HOME » NEWS » Tech » INSTAGRAM SHARE 79 PER CENT OF USERS PERSONAL DATA WITH THIRD PARTIES HG

ಬಳಕೆದಾರನ ಡಾಟಾ ಸಂಗ್ರಹಿಸುವುದರಲ್ಲಿ ಇನ್​ಸ್ಟಾಗ್ರಾಂ ಮೊದಲು!; 2ನೇ ಸ್ಥಾನದಲ್ಲಿ ಯಾವುದಿದೆ ಗೊತ್ತಾ?

Most Invasive App: ಐಒಎಸ್​​ ಅಪ್ಲಿಕೇಶನ್​ ಡೇಟಾ ಸಂಗ್ರಹಣೆಯ ಮೂಲಕ ಹೆಚ್ಚು ಪಾರದರ್ಶಕತೆಯನ್ನು ನೀಡುವ ಉದ್ದೇಶದಿಂದ ಪಿಕ್ಲೌಡ್​ ಈ ಆವಿಷ್ಕಾರ ಮಾಡಿದೆ. ಅದರ ಮೂಲಕ ಅಪ್ಲಿಕೇಶನ್​ಗಳು ಬಳಕೆದಾರನ ಎಷ್ಟು ಡಾಟಾ ಶೇರ್​ ಮಾಡುತ್ತದೆ ಎಂಬುದರ ಬಗ್ಗೆ ಈ ಅಚ್ಚರಿಯ ಮಾಹಿತಿ ನೀಡಿದೆ.

news18-kannada
Updated:March 24, 2021, 11:57 AM IST
ಬಳಕೆದಾರನ ಡಾಟಾ ಸಂಗ್ರಹಿಸುವುದರಲ್ಲಿ ಇನ್​ಸ್ಟಾಗ್ರಾಂ ಮೊದಲು!; 2ನೇ ಸ್ಥಾನದಲ್ಲಿ ಯಾವುದಿದೆ ಗೊತ್ತಾ?
ಇನ್​​​ಸ್ಟಾಗ್ರಾಂ
  • Share this:
ಬಹುತೇಕರು ಸ್ಮಾರ್ಟ್​ಫೋನಿನಲ್ಲಿ ಫೇಸ್​ಬುಕ್​, ಇನ್​ಸ್ಟಾಗ್ರಾಂ, ಟೆಲಿಗ್ರಾಂ, ವಾಟ್ಸ್​​ಆ್ಯಪ್​ ಹೀಗೆ ನಾನಾ ಆ್ಯಪ್​ಗಳನ್ನು ಇನ್​ಸ್ಟಾಲ್​ ಮಾಡಿಕೊಂಡು ಬಳಸುತ್ತಿದ್ದಾರೆ. ಅದರ ಮೂಲಕ ಪ್ರತಿನಿತ್ಯ ಸಂದೇಶ, ಫೋಟೋ, ವಿಡಿಯೋ ಕಳುಹಿಸುತ್ತಿದ್ದಾರೆ. ಆದರೆ ಈ ಆ್ಯಪ್​ಗಳು ಬಳಕೆದಾರನ ಎಷ್ಟು ಡಾಟಾ ಸಂಗ್ರಹಿಸುತ್ತಿದೆ? ಥರ್ಡ್​ಪಾರ್ಟಿಗಳಿಗೆ ಎಷ್ಟು ಡಾಟಾವನ್ನು ಮಾರುತ್ತಿದೆ ಎಂದು ಗೊತ್ತಾ? ಹಾಗಿದ್ದರೆ ಈ ಸ್ಟೋರಿ ನೋಡಿ.

ಫೇಸ್​ಬುಕ್​​ ಒಡೆತನದ ಇನ್​ಸ್ಟಾಗ್ರಾಂ ಆ್ಯಪ್​ ಅನ್ನು ಹೆಚ್ಚಿನ ಜನರು ಬಳಸುತ್ತಿದ್ದಾರೆ. ಅದರೆ ಈ ಆ್ಯಪ್​ ಶೇ.79ರಷ್ಟು ಡಾಟಾವನ್ನು ಥರ್ಟ್​ಪಾರ್ಟಿಗಳೊಂದಿಗೆ ಶೇರ್​​ ಮಾಡುತ್ತದೆ. ಜೊತೆಗೆ ಹಿಸ್ಟರಿ, ಲೊಕೇಶನ್​, ಕ್ವಾಂಟ್ಯಾಕ್ಟ್​, ಖರೀದಿ ಮತ್ತು  ಆರ್ಥಿಕ ವಿಚಾರವನ್ನು ಶೇರ್​ ಮಾಡುತ್ತದೆ. ಹಾಗಾಗಿ ಅತಿ ಹೆಚ್ಚು ಡಾಟಾ ಸಂಗ್ರಹಿಸುವುದರಲ್ಲಿ ಇನ್​ಸ್ಟಾಗ್ರಾಂ ಮೊದಲಿದೆ!.

ಐಒಎಸ್​​ ಅಪ್ಲಿಕೇಶನ್​ ಡೇಟಾ ಸಂಗ್ರಹಣೆಯ ಮೂಲಕ ಹೆಚ್ಚು ಪಾರದರ್ಶಕತೆಯನ್ನು ನೀಡುವ ಉದ್ದೇಶದಿಂದ ಪಿಕ್ಲೌಡ್​ ಈ ಆವಿಷ್ಕಾರ ಮಾಡಿದೆ. ಅದರ ಮೂಲಕ ಅಪ್ಲಿಕೇಶನ್​ಗಳು ಬಳಕೆದಾರನ ಎಷ್ಟು ಡಾಟಾ ಶೇರ್​ ಮಾಡುತ್ತದೆ ಎಂಬುದರ ಬಗ್ಗೆ ಈ ಅಚ್ಚರಿಯ ಮಾಹಿತಿ ನೀಡಿದೆ.

ಇನ್ನು ಫೇಸ್​ಬುಕ್​ ಕೂಡ ಬಳಕೆದಾರರ ಮಾಹಿತಿಯನ್ನು ಥರ್ಡ್​​ಪಾರ್ಟಿಗಳಿಗೆ ಶೇರ್​ ಮಾಡುತ್ತಿದೆ. ಶೇ.57ರಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ. ಜೊತೆಗೆ ತನ್ನದೇ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಜಾಹೀರಾತು ಒದಗಿಸಲು ಬಳಕೆದಾರನ ಶೇ.86 ರಷ್ಟು ಡೇಟಾವನ್ನು ಸಂಗ್ರಹಿಸುತ್ತದೆ.

-ಲಿಂಕ್ಡಿನ್​​ ಶೇ.50 ರಷ್ಟು ಡಾಟಾವನ್ನು ಥರ್ಟ್​ ಪಾರ್ಟಿಗಳಿಗೆ ಶೇರ್​ ಮಾಡುತ್ತಿದೆ.

- ಊಬರ್​ ಈಟ್​ ಶೇ.50ರಷ್ಟು ಡಾಟಾ ಸಂಗ್ರಹಿಸಿ ಶೇರ್​ ಮಾಡುತ್ತಿದೆ.

-ಟ್ರೈನ್​ಲೈನ್​ ಶೇ.43, ಯ್ಯೂಟೂಬ್​ ಶೇ.43, ಯ್ಯೂಟೂಬ್​ ಮ್ಯೂಸಿಕ್ ಶೇ.43ರಷ್ಟು ಶೇರ್​ ಮಾಡುತ್ತಿದೆ.-ಡೆಲಿವರ್ಗೊ ಆ್ಯಪ್​​, ಡುಲಿಂಗೋ, ಇಬೇ, ಐಟಿವಿ ಹಬ್​, ಟಿಕ್​ಟಾಕ್​ ಶೇ.36ರಷ್ಟು ಡಾಟಾ ಶೇರ್​ ಮಾಡಿದರೆ

-ಇಎಸ್​ಪಿಎನ್​, ಮೂನ್​ಪಿಂಗ್​ ಮತ್ತು ರೆಡ್​ಇಟ್​ ಶೇ.29 ರಷ್ಟು ಡಾಟಾ ಸಂಗ್ರಹಿಸಿ ಮಾರುತ್ತಿದೆ.

ಗೌಪ್ಯತೆ ಕೇಂದ್ರಿತ ಮೆಸೇಜಿಂಗ್​ ಅಪ್ಲಿಕೇಶನ್​ಗಳಾದ ಸಿಗ್ನಲ್​, ಟೆಲಿಗ್ರಾಂ, ವಿಡಿಯೋ ಕಾನ್ಫರೆನ್ಸ್​ ಝೂಮ್​, ಸ್ಕೈಪ್​ ಮತ್ತು ಮೈಕ್ರೊಸಾಫ್ಟ್​  ಅಂತೆಯೇ ನೆಟ್​ಫ್ಲಿಕ್​​ ಬಳಕೆದಾರರ ಡಾಟಾವನ್ನು ಅಷ್ಟೇನು ಸಂಗ್ರಹಿಸುವುದಿಲ್ಲ ಎಂದು ತಿಳಿದುಬಂದಿದೆ.

ಕೆಲವು ಅಪ್ಲಿಕೇಶನ್​ಗಳು ತನ್ನ ಮಾರುಕಟ್ಟೆಯನ್ನು ವೃದ್ಧಿಸುವ ಸಲುವಾಗಿ ಬಳಕೆದಾರರ ಡಾಟಾ ಸಂಗ್ರಹಿಸಿ ಮಾರುತ್ತಿದೆ. ಆಹಾರ ವಿತರಣಾ ಅಪ್ಲಿಕೇಶನ್​ಗಳಾದ ಜಸ್ಟ್​ ಈಟ್​, ಗ್ರಬ್​ ಹಬ್​ ಮತ್ತು ಮೈ ಮೈಕ್​ಡೊನಾಲ್ಡ್​ ಅಷ್ಟೇನು ಡಾಟಾ ಸಂಗ್ರಹಿಸುತ್ತಿಲ್ಲ. ಆದರೆ ಊಬರ್​ ಈಟ್ಸ್​, ಲಿಂಕ್ಡಿನ್​, ಯ್ಯೂಟೂಬ್​, ಡುಲಿಂಗೊ ಮತ್ತು ಇಬೇ ಅಪ್ಲಿಕೇಶನ್​ಗಳು ಇದರ ವಿರುದ್ದವಾಗಿದೆ.

ಗೂಗಲ್ ಬಳಕೆದಾರನಿಂದ​ ಯಾವೆಲ್ಲಾ ಡಾಟಾ ಸಂಗ್ರಹಿಸುತ್ತದೆ?

ಆ್ಯಪಲ್ ಹೊಸ  ಗೌಪ್ಯತೆ ಲೇಬಲ್​ ಆ್ಯಪ್​ ಡೆಪಲರ್​ಗಳನ್ನ ಒತ್ತಾಯಿಸುತ್ತಿದ್ದು, ಅಪ್ಲಿಕೇಶನ್​​ಗಳು ಜನರನ್ನು ಹೇಗೆ ಟ್ರಾಕ್​ ಮಾಡುತ್ತಿದೆ ಎಂಬುದನ್ನು ಬಹಿರಂಗ ಪಡಿಸಲು ಹೇಳಿತ್ತು.  ಅದಾದ ಒಂದೆರಡು ತಿಂಗಳ ಬಳಿಕ ಗೂಗಲ್ ಅಂತಿಮವಾಗಿ ಗೌಪ್ಯತೆ ಲೇಬಲ್​ ಅನ್ನು ಬಿಡುಗಡೆ ಮಾಡಿತು. ಅದರಲ್ಲಿ ಬಳಕೆದಾರನ ಸ್ಥಳ, ಆರ್ಥಿಕ ಮಾಹಿತಿ, ಬ್ರೌಸಿಂಗ್​ ಹಿಸ್ಟರಿ, ಆಡಿಯೋ ಡಾಟಾ ಸಂಗ್ರಹಿಸುತ್ತದೆ ಎಂದು ಬಹಿರಂಗಪಡಿಸಿತು.





ಇದನೆಲ್ಲ ಗಮನಿಸಿದ ಗೌಪ್ಯತೆ ಕೇಂದ್ರಿತ ಸರ್ಚ್​ ಎಂಜಿನ್​ ಡಕ್​ಡಕ್​ಗೋ ಟ್ವೀಟ್​ ಮಾಡಿದ್ದು, ಗೂಗಲ್​ ‘ಬಳಕೆದಾರನ ಮೇಲೆ ಬೇಹುಗಾರಿಕೆ’ ಮಾಡುತ್ತಿದೆ ಎಂದು ಬರೆದಿದೆ. ಜೊತೆಗೆ ಆ್ಯಪ್​ ಸ್ಟೋರ್​ ಪ್ರೈವಸಿ ಲೇಬರ್​​, ಕ್ರೋಮ್, ಗೂಗಲ್​ ಆ್ಯಪ್​ ಅನ್ನು ಹೋಲಿಕೆ ಮಾಡಿರುವ ಫೋಟೋ ಹಂಚಿಕೊಂಡಿದೆ.
Published by: Harshith AS
First published: March 24, 2021, 11:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories