news18-kannada Updated:April 1, 2021, 11:45 AM IST
Instagram
ಟಿಕ್ಟಾಕ್ ಬ್ಯಾನ್ ಆದ ನಂತರ ಹಲವು ಜನಪ್ರಿಯ ತಾಣಗಳು ಟಿಕ್ಟಾಕ್ ಹೋಲಿಕೆಯಂತಿರುವ ಫೀಚರ್ಸ್ ಅನ್ನು ಪರಿಚಯಿಸಿದೆ. ಇನ್ಸ್ಟಾಗ್ರಾಂ ಕೂಡ ರೀಲ್ ಹೆಸರಿನ ನೂತನ ಹೊಸ ಫೀಚರ್ಸ್ ಪರಿಚಯಿಸಿತ್ತು. ಅನೇಕರು ಈ ಫೀಚರ್ ಬಳಸುವ ಮೂಲಕ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಾರೆ. ಇದೀಗ ರೀಲ್ ರಿಮಿಕ್ಸ್ ಹೆಸರಿನ ಹೊಸ ವೈಶಿಷ್ಟ್ಯಯವನ್ನು ಇನ್ಸ್ಟಾಗ್ರಾಂ ಪರಿಚಯಿಸಿದೆ. ಅದರ ಮೂಲಕ ಮೂಲ ಕ್ಲಿಪ್ ಅನ್ನು ಬಳಸಬಹುದಾಗಿದೆ. ಜೊತೆಗೆ ಕ್ರೀಯಾತ್ಮಕ ಐಡಿಯಾ, ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಬಹುದಾಗಿದೆ.
ಈಗಾಗಲೇ ಇನ್ಸ್ಟಾಗ್ರಾಂ ಕೆಲವು ರೀಲ್ ರಿಮಿಕ್ಸ್ ಫೀಚರ್ ಅನ್ನು ಪರಿಚಯಿಸಿದೆ. ಅದರಲ್ಲಿ ಆರ್ಜೆ ಸುಕೃತಿ, ಆರ್ಜೆ ಅಭಿನವ್ ಮುಂತಾದವರು ಈ ರೀಲ್ಸ್ ರಿಮಿಕ್ಸ್ ಅನ್ನು ಬಳಸಿದ್ದಾರೆ.
‘ಈಗಾಗಲೇ ಇನ್ಸ್ಟಾಗ್ರಾಂನಲ್ಲಿರುವ ರೀಲ್ ರಿಮಿಕ್ಸ್ ಫೀಚರ್ಸ್ ಬಳಸಬಹುದಾಗಿದೆ. ನಿಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಬಹುದಾಗಿದೆ ಜೊತೆಗೆ ಕ್ರಿಯಾತ್ಮಕವಾಗಿ ಬಳಸಬಹುದಾಗಿದೆ’ ಎಂದು ಇನ್ಸ್ಟಾಗ್ರಾಂ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ರಿಮಿಕ್ಸ್ ರೀಲ್ ಬಳಸುವುದು ಹೇಗೆ?
-ರೀಲ್ ಅನ್ನು ರಿಮಿಕ್ಸ್ ಮಾಡಲು ಪರದೆಯ ಕೆಳಗಿನ ಬಲಭಾಗದಲ್ಲಿ ಕಾಣಿಸುವ ಮೂರು ಚುಕ್ಕೆಯನ್ನು ಟ್ಯಾಪ್ ಮಾಡಿ
-ನಂತರ ರಿಮಿಕ್ಸ್ ರೀಲ್ ಆಯ್ಕೆಯನ್ನು ಟ್ಯಾಪ್ ಮಾಡಿ
-ಸ್ವಂತ ವಿಡಿಯೋವನ್ನು ರೆಕಾರ್ಡ್ ಮಾಡಿ ಅಥವಾ ಅಪ್ಲೋಡ್ ಮಾಡಿ ಅದು ಮೂಲ ರೀಲ್ನ ಬದಿಯಲ್ಲಿ ಗೋಚರಿಸುತ್ತದೆ.
-ಮೂಲ ರೀಲ್ನ ಆಡಿಯೋ ಬದಲಾಯಿಸಬಹುದು, ಜೊತೆಗೆ ವಾಲ್ಯೂಮ್ ಬದಲಾಯಿಸಬಹುದು, ಮಾಥ್ರವಲ್ಲದೆ ವಾಯ್ಸ್ ಓವರ್ ಜೋಡಿಸಬಹುದಾಗಿದೆ.
Published by:
Harshith AS
First published:
April 1, 2021, 11:45 AM IST