Instagram: ಇನ್ಮುಂದೆ ವಿಡಿಯೋ ಪೋಸ್ಟನ್ನು ರೀಲ್ಸ್ ಆಗಿ ಮಾಡಬಹುದಂತೆ! ಹೀಗೊಂದು ಪ್ರಯತ್ನಕ್ಕಿಳಿದಿದೆ ಇನ್ಸ್ಟಾಗ್ರಾಮ್

ಮೆಟಾ ಮಾಲಿಕತ್ವದ ಈ ಇನ್ಸ್ಟಾಗ್ರಾಮ್ ವೇದಿಕೆಯು ವಿಡಿಯೋ ಪೋಸ್ಟುಗಳನ್ನು ರೀಲ್ಸ್ ಅನ್ನಾಗಿ ಪರ್ವರ್ತಿಸುವಂತಹ ವೈಶಿಷ್ಟ್ಯದ ಮೇಲೆ ಸದ್ಯ ಪರೀಕ್ಷೆ ನಡೆಸುತ್ತಿರುವುದಾಗಿ ಹೇಳಿದ್ದು ಜಗತ್ತಿನ ಕೆಲವು ಆಯ್ದ ಬಳಕೆದಾರರಿಗೆ ಮಾತ್ರವೇ ಈ ವೈಶಿಷ್ಠ್ಯ ನೀಡುತ್ತಿರುವುದಾಗಿ ಹೇಳಿದೆ. ಈ ಮೂಲಕ ಅದು ವಿಡಿಯೋ ಅಪ್ಲಿಕೇಷನ್ ಗಳನ್ನು ಮತ್ತಷ್ಟು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಈ ಪ್ರಯೋಗ ಮಾಡುತ್ತಿದೆ ಎನ್ನಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಹಿಂದೊಮ್ಮೆ ಸಾಮಾಜಿಕ ಮಾಧ್ಯಮಗಳು (Social Media) ಜಸ್ಟ್ ಪ್ರಾರಂಭವಾದ ಸಮಯದಲ್ಲಿ ಅದರ ಬಳಕೆದಾರರು ಕೇವಲ ಚಿತ್ರಗಳನ್ನು, ತಮ್ಮ ಅಭಿಪ್ರಾಯಗಳನ್ನ (Opinion) ಇಲ್ಲವೆ ಬೇರೊಂದು ಮಾಧ್ಯಮಗಳ ಲಿಂಕ್ ಗಳನ್ನು ಅದರಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ಕಾಲ ಉರುಳಿದಂತೆ ತಂತ್ರಜ್ಞಾನ (Technology) ಮತ್ತಷ್ಟು ಬಲಶಾಲಿಯಾದಂತೆ ಹಲವು ವೈಶಿಷ್ಠ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತರಲಾಯಿತು. ಈಗ ಸದ್ಯ, ಇನ್ಸ್ಟಾಗ್ರಾಂ ವೇದಿಕೆಯಲ್ಲಿರುವ ರೀಲ್ಸ್ ವೈಶಿಷ್ಟ್ಯ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಇದು ಸಾಕಷ್ಟು ಜನಪ್ರೀಯವಾದ ಇನ್ಸ್ಟಾಗ್ರಾಮ್ ವೈಶಿಷ್ಠ್ಯವೆಂದರೂ ತಪ್ಪಿಲ್ಲ. ಆದರೆ, ಈಗ ಇನ್ಸ್ಟಾಗ್ರಾಮ್ ವೇದಿಕೆಯು ತನ್ನ ಈ ರೀಲ್ಸ್ ವೈಶಿಷ್ಠ್ಯಕ್ಕೆ ಮತ್ತೊಂದು ಫೀಚರ್ ಸೇರಿಸಲು ಆಸಕ್ತಿ ತೋರುತ್ತಿದೆ ಎಂದು ತಿಳಿದುಬಂದಿದೆ. 

ವಿಡಿಯೋ ಪೋಸ್ಟುಗಳನ್ನು ರೀಲ್ಸ್ ಅನ್ನಾಗಿ ಪರ್ವರ್ತಿಸುವಂತಹ ಹೊಸ ವೈಶಿಷ್ಟ್ಯ
ಆ ಸಂಬಂಧ ಅದು ಈಗ ವಿಡಿಯೋ ಅನ್ನು ರೀಲ್ಸ್ ಅನ್ನಾಗಿ ಪರ್ವರ್ತಿಸುವಂತಹ ಇನ್ನೊಂದು ವೈಶಿಷ್ಠ್ಯದ ಬಗ್ಗೆ ಪ್ರಯೋಗ ನಡೆಸುತ್ತಿದೆ ಎನ್ನಲಾಗಿದೆ. ಮೆಟಾ ಮಾಲಿಕತ್ವದ ಈ ಇನ್ಸ್ಟಾಗ್ರಾಮ್ ವೇದಿಕೆಯು ವಿಡಿಯೋ ಪೋಸ್ಟುಗಳನ್ನು ರೀಲ್ಸ್ ಅನ್ನಾಗಿ ಪರ್ವರ್ತಿಸುವಂತಹ ವೈಶಿಷ್ಟ್ಯದ ಮೇಲೆ ಸದ್ಯ ಪರೀಕ್ಷೆ ನಡೆಸುತ್ತಿರುವುದಾಗಿ ಹೇಳಿದ್ದು ಜಗತ್ತಿನ ಕೆಲವು ಆಯ್ದ ಬಳಕೆದಾರರಿಗೆ ಮಾತ್ರವೇ ಈ ವೈಶಿಷ್ಠ್ಯ ನೀಡುತ್ತಿರುವುದಾಗಿ ಹೇಳಿದೆ. ಈ ಮೂಲಕ ಅದು ವಿಡಿಯೋ ಅಪ್ಲಿಕೇಷನ್ ಗಳನ್ನು ಮತ್ತಷ್ಟು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಈ ಪ್ರಯೋಗ ಮಾಡುತ್ತಿದೆ ಎನ್ನಲಾಗಿದೆ.



ಈ ಒಟ್ಟಾರೆ ಪ್ರಕ್ರಿಯೆ ಬಗ್ಗೆ ಸಾಮಾಜಿಕ ಮಾಧ್ಯಮ ವಿಶ್ಲೇಷಕರೊಬ್ಬರು ಟ್ವಿಟರ್ನಲ್ಲಿ ಸ್ಕ್ರೀನ್ ಶಾಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಆಯ್ದ ಕೆಲ ಬಳಕೆದಾರರಿಗೆ ಅವರ ಇನ್ಸ್ಟಾಗ್ರಾಮ್ ಆಪ್ ಪರದೆಯ ಮೇಲೆ ವಿಡಿಯೋಗಳನ್ನು ಈಗ ಇನ್ಸ್ಟಾಗ್ರಾಮ್ ರೀಲ್ಸ್ ಆಗಿಯೂ ಹಂಚಿಕೊಳ್ಳಬಹುದು ಎಂಬ ಸೂಚನೆ ಬರುವುದನ್ನು ಕಾಣಬಹುದಾಗಿದೆ.

ಟೆಕ್ ಕ್ರಂಚ್ ನೀಡಿರುವ ವರದಿಯ ಪ್ರಕಾರ ಏನಿದೆ
ಟೆಕ್ ಕ್ರಂಚ್ ನೀಡಿರುವ ವರದಿಯ ಪ್ರಕಾರ, ಇಮೇಲ್ ಒಂದನ್ನು ಈ ಬಗ್ಗೆ ಮೆಟಾದ ವಕ್ತಾರರಿಗೆ ಕಳುಹಿಸಿದಾಗ ಅದಕ್ಕೆ ಪ್ರತಿಯಾಗಿ ಬಂದಿರುವ ಹೇಳಿಕೆಯಂತೆ, ಮೆಟಾ ಮಾಲೀಕತ್ವದ ಇನ್ಸ್ಟಾಗ್ರಾಮ್ ವೇದಿಕೆಯು ತನ್ನ ವೇದಿಕೆಯಲ್ಲಿ ವಿಡಿಯೋ ಪೋಸ್ಟುಗಳನ್ನು ರೀಲ್ಸ್ ಅನ್ನಾಗಿ ಪರಿವರ್ತಿಸುವ ಪರೀಕ್ಷೆಯೊಂದನ್ನು ನಡೆಸುತ್ತಿರುವುದಾಗಿ ಹೇಳಿದೆ ಎನ್ನಲಾಗಿದೆ.

ಇದನ್ನೂ ಓದಿ: WhatsApp: ಅಪ್ಪಿ ತಪ್ಪಿಯೂ ಈ 3 ಫೋಟೋ ಮತ್ತು ವಿಡಿಯೋವನ್ನ ಶೇರ್​ ಮಾಡಬೇಡಿ! ಜೈಲು ಸೇರುತ್ತೀರಾ, ಹುಷಾರ್​

ಮುಂದುವರೆದಂತೆ ಮೆಟಾದ ವಕ್ತಾರರು, "ನಾವು ನಮ್ಮ ವೇದಿಕೆಯಲ್ಲಿ ಅಪ್ಲೋಡ್ ಆಗುವ ವಿಡಿಯೋಗಳನ್ನು ಮತ್ತಷ್ಟು ಸರಳೀಕರಣಗೊಳಿಸುವ ಮೂಲಕ ಬಳಕೆದಾರರಿಗೆ ವಿಶಿಷ್ಟ ಅನುಭೂತಿ ನೀಡಬೇಕೆಂಬ ಉದ್ದೇಶದಿಂದ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ರೀಲ್ಸ್ ಅನ್ನಾಗಿ ಪರಿವರ್ತಿಸುವ ಸಂಬಂಧ ಪರೀಕ್ಷೆಗಳನ್ನು ನಡೆಸುತ್ತಿರುವುದಾಗಿ" ಹೇಳಿದ್ದಾರೆನ್ನಲಾಗಿದೆ.

ಇದನ್ನು ಬಳಸುವುದು ಹೇಗೆ
ಈ ಮೂಲಕ ಜಗತ್ತಿನಾದ್ಯಂತ ಕೆಲವೆ ಕೆಲವು ಆಯ್ದ ಬಳಕೆದಾರರು ತಮ್ಮ ಇನ್ಸ್ಟಾಗ್ರಾಮ್ ಪರದೆಯ ಮೇಲೆ ವಿಡಿಯೋ ಅನ್ನು ರೀಲ್ಸ್ ಅನ್ನಾಗಿ ಪರಿವರ್ತಿಸುವ ಸಂದೇಶವನ್ನು ಕಾಣಲಿದ್ದಾರೆ ಎಂದು ಹೇಳಬಹುದಾಗಿದೆ. ಇದಲ್ಲದೆ ಆ ಸಂದೇಶದಲ್ಲಿ, "ನಿಮ್ಮ ಖಾತೆ ಪಬ್ಲಿಕ್ ಆಗಿದ್ದರೆ, ಹಾಗೂ ನೀವು ವಿಡಿಯೋ ಹಂಚಿಕೊಂಡರೆ ಇತರರು ನಿಮ್ಮ ವಿಡಿಯೋದ ಕೇವಲ ಆಡಿಯೋ ಅನ್ನು ಮಾತ್ರವೇ ತಮ್ಮ ವೈಯಕ್ತಿಕ ರೀಲ್ಸ್ ಗಳಿಗಾಗಿ ಬಳಸಬಹುದು" ಎಂದು ಸಹ ಹೇಳಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Instagram: ಇನ್‌ಸ್ಟಾಗ್ರಾಮ್ ಬಳಸುತ್ತಿದ್ದೀರಾ? ಈ ಹೊಸ 7 ಫೀಚರ್ ಗಳನ್ನು ಒಮ್ಮೆ ಟ್ರೈ ಮಾಡಿ

ಅಲ್ಲದೆ ಸಂದೇಶದಲ್ಲಿ, ಯಾರೇ ಆಗಲಿ, ಬಳಕೆದಾರರ ರೀಲ್ಸ್ ಅನ್ನು ಬಳಸಿ ತಮ್ಮದೆ ಆದ ರಿಮಿಕ್ಸ್ ಅನ್ನು ಮಾಡಿ ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದೂ ಸಹ ಹೇಳಲಾಗಿದೆ. ಆದಾಗ್ಯೂ, ರಿಮಿಕ್ಸ್ ಮಾಡುವ ಆಯ್ಕೆ ಬೇಡವಾಗಿದ್ದಲ್ಲಿ ಅದನ್ನು ಸೆಟ್ಟಿಂಗ್ಸ್ ಗೆ ತೆರಳಿ ಅಲ್ಲಿಂದ ನಿಷ್ಕ್ರೀಯಗೊಳಿಸಬಹುದಾಗಿದೆ. ಒಟ್ಟಿನಲ್ಲಿ ಇದೊಂದು ಮತ್ತಷ್ಟು ಲೇಟೆಸ್ಟ್ ಫೀಚರ್ ಆಗಿದೆ ಹಾಗೂ ಎಲ್ಲರಿಗೂ ಇಷ್ಟವಾಗಬಹುದು. ಹಾಗಾಗಿ ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬ ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಇದು ಲಭ್ಯವಾಗಬಹುದೇನೋ ಎಂದು ಕಾತುರದಿಂದ ಕಾಯುವುದಂತೂ ಸತ್ಯ.
Published by:Ashwini Prabhu
First published: