Instagram ವರ್ಟಿಕಲ್ ಸ್ಕ್ರೋಲಿಂಗ್ ವಿಶೇಷತೆ ಏನು..? ಟಿಕ್‌ಟಾಕ್‌ಗೆ ಆ್ಯಪ್‌ ಹೇಗೆ ಸ್ಪರ್ಧೆಯನ್ನೊಡ್ಡಲಿದೆ..?

ಇನ್‌ಸ್ಟಾಗ್ರಾಮ್ ಫೀಡ್ ಅನ್ನು ವಿಂಗಡಿಸಲು ಹೊಸ ವಿಧಾನಗಳನ್ನು ಪರಿಶೀಲಿಸುತ್ತಿದೆ ಹಾಗೂ ನಿಮಗೆ ಬೇಕಾದಂತೆ ಪ್ರೊಫೈಲ್ ಗ್ರಿಡ್ ಅನ್ನು ಎಡಿಟ್ ಮಾಡುವ ಆಯ್ಕೆಯತ್ತ ಕೂಡ ಗಮನ ಹರಿಸಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಮೆಟಾ-ಮಾಲೀಕತ್ವದ (Meta) ಫೋಟೋ-ಶೇರಿಂಗ್ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್ (Instagram) ತನ್ನ ಆ್ಯಪ್‌ನಲ್ಲಿ ವರ್ಟಿಕಲ್ ಸ್ಕ್ರೋಲಿಂಗ್ ಮಾಡುವ ಮೂಲಕ ಸ್ಟೋರಿಗಳನ್ನು ಮರುವಿನ್ಯಾಸಗೊಳಿಸುವ ಪ್ರಕ್ರಿಯೆಯನ್ನು ಪರಿಶೀಲಿಸುತ್ತಿದೆ ಎಂಬುದು ವರದಿಯಾಗಿದೆ. ಸಾಮಾಜಿಕ ಮಾಧ್ಯಮ ಸಲಹೆಗಾರ ಮ್ಯಾಟ್ ನವರ್ರಾ (Matt Navarra) ಉಲ್ಲೇಖಿಸಿರುವಂತೆ ಟರ್ಕಿಯಲ್ಲಿರುವ ಕೆಲವು ಬಳಕೆದಾರರು ಸ್ಟೋರಿಗಳಿಗೆ ವರ್ಟಿಕಲ್ ಸ್ಕ್ರೋಲಿಂಗ್ (Vertical Scrolling) ಅಪ್‌ಡೇಟ್‌ಗಳನ್ನು ಸ್ವೀಕರಿಸಿದ್ದಾರೆ ಎಂಬುದಾಗಿ 9To5Mac ವರದಿ ಮಾಡಿದೆ. ಇನ್ನು ಇದೇ ಬಳಕೆದಾರರು ಸ್ಕ್ರೀನ್‌ನ ಎಡ ಅಥವಾ ಬಲಬದಿಯನ್ನು ಸ್ಪರ್ಶಿಸುವ ಮೂಲಕ ಸ್ಟೋರಿಗಳನ್ನು ವೀಕ್ಷಿಸಬಹುದಾದರೂ, ಇನ್ನೊಬ್ಬ ಬಳಕೆದಾರರ ಸ್ಟೋರಿಗಳನ್ನು ವೀಕ್ಷಿಸಲು ಸ್ವೈಪ್ ಡೌನ್ (Swiping Down) ಮಾಡುವ ಅಗತ್ಯವಿದೆ ಎಂಬುದಾಗಿ ವರದಿ ತಿಳಿಸಿದೆ.

ಹೊಸ ಫೀಚರ್ ಹೇಗೆ ಕೆಲಸ ಮಾಡುತ್ತದೆ?

ಇನ್‌ಸ್ಟಾಗ್ರಾಮ್‌ನ ಹೊಸ ಫೀಚರ್ ಆಗಿರುವ ವರ್ಟಿಕಲ್ ಸ್ಟೋರೀಸ್ ನಿಮಗೆ ಸ್ಟೋರಿಗಳನ್ನು ಬ್ರೌಸ್ ಮಾಡಲು ಮೇಲೆ ಹಾಗೂ ಕೆಳಕ್ಕೆ ಸ್ವೈಪ್ ಮಾಡಲು ಅವಕಾಶವೊದಗಿಸುತ್ತದೆ ಎಂದು ಇನ್‌ಸ್ಟಾಗ್ರಾಮ್ ಉಲ್ಲೇಖಿಸಿದೆ. ಸಂಸ್ಥೆ ತಿಳಿಸಿರುವಂತೆ ಇದು ಟಿಕ್‌ಟಾಕ್ ಶೈಲಿಯ ಫೀಚರ್ ಆಗಿದ್ದರೂ ಇನ್ನೂ ಇದು ಅಭಿವೃದ್ಧಿ ಹಂತದಲ್ಲಿದೆ ಹಾಗೂ ಪ್ರೋಟೋಟೈಪ್‌ನಲ್ಲಿದ್ದು ಅಂತಿಮವಾಗಿಲ್ಲವೆಂದು ಉಲ್ಲೇಖಿಸಿದೆ. ಇದು ಪ್ರೋಟೋಟೈಪ್ ಆಗಿರುವುದರಿಂದ ಸಾರ್ವಜನಿಕರಿಗೆ ಈ ಫೀಚರ್ ಲಭ್ಯವಾಗಲಿದೆಯೇ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಲಭ್ಯವಾಗಿರುವ ಮಾಹಿತಿಯ ಪ್ರಕಾರ ಇನ್‌ಸ್ಟಾಗ್ರಾಮ್ ಶೀಘ್ರದಲ್ಲಿಯೇ ಬಳಕೆದಾರರು ತಮ್ಮ ಫೀಡ್‌ನಿಂದ ಸ್ಟೋರಿಗಳನ್ನು ಹಂಚಿಕೊಳ್ಳುವ ವೈಶಿಷ್ಟ್ಯವನ್ನು ನಿಲ್ಲಿಸುತ್ತದೆ ಎಂದಾಗಿದೆ.

ಗಮನಾರ್ಹ ಬದಲಾವಣೆ

ಪ್ರಸ್ತುತ ಇನ್‌ಸ್ಟಾ ಬಳಕೆದಾರರು ಸ್ಟೋರಿಗಳನ್ನು ಟ್ಯಾಪ್‌ಗಳು ಹಾಗೂ ಹಾರಿಜಾಂಟಲ್‌ ಸ್ವೈಪ್‌ಗಳ ಮೂಲಕ ಬ್ರೌಸ್ ಮಾಡುತ್ತಿದ್ದು ಈ ಫೀಚರ್ ಅನ್ನು ತಾಣವು ಸ್ನ್ಯಾಪ್‌ಚಾಟ್‌ನಿಂದ ಅಳವಡಿಸಿಕೊಂಡಿತ್ತು. ಆದರೆ ಇದೀಗ ಬದಲಾವಣೆಗಳು ಹಾಗೂ ನವೀಕರಣಗಳು ನಡೆದಂತೆ ಸ್ನ್ಯಾಪ್‌ಚಾಟ್ ಕೂಡ ಟಿಕ್‌ಟಾಕ್‌ನಿಂದಲೇ ಅದೆಷ್ಟೋ ಅಂಶಗಳನ್ನು ಪಡೆದುಕೊಂಡಿರುವುದು ಇತಿಹಾಸವಾಗಿದೆ. ತಾಣ ಹೇಳುವಂತೆ ಲಂಬವಾದ ಸ್ವೈಪಿಂಗ್ ಹೆಚ್ಚು ನೈಸರ್ಗಿಕವಾದ ಬ್ರೌಸಿಂಗ್ ಅನ್ನು ಬಳಕೆದಾರರಿಗೆ ನೀಡಲಿದ್ದು ಮೊಬೈಲ್ ವೆಬ್‌ನಲ್ಲಿ ಬಳಕೆದಾರರು ಹೇಗೆ ನ್ಯಾವಿಗೇಟ್ ಮಾಡುತ್ತಾರೆ ಎಂಬುದನ್ನು ಈ ಅಂಶ ಆಧರಿಸಿದೆ ಎಂದು ತಿಳಿಸಿದೆ. ಇನ್‌ಸ್ಟಾಗ್ರಾಮ್ ಸ್ಟೋರೀಸ್ ಅನ್ನು ವರ್ಟಿಕಲ್ ಫೀಡ್ ಆಗಿ ಪರಿವರ್ತಿಸುವುದು ಗಮನಾರ್ಹ ಬದಲಾವಣೆಯಾಗಿದೆ ಎಂಬುದಾಗಿ ಸಂಸ್ಥೆ ಉಲ್ಲೇಖಿಸಿದೆ.

ಇದನ್ನೂ ಓದಿ: Kylie Jenner: ಇನ್​ಸ್ಟಾಗ್ರಾಮ್​ನಲ್ಲಿ ಇವ್ಳೇ ನಂಬರ್​ ಒನ್​.. 30 ಕೋಟಿ ಮಂದಿ ಫಾಲೋವರ್ಸ್​.. ದೊಡ್ಡ ದೊಡ್ಡ ಸ್ಟಾರ್​ಗಳೇ ಈಕೆ ಮುಂದೆ ಡಲ್​!

ಟಿಕ್‌ಟಾಕ್‌ಗೆ ನೇರ ಪ್ರತಿಸ್ಪರ್ಧೆ:

ಟಿಕ್‌ಟಾಕ್‌ಗೆ ಪೈಪೋಟಿಯನ್ನಡ್ಡೊವ ನಿಟ್ಟಿನಲ್ಲಿರುವ ಇನ್‌ಸ್ಟಾಗ್ರಾಮ್ ಇಮೇಜ್‌ಗಳಿಗಿಂತ ವಿಡಿಯೋ ಕಂಟೆಂಟ್‌ಗಳಿಗೆ ಹೆಚ್ಚಿನ ಗಮನ ಹರಿಸಲಿದ್ದು ಇದು ಪ್ರಸ್ತುತ ತನ್ನ ಅಲ್ಗಾರಿದಮ್‌ಗಳನ್ನು ಮತ್ತು ರೀಲ್‌ಗಳಿಗೆ ಆದ್ಯತೆ ನೀಡಲು ಒಟ್ಟಾರೆ ವಿನ್ಯಾಸವನ್ನು ನವೀಕರಿಸುತ್ತಿದೆ ಎಂಬುದಾಗಿ ಟೆಕ್‌ಕ್ರಂಚ್ ವರದಿ ಮಾಡಿದೆ. ಇನ್ನು ಸಂಸ್ಥೆಯು ಅಧಿಕೃತವಾಗಿ ತನ್ನ ನವೀಕರಣವನ್ನು ಸಾರ್ವಜನಿಕಗೊಳಿಸಿದರೆ, ಇದು ವಿವಾದವನ್ನು ಸೃಷ್ಟಿಸುವುದು ಖಂಡಿತ ಎಂಬುದಾಗಿ ಅಂಕಿ ಅಂಶಗಳಿಂದ ಮಾಹಿತಿ ಸೋರಿಕೆಯಾಗಿದೆ. ಸ್ಟೋರಿಗಳ ಮೂಲಕ ಲಂಬವಾಗಿ ಸ್ವೈಪ್ ಮಾಡುವುದು ಟಿಕ್‌ಟಾಕ್‌ನಂತೆಯೇ ಮಾಡಲಿದ್ದು, ಪ್ರಸ್ತುತ ಇಂಟರ್ಫೇಸ್‌ಗಾಗಿ ಸ್ನಾಯು-ಸ್ಮರಣೆಯನ್ನು ಹೊಂದಿರುವ ಅನೇಕರಿಗೆ ಇದು ಪ್ರಮುಖ ಬದಲಾವಣೆಯಾಗಲಿದೆ.

ಇನ್‌ಸ್ಟಾಗ್ರಾಮ್ ಫೀಡ್ ಅನ್ನು ವಿಂಗಡಿಸಲು ಹೊಸ ವಿಧಾನಗಳನ್ನು ಪರಿಶೀಲಿಸುತ್ತಿದೆ ಹಾಗೂ ನಿಮಗೆ ಬೇಕಾದಂತೆ ಪ್ರೊಫೈಲ್ ಗ್ರಿಡ್ ಅನ್ನು ಎಡಿಟ್ ಮಾಡುವ ಆಯ್ಕೆಯತ್ತ ಕೂಡ ಗಮನ ಹರಿಸಿದೆ. ಎಲ್ಲಾ ಬಳಕೆದಾರರಿಗೆ ಈ ಫೀಚರ್‌ಗಳು ಯಾವಾಗ ಲಭ್ಯವಾಗಲಿದೆ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ವರದಿ ತಿಳಿಸಿರುವಂತೆ ಒಟ್ಟಿನಲ್ಲಿ ಈ ಬದಲಾವಣೆಯು ಟಿಕ್‌ಟಾಕ್‌ಗೆ ಸ್ಪರ್ಧೆಯನ್ನೊಡ್ಡುವ ಪ್ರಯತ್ನವಾಗಿ ಆಗಮಿಸಿದೆ ಎಂಬ ಊಹೆ ಇದ್ದು, ಟಿಕ್‌ಟಾಕ್ ಪ್ರಸ್ತುತ ತನ್ನ ಬಳಕೆದಾರರಿಗೆ ವರ್ಟಿಕಲ್ ಸ್ಕ್ರೋಲಿಂಗ್ ಅನ್ನು ಒದಗಿಸುತ್ತದೆ.

ಇದನ್ನೂ ಓದಿ: Instagram: ಇನ್​ಸ್ಟಾಗ್ರಾಮ್ Influencersಗಳೇ ಕೇಳಿ... ಈ ವಿಚಾರದಲ್ಲಿ ನೀವು ಜಾಗ್ರತೆ ವಹಿಸಲೇಬೇಕು!

ಫಲಿತಾಂಶವಾಗಿ ಇನ್‌ಸ್ಟಾಗ್ರಾಮ್ ಕೂಡ ಬದಲಾಯಿಸದೇ ಇರುವ ಕಂಟೆಂಟ್‌ಗಿಂತ ವಿಡಿಯೋಗಳ ಮೇಲೆ ಹೆಚ್ಚು ಕೇಂದ್ರೀಕರಿಸಿದೆ ಎನ್ನಲಾಗಿದೆ. ಇದೇ ಸಮಯದಲ್ಲಿಯೇ ಇನ್‌ಸ್ಟಾಗ್ರಾಮ್ ವಿಡಿಯೋಗಳಿಗಾಗಿ ನಿಗದಿಪಡಿಸಿರುವ ಗರಿಷ್ಟ ಮಿತಿಯನ್ನು ಪರಿಶೀಲನೆ ನಡೆಸುತ್ತಿದ್ದು ಇದು 15 ಸೆಕೆಂಡ್‌ಗಳಿಂದ ಈಗ 60 ಸೆಕೆಂಡ್‌ಗಳ ಮಿತಿಯನ್ನು ತಲುಪಿದೆ. ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಬಳಕೆದಾರರು 1 ನಿಮಿಷದ ವಿಡಿಯೋಗಳನ್ನು ಈಗಾಗಲೇ ಪೋಸ್ಟ್ ಮಾಡಬಹುದಾದರೂ ಪ್ರತಿ ವಿಡಿಯೋವನ್ನು 15 ಸೆಕೆಂಡ್‌ಗಳ ನಾಲ್ಕು ವಿಡಿಯೋಗಳಾಗಿ ವಿಂಗಡಿಸಬೇಕು.
Published by:vanithasanjevani vanithasanjevani
First published: