HOME » NEWS » Tech » INSTAGRAM TIKTOK AND YOUTUBE 235 MILLION USER PROFILES EXPOSED IN MASSIVE DATA LEAK HG

ಇನ್​​ಸ್ಟಾಗ್ರಾಂ, ಟಿಕ್​ಟಾಕ್​, ಯ್ಯೂಟೂಬ್​ ಸೇರಿದಂತೆ 235 ಮಿಲಿಯನ್​ ಬಳಕೆದಾರರ ಮಾಹಿತಿ ಸೋರಿಕೆ!

ಇನ್​ಸ್ಟಾಗ್ರಾಂನ 100 ಮಿಲಿಯನ್​ಗೂ ಅಧಿಕ ಬಳಕೆದಾರರ ಡೇಟಾ ಮತ್ತು ಪ್ರೊಫೈಲ್​ಗಳು ಸೋರಿಕೆಯಾಗಿದೆ. ಅದರಂತೆ 42 ಮಿಲಿಯನ್​​ ಟಿಕ್​ಟಾಕ್​​ ಬಳಕೆದಾರರ ಡೇಟಾ, ಮತ್ತು 4 ಮಿಲಿಯನ್​​ ಯ್ಯೂಟೂಬ್​​ ಬಳಕೆದಾರರ ಪ್ರೊಫೈಲ್​ಗಳ ಮಾಹಿತಿ ಸೋರಿಕೆಯಾಗಿವೆ.

news18-kannada
Updated:August 21, 2020, 5:14 PM IST
ಇನ್​​ಸ್ಟಾಗ್ರಾಂ, ಟಿಕ್​ಟಾಕ್​, ಯ್ಯೂಟೂಬ್​ ಸೇರಿದಂತೆ 235 ಮಿಲಿಯನ್​ ಬಳಕೆದಾರರ ಮಾಹಿತಿ ಸೋರಿಕೆ!
ಇನ್​​ಸ್ಟಾಗ್ರಾಂ, ಟಿಕ್​ಟಾಕ್​, ಯ್ಯೂಟೂಬ್​
  • Share this:
ಫೇಸ್​ಬುಕ್​ ಒಡೆತನದ ಇನ್​ಸ್ಟಾಗ್ರಾಂ, ಚೀನಾ ಬೈಟೆಡ್ಯಾನ್ಸ್​ ಒಡೆತನದ ಟಿಕ್​ಟಾಕ್​​ ಮತ್ತು ಗೂಗಲ್​​ ಒಡೆತನದ ಯ್ಯೂಟೂಬ್​ ಸೇರಿದಂತೆ ಸುಮಾರು 235 ಮಿಲಿಯನ್​ ಬಳಕೆದಾರರ ಡೇಟಾ ಡಾರ್ಕ್​​​​​ ವೆಬ್​ನಲ್ಲಿ ಸೋರಿಕೆಯಾಗಿದೆ ಎಂದು ಕಂಪಾರಿಟೆಕ್​ ಭದ್ರತಾ ಸಂಶೋಧಕರ ತಂಡವು ತಿಳಿಸಿದೆ.

ಅದರ ಜೊತೆಗೆ ಬಳಕೆದಾರರ ಪ್ರೊಫೈಲ್​ಗಳು ಕೂಡ ಸೋರಿಕೆಯಾಗಿದೆ. ಕಂಪಾರಿಟೆಕ್​ ಭದ್ರತಾ ಸಂಶೋಧಕರ ಪ್ರಕಾರ ಸಾಕಷ್ಟು ಬಳಕೆದಾರರು ಖಾಸಗಿ ಮಾಹಿತಿಗಳು ಬಹಿರಂಗವಾಗಿದ್ದು, ಇದರ ಹಿಂದೆ ಅಸುರಕ್ಷಿತ ಡೇಟಾಬೆಸ್​ವೊಂದಿದೆ ಎಂದು ಹೇಳಿದೆ.

ಇನ್​ಸ್ಟಾಗ್ರಾಂನ 100 ಮಿಲಿಯನ್​ಗೂ ಅಧಿಕ ಬಳಕೆದಾರರ ಡೇಟಾ ಮತ್ತು ಪ್ರೊಫೈಲ್​ಗಳು ಸೋರಿಕೆಯಾಗಿದೆ. ಅದರಂತೆ 42 ಮಿಲಿಯನ್​​ ಟಿಕ್​ಟಾಕ್​​ ಬಳಕೆದಾರರ ಡೇಟಾ, ಮತ್ತು 4 ಮಿಲಿಯನ್​​ ಯ್ಯೂಟೂಬ್​​ ಬಳಕೆದಾರರ ಪ್ರೊಫೈಲ್​ಗಳ ಮಾಹಿತಿ ಸೋರಿಕೆಯಾಗಿವೆ.

ಸೋರಿಕೆಯಾದ ಡೇಟಾದಲ್ಲಿ ಬಳಕೆದಾರರ ವೈಯ್ಯಕ್ತಿಕ ಮಾಹಿತಿ, ಹೆಸರು, ಫೋಟೋ, ಅಧಿಕೃತ ನೋಂದಣಿ ಮಾಡಿರುವ ಹೆಸರು, ಅಕೌಂಟ್​​ ಡಿಸ್ಕ್ರಿಪ್ಷನ್​​​, ಜಾಹೀರಾತು ಉದ್ಯಮಕ್ಕೆ ಸೇರಿದೆಯ ಎಂಬ ಮಾಹಿತಿ, ಫಾಲೋವರ್ಸ್​, ಬಳಕೆದಾರನ ವಯಸ್ಸು, ಲಿಂಗ, ಲೈಕ್ಸ್​, ಲೊಕೇಶನ್​​, ಇಮೇಲ್​, ಕೊನೆಯ ಪೋಸ್ಟ್​​ ಮಾಡಿದ ಮಾಹಿತಿ, ಫೋನ್​ ನಂಬರ್​ ಸೇರಿದಂತೆ ಹಲವಾರು ಮಾಹಿತಿಗಳು ಲೀಕ್​ ಆಗಿದೆ.

ಈ ಬಗ್ಗೆ ಟೆಕ್​​ ತಂತ್ರಜ್ನ ಪೌಲ್​​ ಬಿಶಾಫ್​ ಮಾತನಾಡಿದ್ದು, ಈ ದತ್ತಾಂಶಗಳ ಸೋರಿಕೆ ಸೈಬರ್​​ ಅಪರಾಧಿಗಳಿಗೆ ವರದಾನವಾಗಲಿದೆ. ಮಾಹಿತಿಗಳನ್ನು ಕಲೆಹಾಕಿ ಹಣದ ಬೇಡಿಕೆಯನ್ನು ಇಡಲು ನೆರವಾಗಲಿದೆ ಎಂದು ಹೇಳಿದ್ದಾರೆ.

ನಂತರ ಮಾತನಾಡಿದ್ದ ಅವರು, ಈ ಸೋಷಿಯಲ್​ ಮೀಡಿಯಾದಲ್ಲಿರುವ  ಬಳಕೆದಾರರ ಡೇಟಾವನ್ನು ಸಾರ್ವಜನಿಕವಾಗಿ ಪ್ರವೇಶಿಸಬಹುದಾಗಿದೆ. ಹಾಗಾಗಿ ಡೇಟಾ ಹೆಚ್ಚು ಸೋರಿಕೆಯಾಗಿದೆ. ಪ್ರತಿಯೊಬ್ಬರ ಪ್ರೊಫೈಲ್​ ಮೌಲ್ಯಯುತವಾಗಿದೆ ಎಂದು ಹೇಳಿದ್ದಾರೆ
Youtube Video
ಸಂಶೋಧಕರ ಪ್ರಕಾರ ಫೇಸ್​ಬುಕ್​​ ಹಾಗೂ ಇನ್​ಸ್ಟಾಗ್ರಾಂನಿಂದ 2018ರಲ್ಲಿ ನಿಷೇಧಕ್ಕೆ ಒಳಗಾದ ಡೀಪ್​ ಸೋಷಿಯಲ್​ ಎಂಬ ಕಂಪನಿ ಡೇಟಾವನ್ನು ಸೋರಿಕೆ ಮಾಡಿದೆ ಎಂದು ಹೇಳಿದೆ.
Published by: Harshith AS
First published: August 21, 2020, 5:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories