ಇನ್ಸ್ಟಾಗ್ರಾಮ್​ನಲ್ಲಿ ನಿಮಗಿಷ್ಟದ ಸಂಗೀತವನ್ನು ಸ್ಟೋರಿಯಾಗಿ ಬಳಸುವುದು ಹೇಗೆ?

news18
Updated:June 30, 2018, 4:50 PM IST
ಇನ್ಸ್ಟಾಗ್ರಾಮ್​ನಲ್ಲಿ ನಿಮಗಿಷ್ಟದ ಸಂಗೀತವನ್ನು ಸ್ಟೋರಿಯಾಗಿ ಬಳಸುವುದು ಹೇಗೆ?
news18
Updated: June 30, 2018, 4:50 PM IST
ನ್ಯೂಸ್​ 18 ಕನ್ನಡ

ನ್ಯೂಯಾರ್ಕ್​:  ಸಾಮಾಜಿಕ ಜಾಲತಾಣದ ಧಿಗ್ಗಜ ಫೇಸ್​ಬುಕ್​ ತನ್ನ ಸ್ವಾದೀನದ ಇನ್ಸ್ಟಾಗ್ರಾಂನಲ್ಲಿ ದಿನಕ್ಕೊಂದು aಪ್​ಡೇಟ್​ಗಳನ್ನು ಬಿಡುಗಡೆ ಮಾಡುತ್ತಿದ್ದು, ಇದೀಗ ತನ್ನ ಸ್ಟೋರಿ ಸೆಕ್ಷನ್​ನಲ್ಲಿ ಬಳಕೇದಾರರು ಹಾಡನ್ನು ಕೂಡಾ ಪ್ಲೇ ಮಾಡುವ ಆಯ್ಕೆಯನ್ನು ನೀಡಲಾಗಿದೆ.

ಈಗಿರುವ ಅಂಕಿ ಅಂಶಗಳ ಪ್ರಕಾರ ದಿನಕ್ಕೆ ಸುಮಾರು 400 ದಶಲಕ್ಷ ಇನ್ಸ್ಟಾ ಬಳಕೇದಾರರು ಸ್ಟೋರಿಯನ್ನು ಅಪ್​ಡೇಟ್​ ಮಾಡುತ್ತಾರೆ. ಹೀಗಾಗಿ ಈ ಆಯ್ಕೆಯಲ್ಲಿ ಬದಲಾವಣೆಯನ್ನು ತರಲು ಮುಂದಾದ ಫೇಸ್​ಬುಕ್​ ಸ್ಟೋರಿ ಜಾಗದಲ್ಲಿ ತಮಗಿಷ್ಟದ ಹಾಡಿದ ಆಯ್ಕೆಯನ್ನು ನೀಡಿರುವುದಾಗಿ ತನ್ನ ಬ್ಲಾಗ್​ನಲ್ಲಿ ಬರೆದುಕೊಂಡಿದೆ.

ಮ್ಯೂಸಿಕ್​ ಬಳಕೆ ಹೇಗೆ ?

ಈಗಾಗಲೇ ಇನ್ಸ್ಟಾದಲ್ಲಿ Your Story ಆಯ್ಕೆ ಮಾಡುವ ವೇಳೆ Hashtag, Mention, time, ಸೇರಿದಂತೆ ಹಲವರು ಆಯ್ಕೆಯನ್ನು ನೀಡಲಾಗಿದೆ. ಇದೇ ಸ್ಥಳದಲ್ಲಿ ಹೊಸ ಅಪ್​ಡೇಟ್​ ಎಂಬಂತೆ ಮ್ಯೂಸಿಕ್​ ಕೂಡಾ ನೀಡಲಾಗಿದೆ. ಇದನ್ನು ಆಯ್ಕೆ ಮಾಡಿ.

ನಿಮಗೆ ಲಕ್ಷಾಂತ ಹಾಡುಗಳು ಅಲ್ಲಿ ಕಾಣಸಿಗುತ್ತದೆ, ನಿಮಗೆ ಬೇಕಾದ ಹಾಡು ಅಥವಾ ಕೇವಲ ಸಂಗೀತವನ್ನು ಆಯ್ಕೆ ಮಾಡಿ. ಬಳಿಕ ನಿಮ್ಮ ಸ್ಟೋರಿಗೆ ಸೂಕ್ತವಾದ ಹಾಡಿನ ಭಾಗವನ್ನು ಕಟ್​ ಮಾಡಿ. ಬಳಿಕ ನಿಮ್ಮ ಸ್ಟೋರಿಯನ್ನು ಪೂರ್ವವೀಕ್ಷಣೆ ಮಾಡಿ ಪೋಸ್ಟ್​ ಮಾಡಬಹುದು. ನಿಮಗೆ ಬೇಕಾದರೆ ಸ್ಟಿಕ್ಕರ್​ ಹಾಗೂ ಶೀರ್ಷಿಕೆಯನ್ನೂ ನೀಡಬಹುದು.

 
First published:June 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ