟಾಗ್ರಾಮ್ ಆ್ಯಪ್ ನಿಗದಿಗೊಳಿಸುವ (ಸ್ಕೆಡ್ಯೂಲಿಂಗ್ ಫೀಚರ್‌ಗಳು) ಒದಗಿಸದೇ ಇರುವುದರಿಂದ ಫೇಸ್‌ಬುಕ್ ಕ್ರಿಯೇಟರ್ ಸ್ಟುಡಿಯೋ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಅದೇ ರೀತಿ ಕೆಲವೊಂದಿಷ್ಟು ಮೂರನೇ ವ್ಯಕ್ತಿ ಆ್ಯಪ್‌ಗಳಿದ್ದು (Third party Apps) ಇದೇ ರೀತಿಯ ಸಲಹೆಗಳನ್ನು ನಿಮಗೆ ಒದಗಿಸುತ್ತವೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಶೆಡ್ಯೂಲ್ (ಯೋಜಿಸುವುದು) ಹೇಗೆ ಎಂಬುದನ್ನು ತಿಳಿದುಕೊಳ್ಳೋಣ

ಕ್ರಿಯೇಟರ್ ಸ್ಟುಡಿಯೋ (Creator Studio) ಬಳಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ನಿಗದಿಪಡಿಸುವುದು ಹೇಗೆ:

ಇದಕ್ಕಾಗಿ ನಿಮಗೆ ವೃತ್ತಿಪರ ಇನ್‌ಸ್ಟಾಗ್ರಾಮ್ ಖಾತೆಯ ಅಗತ್ಯವಿದೆ. ಇದು ಬಿಸ್‌ನೆಸ್ ಖಾತೆ ಹಾಗೂ 10,000 ಫಾಲೋವರ್ಸ್‌ಗಳನ್ನೊಳಗೊಂಡ ಕ್ರಿಯೇಟರ್ ಖಾತೆ ಒಳಗೊಂಡಿದೆ. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಕ್ರಿಯೇಟರ್ ಸ್ಟುಡಿಯೋ ಸ್ಕೆಡ್ಯೂಲಿಂಗ್ ಫೀಚರ್, ವೈಯಕ್ತಿಕ ಇನ್‌ಸ್ಟಾಗ್ರಾಮ್ ಖಾತೆಗಳಿಗೆ ಕಾರ್ಯನಿರ್ವಹಿಸುವುದಿಲ್ಲ.

1. ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಕ್ರಿಯೇಟರ್ ಸ್ಟುಡಿಯೋ ತೆರೆಯಿರಿ ಹಾಗೂ ಇನ್‌ಸ್ಟಾಗ್ರಾಮ್ ಖಾತೆಗೆ ಲಿಂಕ್ ಮಾಡಿ

ಇದನ್ನು ಮಾಡಲು, ಸರಳವಾಗಿ ಕ್ರಿಯೇಟರ್ ಸ್ಟುಡಿಯೋ ತೆರೆಯಿರಿ ಹಾಗೂ ಫೇಸ್‌ಬುಕ್ ಖಾತೆ ಬಳಸಿಕೊಂಡು ಲಾಗಿನ್ ಮಾಡಿ. ಇದೀಗ, ಮೇಲ್ಭಾಗದಲ್ಲಿರುವ ಇನ್‌ಸ್ಟಾ ಐಕಾನ್ ಸ್ಪರ್ಶಿಸಿ ನಂತರ ನಿಮ್ಮ ಖಾತೆ ಬಟನ್ ಕನೆಕ್ಟ್ ಮಾಡಿ ಕ್ಲಿಕ್ ಮಾಡಿ.

2. ಒಮ್ಮೆ ಕನೆಕ್ಟ್ ಆದ ನಂತರ, ಎಡಸೈಡ್‌ಬಾರ್‌ನಿಂದ ಕ್ರಿಯೇಟ್ ಪೋಸ್ಟ್ ಬಟನ್ ಕ್ಲಿಕ್ ಮಾಡಿ. ಇನ್‌ಸ್ಟಾಗ್ರಾಮ್ ಫೀಡ್ ಹಾಗೂ ಐಜಿಟಿವಿ ನಡುವೆ ಆಯ್ಕೆಮಾಡಿ

3. ಇದೀಗ ಮೀಡಿಯಾ, ಕ್ಯಾಪ್ಶನ್, ಹ್ಯಾಶ್‌ಟ್ಯಾಗ್‌ಗಳು ಮೊದಲಾದ ಮಾಹಿತಿಗಳನ್ನೊಳಗೊಂಡ ನೀವು ನಿಗದಿಪಡಿಸಲು ಬಯಸುವ ಕಂಟೆಂಟ್ ಅಪ್‌ಲೋಡ್ ಮಾಡಿ ಹಾಗೂ ಕೆಳಗಿನ ಬಲಮೂಲೆಯಲ್ಲಿರುವ ಪಬ್ಲಿಶ್ ಬಟನ್ ಪಕ್ಕದ ಕೆಳಮುಖವಾಗಿರುವ ಬಾಣದ ಗುರುತನ್ನು ಕ್ಲಿಕ್ ಮಾಡಿ

4. ಇಲ್ಲಿ ನಿಗದಿಪಡಿಸುವ (ಶೆಡ್ಯೂಲ್) ಆಯ್ಕೆಯನ್ನು ಆರಿಸಿ, ಪೋಸ್ಟ್ ಅನ್ನು ಕ್ಲಿಕ್ ಮಾಡಲು ಬಯಸುವ ನಿಮ್ಮ ಇಷ್ಟದ ದಿನಾಂಕ ಹಾಗೂ ಸಮಯ ಆರಿಸಿ ನಂತರ ಶೆಡ್ಯೂಲ್ ಬಟನ್ ಕ್ಲಿಕ್ ಮಾಡಿ.

Read Also ⇒ Secret Phone Killers: ಎಷ್ಟು ಬಾರಿ ಚಾರ್ಜ್​ ಮಾಡಿದರೇನು..ನಿಮ್ಮ ಸ್ಮಾರ್ಟ್​ಫೋನ್ ಬ್ಯಾಟರಿ ಖಾಲಿ ಮಾಡಲು ಈ ಆ್ಯಪ್​ಗಳೇ ಸಾಕು!

ವೈಯಕ್ತಿಕ ಖಾತೆಗಳಿಗಾಗಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ನಿಗದಿಪಡಿಸುವುದು ಹೇಗೆ:

ಇದಕ್ಕಾಗಿ ನೀವು ಥರ್ಡ್ ಪಾರ್ಟಿ ಟೂಲ್‌ಗಳಾದ ಬಫರ್, ಹೂಟ್‌ಸೂಟ್, ಸ್ಕೆಡ್ ಸೋಶಿಯಲ್ ಇತ್ಯಾದಿಗಳನ್ನು ಹೊಂದಿರಬೇಕು. ಈ ಟೂಲ್‌ಗಳೊಂದಿಗೆ ನಿಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಲಿಂಕ್ ಮಾಡಿ ಹಾಗೂ ಪೋಸ್ಟ್‌ಗಳನ್ನು ಶೆಡ್ಯೂಲ್ ಮಾಡಿ.
First published: