ದೀಪಾವಳಿ ಹಬ್ಬದ ಸಡಗರಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ದೀಪಾವಳಿ ಹಬ್ಬದ ಕುರಿತಾದ ಸಾಕಷ್ಟು ವಿಚಾರಗಳು ಹರಿದಾಡುತ್ತಿದೆ. ಮಾತ್ರವಲ್ಲದೆ, ಶುಭಾಶಯ ತಿಳಿಸುವ ಪೋಸ್ಟರ್ಗಳು ಕೂಡ ಹರಿದಾಡುತ್ತಿದೆ. ಇದೀಗ ಫೇಸ್ಬುಕ್ ಒಡೆತನದ ಇನ್ಸ್ಟಾಗ್ರಾಂ ತನ್ನ ಬಳಸಕೆದಾರರಿಗೆ ಹಬ್ಬದ ಪ್ರಯುಕ್ತ ಎಆರ್ ಫಿಲ್ಟರ್ ಅನ್ನು ಪರಿಚಯಿಸಿದೆ.
ಮಂಡಲ, ದೀಪ, ಲೈಟ್ಸ್ ಮತ್ತು ಬಣ್ಣಗಳಿಂದ ಪ್ರೇರಿತವಾಗಿ ಇನ್ಸ್ಟಾಗ್ರಾಂ ಎಆರ್ ಫಿಲ್ಟರ್ ಪರಿಚಯಿಸಿದೆ. ಏಳು ಭಾಷೆಗಳಲ್ಲಿ ಎರ್ಆರ್ ಫಿಲ್ಟರ್ ಕಾಣಿಸಿಕೊಳ್ಳಲಿದೆ. ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಮರಾಠಿ, ಬೆಂಗಾಲಿ ಮತ್ತು ಉರ್ದು ಭಾಷೆಯಲ್ಲಿ ಬಳಕೆಗೆ ಸಿಗಲಿದೆ.
ಫೇಸ್ಬುಕ್ ಇಂಡಿಯಾದ ನಿರ್ದೇಶಕ ಮತ್ತು ಸಹಭಾಗಿತ್ವದ ಮುಖ್ಯಸ್ಥ ಮನೀಶ್ ಚೋಪ್ರಾ ಈ ಬಗ್ಗೆ ಹೇಳಿಕೆ ನೀಡಿದ್ದು, ‘ಇನ್ಸ್ಟಾಗ್ರಾಂ ಮೂಲಕ ಜನರು ತಮ್ಮ ಸಂಸ್ಕ್ರತಿ ವ್ಯಕ್ತಪಡಿಸಬಹುದಾಗಿದೆ. ಹೊಸ ಫೀಚರ್ಗಳು ಹಬ್ಬದ ಸಮಯದಲ್ಲಿ ಹೆಚ್ಚು ಬಳಕೆಯಾಗುತ್ತದೆ’ ಎಂದು ಹೇಳಿದ್ದಾರೆ
ನಂತರ ಮಾತನಾಡಿರುವ ಅವರು, ಮುಂಬರುವ ಹಬ್ಬದ ದಿನದಂದು ಎಆರ್ ಫಿಲ್ಟರ್ ಎಷ್ಟು ಬಳಕೆಯಾಗಲಿದೆ ಎಂದು ಕಾದು ನೋಡುತ್ತಿದ್ದೇವೆ ಎಂದರು.
ಇನ್ನು ಕಳೆದ ದುರ್ಗಾ ಪೂಜೆಯಂದು ಇನ್ಸ್ಟಾಗ್ರಾಂ ಕೆಲವು ಎಆರ್ ಫಿಲ್ಟರ್, ಗಿಫ್ಟ್ ಸ್ಟಿಕ್ಕರ್ ಪರಿಚಯಿಸಿದೆ. ಇದೀಗ ದೀಪಾವಳಿಗೆ ಮುಂಚಿತವಾಗಿ ಹೊಸ ಎಆರ್ ಫಿಲ್ಟರ್ ಪರಿಚಯಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ