ಇನ್​ಸ್ಟಾಗ್ರಾಂ ಬಳಕೆದಾರರಿಗೆ ಸಿಹಿ ಸುದ್ದಿ: ಆ್ಯಪ್​ನಲ್ಲಿದೆ ಅದ್ಭುತ ಫೀಚರ್

ಇನ್​ಸ್ಟಾಗ್ರಾಂ ಆ್ಯಪ್​ನ ಈ ಹೊಸ ಆಯ್ಕೆಯು ಐಒಎಸ್​ ಮತ್ತು ಅಂಡ್ರಾಯ್ಡ್​ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಲಭ್ಯವಿದೆ.

zahir | news18
Updated:December 13, 2018, 11:43 AM IST
ಇನ್​ಸ್ಟಾಗ್ರಾಂ ಬಳಕೆದಾರರಿಗೆ ಸಿಹಿ ಸುದ್ದಿ: ಆ್ಯಪ್​ನಲ್ಲಿದೆ ಅದ್ಭುತ ಫೀಚರ್
ಇನ್​ಸ್ಟಾಗ್ರಾಂ
  • News18
  • Last Updated: December 13, 2018, 11:43 AM IST
  • Share this:
ಸಾಮಾಜಿಕ ಜಾಲತಾಣ ಮತ್ತು ಮೆಸೇಜಿಂಗ್ ಅಪ್ಲಿಕೇಶನ್​ಗಳು ಹೊಸ ಫೀಚರ್​ಗಳತ್ತ ಹೆಚ್ಚು ಗಮನ ಹರಿಸುತ್ತಿದೆ. ಇದೀಗ ಇನ್​ಸ್ಟಾಗ್ರಾಂ ಆ್ಯಪ್​ ಕೂಡ ಬಳಕೆದಾರರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಫೋಟೋ ಶೇರಿಂಗ್ ಫ್ಲಾಟ್​ಫಾರ್ಮ್​ ಇನ್​ಸ್ಟಾಗ್ರಾಂನಲ್ಲಿ ಧ್ವನಿ ಸಂದೇಶದ ಹೊಸ ಆಯ್ಕೆಯನ್ನು ನೀಡಲಾಗಿದೆ. ಇದರಿಂದ ಇನ್ನು ಮುಂದೆ ವಾಟ್ಸ್​ಆ್ಯಪ್​ ರೀತಿಯಲ್ಲೇ ಇನ್​ಸ್ಟಾಗ್ರಾಂನಲ್ಲೂ ವಾಯ್ಸ್​ ಮೆಸೇಜ್ ಕಳುಹಿಸಬಹುದು.

ಹೊಸ ಫೀಚರ್​ನ್ನು ಬಳಸಿಕೊಳ್ಳುವುದು ಹೇಗೆ

ಇನ್​ಸ್ಟಾಗ್ರಾಂನಲ್ಲಿ ನೀಡಲಾಗಿರುವ ಹೊಸ ಆಯ್ಕೆಯನ್ನು ಚಾಟ್​ ಬಾಕ್ಸ್​ನಲ್ಲಿ ಬಳಸಿಕೊಳ್ಳಬಹುದು. ಮೆಸೇಜ್​ ಮಾಡುವ ಜಾಗದಲ್ಲಿ ಮೈಕ್ರೋಫೋನ್ ರೀತಿಯ ಬಟನ್​ ಆಯ್ಕೆಯನ್ನು ನೀಡಲಾಗಿದ್ದು, ಇದನ್ನು ಒತ್ತಿ ಹಿಡಿದುಕೊಳ್ಳುವ ಮೂಲಕ ವಾಯ್ಸ್​ ರೆಕಾರ್ಡಿಂಗ್ ಮಾಡಿಕೊಳ್ಳಬಹುದು. ರೆಕಾರ್ಡಿಂಗ್ ಮುಗಿದ ಬಳಿಕ ಬಳಕೆದಾರರು ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ತಪ್ಪಾಗಿ ರೆಕಾರ್ಡಿಂಗ್ ಮಾಡಿಕೊಂಡಿದ್ದರೆ, ಎಡಕ್ಕೆ ಸ್ವೈಪ್ ಮಾಡುವ ಮೂಲಕ ಸಂದೇಶವನ್ನು ರದ್ದುಗೊಳಿಸಬಹುದು.

ಅನ್​ಸೆಂಡ್ ಆಯ್ಕೆ
ಇನ್​ಸ್ಟಾಗ್ರಾಂ ಪ್ರಸ್ತುತ ಪಡಿಸಿರುವ ವಾಯ್ಸ್ ಮೆಸೇಜ್ ಆಯ್ಕೆಯ ವಿಶೇಷವೆಂದರೆ, ಕಳುಹಿಸಿದ ಸಂದೇಶವನ್ನು ಅನ್​ಸೆಂಡ್​ ಆಯ್ಕೆಯ ಮೂಲಕ ರದ್ದು ಪಡಿಸಬಹುದು. ಇದಕ್ಕೆ ನೀವು ಕಳುಹಿಸಿದ ವಾಯ್ಸ್​ ಮೆಸೇಜ್​ನ್ನು  ದೀರ್ಘಕಾಲ ಒತ್ತಿ ಹಿಡಿಯಬೇಕು. ಈ ವೇಳೆ ಅನ್​ಸೆಂಡ್ ವಾಯ್ಸ್​ ಮೆಸೇಜ್ ಆಯ್ಕೆ ಕಾಣಿಸಲಿದೆ. ಅದನ್ನು ಕ್ಲಿಕ್ ಮಾಡಿ ಕಳುಹಿಸಿದ ಮೆಸೇಜ್​ನ್ನು ಅಳಿಸಿಹಾಕಬಹುದು.

ಇದನ್ನೂ ಓದಿ: ತೆರಿಗೆ ವಂಚಕರಿಗೆ ಕಾದಿದೆ ಭಾರೀ ಆಪತ್ತು: ಕಠಿಣ ಕ್ರಮಕ್ಕೆ ಮುಂದಾದ ಬಿಬಿಎಂಪಿ

ಐಒಎಸ್ ಮತ್ತು ಅಂಡ್ರಾಯ್ಡ್​ನಲ್ಲಿ ಲಭ್ಯಇನ್​ಸ್ಟಾಗ್ರಾಂ ಆ್ಯಪ್​ನ ಈ ಹೊಸ ಆಯ್ಕೆಯು ಐಒಎಸ್​ ಮತ್ತು ಅಂಡ್ರಾಯ್ಡ್​ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಲಭ್ಯವಿದೆ. ನಿಮ್ಮ ಇನ್​ಸ್ಟಾಗ್ರಾಂನಲ್ಲಿ ಈ ಆಯ್ಕೆ ಕಾಣಿಸಿಕೊಳ್ಳದಿದ್ದರೆ ಆ್ಯಪ್​ನ್ನು ಅಪ್​ಡೇಟ್ ಮಾಡಿಕೊಳ್ಳುವ ಮೂಲಕ ಪಡೆದುಕೊಳ್ಳಬಹುದು.

ಇದನ್ನೂ ಓದಿ: ವಿಶ್ವಕಪ್ ಹಾಕಿ: ಇಂದು ಡಚ್ಚರ ವಿರುದ್ಧ ಭಾರತ​ ಕ್ವಾಟರ್​ ಕದನ

 

First published: December 13, 2018, 11:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading