IGTV ಅಪ್ಲಿಕೇಶನ್ ಅನ್ನು ಮುಚ್ಚುತ್ತಿದೆ Instagram: ಇನ್ಮೇಲೆ ವಿಡಿಯೋ ಹಾಕೋದು ಹೇಗೆ?

ಮೆಟಾ ಮಾಲೀಕತ್ವದ ಇನ್ಸ್ಟಾಗ್ರಾಮ್‌ ನ IGTV ಅಪ್ಲಿಕೇಶನ್ ಅನ್ನು ಮುಚ್ಚುತ್ತಿದೆ ಮತ್ತು ಬದಲಿಗೆ ಎಲ್ಲ ವಿಡಿಯೋಗಳನ್ನು ಮುಖ್ಯ ಇನ್ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ಇರಿಸಿಕೊಳ್ಳುವತ್ತ ಗಮನಹರಿಸುವುದಾಗಿ ತಿಳಿಸಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾಜಿಕ ಜಾಲತಾಣಗಳ (Social media) ಬಳಕೆ ಇತ್ತೀಚಿನ ಕೆಲ ವರ್ಷಗಳಲ್ಲಿ ತೀವ್ರ ಹೆಚ್ಚಳವಾಗಿದೆ. ಜಾಗತಿಕವಾಗಿ ಮಟ್ಟದಲ್ಲಿ ಖ್ಯಾತ ಸಾಮಾಜಿಕ ಜಾಲತಾಣಗಳಲ್ಲಿ ಇನ್ಸ್ಟಾಗ್ರಾಮ್‌ (Instagram) ಸಹ ಒಂದು. ಇತ್ತೀಚ್ಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್‌ ನಾನಾ ರೀತಿಯ ಹೊಸ ವೈಶಿಷ್ಟ್ಯಗಳನ್ನು ಅಳವಡಿಸುತ್ತಿದೆ. ಅಲ್ಲದೆ, ಕೆಲ ಬದಲಾವಣೆಗಳನ್ನೂ ಮಾಡುತ್ತಿದೆ. ಈಗ ಮೆಟಾ-ಮಾಲೀಕತ್ವದ ಇನ್ಸ್ಟಾಗ್ರಾಮ್‌ ಟಿವಿ (IGTV) ಗಾಗಿ ಅದರ ಸ್ವತಂತ್ರ ಅಪ್ಲಿಕೇಶನ್ (App) ಅನ್ನು ಮುಚ್ಚುತ್ತಿದೆ ಮತ್ತು ಬದಲಿಗೆ ಎಲ್ಲ ವಿಡಿಯೋಗಳನ್ನು ಮುಖ್ಯ ಇನ್ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ಇರಿಸಿಕೊಳ್ಳುವತ್ತ ಗಮನಹರಿಸಿದೆ ಎಂದು ತಿಳಿದುಬಂದಿದೆ. ಇನ್ನು, ಯೂಟ್ಯೂಬ್‌ಗೆ (Youtube) ಪ್ರತಿಸ್ಪರ್ಧಿಯಾಗಿ IGTV ಅಪ್ಲಿಕೇಶನ್ ಅನ್ನು ಇನ್ಸ್ಟಾಗ್ರಾಮ್‌ ಆರಂಭಿಸಿತ್ತು. ಆದರೆ, 2018ರಲ್ಲಿ IGTV ಅಪ್ಲಿಕೇಶನ್ ಅನ್ನು ಮೊದಲು ಪ್ರಾರಂಭಿಸಿದಾಗ ಕಂಪನಿಯು ನಿರೀಕ್ಷಿಸಿದ ಜನಪ್ರಿಯತೆಯನ್ನು ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಇನ್ಸ್ಟಾಗ್ರಾಮ್‌ ಇದಿಗ IGTV ಅಪ್ಲಿಕೇಶನ್ ಗೆ ಅಂತ್ಯಹಾಡಲು ಮುಂದಾಗಿದೆ.

IGTV ಅಪ್ಲಿಕೇಶನ್ ಬಂದ್:

ಈ ಸಂಬಂಧ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ ಇನ್ಸ್ಟಾಗ್ರಾಮ್, ‘ಕಂಪನಿಯು ಸ್ವತಂತ್ರ IGTV ಅಪ್ಲಿಕೇಶನ್ ಅನ್ನು ತೆಗೆದುಹಾಕುತ್ತಿದೆ. ಜೊತೆಗೆ ಗ್ರಾಹಕರಿಗೆ ವಿಡಿಯೋಗಳನ್ನು ಸರಳವಾಗಿಸಲು ನಿಟ್ಟಿನಲ್ಲಿ ಹೊಸ ಪ್ರಯತ್ನಗಳ ಭಾಗವಾಗಿದೆ‘ ಎಂದು ತಿಳಿಸಿದೆ.

ಮುಖ್ಯ ಅಪ್ಲಿಕೇಶನ್‌ನಲ್ಲಿರುವ ವಿಡಿಯೋಗಳ ಬಗ್ಗೆಯೂ ಮಾಹಿತಿ ನೀಡಿದ ಇನ್ಸ್ಟಾಗ್ರಾಮ್‌ನ ಬ್ಲಾಗ್‌ ಪೋಸ್ಟ್‌, ಈ ವಿಡಿಯೋಗಳು ಟ್ಯಾಪ್-ಟು-ಮ್ಯೂಟ್‌ ಆಯ್ಕೆಯೊಂದಿಗೆ ಪೂರ್ಣ-ಪರದೆಯ ವೀಕ್ಷಣೆಯನ್ನು ಒಳಗೊಳ್ಳಲಿದೆ. ಜೊತೆಗೆ ಈ ವಿಡಿಯೋಗಳನ್ನು ಹಂಚಿಕೊಳ್ಳುವುದು ಮತ್ತು ವೀಕ್ಷಿಸುವುದನ್ನು ಸುಲಭಗೊಳಿಸುವ ಮಾರ್ಗದಲ್ಲಿ ಕಂಪನಿಯು ಕಾರ್ಯನಿರ್ವಹಿಸುತ್ತಿದೆ ಎಂದೂ ಇನ್ಸ್ಟಾಗ್ರಾಮ್‌ ಹೇಳಿಕೊಂಡಿದೆ.

ಇದನ್ನೂ ಓದಿ: Instagram: ಆ್ಯಂಡ್ರಾಯ್ಡ್ ಮತ್ತು ಐಫೋನ್​​ನಲ್ಲಿ ‘‘Dark Mode‘‘ ಸಕ್ರಿಯಗೊಳಿಸುವುದು ಹೇಗೆ? ಇಲ್ಲಿದೆ ಮಾಹಿತಿ

ರೀಲ್ಸ್ ಗಳಲ್ಲಿ ಜಾಹೀರಾತು:

ಇನ್ನು, ರೀಲ್ಸ್ ಗಳಲ್ಲಿ ಜಾಹೀರಾತುಗಳನ್ನು ತರುವ ವೈಶಿಷ್ಟ್ಯವನ್ನು ಪರೀಕ್ಷಿಸಲು ಯೋಜಿಸುತ್ತಿದ್ದೇವೆ ಎಂದೂ ಇನ್ಸ್ಟಾಗ್ರಾಮ್‌ ಮಾಹಿತಿ ನೀಡಿದೆ. ಇನ್ಸ್ಟಾಗ್ರಾಮ್‌ನ ಪೋಷಕ ಕಂಪನಿ ಮೆಟಾ IGTV ಅಪ್ಲಿಕೇಶನ್‌ನ ಸ್ಥಗಿತವನ್ನು ದೃಢಪಡಿಸಿದೆ ಮತ್ತು ಮಾರ್ಚ್ ಮಧ್ಯದಲ್ಲಿ ಅಪ್ಲಿಕೇಶನ್ ಸಂಪೂರ್ಣವಾಗಿ ಮುಚ್ಚಲ್ಪಡುತ್ತದೆ ಎಂದು TechCrunch ನಲ್ಲಿ ಉಲ್ಲೇಖಿಸಲಾಗಿದೆ.

IGTV ಅಪ್ಲಿಕೇಶನ್ ಅನ್ನು 2018ರಲ್ಲಿ ಪ್ರಾರಂಭಿಸಲಾಗಿತ್ತು. ಯೂಟ್ಯೂಬ್‌ ಗೆ ಪ್ರತಿಸ್ಪರ್ಧಿಯಾಗುವುದು ಇದರ ಉದ್ದೇಶವಾಗಿತ್ತು. ಅಲ್ಲದೆ, ಈ ಮೊದಲು ಇನ್ಸ್ಟಾಗ್ರಾಮ್‌ ನಲ್ಲಿ IGTV ಬಟನ್ ಸಹ ಇತ್ತು. ಅದು ಬಳಕೆದಾರರನ್ನು ಮುಖ್ಯ ಅಪ್ಲಿಕೇಶನ್‌ನಲ್ಲಿ IGTV ಕಂಟೆಂಟ್‌ಗೆ ಕರೆದೊಯ್ಯುತ್ತಿತ್ತು.

ಆದರೆ Instagram ಆ ಆಯ್ಕೆಯನ್ನು 2020ರಲ್ಲಿ ತೆಗೆದುಹಾಕಿತು. ಇದಾದ ನಂತರದಲ್ಲಿ ಕಳೆದ ವರ್ಷ IGTV ಅನ್ನು "Instagram TV’’ ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂದು ಕಂಪನಿಯು ಘೋಷಿಸಿತ್ತು. ಜೊತೆಗೆ IGTV ಯ ವಿಡಿಯೋಗಳ ಸಮಯದ ಮಿತಿಯನ್ನು ಸಾಮಾನ್ಯ ವಿಡಿಯೋಗಳಿಗೂ ತರಲು ಯೋಜಿಸಿದೆ ಎಂದೂ ಕಂಪನಿ ಮಾಹಿತಿ ನೀಡಿತ್ತು.

ಇದನ್ನೂ ಓದಿ: ಮಕ್ಕಳಿಗಾಗಿ ಬೇರೆ Instagram ಮಾಡಲು ಹೊರಟ ಜುಕರ್​ಬರ್ಗ್, ಬೇಡವೇ ಬೇಡ ಎನ್ನುತ್ತಿದ್ದಾರೆ ಲಕ್ಷಾಂತರ ಜನ !

ರೀಲ್ಸ್ ಗಳ ಮೇಲೆ ಹೆಚ್ಚು ಗಮನ..!

ಈ ಮಧ್ಯೆ, Instagram ಕಿರು ರೂಪದ ವಿಡಿಯೋಗಳಾದ ರೀಲ್ಸ್‌ಗಳನ್ನು ಕಳೆದ ಕೆಲ ವರ್ಷಗಳಿಂದಿಚೆಗೆ ಪರಿಚಯಿಸಿತ್ತು. ಭಾರತದಲ್ಲಿ ಟಿಕ್ ಟಾಕ್​ ಬ್ಯಾನ್ ಆದ ನಂತರದಲ್ಲಿ Instagram ರೀಲ್ಸ್ ಹೆಚ್ಚು ಪ್ರಸಿದ್ಧಿಯನ್ನು ಪಡೆಯಿತು. ಹೀಗಾಗಿ ಕಂಪನಿಯು ಇನ್ನು ಮುಂದೆ ತನ್ನ ಗಮನವನ್ನು ಹೆಚ್ಚು ರೀಲ್ಸ್ ಗಳ ಮೇಲೆ ಹರಿಸುವುದಾಗಿ ತಿಳಿಸಿದೆ. ಅಪ್ಲಿಕೇಶನ್‌ನಲ್ಲಿ ಬಳಕೆದಾರರ ಎಂಗೇಜ್‌ಮೆಂಟ್‌ ಗಾಗಿ ರೀಲ್ಸ್ ಅತಿದೊಡ್ಡ ಕೊಡುಗೆಯಾಗಿ ಮುಂದುವರಿಯುತ್ತದೆ ಮತ್ತು ಕಂಪನಿಯು ರೀಲ್ಸ್‌ನಲ್ಲಿ ಹೂಡಿಕೆಯನ್ನು ಮುಂದುವರಿಸಲು ಯೋಜಿಸಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ರೀಲ್ಸ್ ಇನ್ಸ್ಟಾಗ್ರಾಮ್‌ನ ಬೆಳೆಯುತ್ತಿರುವ ಮತ್ತು ಪ್ರಮುಖ ಭಾಗವಾಗಿ ಮುಂದುವರೆದಿದೆ ಮತ್ತು ಈ ಸ್ವರೂಪದಲ್ಲಿ ಇನ್ನಷ್ಟು ಹೂಡಿಕೆ ಮಾಡಲು ನಾವು ಉತ್ಸುಕರಾಗಿದ್ದೇವೆ ಎಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.
Published by:shrikrishna bhat
First published: