ಇನ್ಸ್ಟಾಗ್ರಾಂ ತನ್ನ ಬಳಕೆದಾರರಿಗೆ ಇನ್ಸ್ಟಾಗ್ರಾ ಲೈಟ್ ಆ್ಯಪ್ ಅನ್ನು ಪರಿಚಯಿಸಿದೆ. ಸದ್ಯ ಈ ನೂತನ ಆ್ಯಪ್ ಪ್ಲೇ ಸ್ಟೋರ್ನಲ್ಲಿ ಬಿಡುಗಡೆಗೊಂಡಿದ್ದು, ಬಳಕೆದಾರರ ಬಳಕೆಗೆ ಸಿಗಲಿದೆ.
ಇನ್ಸ್ಟಾಗ್ರಾಂ ಲೈಟ್ 2MB ಗಾತ್ರದಲ್ಲಿದೆ. ಮಾತ್ರವಲ್ಲದೆ, ಕಡಿಮೆ ಡೇಟಾ ತೆಗೆದುಕೊಳ್ಳುತ್ತದೆ. ಅಷ್ಟು ಮಾತ್ರವಲ್ಲದೆ, ನಿಧಾನಗತಿಯ ನೆಟ್ವರ್ಕ್ ಮತ್ತು ಬೇಸಿಕ್ ಸ್ಮಾರ್ಟ್ಫೋನ್ ಮೂಲಕ ಇನ್ಸ್ಟಾಗ್ರಾಂ ಲೈಟ್ ಅನ್ನು ಬಳಸಬಹುದಾಗಿದೆ.
ಇನ್ಸ್ಟಾಗ್ರಾಂ ಲೈಟ್ ಅನ್ನು ಕೊಂಚ ಭಿನ್ನವಾಗಿ ವಿನ್ಯಾಸ ಮಾಡಲಾಗಿದೆ. ಆದರೆ ಇದರಲ್ಲಿ ಡಾರ್ಕ್ ಥೀಮ್ ಆಯ್ಕೆಯನ್ನು ನೀಡಿಲ್ಲ. ಜೊತೆಗೆ ಐಜಿಟಿವಿ ಮತ್ತು ರೀಲ್ಸ್ ಟ್ಯಾಬ್ಗಳ ವೀಕ್ಷಿಸಲು ಸಾಧ್ಯವಿಲ್ಲ. ಆದರೆ ಅಪ್ಲೋಡ್ ಮಾಡಿರುವ ವಿಡಿಯೋವನ್ನು ಸ್ಟ್ಯಾಂಡರ್ಡ್ ವಿಡಿಯೋವಾಗಿ ಪ್ಲೇ ಮಾಡಬಹುದಾಗಿದೆ.
ಭಾರತದಲ್ಲಿನ ಬಳಕೆದಾರರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಸಲುವಾಗಿ ಇನ್ಸ್ಟಾಗ್ರಾಂ ಲೈಟ್ ಅನ್ನು ಪರಿಚಯಿಸಿದೆ. ಮೊದಲ ಬಾರಿ ಇಂಟರ್ನೆಟ್ ಬಳಸುತ್ತಿರುವವರು, ಬೇಸಿಕ್ ಸ್ಮಾರ್ಟ್ಫೋನ್ ಬಳಕೆದಾರರಿಂದ ಕಂಟೆಂಟ್ ತೆಗೆದುಕೊಳ್ಳವುದು ಇನ್ಸ್ಟಾಗ್ರಾಂ ಲೈಟ್ ಮುಖ್ಯ ಗುರಿಯಾಗಿದೆ.
ಇನ್ನು ಫೇಸ್ಬುಕ್ ಪ್ಯುಯೆಲ್ ಫಾರ್ ಇಂಡಿಯಾ 2020 ಸಮ್ಮೇಳನದಲ್ಲಿ ಸಾಕಷ್ಟು ವಿಚಾರಗಳನ್ನು ಯೋಜನೆಗೆ ತರಲು ಚಿಂತಿಸಿದೆ. ವ್ಯಾಪಾರ ಮತ್ತು ಸಣ್ಣ ಉದ್ಯಮಗಳನ್ನು ಬೆಂಬಲಿಸಲು ಮುಂದಾಗಿದೆ. ಅದರ ಜೊತೆಗೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ