ಇನ್ಸ್ಟಾಗ್ರಾಮ್​ನಲ್ಲೂ ವಿಡಿಯೋ ಕಾಲಿಂಗ್​ ಸೌಲಭ್ಯ ಆರಂಭ


Updated:June 27, 2018, 6:37 PM IST
ಇನ್ಸ್ಟಾಗ್ರಾಮ್​ನಲ್ಲೂ ವಿಡಿಯೋ ಕಾಲಿಂಗ್​ ಸೌಲಭ್ಯ ಆರಂಭ

Updated: June 27, 2018, 6:37 PM IST
ಸಾಮಾಜಿಕ ಜಾಲತಾಣದ ಅತ್ಯಂತ ಖ್ಯಾತ ವಿಡಿಯೋ ಶೇರಿಂಗ್​ ವೇದಿಕೆ ಎಂದೇ ಗುರುತಿಸಿಕೊಂಡಿರುವ ಫೇಸ್​ಬುಕ್​ ಒಡೆತನದ ಇನ್ಸ್ಟಾಗ್ರಾಮ್​ ಇದೀಗ ಸ್ನಾಪ್​ಚಾಟ್​ ಸೇರಿದಂತೆ ಎಲ್ಲಾ ಡೇಟಿಂಗ್​ ಆ್ಯಪ್​ಗಳಿಗೂ ಸೆಡ್ಡು ಹೊಡೆದ್ದು, ಐಒಎಸ್​ ಮತ್ತು ಆ್ಯಂಡ್ರಾಯ್ಡ್​ ಡಿವೈಸ್​ಗಳಿಗೆ ವಿಡಿಯೋ ಚಾಟಿಂಗ್​ ಆಯ್ಕೆಯನ್ನು ನೀಡಲು ಆರಂಭಿಸಿದೆ.

ಕೆಲ ದಿನಗಳ ಹಿಂದೆಯಷ್ಟೇ ನಡೆದ F8 ಡೆವಲಪರ್ಸ್ ಸಮ್ಮೇಳನದಲ್ಲಿ ಫೇಸ್​ಬುಕ್​ ತನ್ನ ಹೊಸ ಫೀಚರ್​ ಆದ ವಿಡಿಯೋ ಚಾಟಿಂಗ್​ ಆಯ್ಕೆ ಕುರಿತು ಹೇಳಿಕೊಂಡಿತ್ತು. ಇದೀಗ ಲೈವ್​ ಮಾಡಿದ್ದು ಇನ್ಸ್ಟಾಗ್ರಾಮ್​ನಲ್ಲಿ ಒಂದೇ ಬಾರಿಗೆ ನಾಲ್ವರೊಂದಿಗೆ ಚಾಟ್​ ಮಾಡಬಹುದಾದ ವಿಡಿಯೋ ಕಾಲಿಂಗ್​ ಆಯ್ಕೆಯನ್ನು ನೀಡಲಾಗಿದ್ದು ಇದನ್ನು ಮೆಸೇಜಿಂಗ್​ ಪೇಜ್​ನಲ್ಲಿ ಕಾಣಬಹುದು. ಒಂದು ವೇಳೆ ನೀವು/ನಿಮ್ಮನ್ನು ಯಾರಾದರೂ ಬ್ಲಾಕ್​ ಮಾಡಿದ್ದರೆ ಆ ವ್ಯಕ್ತಿಗೆ ವಿಡಿಯೋ ಕಾಲ್​ ಮಾಡಲು ಅಸಾಧ್ಯ.

ಇನ್ನು ನೀವು ಚಾಟ್​ ಮಾಡಿಕೊಂಡೇ ಫೀಡ್​ ನೋಡಬೇಕಾದರೆ ಸ್ಕ್ರೀನ್​ ಮಿನಿಮೈಸ್​ ಆಯ್ಕೆಯೂ ನೀಡಲಾಗಿದೆ, ಹೀಗಾಗಿ ನೀವು ಚಾಟ್​ ಮಾಡುವ ಸಂದರ್ಭದಲ್ಲಿ ಇನ್ಸ್ಟಾ ಫೀಡಿಂಗ್​ನ್ನ ಕೂಡಾ ವೀಕ್ಷಿಸಬಹುದು. ಈ ಸಂದರ್ಭದಲ್ಲಿ ನೀವು ವಿಡಿಯೋ ಕಾಲ್​ನಲ್ಲಿರವ ವ್ಯಕ್ತಿಗಳು ಸಣ್ಣ ಚಿತ್ರದಂತೆ ಕಾಣಿಸಿಕೊಳ್ಳುತ್ತಾರೆ.

ಸ್ನ್ಯಾಪ್​ಚಾಟ್​ಗೆ ಹೋಲಿಸಿದರೆ ಇನ್ಸ್ಟಾಗ್ರಾಮ್​ ಕಡಿಮೆ ಫೀಚರ್​ ಹೊಂದಿದೆ ಎನ್ನಬಹುದು, ಏಕೆಂದರೆ ಸ್ನಾಪ್​ಚಾಟ್​ನಲ್ಲಿ ಒಂದೇ ಬಾರಿಗೆ 16 ಮಂದಿ ವಿಡಿಯೋ ಕಾಲಿಂಗ್​ನಲ್ಲಿ ಭಾಗವಹಿಸಬಹುದು. ಇನ್ನು ಇದಕ್ಕಿಂತಲೂ ಮುಂದೆ ಹೋಗಿರುವ ಫೇಸ್​ಟೈಮ್​ ಒಂದು ಬಾರಿಗೆ 32 ಮಂದಿಯೊಂದಿಗೆ ಕಾಲ್​ ಮಾಡಿ ಮಾತನಾಡಬಹುದು.

ಕೆಲ ದಿನಗಳ ಹಿಂದೆ ವಾಟ್ಸಾಪ್​ನಲ್ಲೂ ನಾಲ್ವರೊಂದಿಗೆ ಗ್ರೂಪ್​ ವಿಡಿಯೋ ಕಾಲಿಂಗ್​ ಆಯ್ಕೆಯನ್ನು ಮಾಡಲು ಅವಕಾಶ ನೀಡಲಾಗಿತ್ತು. ಹೀಗಾಗಿ ಟೆಕ್​ ಸಮ್ಮೇಳನದಲ್ಲಿ ನೀಡಲಾಗಿರುವ ಭರವಸೆಗಳನ್ನು ಒಂದು ಹಂತದ ವರೆಗೆ ಫೇಸ್​ಬುಕ್​ ಸಂಸ್ಥೆ ಪೂರೈಸಿದೆ.
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...