Instagram: ಇನ್​ಸ್ಟಾಗ್ರಾಮ್ Influencersಗಳೇ ಕೇಳಿ... ಈ ವಿಚಾರದಲ್ಲಿ ನೀವು ಜಾಗ್ರತೆ ವಹಿಸಲೇಬೇಕು!

ಸೈಬರ್ ಭದ್ರತಾ (Cyber Security) ಸಂಸ್ಥೆಯಾದ ನೇಕೆಡ್ ಸೆಕ್ಯೂರಿಟಿ ಬೈ ಸೋಫೋಸ್ (Naked security by sophos) ಪ್ರಕಾರ, ಸೈಬರ್ ಅಪರಾಧಿಗಳು ನಕಲಿ ಹಕ್ಕುಸ್ವಾಮ್ಯ (Duplicate copyright) ಉಲ್ಲಂಘನೆಯ ಸೂಚನೆಗಳನ್ನು ಬಳಸಿಕೊಂಡು ಸೃಜನಕಾರರಿಗೆ ಸಂದೇಶ ಕಳಿಸುತ್ತಿದ್ದಾರೆ.

Instagarm /ಇನ್​ಸ್ಟಾಗ್ರಾಮ್

Instagarm /ಇನ್​ಸ್ಟಾಗ್ರಾಮ್

 • Share this:
  ಇನ್​ಸ್ಟಾಗ್ರಾಮ್ (Instagram) ಸಾಮಾಜಿಕ ಜಾಲತಾಣದಲ್ಲಿ (Social Media) ವೃತ್ತಿಪರ ವಿಷಯಗಳನ್ನು (Professional content) ಸೃಜಿಸುವ ಇನ್‌ಫ್ಲುಯೆನ್ಸರ್ಸ್‌ಗಳನ್ನು (Influencers) ಸಂಕೀರ್ಣವಾದ ವಂಚಕ ಸಂದೇಶ ಹಗರಣದ ಮೂಲಕ ಕನ್ನಕೋರರು ಗುರಿಯಾಗಿಸಿಕೊಂಡಿರುವ ಆಘಾತಕಾರಿ ಸಂಗತಿ ಬಯಲಾಗಿದೆ. ಸೈಬರ್ ಭದ್ರತಾ (Cyber Security) ಸಂಸ್ಥೆಯಾದ ನೇಕೆಡ್ ಸೆಕ್ಯೂರಿಟಿ ಬೈ ಸೋಫೋಸ್ (Naked security by sophos) ಪ್ರಕಾರ, ಸೈಬರ್ ಅಪರಾಧಿಗಳು ನಕಲಿ ಹಕ್ಕುಸ್ವಾಮ್ಯ (Duplicate copyright) ಉಲ್ಲಂಘನೆಯ ಸೂಚನೆಗಳನ್ನು ಬಳಸಿಕೊಂಡು ಸೃಜನಕಾರರಿಗೆ ಸಂದೇಶ ಕಳಿಸುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಈ ಹಕ್ಕುಸ್ವಾಮ್ಯ ಸೂಚನೆಗಳನ್ನು ಮೇಲ್‌ ಮೂಲಕ ಅಥವಾ ಆ್ಯಪ್‌ಗೆ ನೇರವಾಗಿ ರವಾನಿಸುತ್ತಿದ್ದು, ಈ ಸೂಚನೆಗಳು ಅಧಿಕೃತ ಸೂಚನೆಗಳಂತೆಯೇ ಇದ್ದು, ಬಹುತೇಕ ಯಾವುದೇ ವ್ಯಾಕರಣ ದೋಷ ಅಥವಾ ಅಕ್ಷರ ದೋಷಗಳ ಚಿಹ್ನೆ ಒಳಗೊಂಡಿರುವುದಿಲ್ಲ.

  ದೂರನ್ನು ಆಕ್ಷೇಪಿಸಿ ನಿಮ್ಮ ಮುಗ್ಧತೆಯನ್ನು ಸುಲಭವಾಗಿ ನಿರೂಪಿಸಿಕೊಳ್ಳಲು ಕನ್ನಕೋರರು ಕೊಂಡಿ ಕಳಿಸುವ ಉಪಾಯಕಾರಿ ತಂತ್ರವನ್ನು ಬಳಸುತ್ತಿದ್ದಾರೆ. ಈ ಕೊಂಡಿಯ ಸಹಾಯದಿಂದ ಮತ್ತಷ್ಟು ತಂತ್ರ ಪ್ರಯೋಗಿಸುವ ಕನ್ನಕೋರರು, ಅಲ್ಲಿ ಬಳಕೆದಾರರು ತಮ್ಮ ಪಾಸ್‌ವರ್ಡ್ ನಮೂದಿಸುವಂತೆ ಮಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಅವರ ಅಂತರ್ಜಾಲ ಭದ್ರತೆ ರಾಜಿಗೊಳಗಾಗುತ್ತದೆ.

  ಈ ಕುರಿತು ಬ್ಲಾಗ್ ಒಂದರಲ್ಲಿ ಟಿಪ್ಪಣಿ ಬರೆದಿರುವ ಭದ್ರತಾ ಸಂಶೋಧಕ ಪಾಲ್ ಡಕ್ಲಿನ್ (Paul Ducklin), "ನೀವು ಈ ಬಗೆಯ ಮೇಲ್‌ ಹಗರಣವನ್ನು ಇತ್ತೀಚೆಗೆ ಗಮನಿಸಿರುತ್ತೀರಿ ಎಂಬ ಆಶಾವಾದ ನಮಗಿದೆ. ನಾವು ಇತ್ತೀಚಿನ ವಾರಗಳಲ್ಲಿ ಸ್ವೀಕರಿಸಿರುವ ಇಂತಹ ಕೆಲವು ಮೋಸದ ಹಕ್ಕುಸ್ವಾಮ್ಯ ಸಂದೇಶಗಳು ನಾವು ಈ ಹಿಂದೆ ಇಂತಹ ನಿದರ್ಶನಗಳ ಕುರಿತು ಬರೆದಿರುವುದಕ್ಕಿಂತ ಅತ್ಯಂತ ವಿಶ್ವಾಸಾರ್ಹ, ಉತ್ತಮ ಕಾಗುಣಿತ ಹಾಗೂ ಹೆಚ್ಚು ವ್ಯಾಕರಣಬದ್ಧವಾಗಿರುವುದನ್ನು ಒಪ್ಪಿಕೊಳ್ಳಲೇಬೇಕು" ಎಂದು ಹೇಳಿದ್ದಾರೆ.

  ಇದನ್ನು ಓದಿ: Pubg ಪ್ರಿಯರಿಗೆ ಸಿಹಿ ಸುದ್ದಿ.. ಇನ್ಮೇಲೆ ಕಂಪ್ಯೂಟರ್, ಗೇಮಿಂಗ್ ಡಿವೈಸ್​ಗಳಲ್ಲಿ ಉಚಿತವಾಗಿ ಸಿಗತ್ತೆ

  ಇದನ್ನು ಸರಳವಾಗಿ ವಿವರಿಸುವುದಾದರೆ, ಮೋಸದ ಸಂದೇಶಗಳ ಹಗರಣವು ಮುಖ್ಯವಾಗಿ ಉಪಾಯ ತಂತ್ರವಾಗಿದ್ದು, ಮೋಸದ ಸಂದೇಶ, ನಕಲಿ ಲಾಗಿನ್ ಪುಟಗಳು ಹಾಗೂ ತದ್ರೂಪಿಯಂತಿರುವ ಸಾಫ್ಟ್‌ವೇರ್ ಹಾಗೂ ತಂತ್ರಾಂಶಗಳನ್ನು ಬಳಸಿ ಸೂಕ್ಷ್ಮ ಮಾಹಿತಿಗಳನ್ನು ಕದಿಯುತ್ತದೆ. ಕನ್ನಕೋರರು ಸೂಕ್ಷ್ಮ ಮಾಹಿತಿಗಳಾದ ಇ-ಮೇಲ್ ವಿಳಾಸ, ಜನ್ಮ ದಿನಾಂಕ, ಸ್ಥಳ ಹಾಗೂ ದೂರವಾಣಿ ಸಂಖ್ಯೆಯನ್ನು ದುರ್ಮಾರ್ಗದ ಮೂಲಕ ಬಳಕೆ ಮಾಡುವ ಸಾಧ್ಯತೆ ಇರುತ್ತದೆ.

  ಒಂದು ವೇಳೆ ಪಾಸ್‌ವರ್ಡ್ ರಾಜಿಯಾದರೆ, ಅದರಿಂದ ಇತರೆ ಸಾಮಾಜಿಕ ಮಾಧ್ಯಮಗಳ ಮೇಲೂ ದುಷ್ಪರಿಣಾಮವುಂಟಾಗುವ ಸಾಧ್ಯತೆ ಇರುತ್ತದೆ. ಕಾರಣ, ಬಹುತೇಕ ಬಳಕೆದಾರರು ಒಂದೇ ಪಾಸ್‌ವರ್ಡ್ ಅನ್ನು ಎಲ್ಲ ವೇದಿಕೆಗಳಿಗೂ ಪದೇ ಪದೇ ಬಳಸುತ್ತಿರುತ್ತಾರೆ. ಇನ್​ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ಸ್ ಯಾವಾಗಲೂ ತಮ್ಮ ಪ್ರೊಫೈಲ್‌ಗೆ ತಮ್ಮ ಇಮೇಲ್ ವಿಳಾಸವನ್ನು ಸಂಪರ್ಕಿಸಿರುತ್ತಾರಾದ್ದರಿಂದ ಅವರು ಹಕ್ಕುಸ್ವಾಮ್ಯ ಉಲ್ಲಂಘನೆಯನ್ನು ಎತ್ತಿ ತೋರಿಸುವ ಹಗರಣದ ಅಂಚೆಗಳಿಗೆ ಒಡ್ಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ.

  ಭದ್ರತಾ ಸಂಸ್ಥೆ ಪ್ರಕಟಿಸಿರುವ ಸ್ಕ್ರೀನ್‌ಶಾಟ್ ಒಂದರ ಪ್ರಕಾರ, ಇನ್​ಸ್ಟಾಗ್ರಾಮ್ ಸೃಜನಕಾರರು ಅವರ ಖಾತೆಗಳಲ್ಲಿ "ಹಲೋ, ಎಕ್ಸ್‌ಎಕ್ಸ್" ಎಂದು ಓದಿಸಿಕೊಳ್ಳುವ ಸಂದೇಶ ಸ್ವೀಕರಿಸುತ್ತಿರುವುದರತ್ತ ಬೊಟ್ಟು ಮಾಡಿದೆ. ಈ ಸಂದೇಶದಲ್ಲಿ, "ನಾವು ನಿಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟವಾಗಿರುವ ಸಂದೇಶವೊಂದರ ಕುರಿತು ದೂರು ಸ್ವೀಕರಿಸಿದ್ದೇವೆ. ನಿಮ್ಮ ಸಂದೇಶವು ನಮ್ಮ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಿದೆ ಎಂದು ವರದಿಯಾಗಿದೆ" ಎಂದು ಹೇಳುತ್ತದೆ.

  ಇದನ್ನು ಓದಿ: Foxconn India iPhone: ತಮಿಳುನಾಡಿನಲ್ಲಿ ಪುನರಾರಂಭಗೊಂಡಿದೆ ಫಾಕ್ಸ್‌ಕಾನ್ ಇಂಡಿಯಾ ಐಫೋನ್ ಸ್ಥಾವರ

  "ಒಂದು ವೇಳೆ ನೀವು ಈ ದೂರಿನ ಕುರಿತು ಆಕ್ಷೇಪ ಸಲ್ಲಿಸದಿದ್ದರೆ ನಿಮ್ಮ ಖಾತೆಯನ್ನು ರದ್ದುಗೊಳಿಸಲಾಗುವುದು. ಒಂದು ವೇಳೆ ಈ ನಿಲುವು ತಪ್ಪು ಎಂದು ಭಾವಿಸುವುದಾದರೆ, ಈ ಕೆಳಗಿನ ಕೊಂಡಿಯಿಂದ ಆಕ್ಷೇಪಣಾ ಅರ್ಜಿಯನ್ನು ಭರ್ತಿ ಮಾಡಿ" ಎಂದೂ ಸೂಚಿಸುತ್ತದೆ.

  ಕೊಂಡಿಯ ತಳಭಾಗದಲ್ಲಿ 'ಮನವಿ' ಎಂಬ ಗುಂಡಿಯಿದ್ದು, ಆ ಗುಂಡಿಯನ್ನು ಒತ್ತಿದರೆ ಇನ್​ಸ್ಟಾಗ್ರಾಮ್ ಇನ್‌ಫ್ಲ್ಯುಯೆನ್ಸರ್ಸ್‌ ಅನ್ನು ಮತ್ತೊಂದು ಪುಟಕ್ಕೆ ಕರೆದೊಯ್ಯುತ್ತದೆ. ಈ ಪುಟದ ತಳಭಾಗದಲ್ಲಿ ಇನ್​ಸ್ಟಾಗ್ರಾಮ್ ಇನ್‌ಫ್ಲ್ಯುಯೆನ್ಸರ್ಸ್‌ಮತ್ತೊಂದು ಗುಂಡಿಯನ್ನು ಪಡೆಯುತ್ತಾರೆ. ಈ ಗುಂಡಿಯು 'ಮನವಿ ಅರ್ಜಿಗೆ ಹೋಗಿ' ಎಂದು ಸೂಚಿಸುತ್ತದೆ. ಈ ಗುಂಡಿಯನ್ನು ಒತ್ತಿದ ನಂತರ ತೆರೆದುಕೊಳ್ಳುವ ಪುಟವು ಬಳಕೆದಾರರು ತಮ್ಮ ಪಾಸ್‌ವರ್ಡ್ ನಮೂದಿಸುವಂಥ ತಂತ್ರ ಹೊಂದಿದೆ.

  "ಈ ಅಂತರ್ಜಾಲ ಪುಟವು ನೀವು ತಪ್ಪಾಗಿ ಪಾಸ್‌ವರ್ಡ್ ನಮೂದಿಸಿರುವಂತೆ ನಟಿಸುತ್ತದೆ ಹಾಗೂ ಮತ್ತೆ ಪಾಸ್‌ವರ್ಡ್ ನಮೂದಿಸಲು ಸೂಚಿಸುತ್ತದೆ. ಈ ಹಂತದಲ್ಲಿ ವಂಚಕರು ಸುಲಭವಾಗಿ ನಿಮ್ಮ ಲಾಗಿನ್ ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಆಗ ಬಳಕೆದಾರರು ತನ್ನ ಖಾತೆಗೆ ಏನಾಗಿದೆ ಎಂದು ಕಂಡುಕೊಳ್ಳಲು ಕೀಬೋರ್ಡ್ ಮೇಲೆ ತುಂಬಿಕೊಂಡಿರುವ ಕೊಳೆಯನ್ನೆಲ್ಲ ಕೊಡವುತ್ತಾ ಕೂರಬೇಕಾಗುತ್ತದೆ" ಎಂದು ಎಚ್ಚರಿಸಿದೆ.
  Published by:Harshith AS
  First published: