ಇನ್ಸ್ಟಾಗ್ರಾಂನಿಂದ ಹೊಸ ಐಜಿಟಿವಿ ಆ್ಯಪ್​, ಯುಟ್ಯೂಬ್​ಗೆ ಬೀಳುತ್ತಾ ಪೆಟ್ಟು?


Updated:June 21, 2018, 6:45 PM IST
ಇನ್ಸ್ಟಾಗ್ರಾಂನಿಂದ ಹೊಸ ಐಜಿಟಿವಿ ಆ್ಯಪ್​, ಯುಟ್ಯೂಬ್​ಗೆ ಬೀಳುತ್ತಾ ಪೆಟ್ಟು?
(Image: Reuters)

Updated: June 21, 2018, 6:45 PM IST
ನ್ಯೂಯಾರ್ಕ್​: ಗೂಗಲ್​ನ ಯುಟ್ಯೂಬ್​ ಮತ್ತು ಸ್ನಾಪ್​ಚಾಟ್​ಗೆ ಸೆಡ್ಡು ಹೊಡೆಯಲು ತೀರ್ಮಾನಿಸಿರುವ ಫೇಸ್​ಬುಕ್​ ಒಡೆತನದ ಇನ್ಸ್ಟಾಗ್ರಾಂ ಇದೀಗ ತನ್ನದೇ ದೀರ್ಘಕಾಲಿಕ ವಿಡಿಯೋಗಳನ್ನು ಸ್ಟ್ರೀಮ್ ಮಾಡಲು ಮುಂದಾಗಿದೆ.

ಇನ್ಸ್ಟಾಗ್ರಾಂ ಐಜಿಟಿವಿ ಆಪ್ ಬಿಡುಗಡೆಗೊಳಿಸಿದ್ದು, ವಿಡಿಯೋ ಪ್ಲಾಟ್‌ಫಾರ್ಮ್‌ನ್ನು ಯುಟ್ಯೂಬ್‌ನೊಂದಿಗೆ ಹಂಚಿಕೊಳ್ಳಲು ಸಿದ್ಧತೆ ನಡೆಸಿದೆ ಎಂದು ಇನ್ಸ್ಟಾಗ್ರಾಂನ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಕೆವಿನ್​ ಸಿಂಟ್ರೋಮ್​ ಹೇಳಿದ್ದಾರೆ.

ಈಗಾಗಲೇ ಸೆಲೆಬ್ರೆಟಿಗಳಿಗೆ ಹೆಚ್ಚಿನ ಆಧ್ಯತೆ ನೀಡಿರುವ ಇನ್ಸ್ಟಾಗ್ರಾಂ, ಖ್ಯಾತ ಸೆಲೆಬ್ರೆಟಿಗಳೊಂದಿಗೆ ಒಪ್ಪಂದ ಕೂಡಾ ಮಾಡಿಕೊಂಡಿದ್ದು, 10 ಮಿಲಿಯನ್​ಗಿಂತ ಹೆಚ್ಚು ಫಾಲೋವರ್ಸ್​ ಇರುವ ವ್ಯಕ್ತಿಗಳೊಂದಿಗೆ ಸಂಸ್ಥೆ ಒಪ್ಪಂದ ಮಾಡಿಕೊಂಡಿರುವುದನ್ನು ಖಚಿತ ಪಡಿಸಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ವೈರಲ್​ ಆದ ವೀಡಿಯೊಗಳು ಸೇರಿದಂತೆ ವೀಡಿಯೋ ನಿರ್ಮಾತೃಗಳಿಗೆ ಲಾಭದ ಹಣ ಸಂದಾಯ ಮಾಡಲು ತೀರ್ಮಾನಿಸಿದೆ.

ಇನ್ನು ಐಜಿಟಿವಿ ಫೀಚರ್​ಗಳ ಕುರಿತು ಹೇಳುವುದಾದರೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಅಪ್‌ಲೋಡ್ ಮಾಡುವ ಅವಧಿಯನ್ನು ಒಂದು ನಿಮಿಷಕ್ಕೆ ಸೀಮಿತಗೊಳಿಸಲಾಗಿತ್ತು. ಆದರೆ ಇದೀಗ ಐಜಿಟಿವಿ ಆ್ಯಪ್‌ನಲ್ಲಿ ಈ ಅವಧಿಯನ್ನು ಒಂದು ಗಂಟೆಗೆ ಹೆಚ್ಚಿಸಲಾಗಿದೆ.

ಈ ಆ್ಯಪ್​ನಲ್ಲಿ ಇನ್ಸ್ಟಾದಲ್ಲಿ ಇರುವ ಹಾಗೇಯೇ ಸ್ವಯಂ ಚಾಲಿತ ವಿಡಿಯೋಗಳು ಪ್ಲೇ ಆಗುತ್ತವೆ, ಕೇವಲ ಸ್ವೈಪ್​ ಮಾಡಿದರೆ ಹೊಸ ವಿಡಿಯೋ ದೊರಕುತ್ತದೆ. ಫಾರ್ ಯು, ಫಾಲೋಯಿಂಗ್, ಪಾಪುಲರ್ ಮತ್ತು ಕಂಟಿನ್ಯೂ ವಾಚಿಂಗ್​ ಎಂಬ ಬಟನ್​ಗಳನ್ನು ನೀಡಲಾಗಿದೆ.

ಫೇಸ್​ಬುಕ್​ನಂತೆ ಇದರಲ್ಲೂ ನೇರವಾಗಿ ನಿಮ್ಮ ವಿಡಿಯೋವನ್ನು ಲೈಕ್​, ಶೇರ್​ ಹಾಗೂ ಕಾಮೆಂಟ್​ ಕೂಡ ಮಾಡಲು ಅವಕಾಶವಿದೆ. ಈ ವರೆಗಿನ ಮಾಹಿತಿಗಳ ಪ್ರಕಾರ ಒಂದು ವೇಳೆ ಐಜಿಟಿವಿ ಹಿಟ್ ಆದರೆ ಯೂಟ್ಯೂಬ್​ ಹಾಗೈ ಸ್ನಾಪ್​ಚಾಟ್​ ಕಂಪನಿಗಳ ಶಟರ್​ ಎಳೆಯಬೇಕಾಗಬಹುದು. ಏಕೆಂದರೆ ಸದ್ಯಕ್ಕೆ ಐಜಿಟಿವಿ ಯಾವುದೇ ಜಾಹೀರಾತುಗಳನ್ನು ನೀಡುತ್ತಿಲ್ಲ, ಅಲ್ಲದೇ ಮುಂದೆ ನೀಡಬಹುದು ಎಂಬುದಕ್ಕೂ ಸಮ್ಮತಿ ಸೂಚಿಸಿಲ್ಲ. ಇನ್ನು ಶೀಘ್ರದಲ್ಲೇ ವಿಡಿಯೋ ನಿರ್ಮಾತೃಗಳಿಗೆ ಲಾಭದ ಮೊತ್ತವನ್ನೂ ನೀಡುವುದಾಗಿ ಒಪ್ಪಿಕೊಂಡಿದೆ. ಈ ಎಲ್ಲಾ ಸ್ಟ್ರಾಟಜಿ ಯೂಟ್ಯೂಬ್​ಗೆ ಪೆಟ್ಟು ಬೀಳಬಹುದು.
First published:June 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...