news18-kannada Updated:July 9, 2020, 12:27 PM IST
ಇನ್ಸ್ಟಾಗ್ರಾಂ
ಚೀನಾ ಮೂಲದ ಟಿಕ್ಟಾಕ್ ಆ್ಯಪ್ ಭಾರತದಲ್ಲಿ ಭಾರೀ ಜನಪ್ರಿಯತೆ ಪಡೆದಿತ್ತು. ಅನೇಕ ಜನರು ಟಿಕ್ಟಾಕ್ ಆ್ಯಪ್ ಅನ್ನು ಬಳಸುತ್ತಿದ್ದರು. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಚೀನಾ ಮೂಲದ ಆ್ಯಪ್ಗಳು ಆಂತರಿಕ ಮತ್ತು ಬಾಹ್ಯವಾಗಿ ತೊಂದರೆಯನ್ನುಂಟು ಮಾಡಬಹದು ಎಂಬ ದೃಷ್ಠಿಯಿಂದ ಸುಮಾರು 59 ಆ್ಯಪ್ಗಳನ್ನು ಭಾರತದಲ್ಲಿ ಬ್ಯಾನ್ ಮಾಡಿದೆ. ಇದರಲ್ಲಿ ಜನಪ್ರಿಯ ಟಿಕ್ಟಾಕ್ ಕೂಡ ಸೇರಿತ್ತು. ಈ ಹಿನ್ನೆಯಲ್ಲಿ ಟಿಕ್ಟಾಕ್ ಫೀಚರ್ ಹೋಲುವ ಅನೇಕ ದೇಶಿಯ ಆ್ಯಪ್ಗಳು ಭಾರತದಲ್ಲಿ ಅಭಿವೃದ್ಧಿಗೊಂಡು ಜನಪ್ರಿಯತೆ ಪಡೆಯುತ್ತಿದೆ.
ಇದೀಗ ತಂತ್ರಜ್ಞಾನ ದೈತ್ಯ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ತನ್ನ ಬಳಕೆದಾರರಿಗೆ ಟಿಕ್ಟಾಕ್ ಮಾದರಿಯ ವಿಡಿಯೋಗಳನ್ನು ರಚಿಸಲು ಅನುವು ಮಾಡಿಕೊಡುವಂತಹ ಫೀಚರ್ ಒಂದನ್ನು ಪರಿಚಯಿಸಿದೆ. ಸದ್ಯ ಭಾರತದಲ್ಲಿ ಇನ್ಸ್ಟಾಗ್ರಾಂ ರೀಲ್ಸ್ ಬಿಡುಗಡೆಯಾಗಿದೆ.
ಫೇಸ್ಬುಕ್, ಇನ್ಸ್ಟಾಗ್ರಾಂ, ಪಬ್ಜಿ ಸೇರಿ 89 ಆ್ಯಪ್ಗಳನ್ನು ಡಿಲೀಟ್ ಮಾಡಿ; ಭಾರತೀಯ ಸೈನಿಕರಿಗೆ ಆದೇಶ
ಇನ್ಸ್ಟಾಗ್ರಾಂ ರೀಲ್ಸ್ ವೈಶಿಷ್ಟ್ಯವು ಬಳಕೆದಾರರಿಗೆ ಇನ್ಸ್ಟಾಗ್ರಾಂನಲ್ಲಿ ಕಿರು ವೀಡಿಯೊಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇನ್ಸ್ಟಾಗ್ರಾಂ ಬಳಕೆದಾರರು ಆಡಿಯೋ ಎಫೆಕ್ಟ್ಗಳೊಂದಿಗೆ 15 ಸೆಕೆಂಡುಗಳ ಮಲ್ಟಿ-ಕ್ಲಿಪ್ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು.
ಇದನ್ನ ಟೂಲ್ ಬಳಸಿ ರಚಿಸಬಹುದು. ಎಕ್ಸ್ಪ್ಲೋರ್ ವಿಭಾಗದಲ್ಲಿ ಹೊಸ ಜಾಗದ ಮೂಲಕ ಸಾರ್ವಜನಿಕ ಖಾತೆಗಳು ತಮ್ಮ ರೀಲ್ಹಳನ್ನು ಹೆಚ್ಚಿನ ಪ್ರೇಕ್ಷಕರಿಗೆ ಲಭ್ಯವಾಗುವಂತೆ ಮಾಡಬಹುದು. ಪ್ರಮುಖ ಸಂಗೀತ ಲೇಬಲ್ಗಳನ್ನು ರೀಲ್ಸ್ ಒಳಗೊಂಡಿದೆ.
ಬಳಕೆದಾರರು ಇನ್-ಆ್ಯಪ್ ಮ್ಯೂಸಿಕ್ ಟ್ರ್ಯಾಕ್ ಅಥವಾ ತಮಗೆ ಬೇಕಿದ್ದ ಧ್ವನಿ ಬಳಸಬಹುದಾಗಿದೆ. ರೀಲ್ಸ್ನಲ್ಲಿ ಹಲವಾರು ರಿಯಾಲಿಟಿ ಎಫೆಕ್ಟ್ಗಳೂ ಇದ್ದು ತಮಾಷೆಯ ವೀಡಿಯೋಗಳನ್ನು ಮಾಡಬಹುದಾಗಿದೆ.
Jio Prepaid Plan: ಜುಲೈ ತಿಂಗಳಲ್ಲಿ ಅಳವಡಿಸಬಹುದಾದ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್ಗಳುಇನ್ಸ್ಟಾಗ್ರಾಂ ರೀಲ್ಸ್ ಭಾರತದಲ್ಲಿ ಟಿಕ್ಟಾಕ್ ಬದಲಿಯಾಗಿ ಕಾಣುವುದರಲ್ಲಿ ಸಂಶಯವಿಲ್ಲ. ಆದರೆ, ಈ ವೈಶಿಷ್ಟ್ಯವು ಯಶಸ್ವಿಯಾಗಬಹುದೇ ಅಥವಾ ಇಲ್ಲವೇ ಎಂಬುದನ್ನು ಸಮಯ ಮಾತ್ರ ಹೇಳಬೇಕಿದೆ.
ಭಾರತದಲ್ಲಿ 200 ಮಿಲಿಯನ್ ಜನರು ಟಿಕ್ಟಾಕ್ ಬಳಸುತ್ತಿದ್ದರು. ಆದರೆ ಬ್ಯಾನ್ ಆದ ನಂತರ ರೆಪೊಸೊ, ಚಿಂಗಾರಿ, ಮಿತ್ರೋ ಆ್ಯಪ್ಗಳ ಮೊರೆ ಹೋಗಿದ್ದಾರೆ. ಸದ್ಯ ರೆಪೊಸೊ ಆ್ಯಪ್ ಟಾಪ್ ಫ್ರೀ ಆ್ಯಪ್ಗಳ ಪಟ್ಟಿಯಲ್ಲಿ ಹೆಚ್ಚು ಡೌನ್ಲೋಡ್ ಕಾಣುವ ಮೂಲಕ ದಾಖಲೆಯನ್ನು ಬರೆದಿದೆ.
Published by:
Vinay Bhat
First published:
July 9, 2020, 12:27 PM IST