ಇನ್ನು ಮುಂದೆ Instagram ನಲ್ಲೇ ಶಾಪಿಂಗ್​ ಮಾಡಿ!


Updated:September 6, 2018, 1:48 PM IST
ಇನ್ನು ಮುಂದೆ Instagram ನಲ್ಲೇ ಶಾಪಿಂಗ್​ ಮಾಡಿ!

Updated: September 6, 2018, 1:48 PM IST
ವಿಡಿಯೋ ಹಾಗು ಚಿತ್ರಗಳನ್ನು ಶೇರ್​ ಮಾಡಲು ವೇದಿಕೆಯಾಗಿದ್ದ ಫೇಸ್​ಬುಕ್​ ಒಡೆತನದ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್​ ಇದೀಗ 100 ಕೋಟಿ ಬಳಕೇದಾರರಿಗೆ ಇದೇ ವೇದಿಕೆಯಡಿ ಶಾಪಿಂಗ್​ ನಡೆಸಲು ಅವಕಾಶ ಕಲ್ಪಿಸಲು ತೀರ್ಮಾನಿಸಿದೆ.

"IG Shopping" ಎಂಬ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿರುವ ಇನ್ಸ್ಟಾ ತಾಂತ್ರಿಕ ತಂಡ, ಕೆಲವೇ ದಿನಗಳಲ್ಲಿ ತನ್ನದೇ ವೇದಿಕೆಯಲ್ಲಿ ಬಳಕೇದಾರರು ಫ್ಲಿಪ್​ಕಾರ್ಟ್​ ಅಮೆಜಾನ್​ನಂತೆ ಆನ್​ಲೈನ್​ ಖರೀದಿ ವ್ಯವಹಾರ ನಡೆಸಲು ಅವಕಾಶ ಕಲ್ಪಿಸುತ್ತಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಹೆಚ್ಚಿ ಆಧಾಯವನ್ನು ಫೇಸ್​ಬುಕ್​ ಗಳಿಸುವ ಎಲ್ಲಾ ಸಾಧ್ಯತೆಯಿದೆ ಎಂದು ಅಲ್ಲಿನ ಮೂಲಗಳು ವೆರ್ಜ್​ ಮಾಧ್ಯಮಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.

ಇನ್ಸ್ಟಾಗ್ರಾಮ್​ನಲ್ಲಿ ಈಗಾಗಲೇ ಸಂಸ್ಥೆ ಅಥವಾ ಬಳಕೇದಾರರು ತಮ್ಮ ವಸ್ತುಗಳ ಕುರಿತು  ಜಾಹೀರಾತು ನೀಡುವ ಮತ್ತು ಚಿತ್ರಗಳ ಮೇಲೆ ಒತ್ತಿದಾಗ ಅಲ್ಲೇ ಖರೀದಿ ನಡೆಸುವ  ಅವಕಾಶ ಕಲ್ಪಿಸಲಾಗಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ವೇದಿಕೆಯಲ್ಲಿ ಇ-ಮಾರುಕಟ್ಟೆಗೆ ಅವಕಾಶ ಕಲ್ಪಿಸಲು ಪರೀಕ್ಷೆ ನಡೆಸಲಾಗಿದೆ. ಆದರೆ ಈ ನೂತನ ಅಪ್​ಡೇಟ್​ ಬಿಡುಗಡೆ ಮಾಡುವ ದಿನದ ಕುರಿತ ಫೇಸ್​ಬುಕ್​ ಈವರೆಗೂ ಬಹಿರಂಗ ಪಡಿಸಿಲ್ಲ. ಇನ್ಸ್ಟಾಗ್ರಾಂ ಸ್ಟೋರಿಸ್​ನಲ್ಲಿ ಪೋಸ್ಟ್​ಗಳ ಮೂಲಕ ಶಾಪಿಂಗ್​ ನಡೆಸಲು ಅವಕಾಶ ಕಲ್ಪಿಸುವ ತಂತ್ರಜ್ಞಾನದ ಕುರಿತು ಈಗಾಗಲೇ ಇನ್ಸ್ಟಾ ಪರೀಕ್ಷೆ ನಡೆಸಿದೆ.

ಒಂದೇ ಆಯಕಟ್ಟಿನಲ್ಲಿ ಗ್ರಾಹಕರಿಗೆ ಶಾಪಿಂಗ್​ ನಡೆಸಲು ಅವಕಾಶ ಕಲ್ಪಿಸುವ ಕುರಿತು ಈ ಯೋಜನೆಯಡಿ ವ್ಯಾಪಾರಿಗಳು ತಮ್ಮ ಅತ್ಯಮೂಲ್ಯ ವಸ್ತುಗಳನ್ನು ಮಾರಾಟ ಮಾಡಬಹುದು ಎಂದು ಈ ಹಿಂದೆ ಇನ್ಸ್ಟಾ ತನ್ನ ಬ್ಲಾಗ್​ನಲ್ಲಿ ಬರೆದುಕೊಂಡಿತ್ತು.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...